Back
Home » ಸೌಂದರ್ಯ
ಟಿಬೆಟ್‌ನ ಔಷಧೀಯ ಕ್ರಮದಿಂದ ಕೂದಲು ಉದುರುವಿಕೆ, ಬಿಳಿಯಾಗುವುದನ್ನು ತಡೆಯುವುದು ಹೇಗೆ?
Boldsky | 8th Aug, 2019 10:45 AM

ಭಾರತದಲ್ಲಿ ಆಯುರ್ವೇದ, ಚೀನಾದಲ್ಲಿ ಅಲ್ಲಿನ ಪ್ರಾಚೀನ ಔಷಧಿ ಪದ್ದತಿ ಹೀಗೆ ಹಲವಾರು ಕಡೆಗಳಲ್ಲಿ ಪುರಾತನವಾದ ವೈದ್ಯಕೀಯ ಪದ್ಧತಿಗಳಿವೆ. ನಿಜವಾಗಿಯೂ ಇದು ತುಂಬಾ ಪರಿಣಾಮಕಾರಿ ಹಾಗೂ ದೇಹಕ್ಕೆ ಯಾವುದೇ ಅಡ್ಡಪರಿಣಾಮ ಕೂಡ ಉಂಟು ಮಾಡುವುದಿಲ್ಲ. ಭಾರತ ಹಾಗೂ ಚೀನಾದಂತೆ ಟಿಬೆಟ್ ನಲ್ಲೂ ಕೂಡ ತನ್ನದೇ ಆದ ವೈದ್ಯಕೀಯ ಪದ್ಧತಿ ಎನ್ನುವುದು ಇದೆ. ಅಲ್ಲಿನ ವೈದ್ಯಕೀಯ ಪದ್ಧತಿಯನ್ನು ಅನುಸರಿಸಿಕೊಂಡು ಹೋದರೆ ಕೂದಲು ಉದುರುವಿಕೆ ಸಮಸ್ಯೆ ಹಾಗೂ ಅಕಾಲಿಕವಾಗಿ ಕೂದಲು ಬಿಳಿಯಾಗುವುದನ್ನು ತಡೆಯಬಹುದು.

ಯಾಕೆಂದರೆ ಇವೆರಡು ಇಂದಿನ ದಿನಗಳಲ್ಲಿ ಮಹಿಳೆಯರು ಹಾಗೂ ಪುರುಷರನ್ನು ಅತಿಯಾಗಿ ಕಾಡುವ ಸಮಸ್ಯೆಯಾಗಿದೆ. ಕೆಟ್ಟ ಜೀವನಶೈಲಿ, ಹೊರಗಿನ ಕಲುಷಿತ ವಾತಾವರಣ ಇತ್ಯಾದಿಗಳು ಅಕಾಲಿಕವಾಗಿ ಕೂದಲು ಬಿಳಿಯಾಗಲು ಮತ್ತು ಕೂದಲು ಉದುರುವಿಕೆ ಸಮಸ್ಯೆ ಉಂಟು ಮಾಡುವುದು. ಇದಕ್ಕಾಗಿ ನೀವು ಇದುವರೆಗೆ ಹಲವಾರು ರೀತಿಯ ಉತ್ಪನ್ನಗಳನ್ನು ಬಳಕೆ ಮಾಡಿಕೊಂಡಿರಬಹುದು. ಆದರೆ ಟಿಬೆಟ್ ನ ಔಷಧೀಯ ಕ್ರಮವನ್ನು ಬಳಸಿಕೊಂಡು ಕೂದಲು ಉದುರುವಿಕೆ ಮತ್ತು ಅಕಾಲಿಕವಾಗಿ ಬಿಳಿಯಾಗುವ ಸಮಸ್ಯೆ ನಿವಾರಣೆ ಮಾಡಿಕೊಳ್ಳಿ. ದಿನಕ್ಕೆ ನೂರು ಕೂದಲು ಉದುರುವುದು ಆರೋಗ್ಯಕಾರಿ ಎಂದು ಪರಿಗಣಿಸಲಾಗಿದೆ. ಆದರೆ ಇದರ ಅರ್ಧದಷ್ಟು ಕೂದಲು ಉದುರಿದರೂ ಅದು ನಮಗೆ ಚಿಂತೆಯನ್ನು ಉಂಟು ಮಾಡುವುದು. ಕೂದಲು ಉದುರುವಿಕೆ ಸಮಸ್ಯೆಗೆ ಹಲವಾರು ಕಾರಣಗಳು ಇದೆ.

ಇದರಲ್ಲಿ ಮುಖ್ಯವಾಗಿ ಆಹಾರ ಕ್ರಮ, ಖನಿಜಾಂಶದ ಕೊರತೆ, ಔಷಧ, ಒತ್ತಡ, ಮಾಲಿನ್ಯ ಮತ್ತು ಅನುವಂಶೀಯತೆಯ. ಟೋಪಿ ಅಥವಾ ಹೆಲ್ಮೆಟ್ ಧರಿಸಿದರೂ ಅದರಿಂದ ಕೂದಲು ಉದುರುವಿಕೆ ಉಂಟಾಗುವುದು. ಕೂದಲು ಉದುರುವಿಕೆ ಸಮಸ್ಯೆ ನಿವಾರಣೆ ಮಾಡಿ, ದಪ್ಪ ಹಾಗೂ ಕಾಂತಿಯುತ ಕೂದಲನ್ನು ಪಡೆಯಲು ನೀವು ಟಿಬೆಟ್ ನವರ ತಂತ್ರವನ್ನು ಅಳವಡಿಸಿಕೊಳ್ಳಿ. ಇದು ಪುರುಷರಿಗೆ ತುಂಬಾ ಪರಿಣಾಮಕಾರಿ ಮತ್ತು ಬೋಳು ತಲೆ ಸಮಸ್ಯೆಯನ್ನು ನಿವಾರಣೆ ಮಾಡುವುದು.

ಟಿಬೆಟ್ ನ ಈ ಔಷಧಿಗಳು ಕೂದಲು ಉದುರುವಿಕೆ ತಡೆಯುವುದು

ಟಿಬೆಟ್ ನವರು ಯಾವಾಗಲೂ ದಪ್ಪ ಹಾಗೂ ಉದ್ದ ಕೂದಲು ಹೊಂದಿರುವರು. ಇದಕ್ಕಾಗಿ ಅವರು ಹಲವಾರು ರೀತಿಯ ಗಿಡಮೂಲಿಕೆಗಳನ್ನು ಬಳಸಿಕೊಂಡು ಅದರಿಂದ ಔಷಧಿ ತಯಾರಿಸಿಕೊಳ್ಳುವರು. ಡಾರ್ಡ್ ಗಳು(ಅಮರ್ ಬೆಲ್), ನೆಲ್ಲಿಕಾಯಿ, ರಿತಾ, ರತನ್ ಜೋತ್ ಮತ್ತು ಶಿಕಾಕಾಯಿ. ಇದೆಲ್ಲವನ್ನು ಸಾಸಿವೆ ಎಣ್ಣೆಯ ಜತೆಗೆ ಮಿಶ್ರಣ ಮಾಡಲಾಗುತ್ತದೆ. ಇದನ್ನು ನಿಯಮಿತವಾಗಿ ಬಳಕೆ ಮಾಡುವ ಪರಿಣಾವಾಗಿ ಕೂದಲಿನ ಕಿರುಚೀಲಗಳು ಬಲಗೊಳ್ಳುವುದು ಮತ್ತು ಅಕಾಲಿಕವಾಗಿ ಕೂದಲು ಬಿಳಿಯಾಗುವುದನ್ನು ತಪ್ಪಿಸುವುದು.

ಟಿಬೆಟ್ ನ ವಿಧಾನವನ್ನು ಬಳಸಿಕೊಳ್ಳುವುದು ಹೇಗೆ?

*ಅಮರ್ ಬೆಲ್, ರಿತಾ, ರತನ್ ಜೋತ್ ಮತ್ತು ಶಿಕಾಕಾಯಿ ತೆಗೆದುಕೊಳ್ಳಿ. ಎಲ್ಲವನ್ನು 25 ಗ್ರಾಂ ಸಮ ಪ್ರಮಾಣದಲ್ಲಿ ತೆಗೆದುಕೊಳ್ಳಿ. ಇದೆಲ್ಲವನ್ನು ನೀವು ಅಂಗಡಿಯಿಂದ ಖರೀದಿಸಬಹುದು. ಆದರೆ ಇದನ್ನು ಯಾವಾಗ ಪ್ಯಾಕ್ ಮಾಡಿದ್ದಾರೆ ಎನ್ನುವ ದಿನಾಂಕ ನೋಡಲು ಮರೆಯಬೇಡಿ.

*ಇದೆಲ್ಲವನ್ನು ಸರಿಯಾಗಿ ತೊಳೆದುಕೊಂಡು ಒಣಗಲು ಬಿಡಿ. ಇದು ಒಣಗಿದ ಬಳಿಕ ಸರಿಯಾಗಿ ಹುಡಿ ಮಾಡಿಕೊಳ್ಳಿ ಮತ್ತು ಅದರಲ್ಲಿ ಉಳಿದ ಎಸಲುಗಳನ್ನು ತೆಗೆದು ಬೇರ್ಪಡಿಸಿಕೊಳ್ಳಿ.

*ಈ ಹುಡಿ ಸಿದ್ದಗೊಂಡ ಬಳಿಕ ಇದಕ್ಕೆ ಸಾಸಿವೆ ಎಣ್ಣೆ ಹಾಕಿಕೊಂಡು ಮಿಶ್ರಣ ಮಾಡಿಕೊಳ್ಳಿ ಮತ್ತು ಕೆಲವು ದಿನಗಳ ಕಾಲ ಒಂದು ಡಬ್ಬಲದಲ್ಲಿ ಹಾಕಿ ಹಾಗೆ ಬಿಡಿ. ಈ ಎಣ್ಣೆಯ ಬಣ್ಣವು ಈಗ ಕೆಂಪಾಗುವುದನ್ನು ನೀವು ಕಾಣಬಹುದು.

*ಹುಡಿಯು ಕೆಳಭಾಗದಲ್ಲಿ ನಿಲ್ಲುವುದು ಮತ್ತು ಎಣ್ಣೆಯು ಮೇಲಿನ ಭಾಗದಲ್ಲಿ ಇರುತ್ತದೆ. ಈಗ ನೀವು ಎಣ್ಣೆ ಬಳಕೆ ಮಾಡಬಹುದು.

ಇದನ್ನು ಯಾವಾಗ ಮತ್ತು ಹೇಗೆ ಪ್ರಯೋಗ ಮಾಡಬೇಕು?

*ಮೂರು ದಿನಕ್ಕೊಮ್ಮೆ ನೀವು ಟಿಬೆಟ್ ನ ಈ ಔಷಧಿ ಬಳಕೆ ಮಾಡಬೇಕು.

*ತಲೆಬುರುಡೆಗೆ ಈ ಎಣ್ಣೆಯನ್ನು ಸರಿಯಾಗಿ ಮಸಾಜ್ ಮಾಡಿಕೊಳ್ಳಿ ಮತ್ತು ಇದರ ಬಳಿಕ ಕೂದಲನ್ನು ತೊಳೆಯುವ ತನಕ ಸರಿಯಾಗಿ ಮುಚ್ಚಿಕೊಳ್ಳಿ.

*ಕೂದಲಿಗೆ ಈ ಎಣ್ಣೆ ಮಸಾಜ್ ಮಾಡಿಕೊಳ್ಳುವ ಕಾರಣದಿಂದಾಗಿ ಇದು ರಕ್ತ ಸಂಚಾರ ಉತ್ತಮಪಡಿಸುವುದು, ಕೂದಲು ಉದುರುವಿಕೆ ಕಡಿಮೆ ಮಾಡುವುದು ಮತ್ತು ಸಂಪೂರ್ಣ ಪೋಷಣೆ ನೀಡುವುದು.

*ರಾತ್ರಿ ವೇಳೆ ನೀವು ಮಸಾಜ್ ಮಾಡಿಕೊಂಡ ಬಳಿಕ ಶಾಂಪೂ ಬಳಸಿಕೊಂಡು ಕೂದಲು ತೊಳೆಯಿರಿ ಅಥವಾ ಲಘು ಶಾಂಪೂ ಹಾಕಿಕೊಂಡು ಮರುದಿನ ಬೆಳಗ್ಗೆ ಕೂದಲು ತೊಳೆಯಿರಿ.

ಕೂದಲು ತುಂಡಾಗುವುದನ್ನು ತಡೆಯುವುದು

ನೈಸರ್ಗಿಕ ಮದ್ದಿನೊಂದಿಗೆ ಕೆಲವೊಂದು ವಿಧಾನಗಳನ್ನು ಅನುಸರಿಸಿಕೊಂಡು ಹೋದರೆ ಕೂದಲು ಉದುರುವಿಕೆ ತಡೆಯಬಹುದು.

ನಿಯಮಿತ ವ್ಯಾಯಾಮ ಮತ್ತು ಯೋಗದಿಂದ ಕೂದಲು ಬೆಳೆಯುವುದು.

ಕೂದಲಿನ ಸರಿಯಾದ ಆರೈಕೆಗೆ ಪ್ರೋಟೀನ್ ಅಧಿಕವಿರುವ ಆಹಾರ ಸೇವಿಸಿ.

ಹಣ್ಣುಗಳು ಮತ್ತು ಹಸಿರೆಲೆ ತರಕಾರಿಗಳನ್ನು ಸೇವಿಸಿ.

ಯಾವಾಗಲೂ ದೇಹವನ್ನು ತೇವಾಂಶದಿಂದ ಇಟ್ಟುಕೊಳ್ಳಿ.

ಒತ್ತಡದಿಂದ ದೂರವಿರಿ.

ಯಾವಾಗಲೂ ಟೋಪಿ ಅಥವಾ ಹೆಲ್ಮೆಟ್ ಧರಿಸುವುದರಿಂದ ದೂರವಿರಿ.

ಸಮಯಕ್ಕೆ ಸರಿಯಾಗಿ ಕೂದಲನ್ನು ಕತ್ತರಿಸಿಕೊಳ್ಳಿ.

ಪ್ರತಿನಿತ್ಯ ತುಂಬಾ ಗಡುಸಾಗಿರುವಂತಹ ಶಾಂಪೂ ಬಳಸಬೇಡಿ.

   
 
ಹೆಲ್ತ್