Back
Home » ಸುದ್ದಿ
ಮಂಗಳೂರಿನಲ್ಲಿ ನಾಲ್ಕು ದಿನಗಳಿಂದ ನೀರಿಲ್ಲ, ಜನಪ್ರತಿನಿಧಿಗಳೂ ಪತ್ತೆ ಇಲ್ಲ
Oneindia | 12th Jul, 2019 10:47 AM

ಮಂಗಳೂರು ಜುಲೈ 12: ಮಂಗಳೂರಿನಲ್ಲಿ ಈಚೆಗೆ ಮಳೆ ಸುರಿಯಲು ಶುರುವಾಗಿದೆ. ಅಲ್ಲಲ್ಲಿ ಕೆರೆಕಟ್ಟೆಗಳೂ ಸ್ವಲ್ಪ ಪ್ರಮಾಣದಲ್ಲಿ ತುಂಬಿಕೊಂಡಿವೆ. ಆದರೂ ಕಳೆದ 4 ದಿನಗಳಿಂದ ಕುಡಿಯುವ ನೀರಿಗೆ ಭಾರೀ ಸಮಸ್ಯೆ ಎದುರಾಗಿದೆ. ಸಮಸ್ಯೆ ಪರಿಹರಿಸಬೇಕಾದ ಜನಪ್ರತಿನಿಧಿಗಳೂ ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜಕೀಯ ನಾಟಕದಲ್ಲಿ ಬಿಝಿಯಾಗಿದ್ದಾರೆ.

ಈಚೆಗೆ ಮಳೆ ಆರಂಭವಾಗಿದ್ದು, ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಾದ ಕಾರಣ ತುಂಬೆ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿಗರೂ ನಿಟ್ಟುಸಿರು ಬಿಟ್ಟಿದ್ದರು. ಆದರೆ ಕಳೆದ ನಾಲ್ಕು ದಿನಗಳಿಂದ ಮಂಗಳೂರು ನಗರಕ್ಕೆ ಕುಡಿಯುವ ನೀರಿನ ಸರಬರಾಜು ಸ್ಥಗಿತಗೊಂಡಿದೆ.

ಮಂಗಳೂರಿನಲ್ಲಿ ನೀರಿನ ಸಮಸ್ಯೆಗೆ ಸರ್ಕಾರದ ನಿರ್ಲಕ್ಷ್ಯ ಕಾರಣ- ವೇದವ್ಯಾಸ್ ಕಾಮತ್

ಮಂಗಳೂರಿಗೆ ನೀರು ಸರಬರಾಜಾಗುವ ಪೈಪ್ ದುರಸ್ತಿಗೆ ಮಂಗಳೂರು ಮಹಾನಗರ ಪಾಲಿಕೆ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಕುಡಿಯುವ ನೀರನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಮಂಗಳೂರು ನಗರಕ್ಕೆ ನೀರು ಪೂರೈಸುವ ಪ್ರಮುಖ ಪೈಪ್ ಲೈನ್ ನಲ್ಲಿ ಕಣ್ಣೂರು ಸಮೀಪ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಳೆದ ಭಾನುವಾರದಿಂದ ನೀರು ಸರಬರಾಜನ್ನು ನಿಲ್ಲಿಸಲಾಗಿದೆ. ಪೈಪ್ ಲೈನ್ ದುರಸ್ತಿ ಕಾರ್ಯ ಪ್ರಾರಂಭ ಮಾಡಿ ನಾಲ್ಕು ದಿನ ಕಳೆದರೂ ಇನ್ನೂ ಮುಗಿದಿಲ್ಲ.

ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪೈಪ್ ಲೈನ್ ದುರಸ್ತಿ ಕಾರ್ಯಕ್ಕೆ ಅಡ್ಡಿಯಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಕನ್ನಡದಲ್ಲಿ ಮಳೆ ಅಭಾವದ ನಡುವೆಯೂ ನಾಟಿ ಕಾರ್ಯ ಆರಂಭ

ನೀರಿನ ಅಭಾವ ಹಿಂದೆಂದಿಗಿಂತಲೂ ಹೆಚ್ಚಾಗಿ ಈ ಬಾರಿ ಮಂಗಳೂರಿಗರನ್ನು ಕಾಡಿತ್ತು. ಮಂಗಳೂರು ಮಹಾನಗರಕ್ಕೆ ನೀರುಣಿಸುವ ತುಂಬೆ ಕಿಂಡಿ ಅಣೆಕಟ್ಟಿನಲ್ಲಿ ಬೇಸಿಗೆಯಲ್ಲಿ ನೀರಿನ ಸಂಗ್ರಹ ಕುಸಿದಿದ್ದ ಪರಿಣಾಮ ನೀರಿನ ರೇಷನಿಂಗ್ ವ್ಯವಸ್ಥೆಯನ್ನೂ ಪಾಲಿಕೆ ಜಾರಿಗೆ ತಂದಿತ್ತು. ಕುಡಿಯುವ ನೀರಿಗಂತೂ ಪಟ್ಟ ಪಾಡು ಹೇಳತೀರದ್ದು. ಇದೀಗ ಮಳೆ ಸುರಿಯುತ್ತಿದ್ದು, ಎಲ್ಲಾ ಸರಿಹೋಗಿದೆ ಎಂದು ನಿಟ್ಟುಸಿರುಬಿಡುವಷ್ಟರಲ್ಲಿ ಪೈಪ್ ಲೈನ್ ಸಮಸ್ಯೆಯಿಂದ ಮತ್ತೆ ತೊಂದರೆ ಅನುಭವಿಸುವಂತಾಗಿದೆ.

ಸುಳ್ಯದಲ್ಲಿ ರಸ್ತೆ ಬದಿ ಕಸ ಸುರಿದ ವಿದ್ಯಾರ್ಥಿಗೆ ಸಾವಿರ ರೂಪಾಯಿ ದಂಡ

ನಗರದಲ್ಲಿ ನಾಲ್ಕು ದಿನಗಳಿಂದ ಕುಡಿಯುವ ನೀರು ಸರಬರಾಜು ಬಂದ್ ಆಗಿದ್ದರೂ ತಲೆ ಕೆಡಿಸಿಕೊಳ್ಳಲು ಇಲ್ಲಿ ಸ್ಥಳೀಯರು ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಯಾರೂ ಇಲ್ಲ. ಎಲ್ಲರೂ ಬೆಂಗಳೂರಿನಲ್ಲಿ ಮೊಕ್ಕಾಂ ಹೂಡಿದ್ದಾರೆ.

   
 
ಹೆಲ್ತ್