Back
Home » ಆರೋಗ್ಯ
ಪುರುಷರು ಕಡೆಗಣಿಸಲೇಬಾರದ ಕೆಲವು ಚಿಹ್ನೆಗಳು
Boldsky | 2nd Aug, 2019 01:02 PM

ಪುರುಷರು ಯಾವಾಗಲೂ ಗಟ್ಟಿಮುಟ್ಟು, ಅವರಿಗೆ ಏನೂ ಆಗದು ಎಂದು ಹಿಂದಿನಿಂದಲೂ ನಂಬಿಕೊಂಡು ಬಂದಿರುವ ವಿಚಾರ. ಹೀಗಾಗಿ ಅವರು ಏನೇ ಬಂದರೂ ಸಹಿಸಿಕೊಳ್ಳುವ ಶಕ್ತಿ ಹೊಂದಿದ್ದಾರೆ ಎಂದೇ ಅಭಿಪ್ರಾಯಿಸಲಾಗಿದೆ. ಹೆಚ್ಚಾಗಿ ಪುರುಷರು ಹೆಚ್ಚು ಉದ್ಯೋಗದಲ್ಲಿ ವ್ಯಸ್ತರಾಗಿರುವ ಕಾರಣದಿಂದಾಗಿ ತಮ್ಮ ಆರೋಗ್ಯವನ್ನು ಕಡೆಗಣಿಸುವರು. ಆದರೆ ಇದು ಸರಿಯಾದ ಕ್ರಮವಲ್ಲ, ಪುರುಷರು ಕೆಲವೊಂದು ಚಿಹ್ನೆಗಳನ್ನು ಕಡೆಗಣಿಸಲೇಬಾರದು.

ಕೆಲವೊಂದು ಅಧ್ಯಯನಗಳ ಪ್ರಕಾರ ಮಹಿಳೆಯರು ವೈದ್ಯರಲ್ಲಿ ಭೇಟಿಯಾಗುವ ಅರ್ಧದಷ್ಟು ಪುರುಷರು ಭೇಟಿಯಾಗಲ್ಲ. ಆದರೆ ಪುರುಷರು ಕೂಡ ತಮ್ಮ ಆರೋಗ್ಯ ಸಮಸ್ಯೆಯ ಬಗ್ಗೆ ಕೆಲವೊಂದು ವಿಚಾರಗಳನ್ನು ತಿಳಿದುಕೊಳ್ಳುವುದು ಅತೀ ಅಗತ್ಯವಾಗಿರುವುದು. ಇದು ಯಾವುದು ಮತ್ತು ಇದನ್ನು ಕಡೆಗಣಿಸಲೇಬಾರದು ಎಂದು ಪುರುಷರು ತಿಳಿಯಬೇಕು.

ಬಂಜೆತನ(ನಿಮಿರು ದೌರ್ಬಲ್ಯ)

ಹೆಚ್ಚಿನ ಪುರುಷರಿಗೆ ತಮ್ಮ ಜೀವಿತಾವಧಿಯಲ್ಲಿ ಇಂತಹ ಸಮಸ್ಯೆಗಳೂ ಖಂಡಿತವಾಗಿಯೂ ಬರುವುದು. ಅದಾಗ್ಯೂ, ನಿಮಿರು ದೌರ್ಬಲ್ಯ ಎನ್ನುವುದನ್ನು ತುಂಬಾ ಸಮಯದಲ್ಲಿ ನಿಮಗೆ ಲೈಂಗಿಕ ತೃಪ್ತಿ ಸಿಗದೆ ಇರುವುದು ಎಂದು ಪರಿಗಣಿಸಲಾಗಿದೆ. ನಿಮಿರು ದೌರ್ಬಲ್ಯ ಸಮಸ್ಯೆಯಿದ್ದರೆ ಆಗ ನೀವು ವೈದ್ಯರನ್ನು ಭೇಟಿಯಾಗಬೇಕು. ಈ ಸಮಸ್ಯೆ ಬಗ್ಗೆ ಮುಜುಗರ ಪಟ್ಟುಕೊಳ್ಳದೆ ಆದಷ್ಟು ಬೇಗ ಇದರ ಬಗ್ಗೆ ವೈದ್ಯರಿಗೆ ತಿಳಿಸಿ. ನಿಮಿರು ದೌರ್ಬಲ್ಯ ಸಮಸ್ಯೆಯು ಹೃದಯದ ಕಾಯಿಲೆ, ಮಧುಮೇಹ ಅಥವಾ ಅಧಿಕ ರಕ್ತದೊತ್ತಡದ ಸಮಸ್ಯೆಯಾಗಿರಬಹುದು.

Most Read: ಪುರುಷರ ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ಆಯುರ್ವೇದದ ಪರಿಹಾರಗಳು

ವೃಷಣದಲ್ಲಿ ಗಡ್ಡೆಗಳು

ಹೆಚ್ಚಾಗಿ ವೃಷಣದಲ್ಲಿ ಕಂಡುಬರುವಂತಹ ಗಡ್ಡೆಗಳು ಹಾನಿಕಾರವಲ್ಲ, ಆದರೂ ಕೆಲವೊಂದು ಸಂದರ್ಭದಲ್ಲಿ ಇದು ತುಂಬಾ ಗಂಭೀರ ಅನಾರೋಗ್ಯದ ಸೂಚಕವಾಗಿರಬಹುದು. ವೃಷ್ಣವನ್ನು ಯಾವಾಗಲೂ ಪರೀಕ್ಷೆ ಮಾಡುತ್ತಲಿದ್ದರೆ ಆಗ ನಿಮಗೆ ವೃಷಣದ ಕ್ಯಾನ್ಸರ್ ನ ಚಿಹ್ನೆಗಳು ಕಂಡುಬರಬಹುದು. 20-35ರ ಹರೆಯದವರಲ್ಲಿ ವೃಷಣದ ಕ್ಯಾನ್ಸರ್ ಸಮಸ್ಯೆಯು ಸಾಮಾನ್ಯವಾಗಿರುವುದು. ಆದರೆ ವೃಷಣದಲ್ಲಿ ಕಂಡುಬರುವ ಪ್ರತಿಯೊಂದು ಗಡ್ಡೆಯು ಕ್ಯಾನ್ಸರ್ ಆಗಿರಲ್ಲ. ಕೆಲವೊಂದು ಸಲ ಇದು ದ್ರವ ಶೇಖರಣೆ, ಸೋಂಕು ಅಥವಾ ಚರ್ಮ, ರಕ್ತನಾಳದ ಊದುವಿಕೆಯಿಂದ ಉಂಟಾಗಿರಬಹುದು.

ಮಚ್ಚೆಗಳು

ಇಲ್ಲಿ ತಿಳಿದುಕೊಳ್ಳಬೇಕಾದ ಅತೀ ಮುಖ್ಯ ವಿಚಾರವೆಂದರೆ ಎಲ್ಲಾ ಮಚ್ಚೆಗಳು ಕ್ಯಾನ್ಸರ್ ನ ಲಕ್ಷಣವಲ್ಲ. ಮಾನವ ದೇಹದಲ್ಲಿ ಮಚ್ಚೆಗಳು ಸ್ವಾಭಾವಿಕ ಮತ್ತು 10-40ರ ತನಕ ಇದು ಇರುತ್ತದೆ. ಗಾತ್ರ ಮತ್ತು ಬಣ್ಣದಲ್ಲಿ ಬದಲಾವಣೆ ಮಾಡುವಂತಹ ಮಚ್ಚೆಗಳು ಕ್ಯಾನ್ಸರ್ ಕಾರಕವಾಗಿರಬಹುದು ಅಥವಾ ಇವುಗಳು ರಕ್ತಸ್ರಾವ, ತುರಿಕೆ ಅಥವಾ ನೋವುಂಟು ಮಾಡುತ್ತಲಿದ್ದರೆ ಆಗ ನೀವು ಇದರ ಬಗ್ಗೆ ವೈದ್ಯರಿಗೆ ತಿಳಿಸಬೇಕು. ಇಂತಹ ಬದಲಾವಣೆಗಳು ಕಂಡಬಂದರೆ ಆಗ ನೀವು ಚರ್ಮತಜ್ಞರನ್ನು ಭೇಟಿ ಮಾಡಿ.

ಮಚ್ಚೆಯು ಕ್ಯಾನ್ಸರ್ ಕಾರಕವೇ ಎಂದು ತಿಳಿಯಲು ನೀವು ಇದರ ಎಬಿಸಿಡಿಇ ತಿಳಿಯಿರಿ

ಎ- ಅಸಿಮ್ಮೆಟ್ರಿ: ಮಚ್ಚೆಯ ಅರ್ಧದಷ್ಟು ಭಾಗವು ಇನ್ನೊಂದಕ್ಕೆ ಹೊಂದಿಕೆಯಾಗುವುದಿಲ್ಲ.

ಬಿ-ಅಂಚು: ಇದರ ಅಂಚು ತುಂಬಾ ಮಂಜು ಅಥವಾ ಅಸಾಮಾನ್ಯವಾಗಿರುವುದು.

ಸಿ-ಬಣ್ಣ: ಮಚ್ಚೆಯ ಬಣ್ಣದ ಬದಲಾವಣೆಯು ಯಾವಾಗಲೂ ಒಂದೇ ರೀತಿಯಾಗಿ ಇರಲ್ಲ ಅಥವಾ ಇದು ಕಂದು, ಕಪ್ಪು, ನೀಲಿ, ಬಿಳಿ ಅಥವಾ ಕೆಂಪು ಆಗಿರುವುದು.

ಡಿ-ಗಾತ್ರ: ಮಚ್ಚೆಯ ಗಾತ್ರವು ಪೆನ್ಸಿಲ್ ರಬ್ಬರ್ ಗಿಂತ ದೊಡ್ಡದಾಗಿರುವುದು.

ಇ-ಬೆಳವಣಿಗೆ: ಮಚ್ಚೆಯ ಗಾತ್ರ, ಬಣ್ಣ ಮತ್ತು ವಿನ್ಯಾಸ ಬದಲಾಗುವುದು.

Most Read: ಪುರುಷರು ಆರೋಗ್ಯ ಹಾಗೂ ಫಿಟ್ನೆಸ್ ಕಾಪಾಡಿಕೊಳ್ಳಲು ಸರಳ ಸಲಹೆಗಳು

ಮೂತ್ರ ಸಮಸ್ಯೆ

ಮೂತ್ರದ ಸಮಸ್ಯೆಯು ಯಾವಾಗಲೂ ವಯಸ್ಸಾದ ಪುರುಷರಲ್ಲಿ ಕಂಡುಬರುವುದು. ಮೂತ್ರ ವಿಸರ್ಜನೆ ಅಥವಾ ಮೂತ್ರದ ಹರಿವನ್ನು ನಿಯಂತ್ರಿಸಲು ಆಗದೆ ಇದ್ದರೆ ಆಗ ಮೂತ್ರ ಹಿಂಜರಿಕೆ ಇದೆ ಎಂದು ಹೇಳಬಹುದು. ವೃಷಣವು ಹಿಗ್ಗಿಕೊಂಡಾಗ, ಮೂತ್ರನಾಳದಿಂದ ಮೂತ್ರ ಸಾಗಿಸುವ ನಾಳಗಳಿಗೆ ಇದು ಒತ್ತಡ ಹಾಕುವುದು. ಇದರಿಂದಾಗಿ ಮೂತ್ರ ವಿಸರ್ಜನೆಗೆ ತುಂಬಾ ಕಷ್ಟವಾಗುವುದು. ಇದು ವೃಷಣದ ಕಾಯಿಲೆ ಅಥವಾ ಕ್ಯಾನ್ಸರ್ ನ ಚಿಹ್ನೆಯಾಗಿರಬಹುದು. ಮುತ್ರ ವಿಸರ್ಜನೆ ವೇಳೆ ಉರಿ ಅಥವಾ ನೋವಾಗುವುದು. ರಾತ್ರಿ ವೇಳೆ ಪದೇ ಪದೇ ಮೂತ್ರ ವಿಸರ್ಜನೆ ಇತ್ಯಾದಿ ಸಮಸ್ಯೆಗಳು ಬರಬಹುದು. ಇಂತಹ ಯಾವುದೇ ಸಮಸ್ಯೆಯು ನಿಮಗಿದ್ದರೆ ಆಗ ನೀವು ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ. ನೋವು ಅಥವಾ ಆರೋಗ್ಯವನ್ನು ನಿರ್ಲಕ್ಷ್ಯ ಮಾಡುವುದರಿಂದ ನೀವು ಪುರುಷರಾಗಲ್ಲ. ಸರಿಯಾದ ಸಮಯದಲ್ಲಿ ನೀವು ಇಂತಹ ಸಮಸ್ಯೆಗಳನ್ನು ಪರಿಶೀಲಿಸಿ, ವೈದ್ಯರನ್ನು ಭೇಟಿಯಾದರೆ ತುಂಬಾ ಒಳ್ಳೆಯದು. ಆರೋಗ್ಯ ಒಳ್ಳೆಯದಿದ್ದರೆ ಆಗ ನೀವು ನಿಜವಾದ ಪುರುಷರಾಗುವಿರಿ.

ಶೀಘ್ರ ಸ್ಖಲನ

ಮಲಬದ್ಧತೆ, ಹೊಟ್ಟೆ ಕೆಡುವುದು ರೀತಿಯ ಸಮಸ್ಯೆಯಂತೆ ಇದು ಕೂಡ ಕೆಲವು ಪುರುಷರಿಗೆ ಉಂಟಾಗುವ ಸಮಸ್ಯೆಯಾಗಿದೆ. ಯಾವುದಾದರೂ ಕಾಯಿಲೆ ಇದ್ದರೆ ಈ ರೀತಿ ಉಂಟಾಗುತ್ತದೆ. ಈ ಕಾಯಿಲೆಯಲ್ಲಿ ಲೈಂಗಿಕ ಕ್ರಿಯೆ ಪೂರ್ಣಗೊಳ್ಳುವ ಮುನ್ನ, ನಿದ್ರೆಯಲ್ಲಿ ವೀರ್ಯಾಣುಗಳು ಹೊರಬರುತ್ತವೆ. ಈ ರೀತಿಯ ಸಮಸ್ಯೆ ಕಂಡು ಬಂದರೆ ಪುರುಷ ವೈದ್ಯರನ್ನು ಸಂಪರ್ಕಿಸಿ. ಈ ರೀತಿಯ ಸಮಸ್ಯೆ ಇದ್ದರೆ ನಾಚಿಕೆ ಪಟ್ಟುಕೊಂಡು ಕೂರುವ ಬದಲು ವೈದ್ಯರನ್ನು ಕಂಡು ಪರಿಹಾರ ಕಂಡುಕೊಳ್ಳಿ.

Most Read: ಪುರುಷರ ದೇಹದ ಸದೃಢತೆಗಾಗಿ ಫಲಪ್ರದ ಟಿಪ್ಸ್

ಲೈಂಗಿಕ ತೊಂದರೆ

ಇಂದು ಪುರುಷರಲ್ಲಿ ಲೈಂಗಿಕ ದೌರ್ಬಲ್ಯ ವಿಶ್ವದಾದ್ಯಂತ ಕಾಣಬರುತ್ತಿದ್ದು ಇದಕ್ಕೆ ದೇಹದ ತ್ರಾಣ ಕಡಿಮೆಯಾಗಿರುವುದೇ ಪ್ರಮುಖ ಕಾರಣವಾಗಿದೆ. ನಿಮಿರು ದೌರ್ಬಲ್ಯ, ದೇಹದಾರ್ಢ್ಯದ ಕೊರತೆ, ಕಾಮಾಸಕ್ತಿಯ ಕೊರತೆ, ಕಡಿಮೆ ಪ್ರಮಾಣದ ಸ್ಖಲನ ಮೊದಲಾದ ಲೈಂಗಿಕ ಸಮಸ್ಯೆಗಳನ್ನು ಹಲವಾರು ಪುರುಷರು ಎದುರಿಸುತ್ತಿದ್ದಾರೆ. ಲೈಂಗಿಕ ಶಕ್ತಿ ಕುಂದಲು ಕೇವಲ ದೈಹಿಕ ಕಾರಣಗಳು ಮಾತ್ರವೇ ಅಲ್ಲ, ಮಾನಸಿಕ ಕಾರಣಗಳೂ ಇರಬಹುದು. ಖಿನ್ನತೆ, ಮಾನಸಿಕ ಒತ್ತಡ, ಮಾನಸಿಕ ಕ್ಷೋಭೆಯಿಂದ ಏರುಪೇರಾದ ರಸದೂತಗಳ ಸಂತುಲನ, ಹೆಚ್ಚಿನ ರಕ್ತದೊತ್ತಡ, ಸ್ಥೂಲಕಾಯ ಇತ್ಯಾದಿಗಳೂ ಕಾರಣವಾಗಬಹುದು. ಈ ಕೊರತೆಯನ್ನು ತೋರಿಸಿ ಇದಕ್ಕೆ ಮದ್ದು ಎಂದು ನೀಡುವ ಔಷಧಿಗಳು ಇಂದು ಮಾರುಕಟ್ಟೆಯಲ್ಲಿ ಮುಕ್ತವಾಗಿ ಸಿಗುತ್ತಿವೆ. ಕೆಲವರಿಗೆ ಲೈಂಗಿಕ ಕ್ರಿಯೆಯ ನಂತರ ಆ ಭಾಗ ಊದಿಕೊಳ್ಳುವುದು, ನೋವು ಕಂಡು ಬರುತ್ತದೆ. ಈ ರೀತಿಯ ತೊಂದರೆ ಕಾಣಿಸಿಕೊಂಡರೆ ನಾಚಿಕೆ ಪಟ್ಟು ಕೂರುವ ಬದಲು ವೈದ್ಯರನ್ನು ಕಂಡು ಸಲಹೆಯನ್ನು ಪಡೆಯಿರಿ.

ಗುಪ್ತಾಂಗದಲ್ಲಿ ದುರ್ನಾತ

ಗುಪ್ತಾಂಗದಲ್ಲಿ ದುರ್ನಾತ ಕಂಡು ಬರುತ್ತಿದ್ದರೆ ಆ ಬಾಗದ ಶುಚಿತ್ವಕ್ಕೆ ತುಂಬಾ ಪ್ರಾಮುಖ್ಯತೆ ಕೊಡಬೇಕು. ಆ ಭಾಗವನ್ನು ಶೇವ್ ಮಾಡಿ, ಚೆನ್ನಾಗಿ ತೊಳೆದು ಒರೆಸಬೇಕು. ಅದನ್ನು ಶುಚಿ ಮಾಡಿದಿದ್ದರೆ ಬ್ಯಾಕ್ಟೀರಿಯಾಗಳಿಂದ ಸೋಂಕು ತಗುಲಿ ತುರಿಕೆ ಕಂಡು ಬರಬಹುದು.

   
 
ಹೆಲ್ತ್