Back
Home » ಸಿನಿ ಸಮಾಚಾರ
ಭಾರತ ಮ್ಯಾಚ್ ಸೋತ ಬಳಿಕ ಮನನೊಂದು ಕಣ್ಣೀರಿಟ್ಟ ನಟಿ ಪಾರುಲ್
Oneindia | 11th Jul, 2019 07:11 PM

ಸೆಮಿಫೈನಲ್ ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಭಾರತದ ಸೋಲು ಕೊಟ್ಯಾಂತರ ಕ್ರಿಕೆಟ್ ಪ್ರೇಮಿಗಳ ಮನಸ್ಸಿಗೆ ಆಘಾತವಾಗಿದೆ. ಈ ಬಾರಿಯ ವಿಶ್ವಕಪ್ ಗೆಲ್ಲುವ ಭಾರತದ ಕನಸು ಭಗ್ನವಾದ ಹಿನ್ನಲೆ ಕ್ರಿಕೆಟ್ ಪ್ರೇಮಿಗಳು ಕಣ್ಣೀರಾಕುತ್ತಿದ್ದಾರೆ. ಕನಸು ನುಚ್ಚುನೂರಾದ ನೋವಿನಲ್ಲಿ ಕಣ್ಣೀರಾಕಿದವರಲ್ಲಿ ಸ್ಯಾಂಡಲ್ ವುಡ್ ನಟಿ ಪಾರುಲ್ ಯಾದವ್ ಕೂಡ ಒಬ್ಬರು.

ಹೌದು, ನಟಿ ಪಾರುಲ್ ಯಾದವ್ ಅವರಿಗೆ ಕ್ರಿಕೆಟ್ ಅಂದ್ರೆ ಪಂಚಪ್ರಾಣ. ಭಾರತ ಸೋಲುತ್ತಿದ್ದಂತೆ ಗಳಗಳನೆ ಅತ್ತಿರುವ ಪಾರುಲ್, ಭಾವನಾತ್ಮಕವಾದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಅಷ್ಟೆಯಲ್ಲ ಇನ್ಮುಂದೆ ಅವರು ಕ್ರಿಕೆಟ್ ಕೂಡ ನೋಡುವುದಿಲ್ಲ ಎಂದು ಹೇಳಿದ್ದಾರೆ.

ಪಾಕಿಸ್ತಾನಕ್ಕೆ ಪಂಚ್ ನೀಡಿದ ನಟಿ ಪಾರೂಲ್ ಯಾದವ್

"ನನ್ನ ಜೀವನದಲ್ಲಿ ನಾನು ಇನ್ನು ಮುಂದೆ ಕ್ರಿಕೆಟ್ ನೋಡಲ್ಲ" ಎಂದು ಗಳಗಳನೆ ಅಳುತ್ತಲೆ ಖಡಕ್ ಆಗಿ ಹೇಳಿದ್ದಾರೆ

ಪಾರುಲ್ ಯಾದವ್ ವಿಡಿಯೋಗೆ ಸಾಕಷ್ಟು ಕಮೆಂಟ್ಸ್ ಗಳು ಹರಿದುಬರುತ್ತಿವೆ. "ಅಳಬೇಡ ತಂಗಿ ಅಳಬೇಡ", "ಅಕ್ಕ ಏನ್ರೋ ಈ ರೇಂಜ್ ಗೆ ಓವರ್ ಆಕ್ಟಿಂಗ್ ಮಾಡ್ತಾರೆ" ಎಂದು ನೆಟ್ಟಿಗರು ಪಾರುಲ್ ಕಾಲೆಳೆಯುತ್ತಿದ್ದಾರೆ. ಇನ್ನು ಕೆಲವರು ಪಾರುಲ್ ಅವರನ್ನು ಸಮಾಧಾನ ಮಾಡುತ್ತಿದ್ದಾರೆ.

ಪಾರಲ್ ಸದ್ಯ ಬಟರ್ ಫ್ಲೈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಬಾಲಿವುಡ್ ನ ಕ್ವೀನ್ ಸಿನಿಮಾದ ರಿಮೇಕ್ ಇದಾಗಿದೆ. ಚಿತ್ರಕ್ಕೆ ರಮೇಶ್ ಅರವಿದ್ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾ ಸಧ್ಯದಲ್ಲೇ ತೆರೆಗೆ ಬರಲಿದೆ. ಪಾರುಲ್ ಕನ್ನಡದಲ್ಲಿ ಕೊನೆಯದಾಗಿ ಸೀಸರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

   
 
ಹೆಲ್ತ್