Back
Home » ಬಾಲಿವುಡ್
ಉತ್ತರ ಕರ್ನಾಟಕಕ್ಕೆ 2 ಕೋಟಿ ನೀಡಿದ್ರಾ ಸನ್ನಿ ಲಿಯೋನ್?
Oneindia | 11th Aug, 2019 04:10 PM

ಉತ್ತರ ಕರ್ನಾಟಕ ನೆರೆ ಸಂತ್ರಸ್ಥರಿಗೆ ನೆರವಿಗೆ ಬಾಲಿವುಡ್ ನಟಿ ಸನ್ನಿ ಲಿಯೋನ್ ಧಾವಿಸಿದ್ದಾರೆ. ನೆರೆ ಸಂತ್ರಸ್ಥರಿಗೆ ಸನ್ನಿ ಲಿಯೋನ್ 2 ಕೋಟಿ ನೀಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಅಲ್ಲದೆ ನಿಜಕ್ಕು ಸನ್ನಿ ಲಿಯೋನ್ 2 ಕೋಟಿ ಕೊಟ್ಟಿದ್ದಾರಾ ಎನ್ನುವ ಪ್ರಶ್ನೆ ಕೂಡ ಎಲ್ಲರನ್ನು ಕಾಡುತ್ತಿದೆ.

ಸನ್ನಿ ಲಿಯೋನ್ ಎರಡು ಕೋಟಿ ಕೊಟ್ಟಿದ್ದಾರೆ ಎನ್ನುವುದಕ್ಕೆ ಆಧಾರ ಏನಿದೆ ಎಂದು ನೆಟ್ಟಿಗರು ಪ್ರಶ್ನೆಮಾಡುತ್ತಿದ್ದಾರೆ. ಸನ್ನಿಯ 2 ಕೋಟಿ ಭಾರಿ ಚರ್ಚೆಯಾಗುತ್ತಿದ್ದಂತೆ ನಿವೃತ್ತ ಡಿಜಿಪಿ ಶಂಕರ್ ಬಿದರಿ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. "ಉತ್ತರ ಕರ್ನಾಟಕ ಪರಿಹಾರ ನಿಧಿಗೆ ಸನ್ನಿಲಿಯೋನ್ 2 ಕೋಟಿ ಕೊಟ್ಟಿದ್ದಾರೆ" ಎಂದು ಬರೆದುಕೊಂಡಿದ್ದಾರೆ.

ಅಯ್ಯೋ ನಾನು ಸನ್ನಿ ಲಿಯೋನ್ ಅಲ್ಲ, ಯಾಕೆ ಹೀಗೆ ಪೀಡಿಸುತ್ತಿದ್ದೀರಾ?

ಆದರು ಸಹ ಸನ್ನಿ ನಿಜಕ್ಕು ಹಣ ಕೊಟ್ಟಿದ್ದಾರಾ ಎನ್ನುವ ಅನುಮಾನ ವ್ಯಕ್ತಪಡಿಸುವ ಜೊತೆಗೆ ಸನ್ನಿಲಿಯೊನ್ ಗೆ ಧನ್ಯವಾದ ತಿಳಿಸುತ್ತಿದ್ದಾರೆ. ಬಾಲಿವುಡ್ ನಟಿಯೊಬ್ಬರು ಕರ್ನಾಟಕ ಜನರ ಸಂಕಷ್ಟಕ್ಕೆ ಮಿಡಿದು ಸಹಾಯಕ್ಕೆ ಧಾವಿಸಿದ ಬಗ್ಗೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಸ್ಯಾಂಡಲ್ ವುಡ್ ನ ಬಹುತೇಕ ಮಂದಿ ಉತ್ತರ ಕರ್ನಾಟಕ ಜನರ ನೆರವಿಗೆ ನಿಂತಿದ್ದಾರೆ. ಉತ್ತರ ಕರ್ನಾಟಕ ನೆರೆ ಸಂತ್ರಸ್ಥರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಈಗಾಗಲೆ ಸಾಗಿಸಲಾಗುತ್ತಿದೆ.

   
 
ಹೆಲ್ತ್