Back
Home » ಆರೋಗ್ಯ
ಅಚ್ಚರಿಯ ಕೂಪಕ್ಕೆ ತಳ್ಳುವ ಕ್ಯಾಪ್ಸಿಕಂನ ಆರೋಗ್ಯಕಾರಿ ಪ್ರಯೋಜನಗಳು
Boldsky | 1st Aug, 2019 11:03 AM
 • ಹೃದಯದ ಆರೋಗ್ಯ ವೃದ್ಧಿಸುತ್ತದೆ

  ಟೊಮಾಟೋದಲ್ಲಿರುವ ಲೈಕೋಪೀನ್ ಎಂಬ ಹೋರಾಡುವ ಗುಣವುಳ್ಳ ಪೋಷಕಾಂಶ ಕೆಂಪು ದೊಣ್ಣೆಮೆಣಸಿನಲ್ಲಿದೆ (ಬೀಜ ಬಲಿತಿರುವ ಹಂತ). ಅಲ್ಲದೇ ಫೋಲೇಟ್ ಮತ್ತು ವಿಟಮಿನ್ ಬಿ6 ಇದರಲ್ಲಿದ್ದು ದೇಹದಲ್ಲಿರುವ ಹೋಮೋಸಿಸ್ಟೈನ್ ಮಟ್ಟಗಳನ್ನು ತಗ್ಗಿಸುತ್ತದೆ. ತನ್ಮೂಲಕ ಹೃದಯದ ಸ್ತಂಭನದ ಸಾಧ್ಯತೆಯನ್ನು ಕಡಿಮೆಯಾಗಿಸುತ್ತದೆ. ಅಲ್ಲದೇ ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ಧ ಹೋರಾಡುತ್ತವೆ.


 • ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ

  ಒಂದು ವೇಳೆ ನಿಮಗೆ ತೂಕ ಇಳಿಸುವ ಬಯಕೆಯಿದ್ದರೆ ದೊಣ್ಣೆ ಮೆಣಸು ನಿಮ್ಮ ಆಹಾರದ ಒಂದು ಭಾಗವಾಗಲಿ. ಏಕೆಂದರೆ ಇದರಲ್ಲಿ ಕಡಿಮೆ ಕ್ಯಾಲೋರಿಗಳಿವೆ ಹಾಗೂ ಇದರಲ್ಲಿರುವ ಪೋಷಕಾಂಶಗಳು ಟ್ರೈಗ್ಲಿಸರೈಡುಗಳನ್ನು ತಗ್ಗಿಸುವ ಮೂಲಕ ಜೀವ ರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಅಲ್ಲದೇ ಇದರ ಸೇವನೆಯಿಂದ ಹೆಚ್ಚು ಕೊಬ್ಬು ಬಳಸಲ್ಪಟ್ಟು ತೂಕ ಇಳಿಯುತ್ತದೆ. ಅಲ್ಲದೇ ಜೀರ್ಣಕ್ರಿಯೆಯನ್ನೂ ಉತ್ತಮಗೊಳಿಸುತ್ತದೆ.


 • ಕ್ಯಾನ್ಸರ್ ಆವರಿಸುವ ಸಾಧ್ಯತೆ ತಗ್ಗಿಸುತ್ತದೆ

  ಇದರಲ್ಲಿರುವ ಉರಿಯೂತ ನಿವಾರಕ ಗುಣಗಳು ಮತ್ತು ಆಂಟಿ ಆಕ್ಸಿಡೆಂಟುಗಳು ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ತಗ್ಗಿಸುತ್ತವೆ. ವಿಶೇಷವಾಗಿ ಇದರಲ್ಲಿರುವ ಲೈಕೋಪೀನ್ ಎಂಬ ಕ್ಯಾರೋಟಿನಾಯ್ಡು ಗರ್ಭಕಂಠ, ಪ್ರಾಸ್ಟೇಟ್, ಮೇದೋಜೀರಕ ಗ್ರಂಥಿ ಹಾಗೂ ಮೂತ್ರಕೋಶದ ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ತಗ್ಗಿಸುತ್ತವೆ. ಅಲ್ಲದೇ ಇದರಲ್ಲಿರುವ ಕಿಣ್ವಗಳು ಅನ್ನನಾಳ ಮತ್ತು ಕರುಳಿನ ಕ್ಯಾನ್ಸರ್ ನಿಂದಲೂ ರಕ್ಷಣೆ ಒದಗಿಸುತ್ತವೆ.


 • ಆಂಟಿ ಆಕ್ಸಿಡೆಂಟ್ ಗುಣಗಳು

  ದೊಣ್ಣೆಮೆಣಸಿನಲ್ಲಿ ಆಂಟಿ ಆಕ್ಸಿಡೆಂಟುಗಳು ಸಮೃದ್ಧವಾಗಿವೆ ಹಾಗೂ ದೇಹದಲ್ಲಿ ಕ್ಯಾನ್ಸರ್ ಉಂಟುಮಾಡುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ದ ಹೋರಾಡಿ ಇವುಗಳ ಪ್ರಭಾವದಿಂದ ರಕ್ತನಾಳಗಳು ಮತ್ತು ಜೀವಕೋಶಗಳ ಮೇಲೆ ಆಗಬಹುದಾದ ಹಾನಿಯಿಂದ ರಕ್ಷಿಸುತ್ತವೆ. ಫ್ರೀ ರ್‍ಯಾಡಿಕಲ್ ಕಣಗಳನ್ನು ದೇಹದಿಂದ ನಿವಾರಿಸುವ ಮೂಲಕ ಕಣ್ಣಿನ ಹೂವು (ಕ್ಯಾಟರಾಕ್ಟ್) ಮತ್ತು ಸಂಧಿವಾತ (ಓಸ್ಟಿಯೋಆರ್ಥ್ರೈಟಿಸ್) ನಂತಹ ಕಾಯಿಲೆಗಳೂ ಸುಲಭವಾಗಿ ಗುಣವಾಗುತ್ತವೆ.


 • ರೋಗ ನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ

  ಈ ತರಕಾರಿಯಲ್ಲಿರುವ ವಿಟಮಿನ್ ಸಿ ಸಂಧಿವಾತ ಎದುರಾಗುವ ಸಾಧ್ಯತೆಯನ್ನು ತಗ್ಗಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೇ ರಕ್ತ ಹೆಪ್ಪುಗಟ್ಟಲು ಅಗತ್ಯವಿರುವ ವಿಟಮಿನ್ ಕೆ ಒದಗಿಸಿ ಉರಿಯೂತವನ್ನು ತಗ್ಗಿಸಲು ನೆರವಾಗುತ್ತದೆ.


 • ನೋವಿನಿಂದ ಶಮನ ಒದಗಿಸುತ್ತದೆ

  ದೊಣ್ಣೆಮೆಣಸಿಗೆ ಖಾರದ ಗುಣವನ್ನು ನೀಡುವ ಕ್ಯಾಪ್ಸೈಸಿನ್ ಎಂಬ ಪೋಷಕಾಂಶಕ್ಕೆ ನೋವಿನ ಸಂವೇದನೆಯನ್ನು ತಡೆದು ಮೆದುಳುಬಳ್ಳಿಗೆ ತಲುಪದಂತೆ ಮಾಡುವ ಗುಣವಿದೆ. ತನ್ಮೂಲಕ ಭಾರೀ ನೋವು ಎದುರಾಗುವ ಹರ್ಪಿಸ್ ಜೋಸ್ಟರ್ ಮತ್ತು ನ್ಯೂರಾಲ್ಜಿಯಾ ಮೊದಲಾದ ಕಾಯಿಲೆಗಳ ನೋವನ್ನು ತಗ್ಗಿಸುತ್ತದೆ.


 • ಕಬ್ಬಿಣದ ಕೊರತೆಯನ್ನು ಇಲ್ಲವಾಗಿಸುತ್ತದೆ

  ದೊಣ್ಣೆಮೆಣಸಿನಲ್ಲಿ ವಿಟಮಿನ್ ಸಿ ಸಮೃದ್ದವಾಗಿದ್ದು ಆಹಾರದಲ್ಲಿರುವ ಕಬ್ಬಿಣದ ಅಂಶವನ್ನು ದೇಹ ಹೀರಿಕೊಳ್ಳಲು ನೆರವಾಗುತ್ತದೆ. ದೊಣ್ಣೆಮೆಣಸಿನಲ್ಲಿ ನಮ್ಮ ದಿನದ ಅವಶ್ಯಕತೆಗೆ ಬೇಕಾದುದಕ್ಕಿಂತಲೂ ಮೂರು ಪಟ್ಟು ಹೆಚ್ಚು ಪ್ರಮಾಣದ ವಿಟಮಿನ್ ಸಿ ಇದೆ. ಹಾಗಾಗಿ, ಒಂದು ವೇಳೆ ನಿಮ್ಮ ದೇಹದಲ್ಲಿ ಕಬ್ಬಿಣದ ಅಂಶದ ಕೊರತೆ ಇದ್ದರೆ ಕೆಂಪು ದೊಣ್ಣೆಮೆಣಸನ್ನು ಸೇವಿಸಿ. ಅಲ್ಲದೇ ದೊಣ್ಣೆಮೆಣಸಿನಲ್ಲಿ ಹಲವಾರು ಸೌಂದರ್ಯ ವರ್ಧಕ ಗುಣಗಳೂ ಇವೆ. ಇವುಗಳ ಪ್ರಯೋಜನವನ್ನು ಪಡೆದು ತ್ವಚೆಯ ಆರೋಗ್ಯ ವೃದ್ದಿಸಲು ಹಾಗೂ ಕೂದಲು ಕಾಂತಿಯುಕ್ತ ಮತ್ತು ನೀಳವಾಗಲು ನಿತ್ಯದ ಆಹಾರದಲ್ಲಿ ದೊಣ್ಣೆ ಮೆಣಸನ್ನು ಸೇರಿಸಿಕೊಳ್ಳಿ.
ದೊಡ್ಡ ಮೆಣಸಿನಕಾಯಿ ಅಥವಾ ದಪ್ಪ ಮೆಣಸಿನಕಾಯಿ ಅಂದ ಕೂಡಲೆ ಅನೇಕರ ಬಾಯಲ್ಲಿ ನೀರೂರಲು ಪ್ರಾರಂಭಿಸುತ್ತದೆ. ಥಟ್ಟನೆ ಅವರಿಗೆ ನೆನಪಾಗುವುದು ದೊಡ್ಡ ಮೆಣಸಿನಕಾಯಿಯಿಂದ ತಯಾರಿಸಿದ ಬೊಂಡಾ ಅಥವಾ ಕ್ಯಾಪ್ಸಿಕಂ ಮಸಾಲಾ ಅಥವಾ ಕ್ಯಾಪ್ಸಿಕಂ ಬಾತ್ ಆದರೂ ಆಗಬಹುದು. ಇದರ ಹೊರತಾಗಿಯೂ ಮಾರುಕಟ್ಟೆಯಲ್ಲಿ ಹೇರಳವಾಗಿ ದೊರೆಯುವ ದೊಡ್ಡ ಮೆಣಸಿನಕಾಯಿಯ ಅನೇಕ ಆರೋಗ್ಯಕರ ಮಹತ್ವವೂ ಇದೆ. ದೊಡ್ಡ ಮೆಣಸಿನಕಾಯಿಗಳು ಆಂಟಿಆಕ್ಸಿಡೆಂಟ್‌ಗಳನ್ನು ಹೇರಳವಾಗಿ ಹೊಂದಿದ್ದು, ಇವುಗಳು ಕ್ಯಾನ್ಸರ್ ರೋಗವನ್ನು ನಿವಾರಿಸುವ ಪಥ್ಯದ ವಸ್ತುವಾಗಿ ಕೆಲಸ ಮಾಡುತ್ತದೆ.

ಇದೊಂದು ಮೆಣಸಿನ ವಿಧವಾಗಿದ್ದು ಬೆಲ್ಲಿ ಪೆಪ್ಪರ್ ಎಂದೂ ಕರೆಯಲಾಗುತ್ತದೆ. ಇದು ಮೂಲತಃ ಅಮೇರಿಕಾದ ಉಷ್ಣವಲಯದ ಬೆಳೆಯಾಗಿದ್ದು ಇದರ ಔಷಧೀಯ ಗುಣಗಳಿಂದಾಗಿ ಮೊದಲು ಔಷಧಿಯ ರೂಪದಲ್ಲಿಯೇ ಬಳಸಲಾಗುತ್ತಿತ್ತು. ಇದರಲ್ಲಿ ಕೊಬ್ಬು ಕಡಿಮೆ ಇದ್ದು ಇದರಲ್ಲಿರುವ ಪೋಷಕಾಂಶಗಳು ಕೆಲವಾರು ಕಾಯಿಲೆಗಳನ್ನು ಗುಣಪಡಿಸಲು ನೆರವಾಗುತ್ತವೆ. ಬೀಟಾ-ಕ್ರಿಪ್ಟೋಗ್ಸಾಂಥಿನ್, ಜಿಯಾಕ್ಸಾಂಥಿನ್ ಮತ್ತು ಲ್ಯೂಟಿನ್ ಮೊದಲಾದ ಕ್ಯಾರೋಟಿನಾಯ್ಡುಗಳು ದೊಣ್ಣೆಮೆಣಸಿನಲ್ಲಿವೆ. ಅಲ್ಲದೇ ಹಲವಾರು ವಿಟಮಿನ್ನುಗಳು, ಖನಿಜಗಳು ಹಾಗೂ ಇತರ ಪೋಷಕಾಂಶಗಳೂ ಇವೆ. ಬನ್ನಿ, ಈ ಅದ್ಭುತ ತರಕಾರಿಯ ಆರೋಗ್ಯಕರ ಪ್ರಯೋಜನಗಳನ್ನು ನೋಡೋಣ...

 
ಹೆಲ್ತ್