Back
Home » ಗಾಸಿಪ್
ನಿಖಿಲ್ ಇಲ್ಲ ಇಲ್ಲ ಅಂತಿದ್ರೂ ಟಾಲಿವುಡ್ ನಲ್ಲಿ ಸೌಂಡ್ ಮಾಡ್ತಿದೆ ಆ ಸುದ್ದಿ.!
Oneindia | 2nd Aug, 2019 01:19 PM
 • ಬಾಲಕೃಷ್ಣ ಬಿಟ್ಟು ನಿಖಿಲ್ ಗೆ ಜೈ.!

  ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ಬೊಯಪತಿ ಶ್ರೀನು ಬಾಲಕೃಷ್ಣ ಜೊತೆ ಸಿನಿಮಾ ಮಾಡಲು ಸಜ್ಜಾಗಿದ್ದರು. ಅದಕ್ಕಾಗಿ ಎಲ್ಲಾ ತಯಾರಿ ನಡೆಸಿದ್ದರು. ಆದ್ರೀಗ, ಬಾಲಕೃಷ್ಣ ಜೊತೆಗಿನ ಪ್ರಾಜೆಕ್ಟ್ ಗೆ ಬ್ರೇಕ್ ಹಾಕಿದ್ದು, ಕನ್ನಡ ನಟ ನಿಖಿಲ್ ಜೊತೆ ಸಿನಿಮಾ ಮಾಡಲು ಮುಂದಾಗಿದ್ದಾರಂತೆ.

  ''ನಾನಿನ್ನು ಕಣ್ಣು ಬಿಡುತ್ತಿರುವ ಕಲಾವಿದ'' : ದರ್ಶನ್ ಬಗ್ಗೆ ನಿಖಿಲ್ ಓಪನ್ ಟಾಕ್


 • ಇದು ಟಾಲಿವುಡ್ ಸುದ್ದಿ

  ಇದು ತೆಲುಗು ಮಾಯಾಬಜಾರ್ ನಲ್ಲಿ ಹರಿದಾಡುತ್ತಿರುವ ಸುದ್ದಿ. ಬಾಲಕೃಷ್ಣ ಅವರು ಕೆಎಸ್ ರವಿಕುಮಾರ್ ಜೊತೆ ಸಿನಿಮಾ ಮಾಡಲಿದ್ದು, ಬೊಯಪತಿ ಶ್ರೀನು ಚಿತ್ರದಿಂದ ಹಿಂದೆ ಸರಿದಿದ್ದಾರಂತೆ. ಈ ಗ್ಯಾಪ್ ನಲ್ಲಿ ನಿಖಿಲ್ ಅವರ ಜೊತೆ ಸಿನಿಮಾ ಮಾಡಲು ಪ್ಲಾನ್ ನಡೆದಿದೆ ಎನ್ನಲಾಗಿದೆ. ಆದ್ರೆ, ಈ ಸುದ್ದಿ ಬಗ್ಗೆ ನಿಖಿಲ್ ಕುಮಾರ್ ಯಾವುದೇ ಸುಳಿವು ನೀಡಿಲ್ಲ.


 • ಕನ್ನಡದವರೇ ನನ್ನ ಡೈರೆಕ್ಟರ್

  ಇತ್ತೀಚಿಗಷ್ಟೆ ಕುರುಕ್ಷೇತ್ರ ಚಿತ್ರದ ಅಭಿಮನ್ಯು ಪಾತ್ರಕ್ಕೆ ಡಬ್ಬಿಂಗ್ ಮಾಡಿದ್ದ ನಿಖಿಲ್, ಮುಂದಿನ ಸಿನಿಮಾ ಬಗ್ಗೆ ಸ್ಪಷ್ಟನೆ ನೀಡಿದ್ದರು. ಎಲ್ಲ ತಯಾರಿ ನಡೆಯುತ್ತಿದೆ. ಇನ್ನು ಎರಡು ತಿಂಗಳಲ್ಲಿ ಸಿನಿಮಾ ಆರಂಭವಾಗಬಹುದು. ಆದ್ರೆ, ತೆಲುಗು ನಿರ್ದೇಶಕರು ಈ ಚಿತ್ರ ಮಾಡಲ್ಲ. ಕನ್ನಡದವರೇ ನಿರ್ದೇಶನ ಮಾಡ್ತಾರೆ ಎಂದು ಖಚಿತ ಪಡಿಸಿದ್ದಾರೆ.

  ಕೊನೆಯ ಕ್ಷಣದಲ್ಲಿ ಎಚ್ಚೆತ್ತುಕೊಂಡ 'ಅಭಿಮನ್ಯು' ನಿಖಿಲ್ ಕುಮಾರ್


 • ಬೊಯಪತಿ ಬೇರೆ ಸಿನಿಮಾ ಇರಬಹುದು.!

  ಹಾಗಾದ್ರೆ, ಲೈಕಾ ಪ್ರೊಡಕ್ಷನ್ ಜೊತೆ ನಿಖಿಲ್ ಮಾಡಲಿರುವ ಚಿತ್ರಕ್ಕೆ ಕನ್ನಡದವರೇ ನಿರ್ದೇಶಕರಾಗಬಹುದು. ಬೊಯಪತಿ ಶ್ರೀನು ಕೂಡ ನಿಖಿಲ್ ಜೊತೆ ಹೊಸದೊಂದು ಸಿನಿಮಾ ಮಾಡುವ ಬಗ್ಗೆ ಚಿಂತನೆ ನಡೆಸಿರಬಹುದು. ಸದ್ಯಕ್ಕೆ ಅಧಿಕೃತವಾಗಿ ಘೋಷಣೆಯಾಗಿಲ್ಲ. ಟಾಲಿವುಡ್ ನಲ್ಲಿ ಇಂತಹದೊಂದು ಸುದ್ದಿ ಮಾತ್ರ ಗಿರಿಗಿಟ್ಲೆ ಹೊಡೆಯುತ್ತಿದೆ. ಇದು ಎಷ್ಟು ನಿಜಾ ಅಂತ ಕಾದು ನೋಡಬೇಕಿದೆ.


 • ಬೊಯಪತಿ ಶ್ರೀನು ಕುರಿತು...

  2005ರಲ್ಲಿ ಭದ್ರ ಸಿನಿಮಾದ ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ್ದ ಬೊಯಪತಿ ಶ್ರೀನು, ತುಳಸಿ, ಸಿಂಹ, ಧಮ್ಮು, ಲೆಜೆಂಡ್, ಸರೈನೋಡು, ವಿನಯ ವಿಧೇಯ ರಾಮ ಅಂತಹ ಸೂಪರ್ ಹಿಟ್ ಚಿತ್ರಗಳನ್ನ ಮಾಡಿದ್ದಾರೆ.
ಮಂಡ್ಯ ಲೋಕಸಭೆ ಚುನಾವಣೆ ಸೋಲಿನ ಬಳಿಕ ಯಾವುದೇ ಸಿನಿಮಾ ಮಾಡದ ನಿಖಿಲ್ ಕುಮಾರ್, ಸದ್ಯ ಮುನಿರತ್ನ 'ಕುರುಕ್ಷೇತ್ರ' ಬಿಡುಗಡೆಗಾಗಿ ಕಾಯ್ತಿದ್ದಾರೆ. ದರ್ಶನ್ ದುರ್ಯೋಧನನಾಗಿ ನಟಿಸಿರುವ ಈ ಚಿತ್ರದಲ್ಲಿ ನಿಖಿಲ್ ಅಭಿಮನ್ಯು ಪಾತ್ರ ನಿರ್ವಹಿಸಿದ್ದಾರೆ.

ಈ ನಡುವೆ ಲೈಕಾ ಪ್ರೊಡಕ್ಷನ್ ಜೊತೆ ನಿಖಿಲ್ ಮುಂದಿನ ಸಿನಿಮಾ ಮಾಡಲಿದ್ದಾರೆ ಎಂದು ಸ್ವತಃ ಅವರೇ ಹೇಳಿದ್ದಾರೆ. ಆದರೆ, ಈ ಚಿತ್ರವನ್ನ ಯಾರು ನಿರ್ದೇಶನ ಮಾಡಲಿದ್ದಾರೆ ಎಂಬುದು ಈಗ ಭಾರಿ ಚರ್ಚೆಯಾಗಿದೆ.

ನಿಖಿಲ್ ಕುಮಾರ್ ಮುಂದಿನ ಚಿತ್ರಕ್ಕೆ ಕನ್ನಡದವರೇ ಡೈರೆಕ್ಟರ್.!

ಈ ಹಿಂದೆ ಸುದ್ದಿಯಾದಂತೆ ಲೈಕಾ ಪ್ರೊಡಕ್ಷನ್ ನಲ್ಲಿ ಮಾಡಲಿರುವ ಚಿತ್ರವನ್ನ ತೆಲುಗಿನ ಸ್ಟಾರ್ ಡೈರೆಕ್ಟರ್ ನಿರ್ದೇಶಿಸಬಹುದು ಎಂಬ ಸುದ್ದಿ ಕೇಳಿ ಬಂದಿತ್ತು. ಆದರೆ, ಆ ಸುದ್ದಿಯನ್ನ ನಿಖಿಲ್ ತಳ್ಳಿಹಾಕಿದ್ದರು. ನನ್ನ ಮುಂದಿನ ಚಿತ್ರದಲ್ಲಿ ಕನ್ನಡದವರೇ ತಂತ್ರಜ್ಞರು, ನಿರ್ದೇಶಕರು ಕೆಲಸ ಮಾಡ್ತಾರೆ ಎಂದು ಹೇಳುತ್ತಿದ್ದಾರೆ. ಬಟ್, ಟಾಲಿವುಡ್ ಇಂಡಸ್ಟ್ರಿಯಲ್ಲಿ ಬೇರೆಯದ್ದೇ ಸುದ್ದಿಯಿದೆ. ಏನದು? ಮುಂದೆ ಓದಿ....

   
 
ಹೆಲ್ತ್