Back
Home » ಆರೋಗ್ಯ
ಶೀತ ಮತ್ತು ಕೆಮ್ಮಿಗೆ ಈರುಳ್ಳಿ ರಸದ ಚಿಕಿತ್ಸೆ ಪ್ರಯತ್ನಿಸಿ!
Boldsky | 9th Aug, 2019 05:42 PM

ಕೆಮ್ಮಿನ ಸಮಸ್ಯೆಯಿದ್ದರೆ ಆಗ ಅದು ಇನ್ನಿಲ್ಲದಂತೆ ದೇಹವನ್ನು ಹಿಂಡೆ ಹಿಪ್ಪೆ ಮಾಡಿ ಬಿಡುತ್ತೆ. ಯಾಕೆಂದರೆ ಕೆಮ್ಮು ಶುರುವಾದರೆ ಅದು ಮತ್ತೆ ನಿಲ್ಲುವ ತನಕ ಯಾವುದೇ ಕೆಲಸ ಕಾರ್ಯಗಳನ್ನು ಮಾಡಲು ಸಾಧ್ಯವಿಲ್ಲ. ಇಷ್ಟು ಮಾತ್ರವಲ್ಲದೆ ಮಾತನಾಡಲು ಕೂಡ ಕಷ್ಟಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗುವುದು. ಬದಲಾಗುತ್ತಿರುವಂತಹ ಹವಾಮಾನದಲ್ಲಿ ಕೆಮ್ಮು ಪದೇ ಪದೇ ಕಾಡುವುದು.

ಇಂತಹ ಪರಿಸ್ಥಿತಿಯಲ್ಲಿ ಕೆಮ್ಮಿಗೆ ಸಿರಫ್ ತೆಗೆದುಕೊಳ್ಳುವರು. ಆದರೆ ಇದರಲ್ಲಿ ನಿದ್ರೆಯ ಅಂಶವಿರುವ ಕಾರಣದಿಂದಾಗಿ ವ್ಯಕ್ತಿಯು ತುಂಬಾ ಆಲಸಿ ಹಾಗೂ ಚಟುವಟಿಕೆ ಇಲ್ಲದೆ ವರ್ತಿಸುವನು. ದೀರ್ಘಕಾಲದ ಕೆಮ್ಮು ಮತ್ತು ಶೀತಕ್ಕಾಗಿ ಔಷಧಿಯ ಮೇಲೆ ಹೊಂದಿಕೊಳ್ಳುವುದು ಕಷ್ಟವಾಗುವುದು. ಸಾಮಾನ್ಯ ಶೀತಕ್ಕೂ ತೆಗೆದುಕೊಳ್ಳುವಂತಹ ಔಷಧಿಯಿಂದ ತಲೆ ಭಾರವಾದ ಪರಿಸ್ಥಿತಿ ಬರಬಹುದು.

ಸಾಮಾನ್ಯ ಶೀತದ ಲಕ್ಷಣಗಳನ್ನು ನಿವಾರಣೆ ಮಾಡಲು ಚೀನಾ ಮತ್ತು ಅಮೆರಿಕಾದಲ್ಲಿ ಕೆಲವೊಂದು ಪರ್ಯಾಯ ಮಾರ್ಗವನ್ನು ಹುಡುಕಿಕೊಂಡಿರುವರು. ಇದರಲ್ಲಿ ಮುಖ್ಯವಾಗಿ ಈರುಳ್ಳಿ ಬಳಕೆ ಮಾಡುವರು. ಈ ಸರಳ ಮದ್ದು ಶೀತ ಮತ್ತು ಕೆಮ್ಮನ್ನು ನಿವಾರಣೆ ಮಾಡುವುದು. ಅದೇ ರೀತಿಯಾಗಿ ಶೀತದಿಂದ ಉಂಟಾಗುವಂತಹ ಕಿರಿಕಿರಿ ನಿವಾರಣೆ ಮಾಡುವುದು. ಈರುಳ್ಳಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇದ್ದು, ಇದರಿಂದ ಉರಿಯೂತ ಕಡಿಮೆ ಆಗುವುದು ಮತ್ತು ಎದೆಯಲ್ಲಿ ಕಟ್ಟಿರುವಂತಹ ಕಫವು ನಿವಾರಣೆ ಆಗುವುದು. ಈ ಮನೆಮದ್ದು ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿರುವಂತವರಿಗೆ ತುಂಬಾ ಪರಿಣಾಮಕಾರಿಯಾಗಿ ಸಾಬೀತಾಗಿದೆ.

ಈರುಳ್ಳಿ ನೀರಿನ ಮನೆಮದ್ದು

ಇದು ಸ್ವಲ್ಪ ಮಟ್ಟಿಗೆ ವಿಚಿತ್ರವಾಗಿ ಕಾಣಿಸಬಹುದು. ಅದರೆ ಈರುಳ್ಳಿ ನೀರು ಕೆಮ್ಮು ಮತ್ತು ಶೀತ ನಿವಾರಣೆ ಮಾಡುವಲ್ಲಿ ತುಂಬಾ ಪರಿಣಾಮಕಾರಿಯಾಗಿ ವರ್ತಿಸುವುದು. ಈರುಳ್ಳಿಯನ್ನು ಅಡುಗೆ ರುಚಿ ಹೆಚ್ಚಿಸಲು ಮಾತ್ರ ಬಳಕೆ ಮಾಡಬಹುದು ಎಂದು ನೀವು ಆಲೋಚಿಸಿದ್ದರೆ ಖಂಡಿತವಾಗಿಯೂ ತಪ್ಪು. ಇದರಿಂದ ಇನ್ನಿತರ ಹಲವಾರು ಲಾಭಗಳು ಇವೆ. ಈರುಳ್ಳಿ ನೀರು ಎಂದರೆ ನೀರಿನಲ್ಲಿ ಈರುಳ್ಳಿಯನ್ನು ನೆನೆಸಿರುವುದು. ಈ ನೀರನ್ನು ಕುಡಿದರೆ ಅದರಿಂದ ದೇಹವು ಉಲ್ಲಾಸಿತ ಮತ್ತು ಪುನರ್ಶ್ಚೇತನ ಪಡೆಯುವುದು. ಮಳೆಗಾಲದಲ್ಲಿ ಕಾಡುವಂತಹ ಹಲವಾರು ರೀತಿಯ ವೈರಲ್ ಸಮಸ್ಯೆಗಳಿಂದ ಇದು ಪರಿಹಾರ ನೀಡುವುದು.

ಈರುಳ್ಳಿ ನೀರನ್ನು ತಯಾರಿಸಿಕೊಳ್ಳಲು ಇಲ್ಲಿ ಸರಳ ವಿಧಾನ ಇವೆ ಮತ್ತು ಇದನ್ನು ನೀವು 2-3 ದಿನಗಳ ಕಾಲ ಫ್ರಿಡ್ಜ್ ನಲ್ಲಿ ಇಡಬಹುದಾಗಿದೆ.

•ಒಂದು ಈರುಳ್ಳಿಯನ್ನು ಸಣ್ಣ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ.

•ಒಂದು ಪಿಂಗಾಣಿ ತೆಗೆದುಕೊಂಡು ಅದಕ್ಕೆ ನೀರು ಹಾಕಿ ಮತ್ತು ಈರುಳ್ಳಿ ತುಂಡುಗಳನ್ನು ಸೇರಿಸಿ.

•ಪಿಂಗಾಣಿಯಲ್ಲಿ ಇರುವಂತಹ ನೀರಿನಲ್ಲಿ ಈರುಳ್ಳಿಯು ಸುಮಾರು 6-8 ಗಂಟೆಗಳ ಕಾಲ ಹಾಗೆ ನೆನೆಯಲಿ.

•ಇದು ತಯಾರಾದ ಬಳಿಕ ನೀವು ದಿನದಲ್ಲಿ ಎರಡು ಚಮಚ ನೀರು ಸೇವಿಸಿ. ಇದು ಮಕ್ಕಳಿಗೂ ಕೊಡಬಹುದು. ಆದರೆ ಪ್ರಮಾಣ ಕಡಿಮೆ ಮಾಡಿ.

•ರುಚಿ ಬೇಕಿದ್ದರೆ ಸ್ವಲ್ಪ ಮಟ್ಟಿಗೆ ಜೇನುತುಪ್ಪ ಹಾಕಿಕೊಂಡು ಸೇವಿಸಿ. ಇದರಿಂದ ರಿಯೂತ ಶಮನಕಾರಿ ಗುಣವು ಇದರಲ್ಲಿ ಮತ್ತಷ್ಟು ಹೆಚ್ಚಾಗುವುದು.

ಈರುಳ್ಳಿ ನೀರಿನ ಲಾಭಗಳು

ಈರುಳ್ಳಿಯಲ್ಲಿ ಉನ್ನತ ಮಟ್ಟದ ಆಂಟಿ ಆಕ್ಸಿಡೆಂಟ್ ಮತ್ತು ಉರಿಯೂತ ಶಮನಕಾರಿ ಗುಣಗಳು ಇದೆ ಎಂದು ಪರಿಗಣಿಸಲಾಗಿದೆ. ಇದರಿಂದ ಶೀತ ಮತ್ತು ಕೆಮ್ಮಿನಿಂದ ಮೂಗು ಕಟ್ಟಿರುವುದು ನಿವಾರಣೆ ಆಗುವುದು. ಕೆಂಪು ಅಥವಾ ಬಿಳಿ ಈರುಳ್ಳಿಯಲ್ಲಿ ಉನ್ನತ ಮಟ್ಟ ಔಷಧೀಯ ಗುಣಗಳು ಇವೆ. ಇದರಿಂದ ವೈರಲ್ ಸೋಂಕಿನ ವಿರುದ್ಧ ಹೋರಾಡಬಹುದು. ಈರುಯಲ್ಲಿ ಉನ್ನತ ಮಟ್ಟದ ರಾಸಾಯನಿಕವಾಗಿರುವಂತಹ ಥಿಯೋಸಲ್ಫೇಟ್ ಗಳು, ಸಲ್ಫೈಡ್ ಗಳು ಮತ್ತು ಸಲ್ಫಾಕ್ಸೈಡ್ ಗಳು ಇವೆ. ಈ ರಾಸಾಯನಿಕಗಳೊಂದಿಗೆ ಈರುಳ್ಳಿಯಲ್ಲಿ ಇರುವಂತಹ ವೈರಲ್ ವಿರೋಧಿ ಗುಣಗಳು ಈರುಳ್ಳೀಗೆ ಖಾರದ ಗುಣ ನೀಡುವುದು.

ಈರುಳ್ಳಿಯಲ್ಲಿ ಇರುವಂತಹ ಔಷಧೀಯ ಗುಣಗಳು ಶೀತ ಮತ್ತು ಕೆಮ್ಮು ಉಂಟು ಮಾಡುವಂತಹ ವೈರಸ್ ನಿಂದ ಶಮನ ನೀಡುವುದು. ಈರುಳ್ಳಿ ರಸವು ಅತ್ಯಾದ್ಭುತವಾದ ಸೂಕ್ಷ್ಮಾಣು ವಿರೋಧಿ ಗುಣಗಳನ್ನು ಹೊಂದಿದೆ. ಇದು ವಾಯುನಾಳದಲ್ಲಿ ತುಂಬಿರುವಂತಹ ಕಫವನ್ನು ಹೊರಗೆ ಹಾಕುವುದು ಮತ್ತು ಶ್ವಾಸಕೋಶವನ್ನು ವಿಷಕಾರಿ ಅಂಶದಿಂದ ಮುಕ್ತಗೊಳಿಸುವುದು. ಈರುಳ್ಳಿ ನೀರು ಪ್ರತಿರೋಧಕ ವ್ಯವಸ್ಥೆಯನ್ನು ಉತ್ತಮಪಡಿಸುವುದು. ದೇಹದಲ್ಲಿ ನೀರಿನ ಮಟ್ಟವನ್ನು ಕಾಪಾಡಿಕೊಂಡು ಯಾವುದೇ ರೋಗ ಮತ್ತು ವೈರಲ್ ಸೋಂಕಿನಿಂದ ರಕ್ಷಣೆ ನೀಡುವುದು.

ಸರಿಯಾದ ರೀತಿಯ ಈರುಳ್ಳಿ ನೀರನ್ನು ಮುಚ್ಚಿಟ್ಟುಕೊಳ್ಳಿ. ನೀರಿಗೆ ಸರಿಯಾಗಿ ಮುಚ್ಚಳ ಇಡದೇ ಇದ್ದರೆ ಆಗ ಅದರಲ್ಲಿ ಬ್ಯಾಕ್ಟೀರಿಯಾ ನಿಲ್ಲುವುದು. ಯಾವಾಗಲೂ ತಾಜಾ ಈರುಳ್ಳಿಯನ್ನು ಕತ್ತರಿಸಿಕೊಂಡು ಅದರ ನೀರು ತಯಾರಿಸಿಕೊಳ್ಳಿ. ಸಂಸ್ಕರಿಸಿದ ಅಥವಾ ಮೊದಲೇ ಕತ್ತರಿಸಿಕೊಂಡು ಇಟ್ಟಿರುವಂತಹ ಈರುಳ್ಳಿಯನ್ನು ನೀವು ಇದಕ್ಕೆ ಬಳಕೆ ಮಾಡಬೇಡಿ. ಇದು ಈರುಳ್ಳಿಯಲ್ಲಿರುವ ಔಷಧೀಯ ಗುಣವನ್ನು ನಾಶ ಮಾಡುವುದು. ಈರುಳ್ಳಿ ನೀರನ್ನು ತಯಾರಿಸಿಕೊಂಡ ಬಳಿಕ ಅದನ್ನು ತಕ್ಷಣವೇ ಮುಚ್ಚಳ ಮುಚ್ಚಿದ ಪಾತ್ರೆಯಲ್ಲಿ ಹಾಕಿಡಿ.

 
ಹೆಲ್ತ್