Back
Home » ಸೌಂದರ್ಯ
ಮಳೆಗಾಲದಲ್ಲಿ ಸಿಕ್ಕು ಸಿಕ್ಕಾಗುವ ಕೂದಲ ಆರೈಕೆಗೆ ಸೂಕ್ತವಾದ ಹೇರ್ ಪ್ಯಾಕ್‌ಗಳು
Boldsky | 22nd Jul, 2019 12:37 PM

ಮಳೆಗಾಲ, ಸುರಿಯುತ್ತಿರುವ ನೀರಧಾರೆ ಮನಸ್ಸಿಗೆ ಮುದನೀಡಿ ಹೃದಯಕ್ಕೆ ಅತೀವ ಆನಂದ ತರುತ್ತದೇನೋ ನಿಜ, ಆದರೆ ಕೂದಲ ವಿಷಯದಲ್ಲಿ ಮಾತ್ರ ಇದು ತದ್ವಿರುದ್ದವಾಗಿದೆ. ಮಳೆಗಾಲದಲ್ಲಿ ಕೂದಲು ಒದ್ದೆಒದ್ದೆಯಾಗಿದ್ದು ತುರಿಕೆಯಿಂದ ಕೂಡಿರುತ್ತದೆ ಹಾಗೂ ಒಣಹವೆ ಇತರ ತೊಂದರೆಗಳನ್ನೂ ತಂದೊಡ್ಡುತ್ತದೆ. ಆದರೆ ಈ ಬಗ್ಗೆ ಇನ್ನು ಚಿಂತಿಸುವ ಅಗತ್ಯವಿಲ್ಲ, ಕೂದಲಿಗೆ ಎದುರಾಗುವ ತೊಂದರೆಗಳನ್ನು ನಿವಾರಿಸಲು ಕೆಲವು ನೈಸರ್ಗಿಕ ವಿಧಾನಗಳಿದ್ದು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ ಹಾಗೂ ಅಲ್ಲದೇ ಈ ವಿಧಾನದಲ್ಲಿ ಯಾವುದೇ ಅಡ್ಡಪರಿಣಾಮಗಳೂ ಇರುವುದಿಲ್ಲ. ಬನ್ನಿ, ಈ ಮಳೆಗಾಲದಲ್ಲಿ ನೀವು ಪ್ರಯತ್ನಿಸಬಹುದಾದ ಕೆಲವು ಸುಲಭ ಕೇಶಲೇಪಗಳ ಬಗ್ಗೆ ಅರಿಯೋಣ...

ಮೊಟ್ಟೆಯ ಕೇಶಲೇಪ ಅಗತ್ಯವಿರುವ ಸಾಮಾಗ್ರಿಗಳು:

*ಎರಡು ಮೊಟ್ಟೆಗಳ ಹಳದಿ ಭಾಗ, ಒಂದು ಲಿಂಬೆಯ ರಸ, ಒಂದು ಮೊಟ್ಟೆಯ ಬಿಳಿಭಾಗ, ಒಂದು ದೊಡ್ಡ ಚಮಚ ಜೇನು

*ಎಲ್ಲವನ್ನೂ ಒಂದು ಬೋಗುಣಿಯಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

*ಈ ಲೇಪವನ್ನು ಕೂದಲ ಬುಡದಿಂದ ತುದಿಯವರೆಗೆ ಬರುವಂತೆ ಹಚ್ಚಿಕೊಳ್ಳಿ.

*ಪೂರ್ಣವಾಗಿ ಒಣಗುವವರೆಗೆ ಹಾಗೇ ಬಿಡಿ. ಬಳಿಕ ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ.

*ಈ ವಿಧಾನದಿಂದ ತಲೆಯ ಚರ್ಮ ಎಣ್ಣೆಪಸೆಯಿಂದ ಮುಕ್ತವಾಗುತ್ತದೆ ಹಾಗೂ ಕೂದಲೂ ಸೌಮ್ಯವಾಗುತ್ತದೆ.

ಕೊಬ್ಬರಿ ಎಣ್ಣೆ ಮತ್ತು ಜೇನು ಅಗತ್ಯವಿರುವ ಸಾಮಾಗ್ರಿಗಳು:

*ತಲಾ ಒಂದು ದೊಡ್ಡಚಮಚ ಜೇನು ಮತ್ತು ಕೊಬ್ಬರಿ ಎಣ್ಣೆ, ಮೂರರಿಂದ ನಾಲ್ಕು ತಾಜಾ ಸ್ಟ್ರಾಬೆರಿಗಳು

ಎಲ್ಲವನ್ನೂ ಒಂದು ಬೋಗುಣಿಯಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

*ಈ ಮಿಶ್ರಣವನ್ನು ಕೂದಲ ಬುಡದಿಂದ ತುದಿಯವರೆಗೆ ಬರುವಂತೆ ಹಚ್ಚಿಕೊಂಡು ಹದಿನೈದರಿಂದ ಇಪ್ಪತ್ತು ನಿಮಿಷ ಹಾಗೇ ಒಣಗಲು ಬಿಡಿ.

*ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

*ಈ ಲೇಪದಿಂದ ನೆತ್ತಿಯ ಚರ್ಮ ಒಣದಾಗಿರುವುದು ಮಾತ್ರವಲ್ಲ ಸಿಕ್ಕುಸಿಕ್ಕಾಗಿದ್ದ ಕೂದಲು ಸುಲಭವಾಗಿ ಬಾಚಲು ಸಾಧ್ಯವಾಗುತ್ತದೆ ಹಾಗೂ ತ್ವಚೆಗೆ ಒಳಗಿನಿಂದಲೂ ಪೋಷಣೆ ಪಡೆಯಲು ಸಾಧ್ಯವಾಗುತ್ತದೆ.

ಶಿರ್ಕಾ ಮತ್ತು ಜೇನು: ಅಗತ್ಯವಿರುವ ಸಾಮಾಗ್ರಿಗಳು:

ಸಮಪ್ರಮಾಣದಲ್ಲಿ ಶಿರ್ಕಾ ಮತ್ತು ಜೇನನ್ನು ಒಂದು ಲೋಟ ಬಿಸಿನೀರಿಗೆ ಹಾಕಿ ಚೆನ್ನಾಗಿ ಕದಡಿ.

ಈ ನೀರು ಪೂರ್ಣವಾಗಿ ತಣಿಯುವವರೆಗೆ ಹಾಗೇ ಬಿಡಿ.

ಬಳಿಕ ಈ ನೀರನ್ನು ಕೂದಲ ಬುಡದಿಂದ ತುದಿಯವರೆಗೆ ಬರುವಂತೆ ಹಚ್ಚಿಕೊಂಡು ಸುಮಾರು ಹತ್ತರಿಂದ ಹದಿನೈದು ನಿಮಿಷ ಒಣಗಲು ಬಿಡಿ. ಬಳಿಕ ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ.

ಈ ಕೇಶಲೇಪದ ಬಳಕೆಯಿಂದ ಸಿಕ್ಕುಸಿಕ್ಕಾಗಿದ್ದ ಕೂದಲು ಬಿಡಿಬಿಡಿಯಾಗಿ ಸುಲಭವಾಗಿ ಬಾಚಿಕೊಳ್ಳಲು ಸಾಧ್ಯವಾಗುತ್ತದೆ.

ಕೊಬ್ಬರಿ ಎಣ್ಣೆ, ಬಾದಾಮಿ ಮತ್ತು ಆಲಿವ್ ಎಣ್ಣೆ ಅಗತ್ಯವಿರುವ ಸಾಮಾಗ್ರಿಗಳು:

ತಲಾ ಒಂದು ದೊಡ್ಡ ಚಮಚ ಕೊಬ್ಬರಿ ಎಣ್ಣೆ ಮತ್ತು ಆಲಿವ್ ಎಣ್ಣೆ

ನಾಲ್ಕೈದು ದೊಡ್ಡ ಚಮಚ ಬಾದಮಿಯ ಹಾಲು.

ಎಲ್ಲವನ್ನೂ ಒಂದು ಬೋಗುಣಿಯಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

ಈ ಮಿಶ್ರಣವನ್ನು ಚಿಕ್ಕ ಉರಿಯಲ್ಲಿ ಬಿಸಿಮಾಡಿ

ಬಳಿಕ ಬೆರಳುಗಳ ತುದಿಯಲ್ಲಿ ಈ ಮಿಶ್ರಣವನ್ನು ಹಚ್ಚಿಕೊಂಡು ತಲೆಗೂದಲ ಬುಡಕ್ಕೆ ತಗಲುವಂತೆ ಇಡಿಯ ತಲೆಗೆ ಹಚ್ಚಿಕೊಳ್ಳಿ.

ಬಳಿಕ ಸುಮಾರು ಒಂದು ಘಂಟೆಯ ಕಾಲ ಹಾಗೇ ಒಣಗಲು ಬಿಡಿ. ನಂತರ ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ.

ಈ ಲೇಪ ಸಿಕ್ಕುಸಿಕ್ಕಾಗಿದ್ದ ಕೂದಲನ್ನು ಸುಲಭವಾಗಿ ಬಾಚಿಕೊಳ್ಳುವಂತೆ ಮಾಡುವುದಲ್ಲದೇ ಗುಂಗುರಾಗಿದ್ದ ಕೂದಲನ್ನು ನೈಸರ್ಗಿಕವಾಗಿ ನೇರವಾಗಿಸುತ್ತದೆ ಹಾಗೂ ಹೆಚ್ಚು ಕಾಲ ನೇರವಾಗಿಯೇ ಇರಲು ಸಾಧ್ಯವಾಗುತ್ತದೆ. ಉತ್ತಮ ಪರಿಣಮವನ್ನು ಒಂದು ವಾರದ ಬಳಕೆಯ ಬಳಿಕ ಕಾಣಬಹುದು.

ಬೇವು ಮತ್ತು ಲಿಂಬೆ ಅಗತ್ಯವಿರುವ ಸಾಮಾಗ್ರಿಗಳು:

ಕೊಂಚ ಬೇವಿನ ಎಲೆಗಳು ಮತ್ತು ಲಿಂಬೆರಸ ಎರಡನ್ನೂ ಮಿಕ್ಸಿಯ ಚಿಕ್ಕ ಜಾರ್ ನಲ್ಲಿ ಹಾಕಿ ಚೆನ್ನಾಗಿ ಅರೆಯಿರಿ

ಈ ಲೇಪವನ್ನು ತಲೆಗೂದಲಿಗೆ ಹಚ್ಚಿಕೊಂಡು ಕನಿಷ್ಟ ಅರ್ಧ ಘಂಟೆ ಒಣಗಲು ಬಿಡಿ.

ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ಉತ್ತಮ ಪರಿಣಾಮಕ್ಕಾಗಿ ವಾರದಲ್ಲಿ ಎರಡು ಅಥವಾ ಮೂರು ಬಾರಿ ಉಪಯೋಗಿಸಿ.

ಈ ವಿಧಾನದಿಂದ ಕೂದಲಿಗೆ ಉತ್ತಮ ಪೋಷಣೆ ದೊರಕುತ್ತದೆ ಹಾಗೂ ತಲೆಹೊಟ್ಟು ಇಲ್ಲವಾಗುತ್ತದೆ.

ನೆಲ್ಲಿಕಾಯಿ, ಲಿಂಬೆ ಮತ್ತು ಕೊಬ್ಬರಿ ಎಣ್ಣೆ: ಅಗತ್ಯವಿರುವ ಸಾಮಾಗ್ರಿಗಳು:

ಕೊಂಚ ನೆಲ್ಲಿಕಾಯಿಗಳ ತಿರುಗಳನ್ನು ನುಣ್ಣಗೆ ಅರೆದು ಹಿಂಡಿ ರಸ ಸಂಗ್ರಹಿಸಿ

ಸಮಪ್ರಮಾಣದಲ್ಲಿ ಈ ರಸ ಮತ್ತು ಲಿಂಬೆರಸ ಹಾಗೂ ಕೊಬ್ಬರಿ ಎಣ್ಣೆಗಳನ್ನು ಬೆರೆಸಿ

ಈ ಮಿಶ್ರಣವನ್ನು ತಲೆಗೂದಲ ಬುಡದಿಂದ ತುದಿಯವರೆಗೆ ಬರುವಂತೆ ಹಚ್ಚಿಕೊಂಡು ಸುಮಾರು ಅರ್ಧದಿಂದ ಒಂದು ಘಂಟೆಯವರೆಗೆ ಒಣಗಲು ಬಿಡಿ.

ಈ ವಿಧಾನದಿಂದ ತಲೆಗೂದಲ ಬುಡದಿಂದ ಕಲ್ಮಶಗಳು ಇಲ್ಲವಾಗುತ್ತವೆ ಹಾಗೂ ಉತ್ತಮ ಪೋಷಣೆ ಒದಗಿಸಿ ಕೂದಲು ಉದುರುವುದನ್ನು ನಿಲ್ಲಿಸುತ್ತದೆ.

ಮಳೆಗಾಲದಲ್ಲಿ ಹೊರಗೆ ತಿರುಗಾಡುವ ಮಜವೇ ಬೇರೆ. ಸುರಿಯುತ್ತಿರುವ ಮಳೆಯಲ್ಲಿ ಛತ್ರಿ ಹಿಡಿದು ಹೊರಗಿನ ವಾತಾವರಣವನ್ನು ಆಸ್ವಾದಿಸುವ ಇಚ್ಛೆಯಿದ್ದಾಗ ಕೂದಲು ಸಿಕ್ಕುಸಿಕ್ಕಾಗಿದ್ದರೆ ಮತ್ತು ತೇವ ಮತ್ತು ಧೂಳಿನಿಂದ ಕೂದಲು ಸಿಕ್ಕುಸಿಕ್ಕಾಗಿದ್ದರೆ ಹೊರಹೋಗಲು ಮನಸ್ಸಾಗುವುದಿಲ್ಲ. ಆದರೆ ಈ ಸುಲಭ ವಿಧಾನಗಳನ್ನು ಬಳಸಿ ಕೂದಲನ್ನು ಸಿಕ್ಕುರಹಿತವಾಗಿಸಿ ನಿಮ್ಮ ದಿನವನ್ನು ಆಹ್ಲಾದಕರವಾಗಿಸುತ್ತದೆ.

 
ಹೆಲ್ತ್