Back
Home » Business
ಜಗತ್ತಿನ 50 ಶ್ರೀಮಂತರ ಪಟ್ಟಿಯಲ್ಲಿ ಭಾರತದ ಇಬ್ಬರು ಉದ್ಯಮಿಗಳು ಮಾತ್ರ!
Good Returns | 12th Aug, 2019 05:48 PM

ಬ್ಲೂಂಬರ್ಗ್ ಬಿಡುಗಡೆಗೊಳಿಸಿರುವ ಜಗತ್ತಿನ 50 ಅಗ್ರ ಶ್ರೀಮಂತರ ಪಟ್ಟಿಯಲ್ಲಿ ಭಾರತದ ಇಬ್ಬರು ಉದ್ಯಮಿಗಳು ಸ್ಥಾನ ಪಡೆದಿದ್ದಾರೆ.

ಡಿಜಿಟಲ್ ಯುಗದಲ್ಲಿ ಪ್ರತಿನಿತ್ಯ ಬದಲಾವಣೆ ಆಗುತ್ತಲೇ ಇರುತ್ತದೆ. ಸದಾ ಬದಲಾಗುವ ಜಗತ್ತಿನಲ್ಲಿ ಶ್ರೀಮಂತರ ಆಸ್ತಿಯಲ್ಲೂ ಬದಲಾವಣೆಯಾಗುತ್ತಿರುತ್ತದೆ. ಹೀಗಾಗಿ ದೀರ್ಘಕಾಲದವರೆಗೆ ಒಬ್ಬರೇ ಅಗ್ರ ಶ್ರೀಮಂತಿಕೆಯ ಪಟ್ಟ ಉಳಿಕೊಳ್ಳುವುದು ಕಷ್ಟ.

ವಿಶ್ವದ 50 ಶ್ರೀಮಂತರ ಪಟ್ಟಿಯಲ್ಲಿ ಭಾರತದ ಮುಕೇಶ್ ಅಂಬಾನಿ ಮತ್ತು ಅಜೀಂ ಪ್ರೇಮ್ ಜೀ ಮಾತ್ರ ಇದ್ದಾರೆ. ದೇಶದ ರ್ಶರೀಮಂತ ವ್ಯಕ್ತಿ ರಿಲಯನ್ಸ್‌ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಕೇಶ್‌ ಅಂಬಾನಿ ಅಗ್ರ 50ರ ಪಟ್ಟಿಯಲ್ಲಿ 18 ಸ್ಥಾನದಲ್ಲಿದ್ದರೆ, ವಿಪ್ರೊ ಸಂಸ್ಥಾಪಕ ಅಜೀಂ ಪ್ರೇಮ್‌ಜಿ 48ನೇ ಸ್ಥಾನದಲ್ಲಿದ್ದಾರೆ ಎಂದು ವರದಿ ಹೇಳಿದೆ.

ಈ ಪಟ್ಟಿಯಲ್ಲಿ ಭಾರತದ ಇನ್ನು ಕೆಲ ಉದ್ಯಮಿಗಳು ಇರಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ದಿನನಿತ್ಯದ ಷೇರು ವಹಿವಾಟು, ಹೊಸ ಸಂಸ್ಥೆಗಳ ಮೇಲಿನ ಹೂಡಿಕೆ, ಹೂಡಿಕೆಯ ಲಾಭ-ನಷ್ಟದಿಂದಾಗಿ ಶ್ರೀಮಂತರ ಪಟ್ಟಿಯಲ್ಲಿ ದೀರ್ಘಕಾಲದವರೆಗೆ ಉಳಿಯುವುದು ಭಾರಿ ಕಷ್ಟ ಎಂದು ತಜ್ಞರು ಹೇಳುತ್ತಾರೆ.

18ನೇ ಸ್ಥಾನದಲ್ಲಿರುವ ಮುಕೇಶ್‌ ಅಂಬಾನಿ 45.6 ಬಿಲಿಯನ್‌ ಡಾಲರ್‌ ಮೌಲ್ಯ ಹೊಂದಿದ್ದಾರೆ. 48ನೇ ಸ್ಥಾನದಲ್ಲಿರುವ ಅಜೀಂ ಪ್ರೇಮ್‌ಜಿ 20.2 ಬಿಲಿಯನ್‌ ಡಾಲರ್‌ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ವರದಿ ಮಾಡಿದೆ.

   
 
ಹೆಲ್ತ್