Back
Home » ಸೌಂದರ್ಯ
ಬ್ಯೂಟಿ ಟಿಪ್ಸ್: ಬಳಸಿದ ಕಾಫಿ ಹುಡಿ ಬಿಸಾಡಬೇಡಿ! ಇದನ್ನು ಸೌಂದರ್ಯಕ್ಕೆ ಬಳಸಿ!
Boldsky | 27th Jul, 2019 02:05 PM
 • ಚರ್ಮದ ಸತ್ತ ಕೋಶಗಳನ್ನು ತೆಗೆಯುವುದು

  ಕಾಫಿ ಹುಡಿಯಲ್ಲಿ ಹಲವಾರು ಸಣ್ಣ ಮಣಿಗಳೂ ಇರುವುದು ಇದರಿಂದ ಅದು ಚರ್ಮದಲ್ಲಿ ಇರುವ ಸತ್ತಕೋಶಗಳು, ಧೂಳು ಮತ್ತು ರಂಧ್ರಗಳಲ್ಲಿ ತುಂಬಿಕೊಂಡಿರುವಂತಹ ಮೇಧೋರಸವನ್ನು ತೆಗೆಯುವುದು. ಕಾಫಿ ಹುಡಿಯಿಂದ ಸ್ಕ್ರಬ್ ಮಾಡಿದರೆ ಆಗ ಚರ್ಮವು ತುಂಬಾ ಶುದ್ಧವಾಗುವುದು ಮತ್ತು ತಮಗೆ ಬೇಕಾಗಿರುವಂತಹ ಪೋಷಕಾಂಶಗಳನ್ನು ಅದು ಹೀರಿಕೊಳ್ಳುವುದು.


 • ಕಪ್ಪು ವೃತ್ತ ಕಡಿಮೆ ಮಾಡುವುದು

  ನೀವು ರಾತ್ರಿ ತುಂಬಾ ವಿಳಂಬವಾಗಿ ಮಲಗಿದರೆ ಮತ್ತು ಸರಿಯಾಗಿ ನಿದ್ರೆ ಮಾಡದೆ ಇದ್ದರೆ ಆಗ ಕಪ್ಪು ವೃತ್ತಗಳು ಕಾಣಿಸಿಕೊಳ್ಳುವುದು. ಆದರೆ ಇದಕ್ಕೆ ಕಾಫಿ ಹುಡಿಯು ಒಳ್ಳೆಯ ಪರಿಹಾರವಾಗಿದೆ. ಬಳಸಿದ ಕಾಫಿ ಹುಡಿಯಲ್ಲಿ ಉನ್ನತ ಮಟ್ಟದ ಕೆಫಿನ್ ಅಂಶವಿದೆ. ಇದು ರಕ್ತ ಸಂಚಾರ ಉತ್ತೇಜಿಸಲು ಮತ್ತು ಉರಿಯೂತ ತಡೆಯಲು ತುಂಬಾ ಪರಿಣಾಮಕಾರಿ. ಯಾವುದೇ ರೀತಿಯ ದುಬಾರಿ ಹಣ ಖರ್ಚು ಮಾಡದೆ ಬಳಸಿದ ಕಾಫಿ ಹುಡಿ ಬಳಸಿಕೊಂಡು ಕಪ್ಪು ಕಲೆಗಳ ನಿವಾರಣೆ ಮಾಡಬಹುದು.


 • ಸ್ಟ್ರೆಚ್ ಮಾರ್ಕ್ಸ್ ತೆಗೆಯುವುದು

  ಬಳಸಿದ ಕಾಫಿ ಹುಡಿಯು ಯಾವಾಗಲೂ ಕಸದ ಬುಟ್ಟಿಗೆ ಎಸೆಯಲ್ಪಡುತ್ತಿತ್ತು. ಆದರೆ ನಿಜವಾದ ವಿಚಾರವೇನೆಂದರೆ ಮಹಿಳೆಯು ಗರ್ಭಿಣೆಯಾದ ಅಥವಾ ಅತಿಯಾದ ತೂಕದಿಂದಾಗಿ ಸ್ಟ್ರೆಚ್ ಮಾರ್ಕ್ಸ್ ಬಂದಿದರೆ ಆಗ ಇದು ನೆರವಾಗುವುದು. ಇದನ್ನು ಬಳಸಿದರೆ ಆಗ ಪ್ರಮುಖ ಪೋಷಕಾಂಶಗಳು ಚರ್ಮದ ಪ್ರತಿ ರೋಧಕ ಹೆಚ್ಚಿಸುವುದು, ಕಾಲಜನ್ ಉತ್ಪತ್ತಿ ಉತ್ತೇಜಿಸುವುದು, ಚರ್ಮದ ಬಣ್ಣ ಮತ್ತು ಸ್ಥಿತಿಸ್ಥಾಪಕತ್ವ ಸುಧಾರಿಸುವುದು, ಇದರಿಂದಾಗಿ ಚರ್ಮದಲ್ಲಿನ ಸ್ಟ್ರೆಚ್ ಮಾರ್ಕ್ಸ್ ನಿಧಾನವಾಗಿ ಮರೆಯಾಗುವುದು.


 • ನೆರಿಗೆ ನಿವಾರಣೆ ಮಾಡುವುದು

  30 ದಾಟಿದ ಬಳಿಕ ಮಹಿಳೆಯರ ಮುಖದಲ್ಲಿ ಹೆಚ್ಚಾಗಿ ನೆರಿಗೆ, ಗೆರೆಗಳು ಕಾಣಿಸಿಕೊಳ್ಳುವುದು ಮತ್ತು ಇದರಿಂದ ಸೌಂದರ್ಯ ಹಾಳಾಗುವುದು. ಬಳಸಿದ ಕಾಫಿ ಹುಡಿ ಬಳಸಿಕೊಂಡರೆ ಆಗ ಇದು ಮುಖದಲ್ಲಿ ಮೂಡಿರುವಂತಹ ನೆರಿಗೆಯನ್ನು ಪರಿಣಾಮ ಕಾರಿಯಾಗಿ ನಿವಾರಣೆ ಮಾಡುವುದು. ಕಾಫಿ ಹುಡಿಯಲ್ಲಿ ಇರುವಂತಹ ಪೋಷಕಾಂಶಗಳು ಚರ್ಮಕ್ಕೆ ಮೊಶ್ಚಿರೈಸ್, ಸ್ಥಿತಿಸ್ಥಾಪಕತ್ವ ಹೆಚ್ಚಿಸಲು, ಚರ್ಮವು ಪುನರ್ಶ್ಚೇತನಗೊಳ್ಳಲು ಉತ್ತೇಜಿಸುವುದು ಮತ್ತು ಚರ್ಮವು ತುಂಬಾ ನಯ ಮತ್ತು ಮೃಧುವಾಗುವುದು. ಕಾಫಿ ಹುಡಿ ಬಳಸಿಕೊಂಡು ಮಾಸ್ಕ್ ತಯಾರಿಸುವುದು ಹೇಗೆ ಬಳಸಿದ ಕಾಫಿ ಹುಡಿ, ಉಪ್ಪು, ಜೇನುತುಪ್ಪ, ಒಂದು ಚಮಚ ಸಕ್ಕರೆ ಹಾಕಿಕೊಂಡು, ಅದಕ್ಕೆ ಒಂದು ಮೊಟ್ಟೆಯ ಬಿಳಿ ಭಾಗ ಹಾಕಿ ಕಲಸಿಕೊಂಡು ಪೇಸ್ಟ್ ಮಾಡಿ ಮತ್ತು ಇದನ್ನು ಮುಖಕ್ಕೆ ಹಚ್ಚಿಕೊಂಡು ನಿಧಾನವಾಗಿ ಸುಮಾರು 10 ನಿಮಿಷ ಕಾಲ ಹಾಗೆ ಮಸಾಜ್ ಮಾಡಿಕೊಳ್ಳಿ. ಕಣ್ಣು ಮತ್ತು ಬಾಯಿಯ ಭಾಗಕ್ಕೆ ಹಚ್ಚಿಕೊಳ್ಳಬೇಡಿ. ಇದರ ಬಳಿಕ ಬಿಸಿ ನೀರಿನಿಂದ ಮುಖ ತೊಳೆಯಿರಿ. ವಾರದಲ್ಲಿ ಒಂದು ಸಲ ಈ ಮಾಸ್ಕ್ ಬಳಸಿಕೊಳ್ಳಿ.


 • ದೇಹದ ವಾಸನೆ ನಿವಾರಣೆ

  ಬಳಸಿದ ಕಾಫಿ ಹುಡಿಯಿಂದ ದೇಹದಿಂದ ಬರುವಂತಹ ವಾಸನೆಯನ್ನು ನಿವಾರಣೆ ಮಾಡಲು ತುಂಬಾ ಪರಿಣಾಮಕಾರಿ ಆಗಿದೆ. ಕಾಫಿ ಹುಡಿ ಮತ್ತು ಎರಡು ಚಮಚ ಲಿಂಬೆ ರಸವನ್ನು ಹಾಕಿಕೊಂಡು ಪೇಸ್ಟ್ ಮಾಡಿಕೊಳ್ಳಬೇಕು. ಇದನ್ನು ಸ್ನಾನದ ಬಳಿಕ ಕಂಕುಳಿನ ಭಾಗಕ್ಕೆ ಹಚ್ಚಿಕೊಂಡು ಮಸಾಜ್ ಮಾಡಿ. ಕಾಫಿ ಹುಡಿಯು ಬೆವರನ್ನು ಪರಿಣಾಮಕಾರಿಯಾಗಿ ಹೀರಿಕೊಳ್ಳುವುದು. ಇದರಿಂದ ಕಂಕುಳಿನ ಮತ್ತು ದೇಹದಲ್ಲಿನ ವಾಸನೆ ನಿವಾರಣೆ ಮಾಡುವುದು.


 • ಕಂಕುಳಿನಡಿ ಕಪ್ಪಾಗಿರುವುದರ ನಿವಾರಣೆಗೆ

  ಮಹಿಳೆಯದ ದೇಹದಲ್ಲಿ ಕಂಕುಳ, ಪೃಷ್ಠ, ಮತ್ತು ಬಿಕಿನಿ ಭಾಗವು ಬೇಗನೆ ಕಪ್ಪಾಗುವುದು. ಇದು ತುಂಬಾ ಕೆಟ್ಟದಾಗಿ ಕಾಣಿಸುವುದು. ಇದರ ಹೋಗಲಾಡಿಸಲು ನೀವು ಬಳಸಿದ ಕಾಫಿ ಹುಡಿ ಆಯ್ಕೆ ಮಾಡಿ. ಇದು ಕಪ್ಪು ಕಲೆಯನ್ನು ನಿವಾರಣೆ ಮಾಡುವುದು. ಮೆಲನಿನ್ ಉತ್ಪತ್ತಿಯನ್ನು ತಡೆದು ಚರ್ಮವು ತುಂಬಾ ಸುಂದರ ಹಾಗೂ ನಯವಾಗುವಂತೆ ಮಾಡುವುದು. ಕೆಲವು ಸಮಯ ಕಾಫಿ ಹುಡಿ ಬಳಸಿದರೆ ಆಗ ನಿಮಗೆ ಬೇಕಾದ ರೀತಿಯಲ್ಲಿ ಬಟ್ಟೆಗಳನ್ನು ಧರಿಸಿಕೊಳ್ಳಬಹುದು.


 • ಸತ್ತ ಜೀವಕೋಶಗಳನ್ನು ನಿವಾರಿಸಲು

  ನೆರವಾಗುತ್ತದೆ ಚರ್ಮದ ಹೊರಭಾಗದಲ್ಲಿ ಸಂಗ್ರಹವಾಗಿರುವ ಸತ್ತ ಜೀವಕೋಶಗಳನ್ನು ನಿವಾರಿಸುವುದು ಅಷ್ಟು ಸುಲಭವಲ್ಲ. ಸೋಪು ಹಾಕಿ ಎಷ್ಟು ಉಜ್ಜಿದರೂ ಬಾರದ ಈ ಜೀವಕೋಶಗಳು ಹಳೆಯ ಕಾಫಿಬೀಜದ ಪುಡಿಯನ್ನು ಉಜ್ಜಿಕೊಳ್ಳುವ ಮೂಲಕ ಈ ಜೀವಕೋಶಗಳು ಸುಲಭವಾಗಿ ಹೊರಬರುತ್ತವೆ. ಇದಕ್ಕಾಗಿ ಹಳೆಯ ಕಾಫಿಬೀಜಗಳನ್ನು ನುಣ್ಣಗೆ ಪುಡಿಮಾಡಿ ನೀರಿನಲ್ಲಿ ನೆನೆಸಿ. ಬಿಸಿನೀರಿನ ಸ್ನಾನದ ಬಳಿಕ ಕಾಫಿಯ ಲೇಪನವನ್ನು ಇಡಿಯ ದೇಹಕ್ಕೆ ಹಚ್ಚಿ ಸುಮಾರು ಹದಿನೈದು ನಿಮಿಷ ಒಣಗಲು ಬಿಡಿ. ನಂತರ ಮೈಯುಜ್ಜುವ ಬ್ರಶ್ ಉಪಯೋಗಿಸಿ ಉಜ್ಜಿಕೊಳ್ಳಿ. ಚರ್ಮದ ಕಾಂತಿ ಹೆಚ್ಚಿರುವುದನ್ನು ನೋಡಿ ದಂಗಾಗುತ್ತೀರಿ.


 • ಕೂದಲಿಗೆ ಕಾಫಿ ಬಳಕೆ

  ಕೂದಲಿನ ಬುಡದ ಚರ್ಮಕ್ಕೆ ಬೇಕಾದ ಅನೇಕ ಅಂಶ ಕಾಫಿಯಲ್ಲಿದೆ. ಕಾಫಿ ಕೂದಲಿಗೂ ತುಂಬಾ ಒಳ್ಳೆಯದು. ಕಾಫಿ ನೈಸರ್ಗಿಕ ಕಂಡೀಶನರ್ ನಂತೆ ಕೆಲಸ ನಿರ್ವಹಿಸಿ ಕೂದಲು ದುರುವಿಕೆ ತಡೆದು ಮೃದುವಾಗಿಸುತ್ತೆ. ಮೆಹಂದಿಯೊಂದಿಗೆ ಕಾಫಿ ಡಿಕಾಕ್ಷನ್ ಬೆರೆಸಿ ಹಚ್ಚಿಕೊಂಡು 2 ಗಂಟೆ ಬಿಟ್ಟರೆ ಕೂದಲಿಗೆ ಒಳ್ಳೆ ಕಲರ್ ನೊಂದಿಗೆ ಹೊಳಪೂ ಬರುತ್ತದೆ.


 • ಕಾಫಿ ಪೌಡರ್ ನ ಫೇಶಿಯಲ್ ಫೇಶಿಯಲ್

  ಮಾಡುವ ಮೊದಲು ತ್ವಚೆಯನ್ನು ಸ್ವಚ್ಛಗೊಳಿಸುವುದು ಮೊದಲ ಕ್ರಮ. ಇದರಿಂದ ಚರ್ಮದಲ್ಲಿನ ಕೊಳೆ, ಅತಿಯಾದ ಎಣ್ಣೆ ಮತ್ತು ಇತರ ಕಲ್ಮಶಗಳು ದೂರವಾಗುವುದು. ಇದರಿಂದ ಚರ್ಮ ಸ್ವಚ್ಛವಾಗುವುದು. ಇದು ಮಾಡುವ ವಿಧಾನ ಈ ಸರಳ ವಿಧಾನಕ್ಕೆ ಬೇಕಾಗಿರುವುದು ಕಾಫಿ ಹುಡಿ ಮತ್ತು ಅಲೋವೆರಾ ಲೋಳೆ. ಒಂದು ಚಮಚ ಹುಡಿ ಮಾಡಿದ ಕಾಫಿ ತೆಗೆದುಕೊಳ್ಳಿ ಮತ್ತು ಇದಕ್ಕೆ ಎರಡು ಚಮಚ ಅಲೋವೆರಾ ಲೋಳೆ ಹಾಕಿ. ಇವೆರಡನ್ನು ಪಿಂಗಾಣಿಗೆ ಹಾಕಿ ಸರಿಯಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡು ವೃತ್ತಾಕಾರದಲ್ಲಿ ಎರಡು ನಿಮಿಷ ಕಾಲ ಮಸಾಜ್ ಮಾಡಿಕೊಳ್ಳಿ. ಎರಡು ನಿಮಿಷ ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ. ಈಗ ನೀವು ಮೊದಲ ಹಂತ ದಾಟಿದ್ದೀರಿ.


 • ಕಾಫಿ ಪೌಡರ್‌ನ ಫೇಸ್ ಮಾಸ್ಕ್

  ಕಾಂತಿಯುತ ಹಾಗೂ ನಯವಾದ ತ್ವಚೆ ಪಡೆಯುವುದರಿಂದ ನೀವು ಒಂದು ಹೆಜ್ಜೆ ಹಿಂದಿದ್ದೀರಿ. ಫೇಶಿಯಲ್ ಮಾಡುವಾಗ ಫೇಸ್ ಮಾಸ್ಕ್ ತುಂಬಾ ಮಹತ್ವದ ಹಂತವಾಗಿದೆ. ಫೇಸ್ ಮಾಸ್ಕ್ ನಿಂದ ಚರ್ಮವು ತೇವಾಂಶ ಪಡೆದುಕೊಳ್ಳುವುದು ಮಾತ್ರವಲ್ಲದೆ ಸಂಪೂರ್ಣವಿನ್ಯಾಸ ಉತ್ತಮ ಪಡಿಸುವುದು. ಕಾಫಿಯಿಂದ ಮಾಡಬಹುದಾದ ಕೆಲವು ಫೇಸ್ ಮಾಸ್ಕ್ ಗಳು ಇಲ್ಲಿವೆ. ಮಾಡುವ ವಿಧಾನ ಪಿಂಗಾಣಿಗೆ ಒಂದು ಚಮಚ ಕಾಫಿ ಹುಡಿ, ಒಂದು ಚಮಚ ಜೇನುತುಪ್ಪ ಹಾಕಿಕೊಂಡು ಅದನ್ನು ಸರಿಯಾಗಿ ಮಿಶ್ರಣ ಮಾಡಿ. ಈ ಮಾಸ್ಕ್ ನ್ನು ಮುಖಕ್ಕೆ ಹಚ್ಚಿಕೊಂಡು ವೃತ್ತಾಕಾರದಲ್ಲಿ ಮಸಾಜ್ ಮಾಡಿ. 15 ನಿಮಿಷ ಕಾಲ ಇದು ಹಾಗೆ ಒಣಗಲಿ ಮತ್ತು ಬಳಿಕ ತೊಳೆಯಿರಿ. ಜೇನು ತುಪ್ಪದಲ್ಲಿ ಮಾಯಿಶ್ಚರೈಸ್ ನೀಡುವಂತಹ ಗುಣಗಳು ಇವೆ. ಇದನ್ನು ಕಾಫಿ ಜತೆ ಸೇರಿಸಿಕೊಂಡಾಗ ಅದು ತ್ವಚೆಗೆ ಮಾಯಿಶ್ಚರೈಸ್ ಮತ್ತು ಕಾಂತಿ ನೀಡುವುದು.
ಪ್ರತೀ ಸಲ ನೀವು ಮನೆಯಲ್ಲಿ ಕಾಫಿ ಮಾಡಿಕೊಂಡು ಕುಡಿದ ಬಳಿಕ ಬಳಸಿದ ಹುಡಿಯನ್ನು ಕಸದ ಬುಟ್ಟಿಗೆ ಹಾಕುತ್ತೀರಿ ಅಥವಾ ಅದನ್ನು ಗೊಬ್ಬರವಾಗಿ ಬಳಕೆ ಮಾಡುತ್ತೀರಿ. ಅದಾಗ್ಯೂ, ಕೆಲವರಿಗೆ ಮಾತ್ರ ಕಾಫಿ ಹುಡಿಯಲ್ಲಿ ಇರುವಂತಹ ಸೌಂದರ್ಯವರ್ಧಕ ಗುಣಗಳ ಬಗ್ಗೆ ತಿಳಿದಿದೆ.

ಆದರೆ ಬಳಸಿದ ಕಾಫಿ ಹುಡಿಯಿಂದ ನಿಮ್ಮ ಸೌಂದರ್ಯದ ಆರೈಕೆ ಮಾಡಬಹುದು. ಇದು ಬಿಳಿ ಹಾಗೂ ನಯವಾದ ಚರ್ಮ ನೀಡುವುದು. ಬಳಸಿದ ಕಾಫಿ ಹುಡಿಯ ಪರಿಣಾಮಗಳ ಬಗ್ಗೆ ನೀವು ಈ ಲೇಖನದಲ್ಲಿ ತಿಳಿಯಿರಿ.

   
 
ಹೆಲ್ತ್