Back
Home » Bike News
ಆಲ್ಟೋ ಕಾರಿಗಿಂತಲೂ ದುಬಾರಿ ಬೆಲೆಯ ಟ್ರೆಕ್ ಸೈಕಲ್ ಬಿಡುಗಡೆ..!
DriveSpark | 11th Jul, 2019 12:44 PM
 • ಆಲ್ಟೋ ಕಾರಿಗಿಂತಲೂ ದುಬಾರಿ ಬೆಲೆಯ ಟ್ರೆಕ್ ಸೈಕಲ್ ಬಿಡುಗಡೆ..!

  ಟ್ರೆಕ್ ಬೈಸಿಕಲ್ ಕಂಪನಿಯು ಪ್ರೀಮಿಯಂ ಸೈಕಲ್‍, ರೈಡಿಂಗ್ ಗೇರ್, ಮರ್ಕಂಡೈಸ್‍‍ಗಳ ವಿನ್ಯಾಸ ಹಾಗೂ ತಯಾರಿಕೆಯಲ್ಲಿ ವಿಶ್ವದಲ್ಲಿಯೇ ಮುಂಚೂಣಿಯಲ್ಲಿದೆ. ಟ್ರೆಕ್ ಕಂಪನಿಯು ಬಹಳಷ್ಟು ವರ್ಷಗಳಿಂದ ಪರಿಸರ ಸ್ನೇಹಿ ಹಾಗೂ ಫಿಟ್‍‍ನೆಸ್ ಕಾಯ್ದುಕೊಳ್ಳುವ ವಾಹನಗಳ ಉತ್ತೇಜನಕ್ಕೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಪರಿಸರ ಸ್ನೇಹಿ ವಾಹನಗಳ ಕ್ರಾಂತಿ ಉಂಟಾಗುವ ಮೊದಲಿನಿಂದಲೂ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ.


 • ಆಲ್ಟೋ ಕಾರಿಗಿಂತಲೂ ದುಬಾರಿ ಬೆಲೆಯ ಟ್ರೆಕ್ ಸೈಕಲ್ ಬಿಡುಗಡೆ..!

  ಭಾರತವು ಬೈಸಿಕಲ್‍‍ನ ದೊಡ್ಡ ಮಾರುಕಟ್ಟೆಗಳ ಪೈಕಿ ಒಂದಾಗಿದೆ. ಟ್ರೆಕ್‍‍ನ ಪ್ರಕಾರ, ಪ್ರತಿ ವರ್ಷ ದೇಶಿಯ ಮಾರುಕಟ್ಟೆಯಲ್ಲಿ ಸುಮಾರು 1.63 ಕೋಟಿ ಸೈಕಲ್‍‍ಗಳನ್ನು ಮಾರಾಟ ಮಾಡಲಾಗುತ್ತಿದೆ. ಆದರೆ ಟ್ರೆಕ್ ಕಂಪನಿಯು ಕೇವಲ ಸೂಪರ್ ಪ್ರೀಮಿಯಂ ಸೈಕಲ್‍‍ಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದು, ಪ್ರತಿ ವರ್ಷ ಸುಮಾರು 30,000 ಸೈಕಲ್‍‍ಗಳನ್ನು ಮಾರಾಟ ಮಾಡುತ್ತಿದೆ. ಟ್ರೆಕ್ ಕಂಪನಿಯ ಪ್ರಕಾರ ಮಡೋನ್ ಎಸ್‍ಎಲ್6 ಡಿಸ್ಕ್ ಸೈಕಲ್ ಮಾತ್ರ ಎಲ್ಲಾ ಮೂರು ಪ್ರಮುಖ ಫೀಚರ್‍‍ಗಳಾದ ಸುಧಾರಿತ ಏರೋ‍‍ಡೈನಾಮಿಕ್ಸ್, ಸೂಪರ್ ರೈಡ್ ಕ್ವಾಲಿಟಿ ಹಾಗೂ ಇಂಟಿಗ್ರೇಷನ್‍‍ಗಳನ್ನು ನೀಡುತ್ತದೆ.


 • ಆಲ್ಟೋ ಕಾರಿಗಿಂತಲೂ ದುಬಾರಿ ಬೆಲೆಯ ಟ್ರೆಕ್ ಸೈಕಲ್ ಬಿಡುಗಡೆ..!

  ಈ ಸೈಕಲ್ ಅನ್ನು ನೋಡಿದ ನಂತರ ಈ ಸೈಕಲ್ ಎಷ್ಟು ದುಬಾರಿಯೆಂದು ಜನರಿಗೆ ತಿಳಿಯಲಿದೆ. ರೇಸಿಂಗ್ ಸೈಕಲ್‍‍ಗಳಲ್ಲಿ ಇರುವಂತಹ ವಿನ್ಯಾಸವನ್ನು ಈ ಸೈಕಲ್‍ ಹೊಂದಿದ್ದು, ಪೂರ್ಣ ಪ್ರಮಾಣದ ವೇಗಕ್ಕಾಗಿ ಹಾಗೂ ಬಾಳಿಕೆಗಾಗಿ ನಿರ್ಮಿಸಲಾಗಿದೆ. ಟ್ರೆಕ್ ಮಡೋನ್ ಎಸ್‌ಎಲ್ 6 ಡಿಸ್ಕ್ ತನ್ನ ಹಗುರವಾದ ಫ್ರೇಮ್‌ನಿಂದಾಗಿ ರೇಸ್ ಸೈಕಲ್ ರೀತಿಯಲ್ಲಿ ಪರ್ಫಾಮೆನ್ಸ್ ನೀಡುತ್ತದೆ. ಟ್ರೆಕ್‌ ಕಂಪನಿಯು ಪೇಟೆಂಟ್ ಹೊಂದಿರುವ ಒಸಿಎಲ್‌ವಿ 500 ಸರಣಿಯ ಕಾರ್ಬನ್ ಫೈಬರ್ ಅನ್ನು ಬಳಸಿಕೊಂಡು ಈ ಸೈಕಲ್ ಅನ್ನು ತಯಾರಿಸಲಾಗಿದೆ.


 • ಆಲ್ಟೋ ಕಾರಿಗಿಂತಲೂ ದುಬಾರಿ ಬೆಲೆಯ ಟ್ರೆಕ್ ಸೈಕಲ್ ಬಿಡುಗಡೆ..!

  ಸ್ಟಿಫ್‍‍ನೆಸ್ ಹಾಗೂ ರಿಜಿಡಿಟಿ ಹಗುರವಾಗಿರುವುದರಿಂದ ಮೆಟಲ್ ಫ್ರೇಮ್‍‍ಗಳಿಗಿಂತ ಹೆಚ್ಚು ಬಲಿಷ್ಠವಾಗಿದೆ. ಕಮ್‍‍ಟೇಲ್ ವರ್ಚುವಲ್ ಫಾಯಿಲ್ ಟ್ಯೂಬ್ ಶೇಪ್ ಪ್ರಪಂಚದ ಅತ್ಯಂತ ಏರೋಡೈನಾಮಿಕ್ಸ್ ವಿನ್ಯಾಸಗಳಲ್ಲಿ ಒಂದಾಗಿದ್ದು, ವಿಂಡ್ ಟನೆಲ್ ಟೆಸ್ಟ್ ಗಳು ಇದನ್ನು ಸಾಬೀತುಪಡಿಸಿವೆ. ಇದು ಐಸೊಸ್ಪೀಡ್ ಡಿಕೌಪ್ಲರ್ ಹಾಗೂ ಬ್ಲೆಂಡರ್ ಸ್ಟೆಮ್ ಅನ್ನು ಸಹ ಹೊಂದಿದ್ದು, ಲೈಟ್‍‍ಗಳಂತಹ ಬಿಡಿಭಾಗಗಳನ್ನು ಸುಲಭವಾಗಿ ಜೋಡಿಸಲು ಅನುಕೂಲವಾಗಲಿದೆ.


 • ಆಲ್ಟೋ ಕಾರಿಗಿಂತಲೂ ದುಬಾರಿ ಬೆಲೆಯ ಟ್ರೆಕ್ ಸೈಕಲ್ ಬಿಡುಗಡೆ..!

  ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

  ಟ್ರೆಕ್ ಬೈಸಿಕಲ್ ಇಂಡಿಯಾದ ದೇಶಿಯ ಮ್ಯಾನೇಜರ್ ನವನೀತ್ ಬಂಕಾರವರು ಮಾತನಾಡಿ, ಭಾರತವು ಸೈಕಲ್‍‍ಗಳ ಕಡೆಗೆ ಭಾರೀ ಒಲವನ್ನು ಹೊಂದಿದ್ದು, ಇಲ್ಲಿರುವ ಸೈಕಲ್ ಸವಾರರು ಉತ್ತಮ ಸವಾರಿ ಹಾಗೂ ಕ್ವಾಲಿಟಿ ಉತ್ಪನ್ನದ ಬೆಲೆಯನ್ನು ಗುರುತಿಸುತ್ತಾರೆ. ಕಳೆದ ವರ್ಷ ಪರ್ಫಾಮೆನ್ಸ್ ಪ್ರೊಗ್ರಾಮ್ ಅನ್ನು ಪರಿಚಯಿಸಿ ಬಿಡುಗಡೆಗೊಳಿಸಿದಾಗ ನಾವು ಹೆಚ್ಚಿನ ಪ್ರತಿಕ್ರಿಯೆ ಪಡೆದಿದ್ದೇವು ಎಂದು ತಿಳಿಸಿದರು.ಮುಂದುವರೆದು ಮಾತನಾಡಿದ ಅವರು, ನಮ್ಮ ಗ್ರಾಹಕ ಕೇಂದ್ರಿತ ತಂತ್ರವು ನಮಗೆ ಹೆಚ್ಚಿನ ಪ್ರೋತ್ಸಾಹ ನೀಡಿದ ಕಾರಣ ನಾವು ಹೊಸ ತಲೆಮಾರಿನ ಪರ್ಫಾಮೆನ್ಸ್ ಬೈಕುಗಳನ್ನು ಬಿಡುಗಡೆಗೊಳಿಸಲಿದ್ದೇವೆ.


 • ಆಲ್ಟೋ ಕಾರಿಗಿಂತಲೂ ದುಬಾರಿ ಬೆಲೆಯ ಟ್ರೆಕ್ ಸೈಕಲ್ ಬಿಡುಗಡೆ..!

  ಭಾರತವು ಟ್ರೆಕ್‌ ಕಂಪನಿಗೆ ಪ್ರಮುಖ ಮಾರುಕಟ್ಟೆಯಾಗಿದೆ. ವಿರಾಮದ ಕ್ರೀಡೆ ಹಾಗೂ ಸ್ಪರ್ಧಾತ್ಮಕ ಸೈಕ್ಲಿಂಗ್ ಬಗ್ಗೆ ಪ್ರಚಾರ ಮಾಡುವಾಗ ಉತ್ತಮ ಖರೀದಿ ಮಾಲೀಕತ್ವದ ಅನುಭವವನ್ನು ನೀಡಲು ನಾವು ನಮ್ಮ ಗಮನವನ್ನು ಮುಂದುವರಿಸುತ್ತೇವೆ ಎಂದು ಹೇಳಿದರು. 2020ರ ಟ್ರೆಕ್ ಮಡೋನ್ ಎಸ್‌ಎಲ್ 6 ಡಿಸ್ಕ್ ಸೈಕಲ್ ಅನ್ನು ದೇಶಾದ್ಯಂತ ಆಯ್ದ ಟ್ರೆಕ್ ಡೀಲರ್‍‍ಗಳಲ್ಲಿ ಮಾರಾಟ ಮಾಡಲಾಗುವುದು. ಟ್ರೆಕ್ ಬೈಸಿಕಲ್ ಭಾರತದ 32 ನಗರಗಳಲ್ಲಿ 34 ಡೀಲರ್‍‍ಗಳನ್ನು ಹೊಂದಿದೆ. ಇವುಗಳ ಪೈಕಿ ಕೆಲವು ಡೀಲರ್‍‍ಗಳಲ್ಲಿ ಮಾತ್ರ 2020 ಮಡೋನ್ ಎಸ್ಎಲ್ 6 ಡಿಸ್ಕ್ ಸೈಕಲ್ ಮಾರಾಟ ಮಾಡಲಾಗುವುದು.


 • ಆಲ್ಟೋ ಕಾರಿಗಿಂತಲೂ ದುಬಾರಿ ಬೆಲೆಯ ಟ್ರೆಕ್ ಸೈಕಲ್ ಬಿಡುಗಡೆ..!

  ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ
  ಟ್ರೆಕ್ ಬೈಸಿಕಲ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ದಿನದಿಂದ ದಿನಕ್ಕೆ ಹೆಚ್ಚು ಜನಪ್ರಿಯವಾಗುತ್ತಿದೆ. ಕಂಪನಿಯು ಕಳೆದ ಐದು ವರ್ಷಗಳಲ್ಲಿ ನಿರಂತರವಾಗಿ ಮಾರಾಟದಲ್ಲಿ ಶೇಕಡಾ 20ರಷ್ಟು ಬೆಳವಣಿಗೆಯನ್ನು ಕಂಡಿದೆ.


 • ಆಲ್ಟೋ ಕಾರಿಗಿಂತಲೂ ದುಬಾರಿ ಬೆಲೆಯ ಟ್ರೆಕ್ ಸೈಕಲ್ ಬಿಡುಗಡೆ..!

  ಈಗ ಟ್ರೆಕ್ ಕಂಪನಿಯು ಒಂದು ಹೆಜ್ಜೆ ಮುಂದೆ ಹೋಗಿ ಅತ್ಯಂತ ದುಬಾರಿ ಬೆಲೆಯ ಸೈಕಲ್ ಅನ್ನು ಬಿಡುಗಡೆಗೊಳಿಸಿದೆ. ಭಾರತೀಯ ಮಾರುಕಟ್ಟೆಯು ಸೈಕಲ್‌ಗಳ ವಿಷಯದಲ್ಲಿ ಪ್ರಬುದ್ಧವಾಗಿದೆ. ಆದರೆ ಜನರು ರೂ.3.59 ಲಕ್ಷಗಳ ಬೆಲೆಯ ಸೈಕಲ್ ಖರೀದಿಸುವಷ್ಟು ಪ್ರಬುದ್ಧರಾಗಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
ಟ್ರೆಕ್ ಬೈಸಿಕಲ್ ಕಂಪನಿಯು 2020ರ ಮಡೋನ್ ಎಸ್‍ಎಲ್6 ಡಿಸ್ಕ್ ಸೈಕಲ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಈ ಪ್ರೀಮಿಯಂ ಸೈಕಲ್‍‍ನ ಬೆಲೆಯು ರೂ.3,59,799 ಲಕ್ಷಗಳಾಗಿದೆ. ಈ ಸೈಕಲ್ ವಿಶ್ವ ದರ್ಜೆಯ ಸಾಕಷ್ಟು ಫೀಚರ್‍‍ಗಳನ್ನು ಹೊಂದಿದೆ. 2020ರ ಮಡೋನ್ ಎಸ್‌ಎಲ್6 ಡಿಸ್ಕ್ ಸೈಕಲ್ ಭಾರತದಲ್ಲಿ ಬಿಡುಗಡೆಯಾದ ಅತ್ಯಾಧುನಿಕ ಸೈಕಲ್‌ಗಳಲ್ಲಿ ಒಂದಾಗಿದೆ. ಈ ಸೈಕಲ್‍ನ ಬೆಲೆಯೇ ಈ ಸೈಕಲ್ ಬಗ್ಗೆ ಸಾಕಷ್ಟು ಹೇಳುತ್ತದೆ.

   
 
ಹೆಲ್ತ್