Back
Home » Business
ರೈತರ ಖಾತೆಗೆ ಸಬ್ಸಿಡಿ ಮೊತ್ತ ನೇರ ವರ್ಗಾವಣೆ (ಡಿಬಿಟಿ) ವ್ಯವಸ್ಥೆಗೆ ಚಾಲನೆ
Good Returns | 11th Jul, 2019 01:36 PM

ರೈತರ ಬ್ಯಾಂಕ್ ಖಾತೆಗಳಿಗೆ ರಸಗೊಬ್ಬರ ಸಬ್ಸಿಡಿ ಮೊತ್ತವನ್ನು ನೇರವಾಗಿ ವರ್ಗಾಯಿಸುವ (ಡಿಬಿಟಿ) ವ್ಯವಸ್ಥೆಗೆ ಚಾಲನೆ ಚಾಲನೆ ನೀಡಲಾಗಿದೆ.

ಈ ಹಿಂದೆ 2017 ರ ಅಕ್ಟೋಬರ್ ನಲ್ಲಿ ಮೊದಲ ಹಂತದಲ್ಲಿ ಸಬ್ಸಿಡಿ ಮೊತ್ತವನ್ನು ಕಂಪನಿಗಳಿಗೆ ವರ್ಗಾವಣೆ ಮಾಡಲಾಗುತ್ತಿತ್ತು. ಎರಡನೇ ಹಂತದಲ್ಲಿ ಸಬ್ಸಿಡಿ ಮೊತ್ತವನ್ನು ರೈತರ ಖಾತೆಗೆ ವರ್ಗಾವಣೆ ಆಗಲಿದೆ ಎಂದು ಹೇಳಲಾಗಿದೆ.

ಇದರ ಜೊತೆಗೆ ರೈತರ ಅನುಕೂಲಕ್ಕಾಗಿ ಜಿಲ್ಲೆ, ರಾಜ್ಯ, ದೇಶೀ ಮಟ್ಟದಲ್ಲಿ ರಸಗೊಬ್ಬರ ಪೂರೈಕೆ ಮತ್ತು ಲಭ್ಯತೆಯ ಮಾಹಿತಿ ನೀಡುವ ಸಲುವಾಗಿದ ಡ್ಯಾಶ್ ಬೋರ್ಡ್ ಬಿಡುಗಡೆ ಮಾಡಲಾಗಿದೆ.

ರೈತರ ಬ್ಯಾಂಕ್ ಖಾತೆಗಳಿಗೆ ಸಬ್ಸಿಡಿ ಮೊತ್ತವನ್ನು ನೇರವಾಗಿ ವರ್ಗಾಯಿಸುವ (ಡಿಬಿಟಿ) ವ್ಯವಸ್ಥೆಯ ಪರಿಣಾಮವಾಗಿ ಪಾರದರ್ಶಕತೆ ಸಾಧ್ಯವಾಗಲಿದೆ ಎಂದು ರಾಸಾಯನಿಕ, ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.

ರೂ. 70,000 ಕೋಟಿಗಳ ರಸಗೊಬ್ಬರ ಸಬ್ಸಿಡಿಯನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲು ಕೇಂದ್ರವು ಮೂರು ಹೊಸ ತಂತ್ರಜ್ಞಾನ ಉಪಕ್ರಮಗಳನ್ನು ಪ್ರಾರಂಭಿಸಿದೆ.

   
 
ಹೆಲ್ತ್