Back
Home » ಆರೋಗ್ಯ
ಮಧ್ಯರಾತ್ರಿಯಲ್ಲಿ ನೀವು ಆಗಾಗ್ಗೆ ಎಚ್ಚರಗೊಳ್ಳುತ್ತೀರ? ಇದಕ್ಕೆ ಕಾರಣ ಏನು ನೋಡಿ...
Boldsky | 1st Aug, 2019 02:35 PM
 • ನೀವು ಆತಂಕದ ಸಮಸ್ಯೆಗಳನ್ನು ಎದುರಿಸುತ್ತಿದ್ದೀರಿ

  ಆತಂಕದ ಸಮಸ್ಯೆಗಳಿಂದ ಬಳಲುತ್ತಿರುವ ಜನರು ಸಾಮಾನ್ಯವಾಗಿ ರಾತ್ರಿಯಲ್ಲಿ ಶಾಂತಿಯುತ ನಿದ್ರೆ ಪಡೆಯಲು ವಿಫಲರಾಗುತ್ತಾರೆ. ಇನ್ನೊಂದು ಸಂದರ್ಭದಲ್ಲಿ ಕಳಪೆ ನಿದ್ರೆ ಆತಂಕವನ್ನು ಉಂಟುಮಾಡಬಹುದು. ಕೆಲವು ಆನ್ಲೈನ್ ಸಂಶೋಧನೆಗಳು ನಿದ್ರಾ ಭಂಗ ಮತ್ತು ಮಾನಸಿಕ ಅಸ್ವಸ್ಥತೆಗಳು ಪರಸ್ಪರ ಸಂಬಂಧ ಹೊಂದಿವೆ ಎಂದು ಹೇಳುತ್ತಾರೆ. ನಿಮ್ಮ ನಿದ್ರೆ ಒತ್ತಡ ಮತ್ತು ಆತಂಕದಿಂದ ಪ್ರಭಾವಿತವಾಗಿರುತ್ತದೆ.


 • ಔಷಧ-ಪ್ರೇರಿತ-ನಿದ್ರಾಹೀನತೆ

  ನೀವು ತೆಗೆದುಕೊಳ್ಳುತ್ತಿರುವ ಔಷಧಿಗಳು ಎಚ್ಚರಗೊಳ್ಳಲು ಕಾರಣವಾಗುತ್ತವೆ. ಕೆಲವು ಪ್ರಿಸ್ಕ್ರಿಪ್ಷನ್ ಔಷಧಿಗಳು ನಿದ್ರೆಯನ್ನು ತೊಂದರೆಗೊಳಿಸುತ್ತವೆ ಏಕೆಂದರೆ ಅವುಗಳ ಸಂಯೋಜನೆಯು ನಿಮ್ಮ ಆಂತರಿಕ ಗಡಿಯಾರದ ಮೇಲೆ ಪರಿಣಾಮ ಬೀರುತ್ತದೆ. ಖಿನ್ನತೆ-ಶಮನಕಾರಿಗಳು, ಡಿಕೊಂಗಸ್ಟೆಂಟ್ಸ್, ಹೃದಯ ಔಷಧಿ ಇತ್ಯಾದಿಗಳನ್ನು ನಿಯಮಿತವಾಗಿ ತೆಗೆದುಕೊಳ್ಳುವವರು ನಿದ್ರಾಹೀನತೆಯಿಂದ ಬಳಲುತ್ತಾರೆ. ಈ ಸ್ಥಿತಿಯನ್ನು ಔಷಧ-ಪ್ರೇರಿತ-ನಿದ್ರಾಹೀನತೆ ಎಂದು ಕರೆಯಲಾಗುತ್ತದೆ.


 • ಹೃದಯ ಆರೋಗ್ಯ

  ನಿಮ್ಮ ನಿದ್ರೆ ಮತ್ತು ನಿಮ್ಮ ಹೃದಯದ ಆರೋಗ್ಯವು ನಿಕಟ ಸಂಬಂಧ ಹೊಂದಿದೆ. ನಿರ್ಬಂಧಿತ ಅಪಧಮನಿಗಳಿಗೆ ಸಂಬಂಧಿಸಿದ ಅಪಧಮನಿಕಾಠಿಣ್ಯದ ಹೆಸರಿನ ಸ್ಥಿತಿ ಇದೆ. ಇದು ತೊಂದರೆಗೊಳಗಾದಾಗ ವ್ಯಕ್ತಿಗೆ ನಿದ್ರಾಹೀನತೆಯನ್ನು ಸೃಷ್ಟಿಸುತ್ತದೆ. ನಿಮಗೆ ಉತ್ತಮ ನಿದ್ರೆ ಬರದಿದ್ದರೆ ನೀವು ಅಪಧಮನಿ ತಡೆಗಟ್ಟುವ ಅಪಾಯದಲ್ಲಿದ್ದೀರಿ ಎಂದು ಸಹ ಅದಾಜಿಸಬಹುದು.


 • ಹಸಿವಿನಿಂದ ನಿದ್ರಾಹೀನತೆ

  ನೀವು ಸೇವಿಸುವ ಆಹಾರವು 7-8 ಗಂಟೆಗಳ ಅಂತರಕ್ಕಿಂತ ಅಧಿಕವಾಗಿದ್ದರೆ ಮಧ್ಯರಾತ್ರಿಯಲ್ಲಿ ನಿಮಗೆ ಎಚ್ಚರವಾಗಬಹುದು. ಇಲ್ಲವೇ ಹಸಿವಿನ ಕಾರಣಕ್ಕಾಗಿ ಎಚ್ಚರಗೊಂಡರೆ ಪುನಃ ನಿದ್ರೆ ಬಾರದೆ ಹೋಗಬಹುದು. ದೀರ್ಘಾವಧಿಯ ಉಪವಾಸ ಅಥವಾ ಆಹಾರ ಸೇವಿಸದೆ ಇರುವುದು ನಿಮ್ಮ ದೇಹದ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಅದಕ್ಕಾಗಿಯೇ ಸಾಕಷ್ಟು ಶಕ್ತಿಯಿಂದಾಗಿ ಅದು ಪ್ರಕ್ಷುಬ್ಧವಾಗುತ್ತದೆ. 8 ಗಂಟೆಗಳ ದೀರ್ಘ ಅವಧಿಯ ಅಂತರಕ್ಕಿಂತ ಹೆಚ್ಚು ಸಮಯ ಬಿಟ್ಟು ಊಟಮಾಡಬೇಡಿ. ಸೂಕ್ತ ಸಮಯದಲ್ಲಿ ಹೊಟ್ಟೆ ತುಂಬ ಊಟ ಮಾಡುವುದರಿಂದ ಉತ್ತಮ ನಿದ್ರೆಯನ್ನು ಹೊಂದಬಹುದು.


 • ನಿಮ್ಮ ಮೆದುಳು ಕಡಿಮೆ ನಿದ್ರೆಯ ಸ್ಪಿಂಡಲ್ಗಳನ್ನು ಉತ್ಪಾದಿಸುತ್ತಿದೆ

  ಸೂಕ್ತವಾಗಿ ಮತ್ತು ಶಾಂತಿಯುತವಾಗಿ ಮಲಗುವ ಜನರ ಮೆದುಳಿನ ಚಟುವಟಿಕೆಯು ಇಲ್ಲದವರಿಗಿಂತ ತುಲನಾತ್ಮಕವಾಗಿ ಹೆಚ್ಚಾಗಿರುತ್ತದೆ. ಉತ್ತಮ ಮೆದುಳಿನ ಚಟುವಟಿಕೆಯು ದೊಡ್ಡ ಶಬ್ದಗಳಿಗೆ ಎಚ್ಚರಗೊಳ್ಳುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಆದ್ದರಿಂದ, ನೀವು ರಾತ್ರಿಯಿಡೀ ಮಲಗಲು ತೊಂದರೆ ಎದುರಿಸುತ್ತಿದ್ದರೆ ಅದು ವಿದ್ಯುತ್ ಮೆದುಳಿನ ಚಟುವಟಿಕೆಯಿಂದಾಗಿರಬಹುದು.


 • ಸೃಜನಶೀಲ ಮನಸ್ಸು

  ಸೃಜನಶೀಲ ಮನಸ್ಸಿನ ಜನರು ಕಡಿಮೆ ನಿದ್ರೆ ಮಾಡುತ್ತಾರೆ. ಅವರ ಮನಸ್ಸು ಬಹಳಷ್ಟು ಸೃಜನಶೀಲ ಆಲೋಚನೆಗಳಲ್ಲಿ ತೊಡಗಿರುವುದರಿಂದ, ಅವರು ಹೆಚ್ಚು ಗಂಟೆಗಳ ಕಾಲ ಮಲಗುವುದು ತುಂಬಾ ಕಷ್ಟಕರವಾಗಿರುತ್ತದೆ. ಹಾಗಾಗಿ ಮಿತಿಮೀರಿದ ಚಿಂತನೆ ಹಾಗೂ ಆಲೋಚನೆಗಳು ಸಹ ನಿಮ್ಮ ನಿದ್ರೆ ಹಾಗೂ ಆರೋಗ್ಯವನ್ನು ಹಾಳುಮಾಡುವುದು ಎನ್ನುವುದನ್ನು ಮರೆಯಬಾರದು.


 • ಕತ್ತಲ ಹೆದರಿಕೆ

  ಬಹಳಷ್ಟು ಜನರು ನೈಕ್ಟೋಫೋಬಿಕ್ ಅಥವಾ ಕತ್ತಲೆ ಹೆದರಿಕೆ ಹೊಂದಿರುತ್ತಾರೆ. ಅಂತಹ ವ್ಯಕ್ತಿಗಳು ಕತ್ತಲಾಯಿತು ಅಥವಾ ನಿಶ್ಯಬ್ದದ ವಾತಾವರಣ ಸೃಷ್ಟಿಯಾಯಿತು ಎಂದರೆ ಸಾಕಷ್ಟು ಹೆದರಿಕೆಗೆ ಒಳಗಾಗುತ್ತಾರೆ. ನಿದ್ರೆಯನ್ನು ಮಾಡಲು ಅವರಿಗೆ ಕಷ್ಟವಾಗುವುದು. ದೀಪಗಳು ನಿಂತುಹೋದಾಗ ಅಥವಾ ಸುತ್ತಲೂ ಸಂಪೂರ್ಣ ಕತ್ತಲೆ ಇದ್ದಾಗ ಅಂತಹ ಜನರು ವಿಲಕ್ಷಣವಾಗಿ ವರ್ತಿಸುತ್ತಾರೆ. ನೀವು ನೈಕ್ಟೋಫೋಬಿಯಾದೊಂದಿಗೆ ವ್ಯವಹರಿಸುತ್ತೀರಾ ಅಥವಾ ಇಲ್ಲವೇ ಎಂಬುದನ್ನು ನೀವು ನಿರ್ಣಯಿಸಬೇಕಾಗಿದೆ. ನಿಮಗೆ ದಿನವಿಡೀ ನಿದ್ರೆ ಮಾಡಲು ಸಾಧ್ಯವಾಗದಿದ್ದರೆ, ಅಂತಹ ಸಮಸ್ಯೆಗೆ ಕೆಲವು ಮೂಲ ಕಾರಣಗಳಿರಬಹುದಾದಷ್ಟು ಬೇಗ ವೈದ್ಯರನ್ನು ಭೇಟಿ ಮಾಡಿ ಸಲಹೆ ಹಾಗೂ ಚಿಕಿತ್ಸೆಗೆ ಒಳಗಾಗುವುದು ಉತ್ತಮ.


 • ಅತಿಯಾದ ಭವಿಷ್ಯದ ಚಿಂತನೆ

  ವ್ಯಕ್ತಿ ತನ್ನ ಭವಿಷ್ಯದ ಬಗ್ಗೆ ಚಿಂತನೆ ಹಾಗೂ ಯೋಜನೆ ಹೊಂದುವುದು ಉತ್ತಮವಾದ ಸಂಗತಿ. ಆದರೆ ಅದರ ಬಗ್ಗೆಯೇ ಅತಿಯಾಗಿ ಚಿಂತಿಸಿ, ಮಾನಸಿಕ ಒತ್ತಡಕ್ಕೆ ಒಳಗಾಗುವುದು ಸರಿಯಲ್ಲ. ಈರೀತಿಯ ಚಿಂತನೆಯಿಂದಲೇ ಇಂದು ಅನೇಕರು ನಿದ್ರಾ ಹೀನತೆಯನ್ನು ಹೊಂದಿರುವುದನ್ನು ಕಾಣಬಹುದು. ನಿದ್ರಾ ಹೀನತೆ ಅತಿಯಾದರೆ ಒಂದೊಂದಾಗಿಯೇ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುವುದು.


 • ಮಾನಸಿಕ ಒತ್ತಡ

  ಮಾನಸಿಕ ಒತ್ತಡದಿಂದ ದಿನದ ವೇಳೆಯ ಹೊರತಾಗಿ ರಾತ್ರಿಯ ನಿದ್ದೆಗೂ ಭಂಗ ಬರುತ್ತದೆ. ಒಂದು ವೇಳೆ ನಿಮಗೆ ಇಡಿಯ ದಿನ ಒತ್ತಡವಿದ್ದು ರಾತ್ರಿಯ ವೇಳೆಯೂ ಈ ಒತ್ತಡ ಕಡಿಮೆಯಾಗದಿದ್ದರೆ ನಿದ್ದೆಯನ್ನು ಕೆಡಿಸುವುದು ಖಂಡಿತ. ಆದ್ದರಿಂದ ರಾತ್ರಿ ಮಲಗುವ ಮುನ್ನ ಕೆಲವು ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡುವ ವ್ಯಾಯಾಮಗಳನ್ನು ಹಾಗೂ ಮನಸ್ಸನ್ನು ನಿರಾಳಗೊಳಿಸುವ ಇತರ ವಿಧಾನ ಅಂದರೆ ಸಂಗೀತ, ಧ್ಯಾನ ಮೊದಲಾದ ಕ್ರಮಗಳನ್ನು ಅನುಸರಿಸಬೇಕು.


 • ಪ್ರಖರ ಬೆಳಕು

  ಸಾಮಾನ್ಯವಾಗಿ ನಮ್ಮ ಮೆದುಳು ರಾತ್ರಿ ನಿದ್ರಿಸಲು ಕತ್ತಲಿನ ವಾತಾವರಣವನ್ನೇ ಬಯಸುತ್ತದೆ. ಆದರೆ ಕೋಣೆಯಲ್ಲಿ ಯಾರಾದರೂ ರಾತ್ರಿಯ ವೇಳೆ ಬೆಳಕು ಹರಿಸಿದರೆ ಇದು ನಿದ್ದೆಯಿಂದ ಎಚ್ಚರಾಗಲು ಕಾರಣವರಬಹುದು. ಕೆಲವು ಸಂದರ್ಭಗಳಲ್ಲಿ ತೆರೆದ ಕಿಟಕಿಯಿಂದ ಆಗಾಗ ಹಾದುಹೋಗುವ ವಾಹನಗಳ ಬೆಳಕು ಸಹಾ ಕೋಣೆಯೊಳಗೆ ಪ್ರಖರವಾಗಿ ಬರುತ್ತಿದ್ದರೆ ಈ ಕಾರಣಕ್ಕೂ ಎಚ್ಚರಾಗಬಹುದು. ಆದ್ದರಿಂದ ನಿಮ್ಮ ನಿದ್ದೆಗೆ ಸೂಕ್ತವಾದ ವಾತಾವರಣವಿರುವಂತೆ ಬೆಳಕಿನ ವ್ಯವಸ್ಥೆಯನ್ನು ಸರಿಪಡಿಸಬೇಕು.


 • ಸದ್ದುಗದ್ದಲ

  ನಡುನಡುವೆ ಯಾವುದಾದರೂ ಒಂದು ಸದ್ದು ಬಂದರೆ ಇದು ಸಹಾ ನಿದ್ದೆಯಿಂದ ಎಚ್ಚರಾಗಲು ಕಾರಣವಾಗಬಹುದು. ಕೆಲವು ಸಂದರ್ಭಗಳಲ್ಲಿ ನೀವಿರುವ ಸ್ಥಳಕ್ಕೆ ಹೊಸದಾದ ಸದ್ದುಗಳು ಎದುರಾದರೆ ಅಥವಾ ಸದ್ದುಗದ್ದಲವಿರುವ ಹೊಸ ಸ್ಥಳಕ್ಕೆ ಹೋದಾಗಲೂ ಕೆಲದಿನಗಳವರೆಗೆ ಈ ಸದ್ದುಗಳಿಗೆ ಹೊಂದಿಕೊಳ್ಳುವವರೆಗೂ ನಿದ್ದೆ ಭಂಗವಾಗುವುದು ಅನಿವಾರ್ಯವಾಗುತ್ತದೆ.


 • ರಾತ್ರಿ ಮಲಗುವ ಮುನ್ನ ಹೆಚ್ಚು ನೀರು ಕುಡಿದಿರುವುದು

  ರಾತ್ರಿ ಹೊತ್ತು ಮೂತ್ರವಿಸರ್ಜನೆಗಾಗಿ ಕೆಲವಾರು ಬಾರಿ ಎಚ್ಚರಾಗುತ್ತದೆ. ಹೀಗಾಗಬಾರದು ಎಂದರೆ ರಾತ್ರಿ ಮಲಗುವ ಅರ್ಧ ಘಂಟೆಗೂ ಮುನ್ನ ಸಾಕಷ್ಟು ನೀರು ಕುಡಿದಿರಬೇಕು ಹಾಗೂ ಮಲಗುವ ಮುನ್ನ ಮೂತ್ರ ವಿಸರ್ಜನೆ ಪೂರೈಸಿಯೇ ಮಲಗಬೇಕು.


 • ನಿದ್ದೆಗೂ ಮುನ್ನ ಸೇವಿಸುವ ಮದ್ಯ

  ಕೆಲವರಿಗೆ ನಿದ್ದೆಗೂ ಮುನ್ನ ಕೊಂಚ ಮದ್ಯ ಸೇವಿಸಿಯೇ ಪವಡಿಸುವ ಅಭ್ಯಾಸವಿರುತ್ತದೆ. ಆದರೆ ಇದು ನಿದ್ದೆಯನ್ನು ಭಂಗಗೊಳಿಸಲು ಪ್ರಮುಖ ಕಾರಣವಾಗಿದೆ. ಏಕೆಂದರೆ ಮದ್ಯದ ಅಮಲಿನಿಂದ ಆವರಿಸುವ ಮತ್ತು ಹಾಗೂ ನಿದ್ದೆಯ ಮಿಳಿತದಿಂದ ನಿದ್ದೆ ಆವರಿಸುತ್ತದಾದರೂ ಅಮಲು ಇಳಿಯಲು ಕೆಲವೇ ಗಂಟೆಗಳು ಬೇಕಾಗಿರುವ ಕಾರಣ ನಡುರಾತ್ರಿಯಲ್ಲಿ ಎಚ್ಚರಾಗುತ್ತದೆ. ಆದ್ದರಿಂದ ನಿದ್ದೆಗೆ ಮುನ್ನ ಮಾತ್ರವಲ್ಲ, ಯಾವುದೇ ಸಮಯದಲ್ಲಿ ಮದ್ಯಪಾನ ಬೇಡವೇ ಬೇಡ.


 • ಮಲಗಿದ್ದಲ್ಲಿ ಫೋನ್ ಬಳಸುವುದು

  ರಾತ್ರಿ ಮಲಗಿದ ಬಳಿಕ ನಮ್ಮ ಮೆದುಳು ನಿದ್ದೆಗೆ ಅವಶ್ಯವಾದ ಮೆಲಟೋನಿನ್ ಎಂಬ ರಸದೂತವನ್ನು ಬಿಡುಗಡೆ ಮಾಡುತ್ತದೆ. ನಿದ್ದೆ ಬರಬೇಕಾದರೆ ಇದು ಅವಶ್ಯ. ಆದರೆ ಈ ಸಮಯದಲ್ಲಿ ಮೊಬೈಲ್ ಪರದೆಯ ಪ್ರಖರ ಬೆಳಕನ್ನು ನೋಡುವ ಹಾಗೂ ಮೆದುಳನ್ನು ಇದರಲ್ಲಿರುವ ಮಾಹಿತಿ ಪಡೆಯಲು ಹೆಚ್ಚು ಕೇಂದ್ರೀಕರಿಸುವ ಮೂಲಕ ಮೆದುಳಿಗೆ ಈಗ ಅನಿವಾರ್ಯವಾಗಿ ಮೆಲಟೋನಿನ್ ಉತ್ಪಾದನೆಯನ್ನು ನಿಲ್ಲಿಸಬೇಕಾಗಿ ಬರುತ್ತದೆ. ಪರಿಣಾಮವಾಗಿ ಬರಬೇಕಾಗಿದ್ದ ನಿದ್ದೆ ಬರದೇ ಹಾರಿಹೋಗುತ್ತದೆ. ಇದು ನಿದ್ದೆ ಬರದೇ ಇರಲು ಪ್ರಮುಖ ಕಾರಣವಾಗಿದೆ.


 • ತಾಪಮಾನ

  ನಿದ್ದೆಯ ಸಮಯದಲ್ಲಿ ನಮ್ಮ ದೇಹದ ತಾಪಮಾನ ಕೊಂಚ ಕಡಿಮೆಯಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ನಮ್ಮ ದೇಹದ ಎಲ್ಲಾ ಐಚ್ಛಿಕ ಕಾರ್ಯಗಳು ನಿಂತುಹೋಗುವುದರಿಂದ ದೇಹವನ್ನು ಅಷ್ಟು ಬೆಚ್ಚಗಾಗಿರಿಸುವ ಅಗತ್ಯವಿಲ್ಲದ ಕಾರಣ ದೇಹ ತಾಪಮಾನವನ್ನು ಕೊಂಚವೇ ತಗ್ಗಿಸುತ್ತದೆ. ಆದರೆ ಕೋಣೆಯನ್ನು ದೇಹಕ್ಕೆ ಹಿತಕರವಾದ ತಾಪಮಾನಕ್ಕಿಂತ ಕೊಂಚವೇ ಹೆಚ್ಚು ಅಥವಾ ತಣ್ಣಗಿದ್ದರೂ ಈ ತಾಪಮಾನದ ವ್ಯತ್ಯಾಸವನ್ನು ದೇಹ ಗುರುತಿಸಿ ಇದಕ್ಕೆ ತಕ್ಕನಾದ ಬದಲಾವಣೆಗಳನ್ನು ಮಾಡಲು ಕೆಲವು ವ್ಯವಸ್ಥೆಗಳನ್ನು ಎಚ್ಚರಿಸಬೇಕಾಗುತ್ತದೆ. ಉದಾಹರಣೆಗೆ ಬಿಸಿಯಾಗಿದ್ದಾಗ ಬೆವರುವುದು, ತಣ್ಣಗಿದ್ದಾಗ ನಡುಗುವುದು. ಇದರಿಂದಲೂ ನಿದ್ದೆಯಿಂದ ಎಚ್ಚರಾಗುತ್ತದೆ.


 • ಅಜೀರ್ಣ

  ಅಜೀರ್ಣತೆಯಿಂದಲೂ ನಿಮಗೆ ನಡುರಾತ್ರಿಯಲ್ಲಿ ಎಚ್ಚರಾಗಬಹುದು. ವಿಶೇಷವಾಗಿ ರಾತ್ರಿ ಮಲಗುವ ಮುನ್ನ ದೊಡ್ಡ ಪ್ರಮಾಣದ ಊಟವನ್ನು ಮಾಡಿದರೆ ಅಥವಾ ಮಲಗುವ ಮುನ್ನ ಕೆಂಪು ವೈನ್ ಸೇವಿಸಿದ್ದರೆ ಈ ಸ್ಥಿತಿ ಕಾಡುವ ಸಾಧ್ಯತೆ ಹೆಚ್ಚು. ಒಂದು ವೇಳೆ ಇದೇ ಕಾರಣ ಎಂದು ಖಚಿತವಾದರೆ ನಿಮ್ಮ ಈ ಅಭ್ಯಾಸಗಳನ್ನು ಬದಲಿಸಿಕೊಳ್ಳಬೇಕು. ರಾತ್ರಿ ಮಿತಾಹಾರ ಹಾಗೂ ಊಟದ ಬಳಿಕ ಕೊಂಚ ಹೊತ್ತು ನಡೆದಾಡಿ ಮಲಗುವ ಮುನ್ನ ಪಾದಗಳನ್ನು ತಣ್ಣೀರಿನಲ್ಲಿ ತೊಳೆದುಕೊಳ್ಳಬೇಕು.
ಆಯಾಸವಾದ ದೇಹಕ್ಕೆ ದೀರ್ಘ ಸಮಯ ಆರಾಮದಾಯಕ ಅನುಭವ ನೀಡುವುದು ರಾತ್ರಿಯ ನಿದ್ರೆ. ಹೊಟ್ಟೆ ತುಂಬಿದಾಗ ಒಮ್ಮೆ ನಿದ್ರೆ ಮಾಡಬೇಕು ಎನ್ನುವ ಮನಸ್ಸು ಸಾಮಾನ್ಯವಾಗಿ ಆಗುತ್ತದೆ. ಅಂತಹ ಸಮಯದಲ್ಲಿ ಹತ್ತು ನಿಮಿಷ ನಿದ್ರೆ ಮಾಡಿದರೂ ಸಾಕು. ಸಾಕಷ್ಟು ಆರಾಮದಾಯಕ ಅನುಭವ ಸಿಗುವುದು. ಜೊತೆಗೆ ಒಂದಿಷ್ಟು ಚೈತನ್ಯವನ್ನು ತಂದುಕೊಡುವುದು. ಹಗಲು ಸಾಕಷ್ಟು ಕೆಲಸಗಳನ್ನು ಮಾಡಿ ದಣಿದಿರುವ ಮನಸ್ಸಿಗೆ ಹಾಗೂ ದೇಹಕ್ಕೆ ರಾತ್ರಿಯ ನಿದ್ರೆ ಸೊಂಪಾಗಿ ಆದರೆ ಸಾಕು. ಮಾನಸಿಕವಾಗಿ ಹಾಗೂ ದೈಹಿಕವಾಗಿ ಆರೋಗ್ಯವಂತರಾಗಿರುತ್ತಾರೆ. ವ್ಯಕ್ತಿ ಅತ್ಯುತ್ತಮ ಆರೋಗ್ಯವನ್ನು ಹೊಂದಬೇಕು ಹಾಗೂ ಉತ್ತಮ ನೆನಪಿನ ಶಕ್ತಿ ಇರಬೇಕು ಎಂದರೆ ಅದು ಅತ್ಯುತ್ತಮವಾದ ನಿದ್ರೆ ಹೊಂದುವುದರಿಂದ.

ನಿದ್ರೆಗೆ ಅತ್ಯಂತ ಮಹತ್ವವಿದೆ. ವಯಸ್ಕರಿಗೆ ಮರುದಿನ ದೇಹವನ್ನು ಚಾರ್ಜ್ ಮಾಡಲು 6-8 ಗಂಟೆಗಳ ನಿದ್ರೆ ಬೇಕು. ಈ ವೇಗದ ಜಗತ್ತಿನಲ್ಲಿ, ನಿದ್ರೆಯ ಮಹತ್ವವನ್ನು ಕಡಿಮೆ ಅಂದಾಜು ಮಾಡಲಾಗುತ್ತಿದೆ. ಕೆಲಸದ ಮೇಲೆ ಕೇಂದ್ರೀಕರಿಸುವಾಗ, ದೇಹಕ್ಕೆ ಸರಿಯಾದ ವಿಶ್ರಾಂತಿ ನೀಡಲು ನಾವು ನಿರ್ಲಕ್ಷಿಸುತ್ತೇವೆ ಅದು ಸಿರ್ಕಾಡಿಯನ್ ಲಯವನ್ನು ತೊಂದರೆಗೊಳಿಸುತ್ತದೆ ಮತ್ತು ಅಂತಿಮವಾಗಿ ನಿಮ್ಮ ನಿದ್ರೆಯ ಮಾದರಿಗಳ ಮೇಲೆ ಪರಿಣಾಮ ಬೀರುತ್ತದೆ.

ನಿದ್ರೆಯ ಒಳಗೆ ಮತ್ತು ಹೊರಗೆ ಹೋಗುವುದು, ಮಧ್ಯರಾತ್ರಿಯಲ್ಲಿ ಇದ್ದಕ್ಕಿದ್ದಂತೆ ಎಚ್ಚರಗೊಳ್ಳುವುದು ಜನರು ಅನುಭವಿಸುವ ಕೆಲವು ಸಾಮಾನ್ಯ ನಿದ್ರೆಯ ತೊಂದರೆಗಳು. ಮಾನಸಿಕ ಒತ್ತಡ ಹೊಂದಿದ್ದರೆ ಅಥವಾ ಯಾವುದೋ ಸಂಗತಿಗೆ ಹೆಚ್ಚು ಚಿಂತನೆಯನ್ನು ನಡೆಸುತ್ತಿದ್ದರೆ ರಾತ್ರಿ ಸರಿಯಾಗಿ ನಿದ್ರೆ ಬರದು. ಇಲ್ಲವೇ ರಾತ್ರಿ ಮಲಗಿರುವಾಗ ಪದೇ ಪದೇ ಎಚ್ಚರಗೊಳ್ಳುವುದು. ಒಮ್ಮೆ ಎಚ್ಚರಗೊಂಡರೆ ನಿದ್ರೆ ಬಾರದೆ ಹೋಗುವುದು. ಹೀಗೆ ಅನೇಕ ಬಗೆಯ ಸಮಸ್ಯೆಗಳು ಉಂಟಾಗುತ್ತವೆ. ಇವು ಆರೋಗ್ಯದ ಮೇಲೆ ಸಾಕಷ್ಟು ಪ್ರಭಲವಾದ ಪರಿಣಾಮ ಬೀರುವುದು.

 
ಹೆಲ್ತ್