Back
Home » ಇತ್ತೀಚಿನ
ಪಿಯುಬಿಜಿ ಮೊಬೈಲ್ ಲೈಟ್ ಆಡುವುದಕ್ಕೆ 8,000 ರುಪಾಯಿ ಒಳಗೆ ಸಿಗುವ ಟಾಪ್ ಸ್ಮಾರ್ಟ್ ಫೋನ್ ಗಳು
Gizbot | 11th Aug, 2019 05:50 PM
 • ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ10:

  ಬೆಲೆ: Rs 7,990

  ಗ್ಯಾಲಕ್ಸಿ ಎಂ 10 6.22-ಇಂಚಿನ TFT ಡಿಸ್ಪ್ಲೇ ಹೊಂದಿದೆ ಜೊತೆಗೆ HD+ ರೆಸಲ್ಯೂಷನ್ ಇದ್ದು 1520×720 ಪಿಕ್ಸಲ್ ಇದೆ ಮತ್ತು 19:9 ಆಸ್ಪೆಕ್ಟ್ ಅನುಪಾತವಿದೆ.ಇದು ಸ್ಯಾಮ್ ಸಂಗ್ ನ Exynos 7870 ಆಕ್ಟಾ ಕೋರ್ CPU 2ಜಿಬಿ RAM 16GB ಸ್ಟೋರೇಜ್ ನೊಂದಿಗೆ ಕಪಲ್ ಆಗಿದೆ.

  ಇದರಲ್ಲಿ ಹಿಂಭಾಗದಲ್ಲಿ ಡುಯಲ್ ಕ್ಯಾಮರಾ ಸೆಟ್ ಅಪ್ ಇದ್ದು 13 ಮೆಗಾಪಿಕ್ಸಲ್ ನ ಪ್ರಮುಖ ಶೂಟರ್ f/1.9 ಅಪರ್ಚರ್ ನ್ನು ಹೊಂದಿದೆ ಮತ್ತು ಸೆಕೆಂಡರಿ ಕ್ಯಾಮರಾ 5-ಮೆಗಾಪಿಕ್ಸಲ್ ಸಾಮರ್ಥ್ಯದ್ದಾಗಿದ್ದು f/2.2 ಅಪರ್ಚರ್ ನ್ನು ಹೊಂದಿದೆ.ಮುಂಭಾಗದಲ್ಲಿ 5 ಮೆಗಾಪಿಕ್ಸಲ್ ನ ಸೆಲ್ಫೀ ಕ್ಯಾಮರಾವಿದ್ದು ಹೆಚ್ ಡಿಆರ್ ಗೆ ಬೆಂಬಲ ನೀಡುತ್ತದೆ. ಫಿಂಗರ್ ಪ್ರಿಂಟ್ ಸೆನ್ಸರ್ ಕೂಡ ಹೊಂದಿರುವ ಈ ಫೋನ್ ಫೇಸ್ ಅನ್ ಲಾಕ್ ಫೀಚರ್ ನ್ನು ಕೂಡ ಒಳಗೊಂಡಿದೆ. 3,400mAh ಬ್ಯಾಟರಿ ಸೌಲಭ್ಯ ಹೊಂದಿದೆ. ಸ್ಯಾಮ್ ಸಂಗ್ ಒನ್ ಯುಐ ಸ್ಕ್ರೀನ್ ಆಧಾರಿತ ಆಂಡ್ರಾಯ್ಡ್ 9 ಪೈ ನ್ನು ಹೊಂದಿದೆ. ವಾಟರ್ ಡ್ರಾಪ್ ನಾಚ್ ಸ್ಟೈಲ್ ಡಿಸ್ಪ್ಲೇ, ಹಿಂಭಾಗದಲ್ಲಿ ಡುಯಲ್ ಕ್ಯಾಮರಾ ಮತ್ತು ಹೆಚ್ ಡಿ ಕಂಟೆಂಟ್ ಸ್ಟ್ರೀಮಿಂಗ್ ಗೆ ವೈಡ್ ವೈನ್ ಎಲ್ 1 ಸರ್ಟಿಫಿಕೇಷನ್ ನ್ನು ಇದು ಹೊಂದಿದೆ.


 • ರಿಯಲ್ ಮಿ 3ಐ

  ಬೆಲೆ: Rs 7,999

  ರಿಯಲ್ ಮಿ 3ಐ 6.22-ಇಂಚಿನ HD+ (1520 x 720 ಪಿಕ್ಸಲ್ಸ್) ಡಿಸ್ಪ್ಲೇ ಜೊತೆಗೆ 19:9 ಆಸ್ಪೆಕ್ಟ್ ಅನುಪಾತವನ್ನು ಹೊಂದಿದೆ.ಡ್ಯೂಡ್ರಾಪ್ ಸ್ಟೈಲ್ ಡಿಸ್ಪ್ಲೇ ಈ ಫೋನಿನಲ್ಲಿದೆ. ಮೀಡಿಯಾ ಟೆಕ್ ಹೆಲಿಯೋ ಪಿ60 ಆಕ್ಟಾ ಕೋರ್ ಚಿಪ್ ಸೆಟ್ ಹೊಂದಿರುವ ಇದು ARM Mali-G72 GPUವನ್ನು ಹೊಂದಿದೆ. ಡುಯಲ್ ಸಿಮ್ ಗೆ ಅವಕಾಶ ನೀಡುವ ಫೋನ್ 4,230mAh ನ ಬ್ಯಾಟರಿ ಸಾಮರ್ಥ್ಯ ಜೊತೆಗೆ 10W ಚಾರ್ಜಿಂಗ್ ಟೆಕ್ ಗೆ ಬೆಂಬಲ ನೀಡುತ್ತದೆ. 3GB RAM ಮತ್ತು 32GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಇದೆ.

  ಡುಯಲ್ ಕ್ಯಾಮರಾ ಸೆಟ್ ಅಪ್ ನ್ನು ಹಿಂಭಾಗದಲ್ಲಿ ಹೊಂದಿದ್ದು ಒಂದು 13 ಮೆಗಾಪಿಕ್ಸಲ್ ನ ಸೆನ್ಸರ್ ಇನ್ನೊಂದು 2 ಮೆಗಾಪಿಕ್ಸಲ್ ಸಾಮರ್ಥ್ಯದ ಸೆನ್ಸರ್ ಇರುವ ಕ್ಯಾಮರಾವಾಗಿದೆ.ಮುಂಭಾಗದಲ್ಲಿ 13 ಮೆಗಾಪಿಕ್ಸಲ್ ನ ಸೆಲ್ಫೀ ಕ್ಯಾಮರಾವಿದೆ.ಸಾಫ್ಟ ವೇರ್ ವಿಚಾರಕ್ಕೆ ಬಂದರೆ ಆಂಡ್ರಾಯ್ಡ್ ಪೈ ಆಧಾರಿತ ColorOS 6 ಇದರಲ್ಲಿದೆ.


 • ಶಿಯೋಮಿ ರೆಡ್ಮಿ 7

  ಬೆಲೆ: Rs 7,999

  ಶಿಯೋಮಿ ರೆಡ್ಮಿ 7 6.26-ಇಂಚಿನ ಡಿಸ್ಪ್ಲೇ ಜೊತೆಗೆ HD+ (1520 x 720 ಪಿಕ್ಸಲ್ಸ್) ರೆಸಲ್ಯೂಷನ್ ಮತ್ತು 19:9 ಆಸ್ಪೆಕ್ಟ್ ಅನುಪಾತವನ್ನು ಹೊಂದಿದೆ.ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ನಿಂದ ಸ್ಕ್ರೀನ್ ಸುರಕ್ಷಿತವಾಗಿರಲಿದೆ. ಹ್ಯಾಂಡ್ ಸೆಟ್ ನಲ್ಲಿ ಡಾಟ್-ನಾಚ್ ಡಿಸ್ಪ್ಲೇ ಡಿಸೈನ್ ಇದ್ದು ಇದರಲ್ಲಿ ಸೆಲ್ಫೀ ಕ್ಯಾಮರಾವನ್ನು ಅಳವಡಿಸಲಾಗಿದೆ. 10ಎನ್ಎಂ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 632 ಆಕ್ಟಾ ಕೋರ್ ಸಾಕೆಟ್ ಜೊತೆಗೆ ಗರಿಷ್ಟ 1.8 ಗಿಗಾ ಹರ್ಡ್ಸ್ ನಷ್ಟು ಕ್ಲಾಕ್ ಸ್ಪೀಡ್ ನ್ನು ಇದು ಹೊಂದಿದೆ. Adreno 506 GPUನೊಂದಿಗೆ ಇದು ಪೇರ್ ಆಗಿದೆ.

  ರೆಡ್ಮಿ 7 2ಜಿಬಿ ಮೆಮೊರಿ ಮತ್ತು 32ಜಿಬಿ ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿದೆ. ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಮೆಮೊರಿಯನ್ನು ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶವಿದೆ. ಎಐ ಆಧಾರಿತ ಡುಯಲ್ ಕ್ಯಾಮರಾ ಸೆಟ್ ಅಪ್ ನ್ನು ಡಿವೈಸಿನ ಹಿಂಭಾಗದಲ್ಲಿ ಅಳಡಿಸಲಾಗಿದ್ದು ಒಂದು 12 ಮೆಗಾಪಿಕ್ಸಲ್ ಮತ್ತು ಸೆಕೆಂಡರಿ ಕ್ಯಾಮರಾವು 2ಮೆಗಾಪಿಕ್ಸಲ್ ಸಾಮರ್ಥ್ಯದ ಸೆನ್ಸರ್ ನ್ನು ಹೊಂದಿದೆ. 8ಮೆಗಾಪಿಕ್ಸಲ್ ನ ಸೆಲ್ಫೀ ಕ್ಯಾಮರಾ ಮುಂಭಾಗದಲ್ಲಿದೆ. ಬ್ಯಾಟರಿ ವಿಚಾರಕ್ಕೆ ಬಂದರೆ 4,000mAh ಸಾಮರ್ಥ್ಯದ ಬ್ಯಾಟರಿ ಇದರಲ್ಲಿದೆ.


 • ಆಸೂಸ್ ಝೆನ್ ಫೋನ್ ಮ್ಯಾಕ್ಸ್ ಪ್ರೋ ಎಂ1:

  ಬೆಲೆ: Rs 7,999

  ಆಸೂಸ್ ಝೆನ್ ಫೋನ್ ಮ್ಯಾಕ್ಸ್ ಪ್ರೋ ಎಂ1 5.99-ಇಂಚಿನ LCD ಡಿಸ್ಪ್ಲೇ ಜೊತೆಗೆ 2160×1080 ಪಿಕ್ಸಲ್ಸ್ ರೆಸಲ್ಯೂಷನ್ ನ್ನು ಇದು ಹೊಂದಿದೆ. 18:9 ಆಸ್ಪೆಕ್ಟ್ ಅನುಪಾತವಿದೆ. ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 636 ಚಿಪ್ ಸೆಟ್ ಇದ್ದು 3GB RAM ಮತ್ತು 32GB ಸ್ಟೋರೇಜ್ ವ್ಯವಸ್ಥೆ ಇದರಲ್ಲಿದೆ.

  3GB ಮತ್ತು 4GB RAM ವೇರಿಯಂಟ್ ನ ಫೀಚರ್ ಕಾಂಬಿನೇಷನ್ ಇದ್ದು 13 ಮೆಗಾಪಿಕ್ಸಲ್ ಮತ್ತು 5 ಮೆಗಾಪಿಕ್ಸಲ್ ನ ಡುಯಲ್ ಕ್ಯಾಮರಾ ಹಿಂಭಾಗದಲ್ಲಿದೆ. 8 ಮೆಗಾಪಿಕ್ಸಲ್ ಸೆಲ್ಫೀ ಕ್ಯಾಮರಾ ವ್ಯವಸ್ಥೆ ಇದೆ. 6ಜಿಬಿ RAM ವೇರಿಯಂಟ್ ನಲ್ಲಿ ಅಪ್ ಡೇಟ್ ಆಗಿರುವ ಡುಯಲ್ ಕ್ಯಾಮರಾ ಮಾಡ್ಯೂಲ್ ಇದ್ದು 16 ಮೆಗಾಪಿಕ್ಸಲ್ ಮತ್ತು 5 ಮೆಗಾಪಿಕ್ಸಲ್ ನ ಕ್ಯಾಮರಾ ಹಿಂಭಾಗದಲ್ಲಿ ಮತ್ತು 16 ಮೆಗಾಪಿಕ್ಸಲ್ ಸೆಲ್ಫೀ ಕ್ಯಾಮರಾ ಸೆಟ್ ಅಪ್ ಇದರಲ್ಲಿದೆ. ಮುಂಭಾಗದ ಕ್ಯಾಮರಾವು ಫೇಸ್ ಅನ್ ಲಾಕ್ ಫೀಚರ್ ನ್ನು ಹೊಂದಿದೆ. 5,000mAh ನ ಬ್ಯಾಟರಿಯನ್ನು ಇದು ಹೊಂದಿದೆ. ಕನೆಕ್ಟಿವಿಟಿ ವಿಚಾರಕ್ಕೆ ಬಂದರೆ ಬ್ಲೂಟೂತ್ 4G LTE ಜೊತೆಗೆ VoLTE, ಡುಯಲ್ ಸಿಮ್ ಕಾರ್ಡ್ ಸ್ಲಾಟ್, ವೈಫೈ ಮತ್ತು ಜಿಪಿಎಸ್ ವ್ಯವಸ್ಥೆ ಇದರಲ್ಲಿದೆ.


 • ಹಾನರ್ 9 ಲೈಟ್ :

  ಬೆಲೆ: Rs 7,999

  ಹಾನರ್ 9 ಲೈಟ್ ಈ ಲಿಸ್ಟ್ ನಲ್ಲಿರುವ ಮತ್ತೊಂದು ಸ್ಮಾರ್ಟ್ ಫೋನ್ ಇದು 5.65-ಇಂಚಿನ ಫುಲ್-HD+ ಜೊತೆಗೆ 1080×2160 ರೆಸಲ್ಯೂಷನ್ ನ್ನು ಹೊಂದಿದೆ ಮತ್ತು 18:9 ಆಸ್ಪೆಕ್ಟ್ ಅನುಪಾತ ಹೊಂದಿದೆ. ಹೈಸಿಲಿಕಾನ್ ಕಿರಿನ್ 65 ಆಕ್ಟಾ ಕೋರ್ ಸಾಕೆಟ್ ವ್ಯವಸ್ಥೆ ಹೊಂದಿದೆ 2.36GHz ನ ಕ್ಲಾಕ್ ಸ್ಪೀಡ್ ಹೊಂದಿದೆ. ನಾವು ಇಲ್ಲಿ ಮಾತನಾಡುತ್ತಿರುವ ಹಾನರ್ 9 ಲೈಟ್ 3GB RAM ಜೊತೆಗೆ 32GB ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿದೆ. ಸಾಫ್ಟ್ ವೇರ್ ವಿಚಾರಕ್ಕೆ ಬಂದರೆ EMUI 8.0 ಆಧಾರಿತ ಆಂಡ್ರಾಯ್ಡ್ 8.0 ಓರಿಯೋ ಓಎಸ್ ನಲ್ಲಿ ಇದು ರನ್ ಆಗುತ್ತದೆ.ಹಾನರ್ 9 ಲೈಟ್ ಡುಯಲ್ ಕ್ಯಾಮರಾ ಸೆಟ್ ಅಪ್ ನ್ನು ಹೊಂದಿದೆ. 13-ಮೆಗಾಪಿಕ್ಸಲ್ + 2-ಮೆಗಾಪಿಕ್ಸಲ್ ಸೆನ್ಸರ್ ವ್ಯವಸ್ಥೆ ಇದ್ದು ವೀಡಿಯೋ ಕಾಲಿಂಗ್ ಫೆಸಿಲಿಟಿ ಕೂಡ ಇದೆ.

  ವೈಶಿಷ್ಟ್ಯತೆಗಳು ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ10 ಶಿಯೋಮಿ ರೆಡ್ಮಿ 7 ರಿಯಲ್ ಮಿ 3ಐ

  ಬೆಲೆ 7990 7999 7999

  ಚಿಪ್ ಸೆಟ್ Exynos 7870 ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 632 SoC ಮೀಡಿಯಾ ಟೆಕ್ ಹೆಲಿಯೋ ಪಿ60

  ಆಪರೇಟಿಂಗ್ ಸಿಸ್ಟಮ್ ಆಂಡ್ರಾಯ್ಡ್ 8.1 ಓರಿಯೋ ಆಂಡ್ರಾಯ್ಡ್ 9 ಪೈ ಆಂಡ್ರಾಯ್ಡ್ 9 ಪೈ

  ಡಿಸ್ಪ್ಲೇ 6.2-ಇಂಚಿನHD+ 6.26-ಇಂಚಿನ ಡಿಸ್ಪೇಲ -720x1520ಪಿಕ್ಸಲ್ಸ್ 6.22-ಇಂಚಿನHD+

  ಇಂಟರ್ನಲ್ ಮೆಮೊರಿ 2GB RAM with 16GB ಸ್ಟೋರೇಜ್ 2GB RAM + 32GB ಸ್ಟೋರೇಜ್ 3GB RAM + 32GB ಸ್ಟೋರೇಜ್

  ಹಿಂಭಾಗದ ಕ್ಯಾಮರಾ ಡುಯಲ್ - 13MP + 5MP ಡುಯಲ್ - 12MP + 2MP ಡುಯಲ್ - 13MP + 2MP

  ಮುಂಭಾಗದ ಕ್ಯಾಮರಾ 5MP 8MP 13MP

  ಬ್ಯಾಟರಿ 3,400mAh 4,000mAh 4,230mAh
ಪಿಯುಬಿಜಿ ಮೊಬೈಲ್ ಗೇಮಿನ ಲೈಟ್ ವರ್ಷನ್ ಪಿಯುಬಿಜಿ ಮೊಬೈಲ್ ಲೈಟ್ ನ್ನು ಇತ್ತೀಚೆಗೆ ಡೆವಲಪರ್ ಗಲು ಬಿಡುಗಡೆಗೊಳಿಸಿದ್ದಾರೆ. ಗೇಮಿನ ಹೊಸ ವರ್ಷನ್ ಸ್ಮಾರ್ಟ್ ಫೋನ್ ಹಾರ್ಡ್ ವೇರಿಗೆ ಇದು ಮತ್ತಷ್ಟು ಸಲೀಸಾಗಿದೆ. .ಎಂಟ್ರಿ ಲೆವೆಲ್ಲಿನ ಡಿವೈಸ್ ಗಳನ್ನು ಬಳಕೆ ಮಾಡುವ ಬಳಕೆದಾರರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಈ ಹೊಸ ವರ್ಷನ್ ನ್ನು ತಯಾರಕರು ಟೆನ್ಸೆಂಟ್ ಗೇಮ್ಸ್ ನಲ್ಲಿ ಬಿಡುಗಡೆಗೊಳಿಸಿದ್ದಾರೆ. ಕಡಿಮೆ ಮೆಮೊರಿ ಇರುವ ಡಿವೈಸ್ ಗಳಲ್ಲಿ ಕೂಡ ಇದು ಕಾರ್ಯ ನಿರ್ವಹಿಸುತ್ತದೆ ಮತ್ತು ಉತ್ತಮ ಆಟದ ಅನುಭವವನ್ನು ಕೂಡ ಆಟಗಾರರಿಗೆ ನೀಡುತ್ತದೆ.

ಅನ್ ರಿಯಲ್ ಇಂಜಿನ್ 4 ನಿಂದ ಇದನ್ನು ಬಿಲ್ಟ್ ಮಾಡಲಾಗಿದ್ದು, ಇದೀಗ ಪಿಯುಬಿಜಿ ಮೊಬೈಲ್ ಸಾಕಷ್ಟು ಡಿವೈಸ್ ಗಳಲ್ಲಿ ಕಂಪ್ಯಾಟಿಬಲ್ ಆಗಿದೆ. 60 ಪ್ಲೇಯರ್ ಗಳಿಗಾಗಿ ಸಣ್ಣ ಮ್ಯಾಪ್ ನ್ನು ಪಿಯುಬಿಜಿ ಮೊಬೈಲ್ ಲೈಟ್ ನಲ್ಲಿ ನಿರ್ಮಿಸಲಾಗಿದೆ. ಇದು ವೇಗದ ಪೇಸಿರುವ ಗೇಮ್ ಆಗಿ ಮಾಡುತ್ತದೆ. ಗೇಮ್ ಕೇವಲ 400ಎಂಬಿ ಇದೆ ಮತ್ತು 2ಜಿಬಿ ಮೆಮೊರಿಗಿಂತಲೂ ಕಡಿಮೆ ಇರುವ ಡಿವೈಸ್ ಗಳಿಗಾಗಿ ಇದನ್ನು ನಿರ್ಮಿಸಲಾಗಿದೆ ಎಂದು ತಯಾರಕರು ತಿಳಿಸಿದ್ದಾರೆ.

ಭಾರತದಲ್ಲಿ ಹೆಚ್ಚು ಬಳಕೆದಾರರು ಎಂಟ್ರಿ ಲೆವೆಲ್ಲಿನ ಸ್ಮಾರ್ಟ್ ಫೋನ್ ಬಳಕೆ ಮಾಡುವುದರಿಂದಾಗಿ ಅವರನ್ನು ಮನದಲ್ಲಿಟ್ಟುಕೊಂಡು ಇದನ್ನು ಡಿಸೈನ್ ಮಾಡಲಾಗಿದೆ. ಹೊಸ ವೆಹಿಕಲ್ ಗಳು ಮತ್ತು ಗೇರುಗಳ ರೂಪದಲ್ಲಿ ವಿಭಿನ್ನ ರಿವಾರ್ಡ್ಸ್ ಗಳನ್ನು ಹೊಸ ಪ್ಲೇಯರ್ ಗಳು ಆಟಕ್ಕೆ ಸೇರಿದಾಗ ಪಡೆದುಕೊಳ್ಳಲಿದ್ದಾರೆ.

8000 ರುಪಾಯಿ ಒಳಗೆ ಲಭ್ಯವಾಗುವ ಕೆಲವು ಸ್ಮಾರ್ಟ್ ಫೋನ್ ಗಳು ಪಿಯುಬಿಜಿ ಮೊಬೈಲ್ ಲೈಟ್ ಗೆ ಹೇಳಿ ಮಾಡಿಸಿದೆ. ಅವುಗಳ ಪಟ್ಟಿಯನ್ನು ನಾವು ನಿಮಗೆ ನೀಡುತ್ತಿದ್ದೇವೆ.

   
 
ಹೆಲ್ತ್