Back
Home » ಬಾಲಿವುಡ್
'ದಯವಿಟ್ಟು ನನ್ನನ್ನು ಬ್ಯಾನ್ ಮಾಡಿ' : ಪತ್ರಕರ್ತರಿಗೆ ಸವಾಲು ಹಾಕಿದ ಕಂಗನಾ
Oneindia | 11th Jul, 2019 05:11 PM
 • ಮಾಧ್ಯಮದಲ್ಲಿ ನನಗೆ ಉತ್ತಮ ಸ್ನೇಹಿತರು ಇದ್ದಾರೆ

  ಭಾರತೀಯ ಪತ್ರಕರ್ತರ ಬಗ್ಗೆ ಕಂಗನಾ ಹೇಳಿರುವ ಮಾತುಗಲಿಗ ವೈರಲ್ ಆಗಿದೆ. "ನಾನು ಭಾರತೀಯ ಮಾಧ್ಯಮದ ಬಗ್ಗೆ ಮಾತನಾಡುತ್ತೇನೆ. ಎಲ್ಲಾ ಕಡೆಯು ಒಳ್ಳೆಯವರು ಇರುತ್ತಾರೆ ಹಾಗೆ ಕೆಟ್ಟವರು ಇರುತ್ತಾರೆ. ಮಾಧ್ಯಮ ನನ್ನ ಬೆಳವಣಿಗೆಗೆ ಪ್ರೇರಣೆ ನೀಡಿದೆ. ಮಾಧ್ಯಮದಲ್ಲಿ ನನಗೆ ಉತ್ತಮ ಸ್ನೇಹಿತರು ಇದ್ದಾರೆ. ಅವರು ಅನೇಕ ಬಾರಿ ಮಾರ್ಗದರ್ಶನ ನೀಡಿದ್ದಾರೆ. ನನ್ನ ಯಶಸ್ಸಿನಲ್ಲಿ ಅವರಿಗೆ ಪ್ರಮುಖ ಪಾತ್ರವಿದೆ" ಎಂದು ಸಹಾಯ ಮಾಡಿದ ಪತ್ರಕರ್ತರ ಬಗ್ಗೆ ಮಾತನಾಡಿದ್ದಾರೆ.


 • ಗೌರವ,ಏಕತೆ,ಸಮಗ್ರತೆಯ ಮೇಲೆ ಆಕ್ರಮಣ

  ಮತ್ತೊಂದು ವಿಡಿಯೋದಲ್ಲಿ ಪತ್ರಕರ್ತರನ್ನು ಸರಿಯಾಗೆ ತರಾಟೆಗೆ ತೆಗೆದುಕೊಂಡಿದ್ದಾರೆ. "ಮತ್ತೊಂದು ವಿಭಾಗದ ಮಧ್ಯಮವು ದೇಶದ ಗೌರವ, ಏಕತೆ ಮತ್ತು ಸಮಗ್ರತೆಯ ಮೇಲೆ ಆಕ್ರಮಣ ಮಾಡುತ್ತಿವೆ. ಯಾವಾಗಲು ರೂಮರ್ಸ್ ಗಳನ್ನು ಹಬ್ಬಿಸುತ್ತಿರುತ್ತಾರೆ. ನಾನು ಪ್ಲಾಸ್ಟಿಕ್ ಬ್ಯಾನ್ ಮಾಡುವ ಬಗ್ಗೆ ಮತ್ತು ಪ್ರಾಣಿ ಸಂರಕ್ಷಣೆ ಬಗ್ಗೆ ಮಾಡಿದ ಅಭಿಯಾನವನ್ನು ಗೇಲಿಮಾಡಿಕೊಂಡು ಓಡಾಡಿದವರು ಇದ್ದಾರೆ"


 • ಪತ್ರಿಕಾಗೋಷ್ಠಿಗೆ ಬರುವುದೆ ತಿನ್ನುವುದಕ್ಕಾಗಿ

  "ಯಾವಾಗಲು ಕೆಲಸಕ್ಕೆ ಬಾರದೆ ಇರುವ ವಿಚಾರಗಳನ್ನು ಮಾತನಾಡಿಕೊಂಡು ವಯಕ್ತಿಕವಾಗಿ ದಾಳಿ ಮಾಡುವುದೆ ಕೆಲವರ ಗುರಿ ಆಗಿರುತ್ತೆ. ಅಂತವರು ಪತ್ರಿಕಾಗೋಷ್ಠಿಗೆ ಬರುವುದೆ ತಿನ್ನುವುದಕ್ಕಾಗಿ. ಅಂತವರು ಅವರ ವೃತ್ತಿ ಜೀವನದಲ್ಲಿ ಯಾವುದೆ ಉತ್ತಮ ಕೆಲಸ ಮಾಡಿರುವುದಿಲ್ಲ. ನಾನು ನಟಿ ಅಂತ ಹೇಳಿಕೊಳ್ಳಬೇಕೆಂದರೆ ನಾನು ಸ್ವಲ್ಪವಾದರು ಕೆಲಸ ಮಾಡಿರಬೇಕು. ನೀವು ಬರೆದಿರುವ ಒಂದಾದರು ಆರ್ಟಿಕಲ್ ಅನ್ನು ನನಗೆ ತೋರಿಸಿ. ಹೇಗೆ ನೀವು ಜರ್ನಲಿಸ್ಟ್ ಅಂತ ಕರೆಸಿಕೊಳ್ಳುತ್ತೀರಾ? ನಾನು ಇಂತಹ ದೇಶ ದ್ರೋಹಿಗಳ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ. ಈ ಮೂರು-ನಾಲ್ಕು ಜನರು ನನ್ನ ವಿರುದ್ಧ ದೂರು ನೀಡಿದ್ದಾರೆ. ಈ ಎಂಟಟೈನ್ ಮೆಂಟ್ ಜರ್ನಲಿಸ್ಟ್ ಗಿಲ್ಟ್ ಆಫ್ ಇಂಡಿಯಾ ನಿನ್ನೆ ಮೊನ್ನೆ ಹುಟ್ಟಿಕೊಂಡಹಾಗಿದೆ. ಇದಕ್ಕೆ ಯಾವುದೆ ಮಾನ್ಯತೆ ಕೂಡ ಇಲ್ಲ"


 • ದಯವಿಟ್ಟು ನನ್ನನ್ನು ನಿಷೇಧ ಮಾಡಿ

  "ಇಂತಹ ಕೆಲವು ಜನ ನನ್ನನ್ನು ಬ್ಯಾನ್ ಮಾಡುವಂತೆ ಬೆದರಿಸುತ್ತಿದ್ದಾರೆ. ನನ್ನ ಕರಿಯರ್ ಹಾಳು ಮಾಡುತ್ತಾರಂತೆ. ವಿಶ್ವಾಸಘಾತುಕ ಜನರು, ನಿಮ್ಮನ್ನು ಖರೀದಿಸಲು ಒಬ್ಬರಿಗೆ ಲಕ್ಷ ರೂಪಾಯಿಗಳು ಬೇಕಾಗಿಲ್ಲ, ನಿಮ್ಮಂತವರನ್ನು ಕೊಂಡುಕೊಳ್ಳಲು 50-60 ರೂಪಾಯಿ ಸಾಕು. ನೀವು ನನ್ನನ್ನು ನಾಶ ಪಡಿಸುತ್ತೀರಾ? ನಿಮ್ಮಂತಹ ಹುಸಿ ಪತ್ರಕರ್ತರು ಮತ್ತು ಸಿನಿಮಾ ಮಾಫಿಯಾ ಅಂದುಕೊಂಡಂತೆ ಆಗದಾಗಿದ್ದಿದ್ರೆ, ನಾನು ಇಂದು ಭಾರತದ ಅತೀ ಹೆಚ್ಚು ಸಂಭಾವನೆ ಪಡೆಯುವ ಟಾಪ್ ನಟಿಯಾಗಿರುತ್ತಿರಲಿಲ್ಲ. ದಯವಿಟ್ಟು ನನ್ನನ್ನು ನಿಷೇದ ಮಾಡಿ. ನನ್ನಿಂದ ನಿಮ್ಮ ಮನೆಯ ಊಟಕ್ಕೆ ತೊಂದರೆ ಆಗುವುದು ಬೇಡ.
ನಟಿ ಕಂಗನಾ ರಣಾವತ್ ಮತ್ತು ಪತ್ರಕರ್ತರ ನಡುವಿನ ವಾರ್ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತ ಜೊತೆ ಜಗಳವಾಡಿದ ಹಿನ್ನಲೆ, ಕ್ವೀನ್ ನಟಿಗೆ ಸಂಬಂಧಿಸಿದ ಯಾವುದೆ ಮೀಡಿಯಾ ಸುದ್ದಿಯನ್ನು ಕವರೇಜ್ ಮಾಡದಂತೆ ಎಂಟಟೈನ್ ಮೆಂಟ್ ಜರ್ನಲಿಸ್ಟ್ ಗಿಲ್ಟ್ ಆಫ್ ಇಂಡಿಯಾ ನಿಷೇಧ ಹೇರಿದೆ.

ಕಂಗನಾ ಅಭಿನಯದ 'ಜಡ್ಜ್ ಮೆಂಟಲ್ ಹೈ ಕ್ಯಾ' ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಕಂಗನಾ ಮತ್ತು ಪತ್ರಕರ್ತರ ನಡುವೆ ವಾಗ್ವಾದ ನಡೆದಿತ್ತು. ಪತ್ರಕರ್ತ ಜಸ್ಟಿನ್ ರಾವ್ ಅವರನ್ನು ತರಾಟೆಗೆ ತೆಗೆದುಕೊಂಡ ಕಂಗನಾ 'ಮಣಿಕರ್ಣಿಕ' ಸಿನಿಮಾದ ಸಮಯದಲ್ಲಿ ನನ್ನ ವಿರುದ್ಧ ಸುದ್ದಿ ಪ್ರಕಟ ಮಾಡಿರುವ ಬಗ್ಗೆ ಹೇಳಿ ಫುಲ್ ಗರಂ ಆಗಿದ್ದರು.

ಬಾಲಿವುಡ್ ನಟಿ ಕಂಗನಾಗೆ ನಿಷೇದ ಹೇರಲು ಪತ್ರಕರ್ತರ ನಿರ್ಧಾರ

ಕಂಗನಾ ಕ್ಷಮೆಯಾಚಿಸುವವರೆಗೂ ಅವರ ಮೇಲಿನ ನಿಷೇದ ಹಿಂಪಡೆಯದಿರಲು ಎಂಟಟೈನ್ ಮೆಂಟ್ ಜರ್ನಲಿಸ್ಟ್ ಗಿಲ್ಟ್ ಆಫ್ ಇಂಡಿಯಾ ನಿರ್ಧರಿಸಿದೆ. ಈ ಬಗ್ಗೆ ಕೆಂಡಮಂಡಲವಾಗಿರುವ ನಟಿ ಕಂಗನಾ ಪತ್ರಕರ್ತರ ಬಗ್ಗೆ ಖಾರವಾಗಿ ಮಾತನಾಡಿದ್ದಾರೆ. ಪತ್ರಕರ್ತರ ಬಗ್ಗೆ ಕಂಗನಾ ಮಾತನಾಡಿರುವ ವಿಡಿಯೋವನ್ನು ಕಂಗನಾ ಸಹೋದರಿ ಹಾಗೂ ಮ್ಯಾನೇಜರ್ ರಂಗೋಲಿ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ. ಮುಂದೆ ಓದಿ..

   
 
ಹೆಲ್ತ್