Back
Home » ಬಾಲಿವುಡ್
ಡ್ರಗ್ಸ್ ಪಾರ್ಟಿ ಮೂಲಕ ಸುದ್ದಿಯಾಗಿದ್ದ 'ಉರಿ' ನಟ ಯೋಧರಿಗಾಗಿ ಮಾಡಿದ್ದೇನು?
Oneindia | 2nd Aug, 2019 06:05 PM

ಬಾಲಿವುಡ್ ನಲ್ಲಿ ಇತ್ತೀಚಿಗಷ್ಟೆ ನಡೆದ ಪಾರ್ಟಿಯೊಂದು ಸಖತ್ ಸುದ್ದಿಯಾಗಿತ್ತು. ನಿರ್ಮಾಪಕ ಕರಣ್ ಜೋಹರ್ ಆಯೋಜಿಸಿದ್ದ ಪಾರ್ಟಿಯಲ್ಲಿ ಬಾಲಿವುಡ್ ಸ್ಟಾರ್ಸ್ ಡ್ರಗ್ಸ್ ಸೇವಿಸಿದ್ದಾರೆ ಎನ್ನುವ ವಿಚಾರ ಬಾರಿ ಚರ್ಚೆಗೆ ಗುರಿಯಾಗಿತ್ತು. ಈ ಪಾರ್ಟಿಯಲ್ಲಿ ಖ್ಯಾತ ನಟ ನಟಿಯರು ಭಾಗಿಯಾಗಿದ್ದರು. ದೀಪಿಕಾ ಪಡುಕೋಣೆ, ರಣಬೀರ್ ಕಪೂರ್, ವಿಕಿ ಕೌಶಲ್ ಸೇರಿದಂತೆ ಅನೇಕರು ಈ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದರು.

ಈ ಪಾರ್ಟಿ ವಿಚಾರ ಸದ್ದು ಮಾಡುತ್ತಿದ್ದರೆ ನಟ ವಿಕ್ಕಿ ಕೌಶಲ್ ಮಾತ್ರ ಯೋಧರ ಮಧ್ಯೆ ಕಾಣಿಸಿಕೊಂಡಿದ್ದಾರೆ. ವಿಕ್ಕಿ ಯೋಧರನ್ನು ಭೇಟಿ ಮಾಡಿದ್ದು ಮಾತ್ರವಲ್ಲದೆ, ಯೋಧರಿಗಾಗಿ ರೋಟಿ ಮಾಡಿದ್ದಾರೆ. ವಿಕ್ಕಿ ಮೊದಲ ಬಾರಿಗೆ ರೋಟಿ ಮಾಡಿದ್ದಾರಂತೆ. ಅದು ಯೋಧರಿಗೋಸ್ಕರ ಅಂತ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಕರಣ್ ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿ ಸಿಕ್ಕಿಬಿದ್ರಾ ದೀಪಿಕಾ, ವಿಕ್ಕಿ, ರಣ್ಬೀರ್.!

ವಿಕ್ಕಿ ಕೌಶಲ್ ಅಭಿನಯದ 'ಉರಿ ಸರ್ಜಿಕಲ್ ಸ್ಟ್ರೈಕ್' ಸಿನಿಮಾ ಭಾರಿ ಸದ್ದು ಮಾಡಿತ್ತು. ಪಾಕಿಸ್ತಾನದ ಮೇಲೆ ಭಾರತ ನೆಡೆಸಿದ ಸರ್ಜಿಲ್ ಸ್ಟ್ರೈಕ್ ಬಗ್ಗೆ ಮಾಡಿದ ಸಿನಿಮಾ ಇದಾಗಿತ್ತು. ಈ ಚಿತ್ರದಲ್ಲಿ ವಿಕ್ಕಿ ಕೌಶಲ್ ಯೋಧನಾಗಿ ಮಿಂಚಿದ್ದರು. ದೊಡ್ಡ ಮಟ್ಟಿಗೆ ಸದ್ದು ಮಾಡಿದ ಚಿತ್ರ ಇದಾಗಿತ್ತು. ಈ ಸಿನಿಮಾ ರಿಲೀಸ್ ಆಗಿ ಈಗ ಸುಮಾರು ಆರು ತಿಂಗಳ ಮೇಲಾಗಿದೆ.

ವಿಕ್ಕಿ ಆಗಾಗ ಯೋಧರನ್ನು ಭೇಟಿ ಮಾಡುತ್ತಲೆ ಇರುತ್ತಾರೆ. ಈ ಬಾರಿ ಭಾರತ-ಚೈನಾ ಗಡಿಯಾದ ಅರುಣಾಚಲ್ ಪ್ರದೇಶದ ತವಾಂಗ್ ಪ್ರದೇಶದ ಯೋಧರನ್ನು ಭೇಟಿ ಮಾಡಿದ್ದಾರೆ. ಅಲ್ಲಿ ಯೋಧರ ಜೊತೆ ಕೆಲವು ದಿನಗಳು ಇರಲಿದ್ದಾರಂತೆ. ಈ ಬಗ್ಗೆ ವಿಕ್ಕಿ ಕೌಶಲ್ ಇನ್ಸ್ಟಾಗ್ರಾಮ್ ನಲ್ಲಿ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಸಿನಿಮಾಗಳ ಜೊತೆಗೆ ಸಮಯ ಮಾಡಿಕೊಂಡು ಆಗಾಗ ಯೋಧರ ಭೇಟಿಯಾಗುತ್ತಿರುವುದನ್ನು ನೋಡಿ ವಿಕ್ಕಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

   
 
ಹೆಲ್ತ್