Back
Home » ಸಿನಿ ಸಮಾಚಾರ
ನಾಳೆ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದೆ 'ಚಿತ್ರಕಥಾ' ಸಿನಿಮಾ
Oneindia | 11th Jul, 2019 06:06 PM

ಚಿತ್ರಕಥಾ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿರುವ ಸಿನಿಮಾ. ಟ್ರೈಲರ್ ಮೂಲಕವೆ ಚಿತ್ರಾಭಿಮಾನಿಗಳ ಗಮನ ಸೆಳೆದ 'ಚಿತ್ರಕಥಾ' ಸಿನಿಮಾ ನಾಳೆ( ಜುಲೈ 12) ರಾಜ್ಯದಾದ್ಯಂತ ತೆರೆಗೆ ಬರುತ್ತಿದೆ. ಸಸ್ಪೆನ್ಸ್, ಥ್ರಿಲ್ಲಿಂಗ್ ಮತ್ತು ಹಾರರ್ ಅಂಶಗಳನ್ನು ಒಳಗೊಂಡಿರುವ 'ಚಿತ್ರಕಥಾ' ಸಿನಿಮಾ ಒಂದು ಸಾಕಷ್ಟು ವಿಶೇಷತೆಗಳಿಂದ ಗಮನ ಸೆಳೆಯುತ್ತಿದೆ.

ಅಂದ್ಹಾಗೆ ಚಿತ್ರಕ್ಕೆ ಯಶಸ್ವಿ ಬಾಲಾದಿತ್ಯ ಆಕ್ಷನ್ ಕಟ್ ಹೇಳಿದ್ದಾರೆ. ಮೊದಲ ಬಾರಿಗೆ ನಿರ್ದೇಶನ ಮಾಡುವ ಮೂಲಕ ಬಾಲಾದಿತ್ಯ ಅದೃಷ್ಠ ಪರೀಕ್ಷೆಗೆ ನಿಂತಿದ್ದಾರೆ. ಇವರ ಪ್ರಯತ್ನಕ್ಕೆ ಬಂಡವಾಳ ಹೂಡುವ ಮೂಲಕ ಸಾಥ್ ನೀಡಿದ್ದಾರೆ ನಿರ್ಮಾಪಕ ಪ್ರಜ್ವಲ್ ಎಂ ರಾಜ.

ವಿಭಿನ್ನತೆ, ಕೌತುಕತೆ, ಭಯಾನಕದ ಪ್ರತಿರೂಪ ಈ ಚಿತ್ರಕಥಾ ಟ್ರೈಲರ್

ಇನ್ನು ವಿಶೇಷ ಅಂದ್ರೆ ಚಿತ್ರದಲ್ಲಿ ಸಾಕಷ್ಟು ದೊಡ್ಡ ಕಲಾವಿದರು ಕಾಣಿಸಿಕೊೆಂಡಿದ್ದಾರೆ. ಮನೋವೈದ್ಯೆಯಾಗಿ ನಟಿ ಸುಧಾರಾಣಿ ಬಣ್ಣಹಚ್ಚಿದ್ದಾರೆ. ಜೊತೆಗೆ ಹಿರಿಯ ನಟಿ ಬಿ ಜಯಶ್ರೀ'ಚಿತ್ರಕಥಾ' ಚಿತ್ರದಲ್ಲಿ ಕೊರವಂಜಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟ ದಿಲೀಪ್, ಉತ್ತಮ್ ವರ್ಮ ಎನ್ನುವ ಚಿತ್ರಕಲೆಗಾರನಾಗಿ ನಟಿಸಿದ್ದಾರೆ.

ಚಿತ್ರದ ಪ್ರಮುಖ ಪಾತ್ರದಲ್ಲಿ ಸುಜಿತ್ ರಾಥೋಡ್ ನಟಿಸುವ ಮೂಲಕ ಮೊದಲ ಬಾರಿಗೆ ಬಣ್ಣದ ಲೋಕದಲ್ಲಿ ಮಿಂಚುತ್ತಿದ್ದಾರೆ. ಇನ್ನು ನಟ ತಬಲ ನಾಣಿ, ಅನುಷಾ ರಾವ್ ಸೇರಿದಂತೆ ಉತ್ತಮ ಕಲಾವಿದರ ದಂಡೆ ಚಿತ್ರದಲ್ಲಿದೆ.

ಇತ್ತೀಚಿಗಷ್ಟೆ ಚಿತ್ರದ ಟ್ರೈಲರ್ ಅನ್ನು ರೋರಿಂಗ್ ಸ್ಟಾರ್ ಶ್ರೀಮುರಳಿ ರಿಲೀಸ್ ಮಾಡಿ ಮೆಚ್ಚಿಕೊಂಡಿದ್ದರು. ಅಲ್ಲದೆ ಟ್ರೈಲರ್ ಗೆ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ. ಅಂದ್ಹಾಗೆ, ಇದು ಸಿನಿಮಾ ಕಲಾವಿದನ ಬದುಕಿನ ಸುತ್ತ ನಡೆಯುವ ಕಥೆ. ಸಿನಿಮಾ, ನಿರ್ದೇಶನ, ಚಿತ್ರಕಲಾವಿದ, ಭೂತದ ಮನೆ, ವೈದ್ಯೆ, ಹೀಗೆ ಇಡೀ ಟ್ರೈಲರ್ ನಲ್ಲಿ ಎದ್ದುಕಾಣುತ್ತಿದೆ. ಆದ್ರೆ ಸಿನಿಮಾ ಹೇಗಿರಲಿದೆ, ನಿಜಕ್ಕು ಇದು ಹಾರರ್ ಸಿನಿಮಾನಾ ಎನ್ನುವುದು ಗೊತ್ತಾಗಬೇಕಾದ್ರೆ ಚಿತ್ರಮಂದಿರಕ್ಕೆ ಹೋಗಿಯೆ ಸಿನಿಮಾ ನೋಡಬೇಕು.

   
 
ಹೆಲ್ತ್