Back
Home » ಗಾಸಿಪ್
ರಜನಿ, ಸಲ್ಲು ಮೀರಿಸಿದ ಪ್ರಭಾಸ್: 'ಸಾಹೋ' ಚಿತ್ರಕ್ಕೆ ಅತಿ ಹೆಚ್ಚು ಸಂಭಾವನೆ.!
Oneindia | 5th Aug, 2019 04:28 PM
 • ಬಾಹುಬಲಿ ನಂತರ ಪ್ರಭಾಸ್ ಸ್ಟಾರ್

  ಬಾಹುಬಲಿ ದಿ ಬಿಗಿನಿಂಗ್ ಮತ್ತು ಬಾಹುಬಲಿ ದಿ ಕನ್ ಕ್ಲೂಷನ್ ಚಿತ್ರಗಳ ಅದ್ಭುತ ಯಶಸ್ಸಿನ ನಂತರ ಪ್ರಭಾಸ್ ಅಂತಾರಾಷ್ಟ್ರೀಯ ಸ್ಟಾರ್ ಆದರು. ಬರಿ ತೆಲುಗು ಚಿತ್ರರಂಗಕ್ಕೆ ಸೀಮಿತವಾಗಿ ಪ್ರಭಾಸ್ ಗಡಿಯಾಚೆ, ಭಾಷೆ ಮೀರಿ ಬೆಳೆದರು. ಪ್ರಭಾಸ್ ಕಾಲ್ ಶೀಟ್ ಗಾಗಿ ನಿರ್ಮಾಪಕರು ಮನೆಮುಂದೆ ಕಾದು ಕುಂತರು. ಇದರಿಂದ ಪ್ರಭಾಸ್ ಸಂಭಾವನೆ ಗಗನಕ್ಕೇರಿತು.

  'ಸಾಹೋ' ಚಿತ್ರದಲ್ಲಿ ಪ್ರಭಾಸ್ ಬಳಸಿದ ಬೈಕ್ ಬೆಲೆ 10.55 ಲಕ್ಷ.! ಯಾವುದು ಆ ಬೈಕ್?


 • ಸಾಹೋ ಚಿತ್ರಕ್ಕಾಗಿ ದುಬಾರಿ ಸಂಭಾವನೆ

  ಬಾಹುಬಲಿ ಚಿತ್ರದ ನಂತರ ಪ್ರಭಾಸ್ ನಟಿಸುತ್ತಿರುವ ಬಹುಭಾಷೆಯ ಚಿತ್ರ ಸಾಹೋ. ತೆಲುಗು ಮತ್ತು ಹಿಂದಿಯಲ್ಲಿ ಸಿದ್ಧವಾಗಿರುವ ಈ ಚಿತ್ರಕ್ಕಾಗಿ ಡಾರ್ಲಿಂಗ್ ದುಬಾರಿ ಸಂಭಾವನೆ ಪಡೆದುಕೊಂಡಿದ್ದಾರೆ. ಬಾಲಿವುಡ್ ನ ಕೆಲವು ವೆಬ್ ಸೈಟ್ ವರದಿ ಮಾಡಿರುವಂತೆ ಸಾಹೋ ಚಿತ್ರಕ್ಕೆ ಪ್ರಭಾಸ್ 100 ಕೋಟಿ ಸಂಭಾವನೆ ಪಡೆದುಕೊಂಡಿದ್ದಾರಂತೆ.

  ಪ್ರಭಾಸ್ ಮತ್ತು ಯಶ್ ನಡುವೆ ಇಷ್ಟೊಂದು ಸಾಮ್ಯತೆ ಇದ್ಯಾ.?


 • ನಂಬರ್-1 ನಟ ಪ್ರಭಾಸ್.!

  ಸದ್ಯ ಭಾರತ ಸಿನಿರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಸೂಪರ್ ರಜನಿಕಾಂತ್. ತಲೈವಾ ಪಡೆಯುವ ಸಂಭಾವನೆ ಬಗ್ಗೆ ನಿಖರವಾದ ಅಂಕಿ ಅಂಶ ಇಲ್ಲವಾದರೂ (60 ಕೋಟಿ ಅಂದಾಜು) ಸಂಭಾವನೆ ಜೊತೆಗೆ ಬಂದ ಲಾಭದಲ್ಲಿ ಷೇರು ಕೂಡ ಪಡೆಯುತ್ತಾರಂತೆ. ಇಂತಹ ರಜನಿಯನ್ನ ಪ್ರಭಾಸ್ ಮೀರಿಸಿದ್ದಾರೆ ಎಂಬ ಸುದ್ದಿ ಚರ್ಚೆಯಾಗುತ್ತಿದೆ.


 • ಪ್ರಭಾಸ್ ಮುಂದೆ ಸಲ್ಲು, ಶಾರೂಖ್ ಕೂಡ ಧೂಳ್

  ರಜನಿಕಾಂತ್ ಬಳಿಕ ಸಲ್ಮಾನ್ ಖಾನ್, ಅಮೀರ್ ಖಾನ್, ಅಕ್ಷಯ್ ಕುಮಾರ್ ಹೆಚ್ಚು ಸಂಭಾವನೆ ಪಡೆಯುತ್ತಿದ್ದರು. ಇದೀಗ, ಈ ನಟರನ್ನೆಲ್ಲಾ ಪ್ರಭಾಸ್ ಹಿಂದಿಕ್ಕಿದ್ದಾರೆ ಎನ್ನಲಾಗುತ್ತಿದೆ. ಆಗಸ್ಟ್ 30 ರಂದು ಸಾಹೋ ಸಿನಿಮಾ ತೆರೆಗೆ ಬರ್ತಿದ್ದು, ಈ ಸಿನಿಮಾ ಏನಾದರೂ ದೊಡ್ಡ ಸಕ್ಸಸ್ ಆದರೆ, ಪ್ರಭಾಸ್ ಇಮೇಜ್ ಮತ್ತಷ್ಟು ಹೆಚ್ಚಾಗಲಿದೆ. ಭಾರತೀಯ ಚಿತ್ರರಂಗವನ್ನ ಮೀರಿ ಬೆಳೆಯಬಹುದು.
ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎಂದು ಹುಡುಕಿದರೆ, ಸೂಪರ್ ಸ್ಟಾರ್ ರಜನಿಕಾಂತ್, ಸಲ್ಮಾನ್ ಖಾನ್, ಶಾರೂಕ್ ಖಾನ್, ಅಮೀರ್ ಖಾನ್ ಅಂತಹ ಕಲಾವಿದರು ಕಣ್ಣ ಮುಂದೆ ಬರ್ತಾರೆ.

ಇನ್ಮುಂದೆ ಈ ನಟರಿಗಿಂತ ಮೊದಲು ಬಾಹುಬಲಿ ಖ್ಯಾತಿಯ ಪ್ರಭಾಸ್ ಮೊದಲ ಸ್ಥಾನದಲ್ಲಿ ಬರಬಹುದು. ಯಾಕಂದ್ರೆ, ಸದ್ಯ ಭಾರತ ಚಿತ್ರರಂಗದ ಇತಿಹಾಸದಲ್ಲಿ ಚಿತ್ರವೊಂದಕ್ಕೆ ಯಾರೊಬ್ಬರು ಪಡೆಯದಷ್ಟು ಸಂಭಾವನೆಯನ್ನ ಪ್ರಭಾಸ್ ಪಡೆದುಕೊಂಡಿದ್ದಾರಂತೆ.

ಲಂಡನ್ ಗೆ ಪ್ರಭಾಸ್-ಅನುಷ್ಕಾ: ಟ್ರಿಪ್ ಪ್ಲಾನ್ ಮಾಡಿದ ರಾಜಮೌಳಿ.!

ಈ ಸುದ್ದಿ ಈಗ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಬಾಹುಬಲಿ ನಂತರ ಪ್ರಭಾಸ್ ನಟಿಸುತ್ತಿರುವ ಸಾಹೋ ಸಿನಿಮಾದಲ್ಲಿ ಪ್ರಭಾಸ್ ಗೆ ದುಬಾರಿ ಸಂಭಾವನೆ ನೀಡಿದ್ದರಂತೆ. ಎಷ್ಟು ಕೋಟಿ? ಮುಂದೆ ಓದಿ....

   
 
ಹೆಲ್ತ್