Back
Home » Business
ಶಾಪಿಂಗ್ ಪ್ರಿಯರ ಗಮನಕ್ಕೆ! Lifestyle ಜೊತೆ ಕೈ ಜೋಡಿಸಿದ Flipkart
Good Returns | 10th Aug, 2019 09:52 AM
 • 2 ವರ್ಷಗಳಲ್ಲಿ 100 ಮಳಿಗೆ ಹೊಂದುವ ಗುರಿ

  ಮುಂದಿನ ಎರಡು ವರ್ಷಗಳಲ್ಲಿ 100 ಮಳಿಗೆಗಳನ್ನು ಹೊಂದುವ ಗುರಿ ಹೊಂದಿದೆ. ಫ್ಲಿಪ್ ಕಾರ್ಟ್ ನ ಅತ್ಯುತ್ತಮ ಗುಣಮಟ್ಟದ ಗ್ರಾಹಕರ ಅನುಭವ ಸೃಷ್ಟಿಸುವ ಸಾಮರ್ಥ್ಯ ಹಾಗೂ ಅದರ ವಿಸ್ತರಣೆಯ ವ್ಯಾಪ್ತಿಯನ್ನು ಗಮನಿಸಿ ಲೈಫ್ ಸ್ಟೈಲ್ ಇದನ್ನು ಪಾಲುದಾರರನ್ನಾಗಿ ಆಯ್ಕೆ ಮಾಡಿಕೊಂಡಿದೆ. ಇದರಿಂದ ಮಹಿಳೆಯರ ಸಾಂಪ್ರದಾಯಿಕ ಉಡುಗೆ, ಮಕ್ಕಳ ಉಡುಗೆ ಹಾಗೂ ಪುರುಷರ ಫಾರ್ಮಲ್ ಉಡುಗೆಗಳ ಕ್ಷೇತ್ರದಲ್ಲಿ ಇನ್ನಷ್ಟು ಹೊಸತನ್ನು ತರುವ ಫ್ಲಿಪ್ ಕಾರ್ಟ್ ಯೋಜನೆಗೂ ಈ ನಡೆ ಸಹಕಾರಿಯಾಗಲಿದೆ. ಇದರಿಂದ ಗ್ರಾಹಕರಿಗೆ ಅನಿಯಮಿತ ಖರೀದಿಗೆ ಮಾಡಲು ಹಾಗೂ ಸಂಸ್ಥೆಗಳ ವಿವಿಧ ಕೊಡುಗೆಗಳನ್ನು ಪಡೆಯಲು ಅನುಕೂಲವಾಗಲಿದೆ.


 • ಫ್ಲಿಪ್ ಕಾರ್ಟ್ ಎಂಡಿ ವಸಂತ್ ಕುಮಾರ್

  ಫ್ಲಿಪ್ ಕಾರ್ಟ್ ಇಂಟರ್ ನ್ಯಾಷನಲ್ ಪ್ರೈವೇಟ್ ಲಿ. ನ ವ್ಯವಸ್ಥಾಪಕ ನಿರ್ದೇಶಕ ವಸಂತ್ ಕುಮಾರ್, "ಈ ಪಾಲುದಾರಿಕೆಯಿಂದ ಫ್ಲಿಪ್ ಕಾರ್ಟ್ ಸಮೂಹದ ವಿಸ್ತೃತ ಸಂಪರ್ಕ ಹಾಗೂ ಲೈಫ್ ಸ್ಟೈಲ್ ನ ಅತ್ಯುತ್ತಮ ಫ್ಯಾಷನ್ ಕೊಡುಗೆಯನ್ನು ಒಂದುಗೂಡಿಸುತ್ತದೆ. ಇದರಿಂದ ನಮಗೆ ದೇಶಾದ್ಯಂತದ ಬೃಹತ್ ಸಂಖ್ಯೆಯ ಫ್ಯಾಷನ್ ಪ್ರಿಯ ಗ್ರಾಹಕರನ್ನು ಸಂತೃಪ್ತಿಪಡಿಸಲು ಸಾಧ್ಯವಾಗುತ್ತದೆ. ಈ ಪಾಲುದಾರಿಕೆ ನಮ್ಮ ಬ್ರಾಂಡ್ ಗಳನ್ನು ಇನ್ನಷ್ಟು ವೃದ್ಧಿಸಲು ನೆರವಾಗುತ್ತದೆ ಎಂಬ ಭರವಸೆಯಿದೆ" ಎಂದಿದ್ದಾರೆ.


 • ಫ್ಲಿಪ್ ಕಾರ್ಟ್ ಹಿರಿಯ ಉಪಾಧ್ಯಕ್ಷ ರಿಷಿ ವಾಸುದೇವ್

  ಪಾಲುದಾರಿಕೆಯ ಕುರಿತು ಅಭಿಪ್ರಾಯ ಹಂಚಿಕೊಂಡ ಫ್ಯಾಷನ್ ಸಮೂಹದ (ಫ್ಲಿಪ್ ಕಾರ್ಟ್, ಮಿನ್ ತ್ರಾ, ಜಬಾಂಗ್ ) ಹಿರಿಯ ಉಪಾಧ್ಯಕ್ಷ ರಿಷಿ ವಾಸುದೇವ್, "ಫ್ಲಿಪ್ ಕಾರ್ಟ್ ಸಮೂಹದಲ್ಲಿ ನಾವು ಉದ್ಯಮದ ಅತ್ಯುತ್ತಮ ಸಂಸ್ಥೆಯೊಂದಿಗೆ ಪಾಲುದಾರಿಕೆ ಹೊಂದುವುದರಲ್ಲಿ ನಂಬಿಕೆ ಇಡುತ್ತೇವೆ. ಲೈಫ್ ಸ್ಟೈಲ್ ನೊಂದಿಗಿನ ಪಾಲುದಾರಿಕೆಯೊಂದಿಗೆ ಗ್ರಾಹಕರ ಶಾಪಿಂಗ್ ಅನುಭವವನ್ನು ಇನ್ನಷ್ಟು ಮಜವಾಗಿಸುತ್ತದೆ. ದೇಶದ ಪ್ರಮುಖ ಫ್ಯಾಷನ್ ಮಾರಾಟ ಸಂಸ್ಥೆ ಹಾಗೂ ದೇಶದ ಮುಂಚೂಣಿಯಲ್ಲಿರುವ ಮಾರಾಟ ವೇದಿಕೆ ಒಂದಾಗಿರುವುದು ಮಾರುಕಟ್ಟೆ ಮಾತ್ರ ಗ್ರಾಹಕರಿಗೆ ಹೊಸತನ್ನು ನೀಡಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.


 • ಲೈಫ್ ಸ್ಟೈಲ್ ನ ಖಾಸಗಿ ಲೇಬಲ್ ಬ್ರಾಂಡ್

  ಲೈಫ್ ಸ್ಟೈಲ್ ನ ಖಾಸಗಿ ಲೇಬಲ್ ಬ್ರಾಂಡ್ ಪ್ರತಿ ಸಮಾರಂಭ, ಸಂದರ್ಭಗಳಿಗೆ ಗ್ರಾಹಕರಿಗೆ ಅಗತ್ಯ ಉಡುಪುಗಳನ್ನು ನೀಡಲು ಬದ್ಧವಾಗಿದೆ. ಈ ಸಂಸ್ಥೆಯ ಮೆಲಂಗೇ, ಸಾಂಪ್ರದಾಯಿಕ ಉಡುಪು ಅನೇಕ ಖ್ಯಾತ ಸೆಲೆಬ್ರಿಟಿಗಳಿಗೆ ಪ್ರಿಯವಾಗಿದೆ. ಪ್ರಸ್ತುತ ಸ್ಟೈಲ್ ಐಕಾನ್ ತಾಪ್ಸಿ ಪನ್ನು ಕೂಡ ಈ ಉಡುಪನ್ನು ಧರಿಸಿ ಸಂಭ್ರಮಿಸಿದ್ದರು. ಮೆಲಂಗೇ ಸಮಕಾಲೀನ ಸಾಂಪ್ರದಾಯಿಕ ಉಡುಪು ಹಾಗೂ ಆಧುನಿಕ ಭಾರತೀಯ ಮಹಿಳೆಯ ಸಂವೇದನೆಯನ್ನು ಪ್ರತಿಬಿಂಬಿಸುತ್ತದೆ . ಇವರ 'ಜಿಂಜರ್ ' ಎಂಬ ಆಧುನಿಕ ಶೈಲಿಯ ವಸ್ತ್ರಕ್ಕೆ ಯುವತಿಯರಿಗೆ ಹೆಚ್ಚು ಹೊಂದಿಕೆಯಾಗುತ್ತದೆ. ಜೊತೆಗೆ, 'ಫೋರ್ಸಾ' ಡೆನಿಮ್ ಉಡುವು ವಿನ್ಯಾಸಕ್ಕೆ ಬಾಲಿವುಡ್ ಸೂಪರ್ ಸ್ಟಾರ್ ಟೈಗರ್ ಶ್ರಾಫ್ ಪ್ರಚಾರ ನೀಡಿದ್ದರು.
ಬೆಂಗಳೂರು,ಆಗಸ್ಟ್ 10: ಭಾರತದ ಮುಂಚೂಣಿಯ ಫ್ಯಾಷನ್ ಮಾರಾಟಗಾರರಲ್ಲಿ ಒಂದಾದ 'ಲೈಫ್ ಸ್ಟೈಲ್', ಇಂದು ಭಾರತದ ಪ್ರಮುಖ ಇ-ಕಾಮರ್ಸ್ ಮಾರುಕಟ್ಟೆಯಾದ ಫ್ಲಿಪ್ ಕಾರ್ಟ್ ಸಮೂಹದೊಂದಿಗೆ (ಮಿನ್ ತ್ರಾ, ಜಬಾಂಗ್ ಹಾಗೂ ಫ್ಲಿಪ್ ಕಾರ್ಟ್ ) ಪಾಲುದಾರಿಕೆಯನ್ನು ಘೋಷಿಸಿತು. ಮುಂಚೂಣಿಯ ಫ್ಯಾಷನ್ ಮಳಿಗೆ ಹಾಗೂ ಪ್ರಮುಖ ಇ-ಕಾಮರ್ಸ್ ಮಾರುಕಟ್ಟೆಯ ಪಾಲುದಾರಿಕೆ ದೇಶಾದ್ಯಂತ ಗ್ರಾಹಕರಿಗೆ ಅತ್ಯುತ್ತಮ ಫ್ಯಾಷನ್ ಸಂಗ್ರಹಕ್ಕೆ ಅವಕಾಶ ಕಲ್ಪಿಸುತ್ತದೆ. ಈ ಪಾಲುದಾರಿಕೆ ಮಿನ್ ತ್ರಾ ದ ಶಾಪಿಂಗ್ ಅನುಭವ ಹಾಗೂ ಫ್ಲಿಪ್ ಕಾರ್ಟ್ ಸಮೂಹದ ಸಂಪರ್ಕದೊಂದಿಗೆ ಲೈಫ್ ಸ್ಟೈಲ್ ಸಂಸ್ಥೆಯ ವಿಸ್ತೃತ ಫ್ಯಾಷನ್ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ದೊರೆಯಲಿದೆ.

ಗ್ರಾಹಕರು ಇಂದು ಒಂದೇ ಸೂರಿನಡಿ ಎಲ್ಲಾ ಶಾಪಿಂಗ್ ಅನುಭವ ಪಡೆಯಲು ಬಯಸುತ್ತಾರೆ. ತಮ್ಮ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಲೈಫ್ ಸ್ಟೈಲ್ ಹಾಗೂ ಫ್ಲಿಪ್ ಕಾರ್ಟ್ ಸಮೂಹ ಗ್ರಾಹಕರಿಗೆ ಪ್ರಸ್ತುತ ಟ್ರೆಂಡಿಂಗ್ ಉತ್ಪನ್ನಗಳ ದೃಷ್ಟಿಕೋನವನ್ನು ಅರಿತು ಸ್ಪಂದಿಸಲು ಶಕ್ತರಾಗುತ್ತಾರೆ. ಈ ಪಾಲುದಾರಿಕೆಯ ಮೂಲಕ ಲೈಫ್ ಸ್ಟೈಲ್ ಮಹಿಳೆಯರ ಉಡುಗೆ, ಪುರುಷರು, ಮಕ್ಕಳ ಉಡುಗೆ, ಶೂ, ಚಪ್ಪಲಿಗಳೂ, ಹ್ಯಾಂಡ್ ಬ್ಯಾಗ್ ಗಳು , ಫ್ಯಾಷನ್ ಹಾಗೂ ಒಡವೆಗಳನ್ನು ತನ್ನ ಖಾಸಗಿ ಬ್ರಾಂಡ್ ನೊಂದಿಗೆ ಹೊಸ ಪ್ರದೇಶಗಳಿಗೆ ತಲುಪಿಸಲು ಸಾಧ್ಯವಾಗುತ್ತದೆ. ಇದರಿಂದ ಫ್ಲಿಪ್ ಕಾರ್ಟ್ ಸಮೂದಹ 160 ದಶಲಕ್ಷ ಗ್ರಾಹಕರಿಗೆ ಸೇವೆ ಒದಗಿಸುತ್ತದೆ.

20 ವರ್ಷಗಳಿಂದ ಫ್ಯಾಷನ್ ಕ್ಷೇತ್ರದಲ್ಲಿ ಸೇವೆ ಒದಗಿಸುತ್ತಿರುವ ಲೈಫ್ ಸ್ಟೈಲ್ ದೇಶಾದ್ಯಂತ 78 ಮಳಿಗೆಗಳ ಸಮೂಹವನ್ನು ಹೊಂದಿದ್ದು, ಪ್ರತಿ 45 ದಿನಗಳಿಗೊಮ್ಮೆ ಹೊಸ ಮಳಿಗೆಗಳನ್ನು ಸೇರಿಸುತ್ತಾ ಪ್ರಗತಿಯ ಹಾದಿಯಲ್ಲಿದೆ.

   
 
ಹೆಲ್ತ್