Back
Home » ಆರೋಗ್ಯ
ಜಿಲ್ಲಾ ಆರೋಗ್ಯ ಅಧಿಕಾರಿಗಳ ವರದಿಯ ಪ್ರಕಾರ ಮಲೇರಿಯಾದ 8 ಹೊಸ ಪ್ರಕರಣಗಳು ಪತ್ತೆಯಾಗಿವೆಯಂತೆ!
Boldsky | 9th Aug, 2019 12:00 PM

ಮಳೆಗಾಲ ಆರಂಭವಾಗುತ್ತಲಿದ್ದಂತೆ ಹಲವಾರು ರೀತಿಯ ಜ್ವರಗಳು ನಮ್ಮನ್ನು ಕಾಡಲು ಆರಂಭಿಸಲಾಗುತ್ತದೆ. ಅದರಲ್ಲೂ ಮುಖ್ಯವಾಗಿ ಮಲೇರಿಯಾ, ಡೆಂಘಿಯಂತಹ ಮಾರಕ ಜ್ವರಗಳು ಕಾಡಿದರೆ ಆಗ ದೇಹವನ್ನು ಸಂಪೂರ್ಣವಾಗಿ ಹಿಂಡಿ ಹಿಪ್ಪೆ ಮಾಡುವುದು. ಮಲೇರಿಯಾ ಮತ್ತು ಡೆಂಘಿಯಂತಹ ಜ್ವರ ಬರುವುದನ್ನು ತಡೆಯಲು ನಮ್ಮ ಸುತ್ತಮುತ್ತಲಿನ ಪರಿಸರವನ್ನು ತುಂಬಾ ನೈರ್ಮಲ್ಯವಾಗಿ ಇಟ್ಟುಕೊಳ್ಳಬೇಕು. ನೀರು ನಿಂತಲ್ಲಿ ಅದು ಸೊಳ್ಳೆಗಳ ಸಂತಾನೋತ್ಪತ್ತಿಗೆ ಆವಾಸಸ್ಥಾನವಾಗುವುದು.

ಮಲೇರಿಯಾದ ಪ್ರಕರಣಗಳು

ವಜೀರ್ ಬಾದ್ ಮತ್ತು ಪಟೌಡಿಯಲ್ಲಿ ಕಳೆದ ಕೆಲವು ದಿನಗಳಿಂದ ಎಂಟು ಮಲೇರಿಯಾ ಪ್ರಕರಣಗಳು ಪತ್ತೆಯಾಗಿದೆ. ಅದರಲ್ಲೂ ಇದು 30-40ರ ಹರೆಯದವರಲ್ಲಿ ಹೆಚ್ಚಾಗಿ ಕಾನಿಸಿಕೊಂಡಿದೆ. ಇದಕ್ಕೆ ಪ್ರಮುಖ ಕಾರಣ ಪ್ಲಾಸ್ಮೋಡಿಯಂ ಜಾತಿಗೆ ಸೇರಿದ ಸೊಳ್ಳೆಗಳ ಕಡಿತ ಎಂದು ಜಿಲ್ಲೆಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಮಲೇರಿಯಾ ಪ್ರಕರಣಗಳು

ಜಿಲ್ಲೆಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಲೇರಿಯಾದ ಕೆಲವು ಹೊಸ ಪ್ರಕರಣಗಳನ್ನು ಕಂಡುಹಿಡಿದಿದ್ದಾರೆ. ಸುಮಾರು ಎಂಟು ಪ್ರಕರಣಗಳು ದಾಖಲಾಗಿದೆ. ಇದರಿಂದ ಸೊಳ್ಳೆಯಿಂದ ಬರುವಂತಹ ಈ ಕಾಯಿಲೆಯ ಪ್ರಕರಣವು 15ಕ್ಕೇರಿದೆ.(ಇದು ಮೇ ಬಳಿಕ ಇಲ್ಲಿ ತನಕದ ಅಂಕಿಅಂಶವಾಗಿದೆ) ಎಂಟು ಪ್ರಕರಣಗಳನ್ನು ಈ ಪ್ರದೇಶಗಳಿಂದ ಪತ್ತೆ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ.

ವಜೀರ್ ಬಾದ್ ಮತ್ತು ಪಟೌಡಿಯಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿದೆ. ಇದರಲ್ಲಿ ಅಚ್ಚರಿಗೀಡು ಮಾಡುವಂತಹ ವಿಚಾರವೆಂದರೆ ಮಲೇರಿಯಾ ಬಾಧಿತರಲ್ಲಿ ಹೆಚ್ಚಿನವರು 30-40ರ ಹರೆಯದವರು. ಪ್ಲಾಸ್ಮೋಟಿಯಂ ವಿವಾಕ್ಸ್ ಅಥವಾ ಮಲೇರಿಯಾ ಪರಾವಲಂಬಿ ಎಂದು ಕೂಡ ಇದನ್ನು ಕರೆಯಲಾಗುತ್ತದೆ. ಮಲೇರಿಯಾ ರೋಗ ಹರಡುವಲ್ಲಿ ಪ್ಲಾಸ್ಮೋಡಿಯಂ ವಿವಾಕ್ಸ್ ಹೆಚ್ಚು ಭಾಗಿಯಾಗಿದೆ ಎಂದು ಹೇಳಲಾಗುತ್ತದೆ.

ಆದರೆ ಮಲೇರಿಯಾ ಹೆಚ್ಚಾಗಿ ಪತ್ತೆಯಾಗಿರುವಂತಹ ಜಿಲ್ಲೆಗಳಲ್ಲಿ ಇದುವರೆಗೆ ಯಾವುದೇ ಸಾವಿನ ಬಗ್ಗೆ ವರದಿಯಾಗದೆ ಇರುವುದು ಒಳ್ಳೆಯ ವಿಚಾರ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷದಲ್ಲಿ ಆಗಸ್ಟ್ ತನಕ ಮಲೇರಿಯಾ ಪ್ರಕರಣಗಳು ಹೆಚ್ಚು ಪತ್ತೆಯಾಗಿದೆ.

ಕಳೆದ ವರ್ಷ ಜಿಲ್ಲೆಯಲ್ಲಿ ಕೇವಲ 30 ಪ್ರಕರಣಗಳು ಮಾತ್ರ ಪತ್ತೆಯಾಗಿದ್ದವು. ಅದಾಗ್ಯೂ, ಆಗಸ್ಟ್ ತನಕ ಮಲೇರಿಯಾ ಎಂದು ದೃಢಪಟ್ಟಿರುವುದು 5 ಪ್ರಕರಗಣಳು ಮಾತ್ರ. ಆದರೆ ಇಲ್ಲಿಯವರೆಗೆ ಡೆಂಘಿ ಪ್ರಕರಣಗಳು ಪತ್ತೆಯಾಗಿಲ್ಲ. (ಆರೋಗ್ಯ ಇಲಾಖೆ ಪ್ರಕಾರ ಸುಮಾರು 25 ಡೆಂಘಿ ಇರುವ ಸಂಶಯಿತ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ)

ಯಾವುದೇ ಪ್ರದೇಶದಲ್ಲಿ ಮಲೇರಿಯಾ ಪ್ರಕರಣವು ಪತ್ತೆಯಾದರೆ ಆಗ ಅಲ್ಲಿನ ಸುತ್ತಮುತ್ತಲಿನ ಜನರ ರಕ್ತ ಮಾದರಿಯನ್ನು ತೆಗೆದುಕೊಳ್ಳಲಾಗುತ್ತದೆ. ಇದರ ಬಳಿಕ ಅದನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುತ್ತದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಜಿಲ್ಲಾ ಸಾಂಕ್ರಾಮಿಕ ರೋಗ ತಜ್ಞ ಡಾ. ರಾಮ್ ಪ್ರಕಾಶ್ ರೈ ಹೇಳುವ ಪ್ರಕಾರ, 2019ರಲ್ಲಿ ಸರ್ವೇಕ್ಷಣಾ ತಂಡದಲ್ಲಿ ಇರುವ ಉದ್ಯೋಗಿಗಳ ಸಂಖ್ಯೆಯನ್ನು 60ಕ್ಕೆ ಏರಿಸಲಾಗಿದೆ. ಲಾರ್ವಾ ನಾಶ ಮಾಡುವ ಮತ್ತು ಫಾಗಿಂಗ್ ಮಾಡುವಂತಹ ಕೆಲಸಗಳು ನಡೆಯುತ್ತಲಿದೆ ಎಂದು ಅವರು ಹೇಳಿದರು.

ಸೊಳ್ಳೆಗಳು ಸಂತಾನೋತ್ಪತ್ತಿ ಮಾಡುವಂತಹ ತಾಣಗಳ ಬಗ್ಗೆ ಎಂಸಿಜಿ ನಡೆಸಿದ ಸಮೀಕ್ಷೆ ಪ್ರಕಾರ ಐದು ಸಾವಿರದಲ್ಲಿ ನಾಲ್ಕು ಸಾವಿರ ಮನೆಗಳಲ್ಲಿ ಸೊಳ್ಳೆ ಉತ್ಪತ್ತಿ ತಾಣಗಳು ಪತ್ತೆಯಾಗಿದೆ ಎಂದು ಹೇಳಲಾಗಿದೆ. ಇದರಲ್ಲಿ ಹೆಚ್ಚಾಗಿ ಹೆಣ್ಣು ಅನಾಫಿಲೀಸ್ ಸೊಳ್ಳೆಯು ಮಲೇರಿಯಾ ಹರಡುತ್ತದೆ.

 
ಹೆಲ್ತ್