ಹಾನರ್ ವಿಷನ್ ಟಿವಿಯು 55 ಇಂಚಿನ ಗಾತ್ರದಲ್ಲಿದ್ದು, 4K UHD ಡಿಸ್ಪ್ಲೇಯನ್ನು ಪಡೆದುಕೊಂಡಿದೆ. ಟಿವಿಯ ಸುತ್ತ ಮೂರು ಭಾಗದಲ್ಲಿ ಅಂಚು ರಹಿತ ವಿನ್ಯಾಸ ನೀಡಲಾಗಿದ್ದು, ಬಾಹ್ಯಾ ಬಾಡಿ ಮತ್ತು ಸ್ಕ್ರೀನ್ ನಡುವಿನ ಅಂತರವು ಶೇ.94% ಅನುಪಾತ ಹೊಂದಿದೆ. ಟಿವಿಯ ಸ್ಪೋರ್ಟ್ಸ್ ಡಿಸ್ಪ್ಲೇಯು 6.9mm ಪೂರ್ಣ ಮೆಟಲ್ ಪ್ರೇಮ್ನಿಂದ ಕೂಡಿದ್ದು, ರೈಯನ್ಲ್ಯಾಂಡ್ ಐ ಕಂಫರ್ಟ್ ಮೋಡ್ ಆಯ್ಕೆ ಸಹ ಇದೆ.
ಹಾನರ್ ವಿಷನ್ ಸೆಲ್ಫ್ ಡೆವಲಪ್ ಚೀಪ್ಸೆಟ್ ಹೊಂದಿದ್ದು, ಕ್ವಾಡ್-ಕೋರ್' ಹೊಂಗು 818 ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ AI ಕ್ಯಾಮೆರಾ NPU ಚಿಪ್ಸೆಟ್ ಸಹ ಪಡೆದಿದ್ದು, 16GB ಮತ್ತು 32GB ಆಂತರಿಕ ಸ್ಟೋರೇಜ್ ಆಯ್ಕೆಗಳನ್ನು ಹೊಂದಿದೆ. ಹಾಗೆಯೇ ಕಂಪನಿಯ ಹೊಸ ಸ್ವಂತ ಹಾರ್ಮನಿ ಆಪರೇಟಿಂಗ್ ಸಿಸ್ಟಮ್ ಬೆಂಬಲ ಪಡೆದಿದ್ದು, ಕಂಪನಿಯ ಆಪ್ಗ್ಯಾಲರಿ ಲಭ್ಯ.
ಹೊಸ ಹಾನರ್ ವಿಷನ್ ಸ್ಮಾರ್ಟ್ ಟಿವಿಯು ಬ್ಲೂಟೂತ್ 5, ವೈ ಫೈ 802, ಐದರ್ನೆಟ್ ಫೋರ್ಟ್, ಯುಎಸ್ಬಿ 3.0 ಪೋರ್ಟ್ ಸೌಲಭ್ಯಗಳನ್ನು ಪಡೆದಿದೆ. ಪಾಪ್ಅಪ್ ಕ್ಯಾಮೆರಾ ಆಯ್ಕೆ ಸಹ ಇದ್ದು, 1080p@30fps ಸಾಮರ್ಥ್ಯದಲ್ಲಿ ವಿಡಿಯೊ ಕಾಲಿಂಗ್ ಸೌಲಭ್ಯಕ್ಕೆ ಇದು ನೆರವಾಗಲಿದೆ. ಪ್ರೊ ವೇರಿಯಂಟ್ ಸ್ಮಾರ್ಟ್ ಟಿವಿಯು 10W ಸಾಮರ್ಥ್ಯದ ಒಟ್ಟು ಆರು ಸ್ಪೀಕರ್ಸ್ಗಳನ್ನು ಒಳಗೊಂಡಿದೆ.
ಹಾನರ್ ವಿಷನ್ ಸ್ಮಾರ್ಟ್ ಟಿವಿ ಸರಣಿಯು ಚೀನಾದಲ್ಲಿ ಎರಡು ವೇರಿಯಂಟ್ಗಳಲ್ಲಿ ಲಾಂಚ್ ಆಗಿದೆ. ಸ್ಯ್ಟಾಂಡರ್ಡ್ ವೇರಿಯಂಟ್ RMB 3,799 (ಅಂದಾಜು 38,200ರೂ.ಗಳು) ಆಗಿದೆ. ಹಾಗೆಯೇ ಹಾನರ್ ವಿಷನ್ ಪ್ರೊ ವೇರಿಯಂಟ್ RMB 4,799 (ಅಂದಾಜು 48,200ರೂ.ಗಳು) ಆಗಿದೆ. ಈ ಸ್ಮಾರ್ಟ್ ಟಿವಿ ಸರಣಿ ಭಾರತೀಯ ಮಾರುಕಟ್ಟೆಗೆ ಯಾವಾಗ ಎಂಟ್ರಿ ನೀಡಲಿದೆ ಎನ್ನುವುದರ ಬಗ್ಗೆ ಕಂಪನಿಯು ಮಾಹಿತಿ ನೀಡಿಲ್ಲ.
ಹಾನರ್ ಕಂಪನಿಯು ಈಗಾಗಲೇ ವಿವಿಧ ಶ್ರೇಣಿಯ ಸ್ಮಾರ್ಟ್ಫೋನ್ಗಳಿಂದ ಮಾರುಕಟ್ಟೆಯಲ್ಲಿ ಗಟ್ಟಿಸ್ಥಾನಪಡೆದುಕೊಂಡಿದ್ದು, ಇತ್ತೀಚಿಗೆ ಹೊಸದಾಗಿ ಸ್ವಂತ ಹಾರ್ಮನಿ ಓಎಸ್ ಲಾಂಚ್ ಮಾಡಿ ಟೆಕ್ ಮಾರುಕಟ್ಟೆ ಹುಬ್ಬೇರುವಂತೆ ಮಾಡಿದೆ. ಈಗ ಅದರ ಬೆನ್ನಲ್ಲೇ ಹಾನರ್ ಕಂಪನಿಯು ವಿಷನ್ ಸರಣಿಯಲ್ಲಿ ಸ್ಮಾರ್ಟ್ ಟಿವಿಯೊಂದನ್ನು ಲಾಂಚ್ ಮಾಡಿದ್ದು, ಈಗ ಮಾರುಕಟ್ಟೆಯೇ ತಿರುಗಿ ನೋಡುವಂತಹ ಫೀಚರ್ಸ್ಗಳನ್ನು ಒಳಗೊಂಡಿದೆ.
ಹೌದು, ಜನಪ್ರಿಯ ಹಾನರ್ ಕಂಪನಿಯು ಇತ್ತೀಚಿನ 'ಹಾನರ್ ಡೆಪಲಪರ್ಸ್ ಸಮ್ಮೇಳನದಲ್ಲಿ ಹೊಸದಾಗಿ 55 ಇಂಚಿನ ಸ್ಮಾರ್ಟ್ ಹಾನರ್ ವಿಷನ್ 4K UHD ಟಿವಿಯನ್ನು ಬಿಡುಗಡೆ ಮಾಡಿದೆ. ಹಾಗೆಯೇ ಈ ಸ್ಮಾರ್ಟ್ ಟಿವಿಯಲ್ಲಿ 'ಕ್ವಾಡ್-ಕೋರ್' ಹೊಂಗು 818 ಪ್ರೊಸೆಸರ್ ಕಾರ್ಯನಿರ್ವಹಿಸುತ್ತದೆ. ಹಾಗಾದರೇ ಹಾನರ್ ಕಂಪನಿಯ ಹೊಸ 55 ಇಂಚಿನ ಸ್ಮಾರ್ಟ್ 4K UHD ಟಿವಿಯು ಇತರೆ ಯಾವೆಲ್ಲಾ ಫೀಚರ್ಸ್ಗಳನ್ನು ಹೊಂದಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.