Back
Home » ಸಿನಿ ಸಮಾಚಾರ
ಶಿವರಾಜ್ ಕುಮಾರ್ - ಪಿ ವಾಸು ಚಿತ್ರದ ಟೈಟಲ್ 'ಆಯುಷ್ಮಾನ್ ಭವ'
Oneindia | 12th Jul, 2019 08:26 AM

ಶಿವರಾಜ್ ಕುಮಾರ್ ಇಂದು (ಜುಲೈ 12) ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಅವರ ಬರ್ತ್ ಡೇ ವಿಶೇಷವಾಗಿ ಮುಂದಿನ ಸಿನಿಮಾಗಳ ಪೋಸ್ಟರ್ ಗಳು ಬಿಡುಗಡೆಯಾಗುತ್ತಿವೆ.

ಪಿ ವಾಸು ನಿರ್ದೇಶನದ ಶಿವರಾಜ್ ಕುಮಾರ್ ನಟನೆಯ ಹೊಸ ಸಿನಿಮಾ ಶೀರ್ಷಿಕೆ ರಿವೀಲ್ ಆಗಿದೆ. ಸಿನಿಮಾಗೆ 'ಆಯುಷ್ಮಾನ್ ಭವ' ಎನ್ನುವ ಟೈಟಲ್ ಇಡಲಾಗಿದೆ. ಸರಳ ಪೋಸ್ಟರ್ ಮೂಲಕ ಶೀರ್ಷಿಕೆಯನ್ನು ತಿಳಿಸಲಾಗಿದೆ.

ಬರ್ತ್ ಡೇ ವಿಶೇಷ : SRK ಅಭಿಮಾನಿಗಳಿಗೆ ನಾಳೆ ಹಬ್ಬದೂಟ

ಈ ಹಿಂದೆ ಸಿನಿಮಾಗೆ 'ಆನಂದ್' ಎಂಬ ಹೆಸರು ನಿಗದಿಯಾಗಿದೆ ಎನ್ನುವ ಸುದ್ದಿ ಇತ್ತು. ಆದರೆ, 'ಆಯುಷ್ಮಾನ್ ಭವ' ಟೈಟಲ್ ಅಂತಿಮವಾಗಿದೆ. 'ಶಿವಲಿಂಗ' ಸಿನಿಮಾದ ಬಳಿಕ ಮತ್ತೆ ಶಿವರಾಜ್ ಕುಮಾರ್ ಹಾಗೂ ಪಿ ವಾಸು ಒಂದಾಗಿದ್ದಾರೆ.

ರಚಿತಾ ರಾಮ್ ಸಿನಿಮಾದ ನಾಯಕಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ಶಿವರಾಜ್ ಕುಮಾರ್ ಗೆ ರಚಿತಾ ಜೋಡಿಯಾಗಿದ್ದಾರೆ. 'ರುಸ್ತುಂ' ಚಿತ್ರದಲ್ಲಿ ಅಭಿನಯಿಸಿದ್ದರೂ, ಅಲ್ಲಿ ವಿವೇಕ್ ಒಬೆರಾಯ್ ಪತ್ನಿಯಾಗಿ ರಚಿತಾ ಕಾಣಿಸಿಕೊಂಡಿದ್ದರು.

ಕೊನೆಗೂ ಸೋಷಿಯಲ್ ಮೀಡಿಯಾಗೆ ಬಂದ ಸೆಂಚುರಿ ಸ್ಟಾರ್

ದ್ವಾರಕೀಶ್ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ. ಇದೇ ಮೊದಲ ಬಾರಿಗೆ ದ್ವಾರಕೀಶ್ ಚಿತ್ರ ಬ್ಯಾನರ್ ನಲ್ಲಿ ಹ್ಯಾಟ್ರಿಕ್ ಹೀರೋ ನಟಿಸುತ್ತಿದ್ದಾರೆ. ಗುರುಕಿರಣ್ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆಯಲಿದ್ದಾರೆ.

   
 
ಹೆಲ್ತ್