Back
Home » ಇತ್ತೀಚಿನ
ಭಾರತದಲ್ಲಿ 'ನೋಕಿಯಾ 9 ಪ್ಯೂರ್‌ವ್ಯೂವ್' ಬಿಡುಗಡೆ!. ಬೆಲೆ ಎಷ್ಟು ಗೊತ್ತಾ?
Gizbot | 10th Jul, 2019 05:59 PM
 • ವಿಶ್ವದ ಮೊದಲ 5 ಕ್ಯಾಮೆರಾ ಫೋನ್‌

  ನೋಕಿಯಾ 9 ಪ್ಯೂರ್‌ ವ್ಯೂವ್ ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ 5 ರಿಯರ್ ಕ್ಯಾಮೆರಾಗಳಿದ್ದು, ಹೀಗಾಗಿ ವಿಶ್ವದ ಮೊದಲ 5 ಕ್ಯಾಮೆರಾ ಸ್ಮಾರ್ಟ್‌ಫೋನ್‌ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರತಿ ಕ್ಯಾಮೆರಾವು 12 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿವೆ. ಅವುಗಳಲ್ಲಿ 3 ಮೊನೋಕ್ರೊಮ್ ಕ್ಯಾಮೆರಾಗಳಾಗಿದ್ದರೆ, ಇನ್ನುಳಿದ 2 ಕ್ಯಾಮೆರಾಗಳು RGB ಕ್ಯಾಮೆರಾವನ್ನು ಹೊಂದಿವೆ. ಜೊತೆಗೆ ಸೆಲ್ಫಿಗಾಗಿ 20 ಮೆಗಾಪಿಕ್ಸೆಲ್ ಕ್ಯಾಮೆರಾ ಒದಗಿಸಲಾಗಿದೆ.


 • ಡಿಸ್‌ಪ್ಲೇ ಮತ್ತು ವಿನ್ಯಾಸ

  ನೋಕಿಯಾ 9 ಪ್ಯೂರ್‌ ವ್ಯೂವ್ ಸ್ಮಾರ್ಟ್‌ಫೋನ್ 1440x2960 ಪಿಕ್ಸಲ್ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿದ್ದು, 5.99 ಇಂಚಿನ ಕ್ವಾಡ್‌ ಹೆಚ್‌ಡಿ ಪ್ಲಸ್‌, 2K pOLED ಸ್ಕ್ರೀನ್‌ ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ ಡಿಸ್‌ಪ್ಲೇಯು 18.5:9 ಅನುಪಾತವನ್ನು ಹೊಂದಿದ್ದು, ಫಿಂಗರ್‌ಪ್ರಿಂಟ್ ಸೆನ್ಸಾರ್‌ ಆಯ್ಕೆಯನ್ನು ಸಹ ಹೊಂದಿದೆ. ಡಿಸ್‌ಪ್ಲೇಯ ಸುತ್ತಲೂ ಕಡಿಮೆ ಅಂಚನ್ನು ಒಳಗೊಂಡಿದದ್ದು, ಗೊರಿಲ್ಲಾ ಗ್ಲಾಸ್‌ 5 ಹೊಂದಿದೆ.


 • ಮೆಮೊರಿ ಮತ್ತು RAM ಸಾಮರ್ಥ್ಯ

  'ನೋಕಿಯಾ 9 ಪ್ಯೂರ್‌ ವ್ಯೂವ್' ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಸ್ನ್ಯಾಪ್‌ಡ್ರಾಗನ್ 845 SoC ನಲ್ಲಿ ಕಾರ್ಯನಿರ್ವಹಿಸಲಿದ್ದು, ಮಲ್ಟಿಟಾಸ್ಕ್‌ ಕೆಲಸಗಳಿಗೆ ಉತ್ತಮ ಸಪೋರ್ಟ್‌ ಒದಗಿಸಲಿದೆ. ಹಾಗೆಯೇ ಆಂಡ್ರಾಯ್ಡ್ 9.0 ಪೈ ಆಪರೇಟಿಂಗ್ ಸಿಸ್ಟಮ್‌ನ ಬೆಂಬಲ ಪಡೆದುಕೊಂಡಿರುವ ಜೊತೆಗೆ 6GB RAM ಸಾಮರ್ಥ್ಯದೊಂದಿಗೆ 128GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಒಳಗೊಂಡಿದೆ.


 • ಹೈ ಪಿಕ್ಸಲ ಕ್ಯಾಮೆರಾ

  ನೋಕಿಯಾ 9 ಪ್ಯೂರ್‌ ವ್ಯೂವ್ ಸ್ಮಾರ್ಟ್‌ಫೋನ್‌ ಐದು ಕ್ಯಾಮೆರಾಗಳನ್ನು ಹೊಂದಿದ್ದು, ಐದು ಕ್ಯಾಮೆರಾಗಳು f/1.8 ಅಪರ್ಚರ್ ನೊಂದಿಗೆ 12 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿವೆ. ಫೋಟೊಗಳು 10x ಲೈಟ್‌ ಜೊತೆಗೆ ಹೈ ರೆಸಲ್ಯೂಶನ್‌ನಲ್ಲಿ ಮೂಡಿಬರಲಿವೆ. ರಾ ಫೋಟೊಗಳು 60ಎಂಪಿ ರೆಸಲ್ಯೂಶನ್‌ನಲ್ಲಿರಲಿದ್ದು, ಫೋಟೊ ಎಡಿಟ್‌ಗಾಗಿ, ಅಡೊಬ್ ರೂಮ್‌ಲೈಟ್‌ ಆಪ್‌ ನೀಡಲಾಗಿದೆ. ಹಾಗೆಯೇ 20ಎಂಪಿ ಸಾಮರ್ಥ್ಯ ಸೆಲ್ಫಿ ಕ್ಯಾಮೆರಾ ಇದೆ.


 • ಬ್ಯಾಟರಿ ಮತ್ತು ಇತರೆ ಫೀಚರ್ಸ್

  ನೋಕಿಯಾ 9 ಪ್ಯೂರ್‌ ವ್ಯೂವ್ ಸ್ಮಾರ್ಟ್‌ಫೋನಿನಲ್ಲಿ 3320mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ವಾಯರ್‌ಲೆಸ್‌ ಜೊತೆಗೆ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ನೀಡಲಾಗಿದೆ. ಅಡ್ರಿನೊ 630 GPU, ಡ್ಯೂಯಲ್ ಸಿಮ್ ಬೆಂಬಲ, ಇನ್-ಡಿಸ್‌ಪ್ಲೇ ಫಿಂಗರ್ಪ್ರಿಂಟ್ ಸಂವೇದಕ, ಐಪಿ67 ವಾಟರ್-ರೆಸಿಸ್ಟೆಂಟ್ ರೇಟಿಂಗ್ ಸೇರಿದಂತೆ ಒಂದೇ ಸ್ಪೀಕರ್ ಹೊಂದಿರುವ ಹಲವು ವಿಶೇಷತೆಗಳನ್ನು ಸ್ಮಾರ್ಟ್‌ಫೋನ್ ಹೊಂದಿದೆ.


 • ಲಭ್ಯತೆ, ಬೆಲೆ ಮತ್ತು ಆಫರ್

  ನೋಕಿಯಾ 9 ಪ್ಯೂರ್‌ ವ್ಯೂವ್ ಸ್ಮಾರ್ಟ್‌ಫೋನ್‌ 49,999ರೂ.ಗಳ ಪ್ರೈಸ್‌ಟ್ಯಾಗ್‌ ಹೊಂದಿದ್ದು, ಇದೇ ಜುಲೈ 10ರಂದು ಫ್ಲಿಪ್‌ಕಾರ್ಟ್‌ ಮತ್ತು ನೋಕಿಯಾ ವೆಬ್‌ಸೈಟ್‌ಗಳಲ್ಲಿ ಸೇಲ್‌ ಶುರುವಾಗಲಿದೆ. ಹಾಗೂ ಇದೇ ಜುಲೈ 17ರಂದು ಪ್ರಮುಖ ರೀಟೈಲ್‌ ಶಾಪ್‌ಗಳಲ್ಲಿಯೂ ಖರೀದಿಗೆ ಲಭ್ಯವಾಗಲಿದೆ. HDFC ಬ್ಯಾಂಕ್‌ ಗ್ರಾಹಕರಿಗೆ ಇನ್‌ಸ್ಟಂಟ್ ಶೇ.10% ಕ್ಯಾಶ್‌ಬ್ಯಾಕ್ ಇದ್ದು, ಕಂಪೆನಿಯ ವೆಬ್‌ಸೈಟ್‌ನಲ್ಲಿ ಫೋನ್‌ ಖರೀದಿಸಿದರೇ 'Nokia 705 ಇಯರ್‌ಬಡ್ಸ್‌' ಉಚಿತವಾಗಿ ದೊರೆಯಲಿದೆ.
ಮೊಬೈಲ್ ಅಂದ್ರೆ 'ನೋಕಿಯಾ' ಎನ್ನುವಂತೆ ಬ್ಯ್ರಾಂಡ್‌ ಕ್ರಿಯೆಟ್‌ ಮಾಡಿದ್ದ ನೋಕಿಯಾ, ವಿಂಡೊಸ್‌ನತ್ತ ನಡೆದು ಸ್ವಲ್ಪ ಎಡವಿತ್ತು. ಆದರೆ ಆಂಡ್ರಾಯ್ಡ್‌ನಲ್ಲಿ ಸದ್ಯ ಮಿನಗುತ್ತಿರುವ ಕಂಪನಿಯು ಇತ್ತೀಚಿಗೆ ವಿಶ್ವದ ಮೊದಲ 5 ಕ್ಯಾಮೆರಾಗಳ 'ನೋಕಿಯಾ 9 ಪ್ಯೂರ್‌ವ್ಯೂ' ಸ್ಮಾರ್ಟ್‌ಫೋನ್‌ ಘೋಷಿಸಿ, ಟೆಕ್‌ ಜಗತ್ತಿಗೆ ದೊಡ್ಡ ಅಚ್ಚರಿ ನೀಡಿತ್ತು. ಸಂಸ್ಥೆಯು 'ನೋಕಿಯಾ 9 ಪ್ಯೂರ್‌ವ್ಯೂ' ಸ್ಮಾರ್ಟ್‌ಫೋನ್‌ ಅನ್ನು ಈಗ ಭಾರತದಲ್ಲಿ ಬಿಡುಗಡೆ ಮಾಡಿದೆ.

ಹೌದು, ನೋಕಿಯಾ ತನ್ನ ಬಹುನಿರೀಕ್ಷಿತ 'ನೋಕಿಯಾ 9 ಪ್ಯೂರ್‌ ವ್ಯೂವ್' ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಇಂದು (ಜುಲೈ 10) ಬಿಡುಗಡೆ ಮಾಡಿದ್ದು, ಈ ಸ್ಮಾರ್ಟ್‌ಫೋನ ಅನ್ನು ಮೊಬೈಲ್‌ ವರ್ಲ್ಡ್‌ ಕಾಂಗ್ರೆಸ್-2019ರಲ್ಲಿ ಕಾರ್ಯಕ್ರಮದಲ್ಲಿ ಅನಾವರಣ ಮಾಡಿತ್ತು. ಹಿಂಬದಿಯಲ್ಲಿ ಒಟ್ಟು 5 ರಿಯರ್‌ ಕ್ಯಾಮೆರಾಗಳನ್ನು ಹೊಂದಿರುವುದು ಈ ಸ್ಮಾರ್ಟ್‌ಫೋನಿನ ಪ್ರಮುಖ ಆಕರ್ಷಣೆಯಾಗಿದೆ.

ಪ್ರತಿ ಕ್ಯಾಮೆರಾವು 12ಎಂಪಿ ಸಾಮರ್ಥ್ಯದಲ್ಲಿದ್ದು, ಫೋಟೊಗಳನ್ನು 60ಎಂಪಿ ರೆಸಲ್ಯೂಶನ್‌ನಲ್ಲಿ ಸೆರೆಹಿಡಿಯುವ ಸಾಮರ್ಥ್ಯವನ್ನು ಪಡೆದುಕೊಂಡದೆ. ಹಾಗೆಯೇ ಸ್ನ್ಯಾಪ್‌ಡ್ರಾಗನ್ 845 ಪ್ರೊಸೆಸರ್‌ ಒದಗಿಸಲಾಗಿದ್ದು, ಮಲ್ಟಿಟಾಸ್ಕ್ ಕೆಲಸಗಳಿಗೆ ಉತ್ತಮ ಬೆಂಬಲ ದೊರೆಯಲಿದೆ. ಹಾಗಾದರೇ ನೋಕಿಯಾ 9 ಪ್ಯೂರ್‌ವ್ಯೂ ಸ್ಮಾರ್ಟ್‌ಫೋನ್‌ ಇತರೆ ಯಾವೆಲ್ಲಾ ವಿಶೇಷ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಓದಿರಿ : ಇದೇ ಜುಲೈ 12ಕ್ಕೆ ಕ್ಲೋಸ್‌ ಆಗಲಿದೆ 'ರೆಡ್ಮಿ ನೋಟ್‌ 7 ಪ್ರೊ' ಓಪೆನ್ ಸೇಲ್!

   
 
ಹೆಲ್ತ್