Back
Home » ಬಾಲಿವುಡ್
'ವಿಕ್ರಂ ವೇದ' ಹಿಂದಿ ರಿಮೇಕ್ : ಒಬ್ಬರು ಸ್ಟಾರ್, ಮತ್ತೊಬ್ಬರು ಸೂಪರ್ ಸ್ಟಾರ್
Oneindia | 3rd Aug, 2019 05:09 PM

ಸೌತ್ ಚಿತ್ರರಂಗದ ಹಿಟ್ ಸಿನಿಮಾಗಳು ಬಾಲಿವುಡ್ ನಲ್ಲಿ ಬರುವ ಸಂಖ್ಯೆ ಹೆಚ್ಚಾಗುತ್ತಿದೆ. ಅದೇ ರೀತಿ ತಮಿಳು ಸಿನಿಮಾ 'ವಿಕ್ರಂ ವೇದ' ಈಗ ಬಾಲಿವುಡ್ ನಲ್ಲಿ ನಿರ್ಮಾಣ ಆಗುತ್ತಿದೆ.

'ವಿಕ್ರಂ ವೇದ' ಸಿನಿಮಾ ರಿಮೇಕ್ ಎಂದ ಮೇಲೆ ಅದರಲ್ಲಿ ಬಾಲಿವುಡ್ ಚಿತ್ರರಂಗದ ಯಾವ ನಟರು ನಟಿಸುತ್ತಾರೆ ಎನ್ನುವ ಕುತೂಹಲ ಮೂಡುತ್ತದೆ. ಅದಕ್ಕೆ ಕಾರಣ ಆ ಸಿನಿಮಾ ನಟ ವಿಜಯ್ ಸೇತುಪತಿ ಕೆರಿಯರ್ ಗೆ ದೊಡ್ಡ ಹಿಟ್ ನೀಡಿದ್ದ ಚಿತ್ರವಾಗಿತ್ತು.

ಅಂದಹಾಗೆ, 'ವಿಕ್ರಂ ವೇದ' ಚಿತ್ರದಲ್ಲಿ ವಿಜಯ್ ಸೇತುಪತಿ ಗ್ಯಾಂಗ್ ಸ್ಟರ್ ಪಾತ್ರದಲ್ಲಿ ನಟಿಸಿದ್ದರು. ಈ ಪಾತ್ರದಲ್ಲಿ ಈಗ ಬಾಲಿವುಡ್ ಮಿಸ್ಟರ್ ಫರ್ಫೆಕ್ಟ್ ಕಾಣಿಸಿಕೊಳ್ಳುತ್ತಿದ್ದಾರೆ. ಅಮೀರ್ ಖಾನ್ ವಿಜಯ್ ಸೇತುಪತಿ ಮಾಡಿದ್ದ ಗ್ಯಾಂಗ್ ಸ್ಟರ್ ರೋಲ್ ನಲ್ಲಿ ನಟಿಸುತ್ತಿದ್ದಾರೆ.

ಮತ್ತೊಂದು ಪಾತ್ರವಾದ ಮಾದವನ್ ರೋಲ್ ನಲ್ಲಿ ಸೈಫ್ ಅಲಿ ಖಾನ್ ಕಾಣಿಸಿಕೊಳ್ಳುತ್ತಿದ್ದಾರೆ. ಅಮೀರ್ ಗ್ಯಾಂಗ್ ಸ್ಟರ್ ಆಗಿದ್ದು, ಸೈಫ್ ಅಲಿ ಖಾನ್ ಅವರದ್ದು, ಪೊಲೀಸ್ ಪಾತ್ರವಾಗಿದೆ.

'ವಿಕ್ರಂ ವೇದ' ರೀಮೇಕ್ ಚಿತ್ರದಲ್ಲಿ ಅಬ್ಬರಿಸುತ್ತಾರಾ ಕಿಚ್ಚ ಸುದೀಪ್.?

'ವಿಕ್ರಂ ವೇದ' ತಮಿಳು ಸಿನಿಮಾ ಮಾಡಿದ್ದ ಮೂಲ ನಿರ್ದೇಶಕರೇ, ಬಾಲಿವುಡ್ ನಲ್ಲಿಯೂ ರಿಮೇಕ್ ಮಾಡುತ್ತಿದ್ದಾರೆ. ಮಾರ್ಚ್ 2022ರ ವೇಳೆಗೆ ಈ ಸಿನಿಮಾ ಸೆಟ್ಟೆರುವ ಸಾಧ್ಯತೆ ಇದೆ.

ಈ ಹಿಂದೆ ಶಾರೂಖ್ ಖಾನ್ ಈ ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ಇತ್ತು. ಈಗ ಅಮೀರ್ ಖಾನ್ ಆ ಜಾಗಕ್ಕೆ ಬಂದಿದ್ದಾರೆ. ಆದರೆ, ಈಗ ಏನೇ ಸುದ್ದಿ ಇದ್ದರೂ, ಸಿನಿಮಾ ಅಧಿಕೃತವಾಗಿ ಘೋಷಣೆ ಆಗುವ ತನಕ ಯಾವುದು ಅಂತಿಮ ಆಗಿಲ್ಲ.

   
 
ಹೆಲ್ತ್