Back
Home » ಸೌಂದರ್ಯ
ಕೂದಲು ಹಾಗೂ ತ್ವಚೆಯ ಆರೈಕೆಗೆ ಸಾಸಿವೆ ಎಣ್ಣೆಯ ಪ್ರಯೋಜನಗಳು
Boldsky | 20th Jul, 2019 01:46 PM

ಭಾರತೀಯರು ಹೆಚ್ಚಾಗಿ ಸಾಸಿವೆಯನ್ನು ಹೆಚ್ಚಾಗಿ ಬಳಕೆ ಮಾಡುವುದು. ಯಾವುದೇ ಆಹಾರವಾಗಿರಲಿ, ಸಾಸಿವೆಯು ಅದರ ರುಚಿ ಹೆಚ್ಚಿಸುವುದು ಮತ್ತು ಸಾಸಿವೆಯ ಎಣ್ಣೆಯನ್ನು ವಿವಿಧ ರೀತಿಯಿಂದ ಬಳಕೆ ಮಾಡಿಕೊಳ್ಳಲಾಗುತ್ತದೆ. ಇದರ ವಿಶೇಷ ರುಚಿ ಮತ್ತು ಸುವಾಸನೆಯಿಂದಾಗಿ ಇಂದಿಗೂ ಅದು ಭಾರತೀಯ ಅಡುಗೆ ಮನೆಗಳಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದೆ. ಸಾಸಿವೆ ಕಾಳು, ಎಣ್ಣೆ ಮತ್ತು ಅದರ ಎಲೆಯು ತುಂಬಾ ಆರೋಗ್ಯಕಾರಿ. ಸಾಸಿವೆಯು ಮೂರು ವಿಧದಲ್ಲಿ ಲಭ್ಯವಾಗಿರುವುದು.

ಅದರಲ್ಲಿ ಮುಖ್ಯವಾಗಿ ಕಪ್ಪು, ಕಂದು ಮತ್ತು ಬಿಳಿ ಸಾಸಿವೆ. ಸಾಸಿವೆಯನ್ನು ಹೆಚ್ಚಾಗಿ ಭಾರತ, ಕೆನಡಾ, ಇಂಗ್ಲೆಂಡ್, ಹಂಗೇರಿ ಇತ್ಯಾದಿ ರಾಷ್ಟ್ರಗಳಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಸಾಸಿವೆ ಎಣ್ಣೆಯನ್ನು ಹೆಚ್ಚಾಗಿ ದೇಹಕ್ಕೆ ಮಸಾಜ್ ಮಾಡಿಕೊಳ್ಳಲು, ಕೂದಲು, ಚರ್ಮದ ಆರೈಕೆ, ಅಡುಗೆ ಮತ್ತು ಕೆಲವೊಂದು ಆಚರಣೆಗೆ ಬಳಕೆ ಮಾಡಲಾಗುತ್ತದೆ. ನಮ್ಮ ಚರ್ಮ, ಕೂದಲು ಮತ್ತು ಆರೋಗ್ಯಕ್ಕೆ ಸಾಸಿವೆಯು ಯಾವ ರೀತಿಯಲ್ಲಿ ನೆರವಾಗುವುದು ಎಂದು ತಿಳಿಯುವ.

ಚರ್ಮಕ್ಕೆ ತೇವಾಂಶ ಮತ್ತು ರಕ್ಷಣೆ ನೀಡುವುದು

ಚರ್ಮವು ಒಣಗಿದ್ದರೆ ಆಗ ಇದಕ್ಕೆ ನೈಸರ್ಗಿಕವಾಗಿ ಪರಿಣಾಮ ಕಂಡುಕೊಳ್ಳಲು ಬಯಸುತ್ತಿದ್ದರೆ ನೀವು ಸಾಸಿವೆ ಎಣ್ಣೆಯನ್ನು ಅಲೋವೆರಾ ಜತೆಗೆ ಸೇರಿಸಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. 15 ನಿಮಿಷ ಬಿಟ್ಟು ತೊಳೆಯಿರಿ. ಚರ್ಮವು ನೆರಿಗೆಯಿಂದ ಮುಕ್ತವಾಗುವುದು ಮತ್ತು ಹುಬ್ಬುಗಳ ಮಧ್ಯೆ ಕಾಣಿಸಿಕೊಳ್ಳುವ ಗೆರೆಗಳನ್ನು ಇದು ನಿವಾರಿಸುವುದು. ಇದರ ಹೊರತಾಗಿ ಸಾಸಿವೆಯಲ್ಲಿ ಶಿಲೀಂಧ್ರ ವಿರೋಧಿ ಗುಣಗಳು ಇವೆ. ಇದು ಚರ್ಮದ ಸೋಂಕಿನ ವಿರುದ್ಧ ಹೋರಾಡುವುದು ಮತ್ತು ಚರ್ಮವನ್ನು ರಕ್ಷಿಸುವುದು.

ಚರ್ಮಕ್ಕೆ ವಯಸ್ಸಾಗುವುದನ್ನು ನಿಧಾನಗೊಳಿಸುವುದು

ಸಾಸಿವೆಯಲ್ಲಿ ವಿಟಮಿನ್ ಎ, ಸಿ ಮತ್ತು ಕೆ ಸಮೃದ್ಧವಾಗಿದ್ದು, ಇದರೊಂದಿಗೆ ಕ್ಯಾರೋಟಿನ್ ಮತ್ತು ಲುಟೀನ್ ಕೂಡ ದೆ. ಈ ಎಲ್ಲಾ ಆಂಟಿಆಕ್ಸಿಡೆಂಟ್ ಗಳು ಚರ್ಮಕ್ಕೆ ಫ್ರೀ ರ್ಯಾಡಿಕಲ್‌ನಿಂದ ಆಗುವ ಹಾನಿಯನ್ನು ತಡೆಯುವುದು ಮತ್ತು ಚರ್ಮವು ತುಂಬಾ ಯುವ, ಕಾಂತಿ ಮತ್ತು ಆರೋಗ್ಯಯುತವಾಗಿರುವಂತೆ ಮಾಡುವುದು. ಸಾಸಿವೆಯನ್ನು ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಬಳಸಿಕೊಂಡು ಯೌವನಯುತವಾಗಿರಿ.

ನೈಸರ್ಗಿಕ ಸ್ಕ್ರಬ್

ನೈಸರ್ಗಿಕವಾಗಿ ಚರ್ಮಕ್ಕೆ ಸ್ಕ್ರಬ್ ಮಾಡಲು ಸಾಸಿವೆಯನ್ನು ಮಾತ್ರ ಅಥವಾ ಬೇರೆ ಕೆಲವು ಸಾರಭೂತ ತೈಲದೊಂದಿಗೆ ಮಿಶ್ರಣ ಮಾಡಿಕೊಂಡು ಬಳಕೆ ಮಾಡಬಹುದು. ಸ್ವಲ್ಪ ಸಾಸಿವೆಯನ್ನು ರುಬ್ಬಿಕೊಳ್ಳಿ ಮತ್ತು ಇದು ಸರಿಯಾಗಿ ಹುಡಿ ಆಗಲಿ ಮತ್ತು ಇದನ್ನು ಚರ್ಮದ ಸತ್ತಕೋಶಗಳನ್ನು ತೆಗೆಯಲು ಬಳಕೆ ಮಾಡಬಹುದು. ಇದನ್ನು ಬಳಸಿಕೊಂಡು ಮುಖ ತೊಳೆದಾಗ ಸುಂದರ ಹಾಗೂ ಕಾಂತಿಯುತ ಚರ್ಮವು ನಿಮ್ಮದಾಗುವುದು. ನಿಯಮಿತವಾಗಿ ನೀವು ಈ ಸ್ಕ್ರಬ್ ಬಳಸಿಕೊಂಡು ಮೊಡವೆ ಹಾಗೂ ಬೊಕ್ಕೆಗಳು ಮುಖದಿಂದ ನಿವಾರಣೆ ಆಗುವುದು.

ಕೂದಲನ್ನು ಕಂಡೀಷನ್ ಮಾಡುವುದು

ಸಾಸಿವೆಯಲ್ಲಿ ಉನ್ನತ ಮಟ್ಟದ ಕೊಬ್ಬಿನಾಮ್ಲಗಳು ಇವೆ ಮತ್ತು ಇದು ಕೂದಲಿಗೆ ಕಂಡೀಷನರ್ ಆಗಿ ಅದ್ಭುತವಾಗಿ ಕೆಲಸ ಮಾಡುವುದು. ಎಣ್ಣೆಯನ್ನು ಕೂದಲಿನ ಬುಡದಿಂದ ತುದಿಯ ತನಕ ಹಚ್ಚಿಕೊಳ್ಳಿ. ಇದರಿಂದ ಕಾಂತಿ ಹಾಗೂ ರೇಷ್ಮೆಯಂತಹ ಕೂದಲು ನಿಮ್ಮದಾಗುವುದು. ರಾತ್ರಿಯಿಡಿ ಎಣ್ಣೆಯನ್ನು ಹಾಗೆ ಬಿಟ್ಟರೆ ತಲೆಬುರುಡೆಯು ಇದನ್ನು ಇರಿಕೊಳ್ಳುವುದು ಮತ್ತು ಹಾಗೆ ಕೆಲಸ ಮಾಡುವುದು. ಮರುದಿನ ಬೆಳಗ್ಗೆ ಶಾಂಪೂ ಹಾಕಿಕೊಂಡು ಕೂದಲು ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ಸ್ವಲ್ಪ ಎಣ್ಣೆ ಬಿಸಿ ಮಾಡಿಕೊಂಡು ಅದನ್ನು ಹಚ್ಚಿಕೊಳ್ಳಿ. ಕೂದಲಿಗೆ ಸಾಸಿವೆ ಎಣ್ಣೆಯು ಅದ್ಭುತವಾಗಿ ಕೆಲಸ ಮಾಡುವುದು. ಇದರಿಂದ ನೀವು ಮನೆಯಲ್ಲಿ ಸಾಸಿವೆ ಹುಡಿ ಮಾಡಿ ಅದರಿಂದ ಎಣ್ಣೆ ತಯಾರಿಸಿ.

ಕೂದಲಿನ ಬೆಳವಣಿಗೆಗೆ ನೆರವಾಗುವುದು

ಕೂದಲಿನ ಬೆಳವಣಿಗೆಗೆ ಇದನ್ನು ಬಳಸಿದರೆ ಆಗ ವಿಟಮಿನ್ ಎ ಅದ್ಭುತವಾಗಿ ಕೆಲಸ ಮಾಡುವುದು. ಸಾಸಿವೆ ಕಾಳಿನಲ್ಲಿ ವಿಟಮಿನ್ ಎ ಎಷ್ಟು ಪ್ರಮಾಣದಲ್ಲಿ ಇದೆ ಎಂದು ನಾವು ಈಗಾಗಲೇ ತಿಳಿಸಿದ್ದೇವೆ. ಸಾಸಿವೆ ಎಣ್ಣೆ ಬಳಸಿಕೊಂಡು ಕೂದಲಿಗೆ ಮಸಾಜ್ ಮಾಡಿದರೆ ಆಗ ರಕ್ತಸಂಚಾರವು ಉತ್ತೇಜಿಸಲ್ಪಡುವುದು. ಇದರಿಂದ ಕೂದಲಿನ ಬುಡವು ಬಲಗೊಂಡು ಕೂದಲು ದಪ್ಪ ಹಾಗೂ ವೇಗವಾಗಿ ಬೆಳೆಯುವುದು.

ಕೂದಲು ಬಲಗೊಳ್ಳುವುದು

ಕೂದಲು ಸರಿಯಾಗಿ ಬೆಳವಣಿಗೆ ಮತ್ತು ಆರೋಗ್ಯವಾಗಿರಲು ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಇ, ಒಮೆಗಾ-3 ಮತ್ತು ಒಮೆಗಾ-6 ಕೊಬ್ಬಿನಾಮ್ಲಗಳು ಇವೆ. ಇದೆಲ್ಲವೂ ಸಾಸಿವೆ ಎಣ್ಣೆಯಲ್ಲಿ ಇದೆ. ಸಾಸಿವೆ ಎಣ್ಣೆ ಹಚ್ಚಿಕೊಂಡರೆ ಅದರಿಂದ ಕೂದಲು ಉದುರುವಿಕೆ ತಡೆಯಬಹುದು ಮತ್ತು ಕೂದಲು ಉದ್ದ ಮತ್ತು ದಪ್ಪವಾಗಿ ಬೆಳೆಯುವುದು.

ಸ್ನಾಯು ನೋವು ನಿವಾರಣೆ

ಮೊಣಕಾಲು ಅಥವಾ ಬೆನ್ನು ನೋವು ಇದ್ದ ವೇಳೆ ನಮ್ಮ ಅಜ್ಜಿ ಸಾಸಿವೆ ಎಣ್ಣೆಯನ್ನು ಬಳಸಿಕೊಂಡು ಅದನ್ನು ನಿವಾರಣೆ ಮಾಡುತ್ತಿದ್ದರು. ಇದಕ್ಕೆ ಕಾರಣ ಕೂಡ ಇದೆ. ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿಕೊಂಡು ನೋವಿರುವ ಜಾಗಕ್ಕೆ ಹಚ್ಚಿಕೊಂಡರೆ ಆಗ ನೋವು ಮತ್ತು ಸ್ನಾಯು ಸೆಳೆತವು ನಿವಾರಣೆ ಆಗುವುದು. ಬಿಸಿ ನೀರು ಮತ್ತು ಸಾಸಿವೆ ಹುಡಿ ಹಾಕಿಕೊಂಡಿರುವ ಬಿಸಿ ನೀರಿನ ಟಬ್ ನಲ್ಲಿ ದೇಹವನ್ನು ಮುಳುಗಿಸಿಕೊಳ್ಳಿ.

ಅಸ್ತಮಾ, ರಕ್ತದೊತ್ತಡ, ಋತುಚಕ್ರದ ಸಮಸ್ಯೆಗೆ ನೆರವಾಗುವುದು

ಕಬ್ಬಿಣ, ಮೆಗ್ನಿಶಿಯಂ, ಸೆಲೆನಿಯಂ ಮತ್ತು ತಾಮ್ರವನ್ನು ಒಳಗೊಂಡಿರುವಂತಹ ಸಾಸಿವೆಯು ಜನರನ್ನು ಫಿಟ್ ಇರುವಂತೆ ನೋಡಿ ಕೊಳ್ಳುವುದು ಮತ್ತು ಅಸ್ತಮಾ ದಾಳಿ, ಅಧಿಕ ರಕ್ತದೊತ್ತಡ ಮಟ್ಟವನ್ನು ಕಡಿಮೆ ಮಾಡುವುದು. ಇದರಿಂದ ಋತುಚಕ್ರದ ಸಮಸ್ಯೆಗಳು ನಿವಾರಣೆ ಆಗುವುದು. ನಿಮಗೆ ಇಂತಹ ಯಾವುದೇ ಸಮಸ್ಯೆಯು ಇದ್ದರೆ ಆಗ ನೀವು ಹೆಚ್ಚು ಸಾಸಿವೆ ಸೇವನೆ ಮಾಡಿ.

ಕಣ್ಣು ಮತ್ತು ಮೂಗಿಗೆ ಲಾಭಗಳು

ಸಾಸಿವೆಯಲ್ಲಿ ಬಿ ಗುಂಪಿನ ವಿಟಮಿನ್‌ಗಳು ಮತ್ತು ಕ್ಯಾರೋಟಿನ್ ಇದೆ. ಇದನ್ನು ನಿಯಮಿತವಾಗಿ ಸೇವನೆ ಮಾಡಿದರೆ ಅದರಿಂದ ಕಣ್ಣಿನ ಸಮಸ್ಯೆಯಾಗಿರುವ ಜೆರೋಫ್ಥಾಲ್ಮಿಯಾ ನಿವಾರಣೆ ಆಗುವುದು. ಮೂಗು ಕಟ್ಟಿರುವುದು, ಶೀತ ಮತ್ತು ಮೂಗಿನಿಂದ ಸೋರುವಿಕೆಗೆ ಇದು ಪರಿಹಾರ ನೀಡುವುದು. ಮೂಗಿನ ಎರಡು ಹೊಳ್ಳೆಗಳಿಗೆ ಹಸಿ ಸಾಸಿವೆ ಎಣ್ಣೆಯ ಕೆಲವು ಹನಿ ಹಚ್ಚಿಕೊಳ್ಳಿ.

   
 
ಹೆಲ್ತ್