Back
Home » ಆರೋಗ್ಯ
ಆಟೋಇಮ್ಯೂನ್ ಹೆಪಟೈಟಿಸ್: ಕಾರಣಗಳು, ಲಕ್ಷಣಗಳು, ಪತ್ತೆಹಚ್ಚುವಿಕೆ ಮತ್ತು ಚಿಕಿತ್ಸೆ
Boldsky | 31st Jul, 2019 11:09 AM

AIH ಅಥವಾ ಆಟೋಇಮ್ಯೂನ್ ಹೆಪಟೈಟಿಸ್ (ಸ್ವಯಂ ರೋಗ ನಿರೋಧಕ ಹೆಪಟೈಟಿಸ್) ಎಂಬ ಕಾಯಿಲೆ ಹೆಸರೇ ತಿಳಿಸುವಂತೆ ನಮ್ಮ ರೋಗ ನಿರೋಧಕ ಶಕ್ತಿಯೇ ನಮ್ಮ ಯಕೃತ್ ಜೀವಕೋಶಗಳ ಮೇಲೆ ಧಾಳಿ ಮಾಡಿ ಯಕೃತ್ ನ ಉರಿಯೂತಕ್ಕೆ ಕಾರಣವಾಗುತ್ತದೆ. ಈ ಕಾಯಿಲೆಯನ್ನು ಪ್ರಾರಂಭದ ಹಂತದಲ್ಲಿಯೇ ಪತ್ತೆಹಚ್ಚಿ ಚಿಕಿತ್ಸೆ ಪಡೆಯುವ ಮೂಲಕ ಈ ರೋಗದ ಘೋರ ಪರಿಣಾಮವಾದ ಯಕೃತ್ ಗಾಯಗೊಳ್ಳುವಿಕೆ (liver cirrhosis)ಎಂಬ ಸ್ಥಿತಿ ಪಡೆಯುವುದನ್ನು ತಪ್ಪಿಸಬಹುದು.

ಆಟೋಇಮ್ಯೂನ್ ಹೆಪಟೈಟಿಸ್ ಗೆ ಕಾರಣಗಳೇನು?

ಈ ಕಾಯಿಲೆಗೆ ನಿರ್ದಿಷ್ಟವಾದ ಕಾರಣ ಇದುವರೆಗೆ ಕಂಡುಬಂದಿಲ್ಲ. ಆದರೆ ಇತರ ಕಾರಣಗಳು ಈ ಕಾಯಿಲೆಯನ್ನು ಪ್ರಚೋದಿಸಬಹುದು, ಇವುಗಳೆಂದರೆ:

ಬ್ಯಾಕ್ಟೀರಿಯಾ ಅಥವಾ ವೈರಸ್ ಸೋಂಕು ತಗಲುವ ಅನುವಂಶಿಕ ಇತಿಹಾಸ

ಕೆಲವು ವಿಶಿಷ್ಟ ಔಷಧಿಗಳ ಬಳಕೆ. ಉದಾಹರಣೆಗೆ hydralazine,minocycline,statins ಮತ್ತು nitrofurantoin.

ಇತರ ಸ್ವಯಂ ರೋಗ ನಿರೋಧಕ ಕಾರಣಗಳೂ ಈ ಕಾಯಿಲೆಯ ಬೆಳವಣಿಗೆಯೊಂದಿಗೆ ಸಂಬಂಧ ಹೊಂದಿರಬಹುದು

ಇವುಗಳಲ್ಲಿ ಒಳಗೊಂಡಿರಬಹುದಾದವು ಎಂದರೆ:

*ಗ್ರೇವ್ಸ್ ಕಾಯಿಲೆ -Grave'sdisease

*ಟೈಪ್ 1 ಮಧುಮೇಹ

*ರ್‍ಹೂಮಟಾಯ್ಡ್ ಸಂಧಿವಾತ-Rheumatoid arthritis

*ಥೈರಾಯಿಡೈಟಿಸ್-Thyroiditis

*ಅಲ್ಸರೇಟಿವ್ ಕೊಲೈಟಿಸ್-Ulcerative colitis

*ಇನ್ಫಲಮೇಟರೆ ಬೊವೆಲ್ ಕಾಯಿಲೆ-Inflammatory bowel disease

*ಸ್ಕೆಲೋಡರ್ಮಾ-Scleroderma

*ಸಿಸ್ಟಮೆಟಿಕ್ ಲೂಪಸ್ ಎರಿಥೇಮಾಟೋಸಸ್ -Systemic lupus erythematosus

*ಜಾಗ್ರೆನ್ಸ್ ಸಿಂಡ್ರೋಮ್ (Sjögren's syndrome)

ಆಟೋಇಮ್ಯೂನ್ ಹೆಪಟೈಟಿಸ್ ಕಾಯಿಲೆಯ ವಿಧಗಳು:

*ಟೈಪ್ 1 ಆಟೋಇಮ್ಯೂನ್ ಹೆಪಟೈಟಿಸ್:

*ಇದು ಅತಿ ಸಾಮಾನ್ಯವಾಗಿ ಕಂಡುಬರುವ ವಿಧವಾಗಿದ್ದು ಯಾವುದೇ ವಯಸ್ಸಿನಲ್ಲಿ ಈ ಕಾಯಿಲೆ ಆವರಿಸಬಹುದು.

*ಟೈಪ್ 2 ಆಟೋಇಮ್ಯೂನ್ ಹೆಪಟೈಟಿಸ್:

*ಇದು ಮಕ್ಕಳಲ್ಲಿ ಮತ್ತು ಯುವಜನತೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ವಿಧವಾಗಿದೆ. ವಯಸ್ಕರಿಗೂ ಈ ಕಾಯಿಲೆ ಬೆಳವಣಿಗೆಗೊಳ್ಳಬಹುದು.

ಆಟೋಇಮ್ಯೂನ್ ಹೆಪಟೈಟಿಸ್ ಲಕ್ಷಣಗಳು

*ಮೂಳೆಸಂಧುಗಳಲ್ಲಿ ನೋವು

*ಚರ್ಮದಲ್ಲಿ ಕೆಂಪು ಗೆರೆಗಳಾಗುವುದು

*ಸುಸ್ತು

*ವಾಕರಿಕೆ ಮತ್ತು ವಾಂತಿ

*ಅತಿಸಾರ

*ಯಕೃತ್ ನ ಗಾತ್ರ ಹಿಗ್ಗುವುದು

*ಮಾಸಿಕ ದಿನಗಳು ತಡವಾಗುವುದು

*ಹೊಟ್ಟೆನೋವು

*ಚರ್ಮದ ಮೇಲೆ ನರಗಳು ಅಸಹಜವಾಗಿ ಕಾಣಿಸಿಕೊಳ್ಳುವುದು

*ತೂಕದಲ್ಲಿ ಇಳಿಕೆ

ಆಟೋಇಮ್ಯೂನ್ ಹೆಪಟೈಟಿಸ್ ಆವರಿಸುವ ಸಾಧ್ಯತೆ ಹೆಚ್ಚುವ ಕಾರಣಗಳು

*ಈ ಕಾಯಿಲೆ ಸಾಮಾನ್ಯವಾಗಿ ಮಹಿಳೆಯರಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ರೋಗಿಯ ಆರೋಗ್ಯ ಇತಿಹಾಸದಲ್ಲಿ ದಡಾರ, ಹರ್ಪಿಸ್ ಸಿಂಪ್ಲೆಕ್ಸ್ ಅಥವಾ ಎಪ್ಸ್ಟಿಯನ್ ಬಾರ್ ವೈರಸ್ (herpes simplex or Epstein-Barr virus) ಮೊದಲಾದ ರೋಗಗಳು ಮರುಕಳಿಸುವ ಸಾಧ್ಯತೆ

*ಈಗಾಗಲೇ ವಂಶಪಾರಂಪರ್ಯವಾಗಿ ಸೀಲಿಯಾಕ್ ಕಾಯಿಲೆ, ಹೈಪರ್ ಥೈರಾಡಿಸಂ, ಮತ್ತು ರ್‍ಹೂಮಟಾಯ್ಡ್ ಸಂಧಿವಾತ ಮೊದಲಾದ ಕೆಲವು ಕಾಯಿಲೆಗಳು ಆವರಿಸಿದ್ದರೆ ಆಟೋಇಮ್ಯೂನ್ ಹೆಪಟೈಟಿಸ್ ಆವರಿಸುವ ಸಾಧ್ಯತೆ ಹೆಚ್ಚು.

ಆಟೋಇಮ್ಯೂನ್ ಹೆಪಟೈಟಿಸ್ ಉಲ್ಬಣಗೊಂಡರೆ ಎದುರಾಗುವ ಅಪಾಯಗಳು

*ಅನ್ನನಾಳದ ನರಗಳು ಉಬ್ಬುವ ಸಾಧ್ಯತೆ

*ಯಕೃತ್ ವೈಫಲ್ಯ

*ಯಕೃತ್ ಕ್ಯಾನ್ಸರ್

*ಹೊಟ್ಟೆಯ ಭಾಗದಲ್ಲಿ ನೀರು ತುಂಬಿಕೊಳ್ಳುವುದು.

ಆಟೋಇಮ್ಯೂನ್ ಹೆಪಟೈಟಿಸ್ ಪತ್ತೆಹಚ್ಚುವಿಕೆ

*ರಕ್ತಪರೀಕ್ಷೆ: ರೋಗಿಯ ರಕ್ತದಲ್ಲಿ ವೈರಸ್ ಮೂಲದ ಹೆಪಟೈಟಿಸ್ ಇಲ್ಲವೆಂದು ಖಚಿತಪಡಿಸಲು, ಯಾವ ಬಗೆಯ ಆಟೋಇಮ್ಯೂನ್ ಹೆಪಟೈಟಿಸ್ ಇದೆ ಎಂದು ತಿಳಿದುಕೊಳ್ಳಲು ಹಾಗೂ ಯಕೃತ್ ನ ಕಾರ್ಯಕ್ಷಮತೆಯನ್ನು ಪರೀಕ್ಷಿಸಲು ರಕ್ತಪರೀಕ್ಷೆಯನ್ನು ನಡೆಸಲಾಗುತ್ತದೆ.

*ಯಕೃತ್ ಬಯಾಪ್ಸಿ: ಯಕೃತ್ ಎಷ್ಟರ ಮಟ್ಟಿಗೆ ಹಾನಿಗೊಂಡಿದೆ ಮತ್ತು ಯಾವ ಬಗೆಯ ಹಾನಿಗೆ ಗುರಿಯಾಗಿದೆ ಎಂದು ತಿಳಿದುಕೊಳ್ಳಲು ವೈದ್ಯರು ಈ ಪರೀಕ್ಷೆಯನ್ನು ನಡೆಸುತ್ತಾರೆ.

ಆಟೋಇಮ್ಯೂನ್ ಹೆಪಟೈಟಿಸ್ ರೋಗಕ್ಕೆ ಚಿಕಿತ್ಸೆ

*ಈ ಚಿಕಿತ್ಸೆಯ ಮೂಲಕ ಮೊದಲು ಈ ರೋಗದ ಪ್ರಾಬಲ್ಯವನ್ನು ತಗ್ಗಿಸಿ, ನಿಲ್ಲಿಸಿ ಬಳಿಕ ವಿರುದ್ದ ದಿಕ್ಕಿನತ್ತ ತಿರುಗಿಸಿ ಯಕೃತ್ ಗೆ ಆಗಿದ್ದ ಹಾನಿಯನ್ನು ಸರಿಪಡಿಸಲು ಯತ್ನಿಸಲಾಗುತ್ತದೆ.

ಈ ಚಿಕಿತ್ಸೆಯ ಅಂಗಗಳೆಂದರೆ:

ಬದಲಿ ಯಕೃತ್ ಕಸಿ :

ಆಟೋಇಮ್ಯೂನ್ ಹೆಪಟೈಟಿಸ್ ಚಿಕಿತ್ಸೆಯಾಗಿ ಯಕೃತ್ ನ ಹಾನಿಯಾದ ಭಾಗವನ್ನು ನಿವಾರಿಸಿ ಆರೋಗ್ಯವಂತ ವ್ಯಕ್ತಿಯ ಯಕೃತ್ ನ ಒಂದು ಭಾಗವನ್ನು ಕಸಿ ಮಾಡಲಾಗುತ್ತದೆ. ಆದರೆ ಕೆಲವೊಮ್ಮೆ ಕಸಿ ಮಾಡಿದ ಬಳಿಕವೂ ಈ ಹೊಸ ಭಾಗಕ್ಕೆ ರೋಗ ಮತ್ತೊಮ್ಮೆ ಆವರಿಸಬಹುದು. National Institute of Diabetes and Digestive and Kidney Diseases ಸಂಸ್ಥೆಯ ಪ್ರಕಾರ ಯಕೃತ್ ಕಸಿ ಮಾಡಿಸಿಕೊಂಡವರು ಈ ಕಾಯಿಲೆಯಿಂದ ಗುಣಮುಖರಾಗಿಸುವ ಸಾಧ್ಯತೆ 86% ರಷ್ಟಿದೆ.

ರೋಗನಿರೋಧಕ ಶಕ್ತಿಯ ಧಾಳಿಯನ್ನು ತಡೆಯುವ ಔಷಧಿಗಳು (Immunosuppressant drugs)

azathioprine ಮತ್ತು 6-mercaptopurine ಎಂಬ ಔಷಧಿಗಳನ್ನು ಬಳಸಿ ನಮ್ಮ ದೇಹದ ಅಂಗದ ವಿರುದ್ದ ಕಾರ್ಯನಿರ್ವಹಿಸುವ ರೋಗ ನಿರೋಧಕ ಶಕ್ತಿಯ ಧಾಳಿಯನ್ನು ತಡೆಯಲಾಗುತ್ತದೆ ಹಾಗೂ ಇತರ ಸೋಂಕುಗಳ ವಿರುದ್ಧವೂ ಸೆಣೆಸಲಾಗುತ್ತದೆ.

ಕಾರ್ಟಿಕೋ ಸ್ಟೆರಾಯ್ಡುಗಳು (Corticosteroids)

ಈ ಸ್ಟೆರಾಯ್ಡುಗಳು prednisone ಎಂಬ ರೂಪದಲ್ಲಿ ಲಭ್ಯವಿದ್ದು ಯಕೃತ್ ನ ಉರಿಯೂತಕ್ಕೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಈ ಔಷಧಿಯನ್ನು ಸುಮಾರು ಒಂದೂವರೆಯಿಂದ ಎರಡು ವರ್ಷಗಳವರೆಗೆ ಸತತವಾಗಿ ಸೇವಿಸಬೇಕಾಗುತ್ತದೆ. ಆಟೋಇಮ್ಯೂನ್ ಹೆಪಟೈಟಿಸ್ ಎದುರಾಗುವುದನ್ನು ತಡೆಯಲು ಕೆಲವು ವ್ಯಕ್ತಿಗಳಿಗೆ ಜೀವಮಾನವಿಡೀ ಈ ಔಷಧಿಯನ್ನು ಸೇವಿಸಲು ಸಲಹೆ ಮಾಡಲಾಗುತ್ತದೆ. ಆದರೂ, ಈ ಔಷಧಿಗಳಲ್ಲಿಯೂ ಕೆಲವು ಅಡ್ಡಪರಿಣಾಮಗಳಿವೆ. ಉದಾಹರಣೆಗೆ ಮಧುಮೇಹ, ತೂಕದಲ್ಲಿ ಏರಿಕೆ, ಅಧಿಕ ರಕ್ತದೊತ್ತಡ ಮತ್ತು ಮೂಳೆಗಳು ಶಿಥಿಲಗೊಳ್ಳುವ ಓಸ್ಟಿಯೋಪೋರೋಸಿಸ್ ಎದುರಾಗುವ ಸಾಧ್ಯತೆ ಇದೆ.

   
 
ಹೆಲ್ತ್