Back
Home » ಬಾಲಿವುಡ್
ಯಪ್ಪಾ.. ಪ್ರಿಯಾಂಕಾ ಚೋಪ್ರಾ ಬರ್ತ್ ಡೇ ಕೇಕ್ ಬೆಲೆ ಇಷ್ಟೊಂದಾ..
Oneindia | 30th Jul, 2019 01:46 PM

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಕೆಲ ದಿನಗಳ ಹಿಂದೆ (ಜುಲೈ 17) ತಮ್ಮ ಹುಟ್ಟುಹಬ್ಬ ಆಚರಣೆ ಮಾಡಿಕೊಂಡರು. ಬರ್ತ್ ಡೇ ಎಂದ ತಕ್ಷಣ ಕೇಕ್ ಇರಲೇಬೇಕು. ಹೀಗಾಗಿ ಪ್ರೀತಿಯ ಪತ್ನಿಗಾಗಿ ನಿಕ್ ಅದ್ದೂರಿ ಕೇಕ್ ಸಿದ್ಧ ಮಾಡಿಸಿದ್ದರು.

ಪ್ರಿಯಾಂಕ ಚೋಪ್ರಾ ಬರ್ತ್ ಡೇ ಕೇಕ್ ಬೆಲೆ ಈಗ ಅಚ್ಚರಿಯ ವಿಷಯವಾಗಿದೆ. ಅದಂಹಾಗೆ, ನೀವು ಊಹಿಸಿ.. ಆ ಕೇಕ್ ಬೆಲೆ ಎಷ್ಟಿರಬಹುದು..? 50 ಸಾವಿರ.. 1 ಲಕ್ಷ.. ನೋ.... ಅದರ ಬೆಲೆ ಅದಕ್ಕಿಂತ ಹೆಚ್ಚಿದೆ.

ಇನ್ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್ ಹಾಕಿದ್ರೆ ಪ್ರಿಯಾಂಕಾಗೆ ಇಷ್ಟೊಂದು ದುಡ್ಡು ಸಿಗುತ್ತಾ.!

ಪ್ರಿಯಾಂಕ ಬರ್ತ್ ಡೇ ಕೇಕ್ ಬೆಲೆ 5 ಸಾವಿರ ಡಾಲರ್. ಅಂದರೆ, 3 ಲಕ್ಷದ 45 ಸಾವಿರ ರೂಪಾಯಿ ಆಗುತ್ತದೆ. ವೆನಿಲಾ ಹಾಗೂ ಚಾಕಲೇಟ್ ಫ್ಲೇವರ್ ನಲ್ಲಿ ಕೇಕ್ ಅನ್ನು ತಯಾರು ಮಾಡಲಾಗಿತ್ತು. ಕೇಕ್ ಐದು ಸ್ಟೆಪ್ಸ್ ಇತ್ತು.

ಪ್ರಿಯಾಂಕ ಹುಟ್ಟುಹಬ್ಬಕ್ಕೆ ಕೆಂಪು ಮತ್ತು ಬಂಗಾರದ ಬಣ್ಣದ ಬಟ್ಟೆಯನ್ನು ಧರಿಸಿದ್ದರು. ಇದನ್ನು ಮೊದಲೇ ತಿಳಿದಿದ್ದ ನಿಕ್, ಅದೇ ಬಣ್ಣದ ಕೇಕ್ ಗೆ ಬುಕ್ ಮಾಡಿದ್ದರು. ಈ ಕೇಕ್ ಮೂಲಕ ಮಡದಿಗೆ ಸರ್ ಪ್ರೈಸ್ ನೀಡಿದರು. ಮತ್ತೊಂದು ವಿಶೇಷ ಅಂದರೆ, ಈ ಕೇಕ್ ತಯಾರು ಮಾಡಲು ಸತತ 24 ಗಂಟೆ ಆಗಿತಂತೆ.

ಸ್ಮೋಕಿಂಗ್ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ನಟಿ ಪ್ರಿಯಾಂಕಾ ಚೋಪ್ರಾ

ತಮ್ಮ 37 ನೇ ಹುಟ್ಟುಹಬ್ಬವನ್ನು ಪ್ರಿಯಾಂಕ ಪತಿ ನಿಕ್ ಹಾಗೂ ತಾಯಿ ಮಧು ಜೊತೆಗೆ ಆಚರಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಿಯಾಂಕ ಸಂಬಂಧಿ ಪರಿಣಿತಿ ಚೋಪ್ರಾ ಕೂಡ ಭಾಗಿಯಾಗಿದ್ದರು.

   
 
ಹೆಲ್ತ್