Back
Home » ಸೌಂದರ್ಯ
ಮಳೆಗಾಲದಲ್ಲಿಯೂ ಕೂದಲಿನ ಹೊಳಪು ಹೆಚ್ಚಿಸುವ ಮನೆಮದ್ದುಗಳು
Boldsky | 31st Jul, 2019 11:43 AM

ನಾವೀಗ ಮಳೆಗಾಲದ ದಿನಗಳ ನಡುವಣ ಸಮಯದಲ್ಲಿದ್ದೇವೆ. ಸೆಖೆ ಮತ್ತು ಧೂಳಿನಿಂದ ಮಳೆ ನಮ್ಮನ್ನು ತಪ್ಪಿಸಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲವಾದರೂ ಕೂದಲ ಮಟ್ಟಿಗೆ ಈ ದಿನಗಳು ಕೆಟ್ಟವೇ ಸರಿ. ಏಕೆಂದರೆ ಮಳೆಗಾಲದಲ್ಲಿ ಕೂದಲು ಹೆಚ್ಚು ಸಿಕ್ಕುಸಿಕ್ಕಾಗುತ್ತದೆ ಹಾಗೂ ನಿರ್ವಹಣೆ ಕಷ್ಟಕರವಾಗುತ್ತದೆ. ನಿಮ್ಮ ಕೂದಲೇ ಹಿಂದಿನ ಯಾವುದೇ ಕರ್ಮದ ಸೇಡನ್ನು ನಿಮ್ಮ ಮೇಲೆ ಈಗ ತೀರಿಸಿಕೊಳ್ಳುತ್ತಿದೆ ಎಂದೇ ಅನ್ನಿಸುತ್ತದೆ.

ವರ್ಷದ ಎಲ್ಲಾ ಸಮಯದಲ್ಲಿಯೂ ನಮ್ಮ ಕೂದಲು ಸುಂದರ, ಆರೋಗ್ಯಕರ, ಸೊಂಪಾಗಿ ಹಾಗೂ ಕಾಂತಿಯುಕ್ತವಾಗಿ ಕಾಣಬೇಕು ಎಂದು ನಾವೆಲ್ಲಾ ಅಪೇಕ್ಷಿಸುತ್ತೇವೆ. ಆದರೆ ಮಳೆಗಾಲ ಬರುತ್ತಿದ್ದಂತೆಯೇ ತಲೆಗೂದಲ ನಿರ್ವಹಣೆ ಕಷ್ಟಕರವಾಗುತ್ತದೆ. ಆದರೆ ನಿಸರ್ಗ ಎಲ್ಲರಿಗೂ ಎಲ್ಲವನ್ನೂ ಸರಿಸಮಾನವಾಗಿ ನೀಡುವುದಿಲ್ಲವಂತೆ, ಅಂತೆಯೇ ಪ್ರತಿಯೊಬ್ಬರಿಗೂ ಸೊಂಪಾದ ಹಾಗೂ ರೇಶ್ಮೆಯಂತಹ ನುಣುಪಾದ ಕೂದಲು ಲಭಿಸಲು ಸಾಧ್ಯವಿಲ್ಲ.

ಆದರೆ ಇರುವ ಕೂದಲನ್ನೇ ಆರೋಗ್ಯಕರವಾಗಿಸಿಕೊಳ್ಳುವ ಮೂಲಕ ಮಳೆಗಾಲದಲ್ಲಿಯೂ ಸೌಂದರ್ಯವನ್ನು ಕಾಪಾಡಿಕೊಳ್ಳುವ ಜೊತೆ ಸುಲಭವಾಗಿ ನಿರ್ವಹಿಸಲೂ ಸಾಧ್ಯವಾಗುವಂತೆ ಮಾಡಬಹುದು. ಬನ್ನಿ, ಈ ಕಾರ್ಯವನ್ನು ನಿರ್ವಹಿಸುವ ಕೆಲವು ಮನೆಮದ್ದುಗಳನ್ನು ನೋಡೋಣ,,

ಬಾಳೆಹಣ್ಣು

ಚೆನ್ನಾಗಿ ಕಳಿತ ಬಾಳೆಹಣ್ಣಿನ ತಿರುಗಳನ್ನು ಚೆನ್ನಾಗಿ ಕಿವುಚಿ ಕೊಂಚ ಜೇನಿನಿಂದಿಗೆ ಬೆರೆಸಿ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿಕೊಳ್ಳುವ ಮೂಲಕ ಕೂದಲ

ಸ್ಥಿತಿಸ್ಥಾಪಕತ್ವ ಹೆಚ್ಚುತ್ತದೆ ಹಾಗೂ ಸಿಕ್ಕುಗಳಿಲ್ಲದೇ ಬಾಚಿಕೊಳ್ಳಲು ಸುಲಭವಾಗುತ್ತದೆ. ಮಳೆಗಾಲದಲ್ಲಿ ಹೆಚ್ಚಿನವರಿಗೆ ಈ ವಿಧಾನ ಅತ್ಯಂತ ಸೂಕ್ತವಾಗಿದೆ.

ತೆಂಗಿನ ಹಾಲು

ಈ ಹಾಲು ಕೂದಲಿಗೆ ಆರ್ದ್ರತೆ ನೀಡುವ ಮೂಲಕ ಅಗತ್ಯ ಪೋಷಣೆಯನ್ನು ಒದಗಿಸುತ್ತದೆ. ನೀಳ ಮತ್ತು ಆರೋಗ್ಯಕರ ಕೂದಲಿಗೆ ತೆಂಗಿನ ಹಾಲು ಸೂಕ್ತ ಉತ್ತರವಾಗಿದೆ. ಇದಕ್ಕಾಗಿ ಕೊಂಚವೇ ಬಿಸಿಮಾಡಿದ ತಾಜಾ ತೆಂಗಿನ ಹಾಲನ್ನು ಕೂದಲಿಗೆ ಹಚ್ಚಿ ಸುಮಾರು ಇಪ್ಪತ್ತೈದು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಜೇನು

ಇದೊಂದು ಆರ್ದ್ರತೆಯನ್ನು ಉಳಿಸಿಕೊಳ್ಳುವ ಗುಣವುಳ್ಳ (humectant)ನೈಸರ್ಗಿಕ ಪ್ರಸಾದನವಾಗಿದೆ. ಈ ಮೂಲಕ ಕೂದಲನ್ನು ಸುಲಭವಾಗಿ, ಸಿಕ್ಕುಗಳಿಲ್ಲದೇ ಬಾಚಿಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಜೇನನ್ನು ನೇರವಾಗಿ ಹಚ್ಚಬಾರದು, ಬದಲಿಗೆ ಸಾಕಷ್ಟು ನೀರು ಬೆರೆಸಿ ತೆಳುವಾಗಿಸಿಯೇ ಹಚ್ಚಬೇಕು.

ಬೆಣ್ಣೆಹಣ್ಣು (Avocado)

ಸಮಪ್ರಮಾಣದಲ್ಲಿ ಬೆಣ್ಣೆಹಣ್ಣಿನ ತಿರುಳು ಮತ್ತು ಮೊಸರನ್ನು ಬೆರೆಸಿ ಹಚ್ಚಿಕೊಳ್ಳುವ ಮೂಲಕವೂ ಕೂದಲಿನ ಸಿಕ್ಕುಗಳನ್ನು ಸುಲಭವಾಗಿ ಬಿಡಿಸಿಕೊಳ್ಳಬಹುದು. ಬೆಣ್ಣೆಹಣ್ಣಿನಲ್ಲಿ ವಿಟಮಿನ್ ಬಿ ಮತ್ತು ಇ ಸಮೃದ್ಧವಾಗಿದ್ದು ಕೂದಲಿಗೆ ಅಗತ್ಯ ಪೋಷಣೆಯನ್ನು ಒದಗಿಸುತ್ತವೆ. ಅಲ್ಲದೇ ಇವುಗಳಲ್ಲಿರುವ ಕೊಬ್ಬಿನಾಮ್ಲಗಳು ಕೂದಲನ್ನು ಆವರಿಸಿಕೊಂಡು ಆರ್ದ್ರತೆಯನ್ನು ಹಿಡಿದಿಟ್ಟುಕೊಳ್ಳಲು ನೆರವಾಗುತ್ತವೆ.

ಮಾಯೋನ್ನೀಸ್ (Mayonnaise)

ಈ ಆಹಾರವೂ ಕೂದಲಿಗೆ ಅಗತ್ಯವಾದ ಪೋಷಣೆಯನ್ನು ಒದಗಿಸುತ್ತದೆ. ಇದರಲ್ಲಿರುವ ಕೊಬ್ಬುಗಳು ಕೂದಲ ಮೇಲೆ ತೇವಾಂಶದ ಒಂದು ಹೆಚ್ಚುವರಿ ಪದರವನ್ನು ರೂಪಿಸುವ ಮೂಲಕ ಕೂದಲು ಸಿಕ್ಕುಗೊಳ್ಳುವುದನ್ನು ತಪ್ಪಿಸುತ್ತದೆ. ಸಿದ್ಧರೂಪದಲ್ಲಿ ಲಭ್ಯವಿರುವ ಈ ಆಹಾರವಸ್ತು ಕೂದಲಿಗೆ ಸುಲಭವಾದ ಪರಿಹಾರವಾಗಿದೆ.

ಸೇಬಿನ ಶಿರ್ಕಾ (Apple cider vinegar)

ಈ ಶಿರ್ಕಾ ಕೂದಲ ಆಮ್ಲೀಯ-ಕ್ಷಾರೀಯ ಮಟ್ಟವನ್ನು ನಿಯಂತ್ರಿಸಲು ನೆರವಾಗುತ್ತದೆ. ಕೂದಲ ಕವಚದಲ್ಲಿ ತೆರೆದಿದ್ದ ಪದರಗಳನ್ನು ಮುಚ್ಚಿ ತೇವಾಂಶವನ್ನು ಹಿಡಿದಿಟ್ಟುಕೊಳ್ಳಲು ಸಹಕರಿಸುತ್ತದೆ. ಇದಕ್ಕಾಗಿ ಕೊಂಚ ಸೇಬಿನ ಶಿರ್ಕಾವನ್ನು ಕೊಂಚ ನೀರಿನೊಂದಿಗೆ ಬೆರೆಸಿ ಸ್ನಾನದ ಸಮಯದಲ್ಲಿ ಶಾಂಪೂ ಬಳಸಿ ತೊಳೆದುಕೊಂಡ ಬಳಿಕ ಹಚ್ಚಿಕೊಳ್ಳಿ, ನಂತರವೇ ಕಂಡೀಶನರ್ ಹಚ್ಚಿ.

ಲೋಳೆಸರ (Aloe vera)

ಸಮಪ್ರಮಾಣದಲ್ಲಿ ನಿಮ್ಮ ಆಯ್ಕೆಯ ಎಣ್ಣೆಯೊಂದಿಗೆ ಸಮಪ್ರಮಾಣದಲ್ಲಿ ಲೋಳೆಸರದ ತಿರುಳನ್ನು ಬೆರೆಸಿ ಕೂದಲಿಗೆ ಹಚ್ಚಿಕೊಂಡು ಸುಮಾರು ಇಪ್ಪತ್ತರಿಂದ ಮೂವತ್ತು ನಿಮಿಷ ಒಣಗಲು ಬಿಡಿ. ಬಳಿಕ ತೊಳೆದುಕೊಳ್ಳಿ. ಲೋಳೆಸರ ಅತ್ಯುತ್ತಮವಾದ ತೇವಕಾರಕವಾಗಿದೆ.

ಕೊಬ್ಬರಿ ಎಣ್ಣೆ

ಸಿಕ್ಕುಗೂದಲನ್ನು ಬಿಡಿಸಿಕೊಳ್ಳಲು ಕೊಬ್ಬರಿ ಎಣ್ಣೆ ಉಪಯುಕ್ತವಾಗಿದೆ. ಕೊಬ್ಬರಿ ಎಣ್ಣೆ ಕೂದಲು ಮತ್ತು ಕೂದಲ ಬುಡದ ಆಳಕ್ಕಿಳಿದು ಪೋಷಣೆ ನೀಡುತ್ತದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಒಣಗುವ ಕೂದಲೇ ಸಿಕ್ಕುಗೊಳ್ಳುತ್ತದೆ ಹಾಗೂ ಕೊಬ್ಬರಿ ಎಣ್ಣೆ ಹೀಗಾಗಲು ಬಿಡದೇ ಸಿಕ್ಕುಗೊಳ್ಳುವುದರಿಂದ ರಕ್ಷಿಸುತ್ತದೆ.

ಬಾದಾಮಿ ಎಣ್ಣೆ

ನೀವು ಇಚ್ಛಿಸಿದ ತಲೆಗೂದಲನ್ನು ಪಡೆಯಲು ಬಾದಾಮಿ ಎಣ್ಣೆಯನ್ನು ಬಳಸಿ. ಇದು ಇತರ ಎಣ್ಣೆಗಳಿಗಿಂತಲೂ ಕಡಿಮೆ ಜಿಡ್ಡುಕಾರಕವಾಗಿದೆ. ಇದಕ್ಕಾಗಿ ಸ್ನಾನದ ಬಳಿಕ ಕೊಂಚ ಬಾದಾಮಿ ಎಣ್ಣೆಯನ್ನು ಕೈಗಳಲ್ಲಿ ತೆಗೆದುಕೊಂಡು ತಲೆಗೂದಲಿಗೆ ಹಚ್ಚಿಕೊಳ್ಳಿ.

ಮೊಟ್ಟೆ

ಸಿಕ್ಕುಗೊಂಡ ಕೂದಲಿಗೆ ಮೊಟ್ಟೆಯೂ ಉತ್ತಮ ಪರಿಹಾರ ಒದಗಿಸುತ್ತದೆ. ಇದರಲ್ಲಿರುವ ಕೆರಾಟಿನ್ ಮತ್ತು ಫೋಲಿಕ್ ಆಮ್ಲ ಈ ಸಿಕ್ಕುಗೊಳಿಸುವುದನ್ನು ನಿಯಂತ್ರಿಸುತ್ತವೆ. ಇದಕ್ಕಾಗಿ ನಿಮ್ಮ ಆಯ್ಕೆಯ ಯಾವುದೇ ಎಣ್ಣೆಯೊಂದಿಗೆ ಕೊಂಚ ಮೊಟ್ಟೆಯ ಬಿಳಿಭಾಗವನ್ನು ಬೆರೆಸಿ ಮಿಶ್ರಣ ಮಾಡಿ ಕೂದಲಿಗ್ ಎಹಚ್ಚಿಕೊಂಡು ಹದಿನೈದು ನಿಮಿಷ ಒಣಗಿಸಿಕೊಳ್ಳಿ. ಬಳಿಕ ತೊಳೆದುಕೊಳ್ಳಿ.

 
ಹೆಲ್ತ್