Back
Home » ಸಿನಿ ಸಮಾಚಾರ
ಈ ವಾರ ಒಂದು ಡಬ್ಬಿಂಗ್ ಸಿನಿಮಾ ಜೊತೆಗೆ ಏಳು ಚಿತ್ರಗಳ 'ಯಾನ' ಶುರು
Oneindia | 12th Jul, 2019 09:52 AM
 • ಸ್ಯಾಂಡಲ್ ವುಡ್ ನಲ್ಲಿ ಇವರ 'ಯಾನ' ಶುರು

  ಈ ವಾರದಿಂದ ಸ್ಯಾಂಡಲ್ ವುಡ್ ನಲ್ಲಿ 'ಯಾನ' ಸಿನಿಮಾದ ಅಬ್ಬರ ಜೋರಾಗಿರಲಿದೆ. ಹಿರಿಯ ನಟ ಜೈಜಗದೀಶ್ ಅವರ ಮೂವರು ಹೆಣ್ಣು ಮಕ್ಕಳು ಅಭಿನಯಿಸಿರುವ ಸಿನಿಮಾವಿದು. ಟ್ರೈಲರ್ ಮೂಲಕ ಚಿತ್ರಾಭಿಮಾನಿಗಳ ಗಮನ ಸೆಳೆದಿರುವ 'ಯಾನ' ಈ ಶುಕ್ರವಾರ ಅಭಿಮಾನಿಗಳ ಮುಂದೆ ಬರಲಿದೆ. ಚಿತ್ರಕ್ಕೆ ವಿಜಯಲಕ್ಷ್ಮೀ ಸಿಂಗ್ ನಿರ್ದೇಶನ ಮಾಡಿದ್ದಾರೆ.


 • ರಿಲೀಸ್ ಆಗುತ್ತಿದೆ 'ಚಿತ್ರಕಥಾ' ಸಿನಿಮಾ

  ನೈಜ ಘಟನೆಗಳನ್ನ ಆಧರಿಸಿ ಮಾಡಿರುವ ಸಿನಿಮಾ 'ಚಿತ್ರಕಥಾ'. ಕಂಪ್ಲೀಟ್ ಸಸ್ಪೆನ್ಸ್ ಥ್ರಿಲ್ಲಿಂಗ್ ಕಥಾಹಂದರ ಹೊಂದಿರುವ ಈ ಚಿತ್ರದ ಟ್ರೈಲರ್ ಹಾಗೂ ಪೋಸ್ಟರ್ ಗಳ ಮೂಲಕ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಚಿತ್ರಕ್ಕೆ ಯಶಸ್ವಿ ಬಾಲಾಧಿತ್ಯ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಸುಜಿತ್ ರಾಥೋಡ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಉಳಿದಂತೆ ಚಿತ್ರದಲ್ಲಿ ದಿಲೀಪ್ ರಾಜ್, ಹಿರಿಯ ನಟಿ ಸುಧಾರಾಣಿ, ಬಿ ಜಯಶ್ರೀ ಸೇರಿದಂತೆ ದೊಡ್ಡ ಕಲಾವಿದರ ಬಳಗವೆ ಇದೆ.


 • ಈ ವಾರ ಚಿತ್ರಮಂದಿರದಲ್ಲಿ ಆಪರೇಷನ್ ನಕ್ಷತ್ರ

  'ಆಪರೇಷನ್ ನಕ್ಷತ್ರ' ಮಧುಸೂದನ್ ನಿರ್ದೇಶನ ಮಾಡಿರುವ ಸಿನಿಮಾ. ಅದಿತಿ ಪ್ರಭುದೇವ, ಯಜ್ಞಾಶೆಟ್ಟಿ, ಲಿಖಿತ್ ಸೂರ್ಯ, ನಿರಂಜನ್ ಒಡೆಯರ್ ಹಾಗೂ ಕಾಮಿಡಿ ನಟ ಗೋವಿಂದೇ ಗೌಡ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿರುವ ಸಿನಿಮಾ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದ್ದು, ಮೈಂಡ್ ಗೇಮ್ ಮೇಲೆ ನಡೆಯುವ ಸಿನಿಮಾ ಇದಾಗಿದೆ. ಒಂದಿಷ್ಟು ಕುತೂಹಲಗಳನ್ನು ಹೊತ್ತುಕೊಂಡು ಆಪರೇಷನ್ ನಕ್ಷತ್ರ ಈ ವಾರ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದೆ.


 • ಚಿತ್ರಮಂದಿರದಲ್ಲಿ ಫುಲ್ ಟೈಟ್ ಪ್ಯಾತೆ

  'ಫುಲ್ ಟೈಟ್ ಪ್ಯಾತೆ' ವಿಭಿನ್ನ ಟೈಟಲ್ ಮೂಲಕವೆ ಚಿತ್ರಾಭಿಮಾನಿಗಳ ಗಮನ ಸಳೆದಿರುವ ಈ ಸಿನಿಮಾ, ಈ ವಾರ ಅಭಿಮಾನಿಗಳ ಮುಂದೆ ಬರುತ್ತಿದೆ. ನೈಜ ಕಥೆ ಆಧಾರಿತ ಸಿನಿಮಾ ಇದಾಗಿದ್ದು ಮೊದಲ ಬಾರಿಗೆ ಎಸ್ ಎಲ್ ಜಿ ಪುಟ್ಟಣ್ಣ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ಮಾನಸ ಗೌಡ ಕಾಣಿಸಿಕೊಂಡಿದ್ದಾರೆ. ಇನ್ನು ಉಳಿದಂತೆ ಹಿರಿಯ ನಟ ಬಿರಾದರ್, ಅಜಯ್ ಕೃಷ್ಣ, ಗಿರೀಶ್, ರಾಜು ಸೇರಿದಂತೆ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ.


 • ನಾಳೆಯಿಂದ 'ಸಿಂಹ ಸೇನಾ' ಅಬ್ಬರ

  'ಸಿಂಹ ಸೇನಾ' ಕುಲದೀಪ್ ನಾಯಕನಾಗಿ ನಟಿಸಿರುವ ಸಿನಿಮಾವಿದು. ಈ ಚಿತ್ರಕ್ಕೆ ಎಸ್ ರಾಮ್ ಆಕ್ಷನ್ ಕಟ್ ಹೇಳಿದ್ದಾರೆ. ಕುಲ್ದೀಪ್ ಗೆ ನಾಯಕಿಯಾಗಿ ಮನಸ್ವಿ ಬಣ್ಣ ಹಚ್ಚಿದ್ದಾರೆ. ಚಿತ್ರಕ್ಕೆ ವಿನು ಮನಸ್ಸು ಸಂಗೀತ ಸಂಯೋಜನೆ ಮಾಡಿದ್ದಾರೆ. ಈಗಾಗಲೆ ಈ ಚಿತ್ರದ 'ಸೋಲರೆಲ್ಲ ಸೈಡಲ್ಲಿ' ಇರಲಿ ಎನ್ನುವ ಹಾಡು ಗಾನಪ್ರಿಯನ ಗಮನ ಸೆಳೆದಿದೆ.


 • ಕನ್ನಡದಲ್ಲಿ ತೆಲುಗಿನ 'ರಂಗಸ್ಥಳಂ'

  ಈ ವಾರ ತೆರೆಗೆ ಬರುತ್ತಿರುವ ಸಿನಿಮಾಗಳಲ್ಲಿ ಡಬ್ಬಿಂಗ್ ಸಿನಿಮಾ ಇದಾಗಿದೆ. ತೆಲುಗು ನಟ ರಾಮ್ ಚರಣ್ ಮತ್ತು ನಟಿ ಸಮಂತಾ ಅಭಿನಯದ 'ರಂಗಸ್ಥಳಂ' ಚಿತ್ರ ಕನ್ನಡಕ್ಕೆ ಡಬ್ ಆಗಿ 'ರಂಗಸ್ಥಳ' ಹೆಸರಿನಲ್ಲಿ ತೆರೆಗೆ ಬರುತ್ತಿದೆ. ಸುಕುಮಾರ್ ನಿರ್ದೇಶನ ಮಾಡಿರುವ 'ರಂಗಸ್ಥಳಂ' ಚಿತ್ರದ ಈ ವಾರ ಕನ್ನಡಾಭಿಮಾನಿಗಳನ್ನು ರಂಜಿಸಲು ಸಜ್ಜಾಗಿದೆ.
ಶುಕ್ರವಾರದ ಸಿನಿ ಸಂತೆಯಲ್ಲಿ ಈ ಬಾರಿ ಏಳು ಸಿನಿಮಾಗಳು ತೆರೆಗೆ ಬರುತ್ತಿವೆ. ಈ ವಾರ ಚಿತ್ರಮಂದಿರಕ್ಕೆ ಎಂಟ್ರಿ ಆಗುತ್ತಿರುವ ಸಿನಿಮಾಗಳ ಸಂಖ್ಯೆ ಜಾಸ್ತಿ ಆಗಿದೆ. ಕಳೆದ ಕೆಲವು ವಾರಗಳಿಂದ ನಾಲ್ಕೈದು ಸಿನಿಮಾಗಾಗೆ ಸೀಮಿತವಾಗಿದ್ದ ಶುಕ್ರವಾರ, ಈ ಬಾರಿ ಏಳು ಸಿನಿಮಾಗಳನ್ನು ಅಭಿಮಾನಿಗಳಿಗೆ ದರ್ಶನ ಮಾಡಿಸುತ್ತಿದೆ.

ಅಂದ್ಹಾಗೆ ಈ ವಾರ ಒಂದು ಡಬ್ಬಿಂಗ್ ಸಿನಿಮಾ ಕೂಡ ರಿಲೀಸ್ ಆಗುತ್ತಿದೆ. ತೆಲುಗಿನ ಸೂಪರ್ ಹಿಟ್ 'ರಂಗಸ್ಥಳಂ' ಚಿತ್ರ ಕನ್ನಡದಲ್ಲಿ 'ರಂಗಸ್ಥಳ' ಹೆಸರಿನಲ್ಲಿ ತೆರೆಗೆ ಬರುತ್ತಿದೆ. ಇನ್ನು ಈ ವಾರದ ಸಿನಿಮಾಗಳಲ್ಲಿ ನಿರೀಕ್ಷೆ ಮೂಡಿಸಿರುವ ಸಿನಿಮಾ ಅಂದ್ರೆ 'ಯಾನ' ಮತ್ತು ಚಿತ್ರಕಥಾ.

ಇನ್ನು ಉಳಿದ ನಾಲ್ಕು ಚಿತ್ರಗಳು ಹೊಸಬರ ಹೊಸ ಸಿನಿಮಾಗಳಾಗಿವೆ. ಆಪರೇಷನ್ ನಕ್ಷತ್ರ, ಫುಲ್ ಟೈಟ್ ಪ್ಯಾತೆ, ಇಂತಿ ನಿನ್ನ ಭೈರ ಮತ್ತು ಸಿಂಹ ಸೇನಾ ಈ ಚಿತ್ರಗಳ ಮೂಲಕ ಮೊದಲ ಬಾರಿಗೆ ಬಣ್ಣದ ಲೋಕದಲ್ಲಿ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ ಈ ಹೊಸಬರು. ಮುಂದೆ ಓದಿ..

   
 
ಹೆಲ್ತ್