ಮೊಡವೆಗಳು ತುಂಬಾ ನೋವುಂಟು ಮಾಡುವುದು ಮಾತ್ರವಲ್ಲದೆ, ಕಿರಿಕಿರಿ ಹಾಗೂ ಸೌಂದರ್ಯವನ್ನು ಹಾಳುಗೆಡವುತ್ತದೆ. ನಿಮ್ಮ ದೇಹದಲ್ಲಿ ನಿರಂತರ ಮತ್ತು ಯಾವಾಗಲು ಮೊಡವೆಗಳು ಕಾಣಿಸಿಕೊಳ್ಳುತ್ತಲಿದ್ದರೆ, ಆಗ ಇಂತಹ ಸಮಸ್ಯೆ ಇರುವವರು ನೀವೋಬ್ಬರೇ ಅಲ್ಲ. 11ರಿಂದ 30ರ ಹರೆಯದ ಪ್ರತಿಯೊಬ್ಬರಿಗೂ ಹೆಚ್ಚಾಗಿ ಮೊಡವೆಗಳು ಕಾಣಿಸಿಕೊಳ್ಳುವುದು.
ಹಾರ್ಮೋನ್ ಗಳಿಂದಾಗಿ ಮೂಡವಂತಹ ಮೊಡವೆಗಳು ದೇಹದಲ್ಲಿನ ಹಾರ್ಮೋನ್ ಗಳ ಅಸಮತೋಲನದಿಂದಾಗಿ ಕಾಣಿಸುವುದು. ಇದಕ್ಕೆ ಸರಿಯಾಗಿ ಔಷಧಿ, ಸುಧಾರಿತ ಆಹಾರ ಮತ್ತು ಜೀವನಶೈಲಿ ಬದಲಾವಣೆ ಮಾಡಿಕೊಂಡರೆ ಆಗ ಮೊಡವೆ ನಿವಾರಣೆ ಮಾಡಬಹುದು. ಹಾರ್ಮೋನ್ ಗಳಿಂದಾಗಿರುವ ಮೊಡವೆ ನಿವಾರಣೆ ಮಾಡಲು ಕೆಲವೊಂದು ಚಿಕಿತ್ಸಾ ಕ್ರಮಗಳನ್ನು ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ.
ಹಾರ್ಮೋನ್ ಮೊಡವೆಗಳು ಎಂದರೇನು?
ಸಾಮಾನ್ಯವಾಗಿ ಇದನ್ನು ಮೊಡವೆ ಎಂದು ಕರೆಯಲಾಗುತ್ತದೆ. ಈ ಸಮಸ್ಯೆಯಲ್ಲಿ ಚರ್ಮವು ಉರಿಯೂತ, ಕೆಂಪಾಗುವುದು, ದದ್ದು, ಬ್ಲ್ಯಾಕ್ ಹೆಡ್ ಮತ್ತು ಇತರ ಕೆಲವೊಂದು ಸಮಸ್ಯೆಗಳು ಕಾಣಿಸುವುದು. ಮುಖ, ಕುತ್ತಿಗೆ, ಬೆನ್ನು, ಎದೆ ಇತ್ಯಾದಿ ಭಾಗಗಳಲ್ಲಿ ಮೇದೋಸ್ರಾವ ಗ್ರಂಥಿಗಳು ಚಟುವಟಿಕೆಯಿಂದ ಇರುವ ಕಾರಣದಿಂದಾಗಿ ಮೊಡವೆ ಮೂಡುವುದು. ಇದರ ತೀವ್ರತೆಯನ್ನು ಮೂರು ವಿಧವಾಗಿ ವಿಂಗಡಿಸಲಾಗಿದೆ.
*ಲಘ ಮೊಡವೆ: ಇದು ಉರಿಯೂತ ಇಲ್ಲದೆ ಮೂಡುವಂತಹ ಮೊಡವೆ.
*ಮಧ್ಯಮ ಮೊಡವೆ: ಇದು ಸಾಂದರ್ಭಿಕ ಗುರುತು ಮತ್ತು ಸೌಮ್ಯವಾದ ಗಾಯದೊಂದಿಗೆ ಉರಿಯೂತದಿಂದ ಮೂಡುವುದು.
*ತೀವ್ರ ಮೊಡವೆ: ಇಲ್ಲಿ ಉರಿಯೂತವು ತೀವ್ರವಾಗಿ ಇರುತ್ತದೆ, ಗಂಟುಗಳು ಮತ್ತು ಗಾಯವು ಚಿಕಿತ್ಸೆ ಬಳಿಕ ಗುಣವಾಗುವುದು. ತೀವ್ರ ರೀತಿಯ ಮೊಡವೆ ಕಾಣಿಸಿಕೊಂಡ ಜನರು ಕೆಲವೊಂದು ಸಲ ಮಾನಸಿಕ ಖಿನ್ನತೆಗೆ ಒಳಗಾಗುವರು. ಯಾಕೆಂದರೆ ಅವರ ಸೌಂದರ್ಯವು ಹಾಳಾಗುವುದು.
ಹಾರ್ಮೋನ್ ಮೊಡವೆಗೆ ಕಾರಣಗಳು
*ಹಾಮೋರ್ನು ಅಸಮತೋಲನ
ದೇಹದಲ್ಲಿ ಹಾರ್ಮೋನು ಅಸಮತೋಲನದಿಂದಾಗಿ ಹಾರ್ಮೋನ್ ಮೊಡವೆಗಳು ಮೂಡುವುದು. ಇದು ಚರ್ಮದಲ್ಲಿ ಮೇದೋಸ್ರಾವ ಹೆಚ್ಚಿಸುವ ಕಾರಣದಿಂದಾಗಿ ಮೊಡವೆ ಮೂಡುವುದು.
*ಫೋಲಿಕ್ಯುಲರ್ ಹೈಪರ್ಕೆರಟಿನೈಸೇಶನ್ ಚರ್ಮದ ತೆರೆದ ರಂಧ್ರಗಳ ಒಳಗಡೆ ಚರ್ಮದ ಸತ್ತ ಕೋಶಗಳು ಹೋಗಿ ತುಂಬಿಕೊಳ್ಳುವುದು.
*ಕೆಟ್ಟ ಆಹಾರ ಕ್ರಮ
ಅನಾರೋಗ್ಯಕರ ಆಹಾರ, ಎಣ್ಣೆ ಅಥವಾ ಕಾರ್ಬೊನೇಟೆಡ್ ಆಹಾರವು ಚರ್ಮದಲ್ಲಿ ಮೊಡವೆ ಮೂಡಲು ಕಾರಣವಾಗುವುದು. ಮೊಡವೆ ಇರುವಂತಹ ಜನರು ಎಣ್ಣೆಯಿರುವ ಆಹಾರ ಸೇವಿಸಲೇಬಾರದು.
*ಅನಾರೋಗ್ಯಕರ ಜೀವನಶೈಲಿ
ಧೂಳೂ ಮತ್ತು ಮಾಲಿನ್ಯಕ್ಕೆ ಹೆಚ್ಚು ಸಮಯ ಮೈಯೊಡ್ಡಿಕೊಳ್ಳುವ ಕಾರಣದಿಂದಾಗಿ ಮೊಡವೆ ಮೂಡುವುದು. ಧೂಳು ಮತ್ತು ಕಲ್ಮಶವು ಚರ್ಮದಲ್ಲಿ ಸೇರಿಕೊಂಡು ಬ್ಯಾಕ್ಟೀರಿಯಾ ಸೋಂಕಿಗೆ ಕಾರಣವಾಗಿ ಮೊಡವೆ ಮೂಡಲು ಕಾರಣವಾಗುವುದು.
ಮೊಡವೆ ಸ್ನೇಹಿ ಆಹಾರ ಮತ್ತು ಪಾನೀಯಗಳು
ಹಣ್ಣುಗಳು: ಕಿತ್ತಳೆ, ಬೆರ್ರಿಗಳು, ಸೇಬು, ದ್ರಾಕ್ಷಿ, ಚೆರ್ರಿಗಳು, ಬಾಳೆಹಣ್ಣು, ಪಿಯರ್ಸ್, ಪೀಚ್ ಇತ್ಯಾದಿಗಳು.
ತರಕಾರಿಗಳು: ಗೆಣಸು, ಬ್ರಾಕೋಲಿ, ಬಸಲೆ, ಮೆಣಸು, ಹೂಕೋಸು, ಕ್ಯಾರೆಟ್, ಬೀಟ್ ರೂಟ್ ಇತ್ಯಾದಿಗಳು.
ಇಡೀ ಧಾನ್ಯ ಮತ್ತು ಪಿಷ್ಠ ತರಕಾರಿಗಳು: ಕ್ವಿನೊವಾ, ಕಂದು ಅಕ್ಕಿ, ಓಟ್ಸ್ ಇತ್ಯಾದಿ.
ದ್ವಿದಳ ಧಾನ್ಯಗಳು: ಕಡಲೆ, ಕಿಡ್ನಿ ಬೀನ್ಸ್, ಕಪ್ಪು ಬೀನ್ಸ್ ಇತ್ಯಾದಿ.
ಆರೋಗ್ಯಕಾರಿ ಕೊಬ್ಬುಗಳು: ಆಲಿವ್ ತೈಲ, ಮೊಟ್ಟೆ, ಬೀಜಗಳು, ಕಾಳುಗಳು, ಅವಕಾಡೋ, ತೆಂಗಿನೆಣ್ಣೆ, ಕಡಲೆಕಾಯಿ ಬೆಣ್ಣೆ ಇತ್ಯಾದಿ.
ಉನ್ನತ ಮಟ್ಟದ ಪ್ರೋಟೀನ್ ಗಳು: ತೌಫು, ಮೊಟ್ಟೆ, ಸಾಲ್ಮನ್, ಕೋಳಿ, ಟರ್ಕಿ ಇತ್ಯಾದಿ.
ಹಾಲಿನ ಉತ್ಪನ್ನಗಳಿಗೆ ಪರ್ಯಾಯ: ತೆಂಗಿನಕಾಯಿ ಮೊಸರು, ಬಾದಾಮಿ ಹಾಲಿ, ಗೋಂಡಂಬಿ ಹಾಲಿ, ತೆಂಗಿನ ಹಾಲು ಇತ್ಯಾದಿ.
ಉರಿಯೂತ ಶಮನಕಾರಿ ಗಿಡಮೂಲಿಕೆಗಳು ಮತ್ತು ಮಸಾಲೆಗಳು: ದಾಲ್ಚಿನಿ, ಅರಶಿನ, ಕರಿಮೆಣಸು, ಬೆಳ್ಳುಳ್ಳಿ, ಶುಂಠಿ, ಇತ್ಯಾದಿಗಳು.
ಸಿಹಿರಹಿತ ಪಾನೀಯಗಳು: ನೀರು, ಲಿಂಬೆ ನೀರು, ಗ್ರೀನ್ ಟೀ, ಹಿಬಿಸ್ಕಸ್ ಚಾ ಇತ್ಯಾದಿ.
ಈ ಆಹಾರ ಮತ್ತು ಪಾನೀಯಗಳನ್ನು ಕಡೆಗಣಿಸಿ
*ಹಾಲಿನ ಉತ್ಪನ್ನಗಳು: ಮೊಸರು, ಹಾಲು, ಚೀಸ್ ಇತ್ಯಾದಿ.
*ಸಿಹಿ: ಕೇಕ್, ಕ್ಯಾಂಡಿ, ಸಕ್ಕರೆ, ಬಿಸ್ಕಿಟ್ ಇತ್ಯಾದಿ.
*ಸಕ್ಕರೆ ಪಾನೀಯಗಳು: ಸೋಡಾ, ಸಿಹಿ ಇರುವ ಕ್ರೀಡಾ ಪಾನೀಯ, ಶಕ್ತಿ ಪೇಯ ಇತ್ಯಾದಿಗಳು.
ಎಣ್ಣೆ ಮತ್ತು ಸಂಸ್ಕರಿತ ಆಹಾರ: ಚಿಪ್ಸ್, ಫಾಸ್ಟ್ ಫುಡ್, ಬಿಳಿ ಬ್ರೆಡ್, ಶೀತಲೀಕರಿಸಿದ ಮಾಂಸ, ಸಕ್ಕರೆ ಸೀರಲ್, ಮೈಕ್ರೋವೇವ್ ಆಹಾರ ಇತ್ಯಾದಿಗಳು.
*ಜೀವನಶೈಲಿ ಮತ್ತು ಆಹಾರದಲ್ಲಿ ಬದಲಾವಣೆ ಮಾಡಿಕೊಂಡರೆ ಆಗ ನಿಮ್ಮ ದೇಹದಲ್ಲಿನ ಮೊಡವೆ ಸಮಸ್ಯೆ ಕೂಡ ನಿಧಾನವಾಗಿ ನಿವಾರಣೆ ಆಗುವುದು. ಇದು ನಿಮಗೆ ನೆರವಾಗಿದೆ ಎಂದು ನಾವು ಭಾವಿಸುತ್ತೇವೆ.