Back
Home » ಸಿನಿ ಸಮಾಚಾರ
ಪ್ರೇಮ್ 'ಏಕ್ ಲವ್ ಯಾ' ಚಿತ್ರಕ್ಕೆ ಮೂರನೇ ನಾಯಕಿ ಎಂಟ್ರಿ
Oneindia | 11th Jul, 2019 01:23 PM

ಜೋಗಿ ಪ್ರೇಮ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಏಕ್ ಲವ್ ಚಿತ್ರದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಸಾಕಷ್ಟು ವಿಶೇಷತೆಗಳಿಂದ ಚಿತ್ರಾಭಿಮಾನಿಗಳ ಗಮನ ಸೆಳೆಯುತ್ತಿರುವ ಏಕ್ ಲವ್ ಯಾ ಚಿತ್ರಕ್ಕೀಗ ಮತ್ತೋರ್ವ ನಾಯಕಿಯ ಎಂಟ್ರಿಯಾಗಿದೆ. ಈಗಾಗಲೆ ಇಬ್ಬರು ನಾಯಕಿಯರು ಚಿತ್ರದಲ್ಲಿದ್ದಾರೆ. ಈಗ ಮೂರನೇ ನಾಯಕಿಯ ಪಾದಾರ್ಪಣೆ ಮಾಡಿರುವುದು ಚಿತ್ರದ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ.

ಅಂದ್ಹಾಗೆ ಮೂರನೆ ನಾಯಕಿ ರೂಪದರ್ಶಿ ಅಂಕಿತಾ ನಾಯಕ್. ಅಂಕಿತಾ ಅವರಿಗೆ ಇದು ಮೊದಲ ಸಿನಿಮಾ. ಈ ಮೊದಲು ramp ಮೇಲೆ ಹೆಜ್ಜೆ ಹಾಕುತ್ತಿದ್ದ ಅಂಕಿತಾ ಈಗ 'ಏಕ್ ಲವ್ ಯಾ' ಚಿತ್ರದ ಮೂಲಕ ದೊಡ್ಡ ಪರದೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ.

'ಏಕ್ ಲವ್ ಯಾ' ಚಿತ್ರಕ್ಕೆ ಕಾಮಿಡಿ ಕಿಲಾಡಿ, ಟಿಕಿ ಟಾಕ್ ಸ್ಟಾರ್ ಗಳು ಸಾಥ್

ಚಿತ್ರದಲ್ಲಿ ಅಂಕಿತಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದ್ರೆ ಯಾವ ಪಾತ್ರ ಎನ್ನುವ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿಲ್ಲ. ಈಗಾಗಲೆ ನಾಯಕಿಯಾಗಿ ರೀಶ್ಮಾ ನಾಣಯ್ಯ ಕಾಣಿಸಿಕೊಳ್ಳುತ್ತಿದ್ದಾರೆ. ರೀಶ್ಮಾ ಕೂಡ ಹೊಸ ಪ್ರತಿಭೆ, 'ಏಕ್ ಲವ್ ಯಾ' ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ನು ಚಿತ್ರದ ಪ್ರಮುಖ ಪಾತ್ರದಲ್ಲಿ ರಚಿತಾ ರಾಮ್ ಬಣ್ಣ ಹಚ್ಚುತ್ತಿದ್ದಾರೆ.

ಅಂದ್ಹಾಗೆ 'ಏಕ್ ಲವ್ ಯಾ' ಚಿತ್ರ ರಕ್ಷಿತಾ ಪ್ರೇಮ್ ನಿರ್ಮಾಣದಲ್ಲಿ ಮೂಡಿ ಬರುತ್ತಿದೆ. ಚಿತ್ರದಲ್ಲಿ ನಾಯಕನಾಗಿ ರಕ್ಷಿತಾ ಸಹೋದರ ರಾಣಾ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೆ ಬೆಂಗಳೂರಿನಲ್ಲಿ ಕಳೆದ 20 ದಿನಗಳಿಂದ ಚಿತ್ರೀಕರಣ ಮಾಡುತ್ತಿರುವ ಚಿತ್ರತಂಡ ಸಧ್ಯದಲ್ಲೇ ಬೆಂಗಳೂರಿನಲ್ಲಿ ಚಿತ್ರೀಕರಣ ಮುಗಿಸಿ ಮೈಸೂರಿನತ್ತ ಪಯಣ ಬೆಳೆಸಲಿದೆ.

   
 
ಹೆಲ್ತ್