ನೀವು ಎಂದಾದರೂ ಆಕಸ್ಮಿಕವಾಗಿ ವಾಟ್ಸ್ಆಪ್ ಮೆಸೇಜ್ಗಳನ್ನು ಡಿಲೀಟ್ ಮಾಡಿ, ಆ ತಕ್ಷಣವೇ ವಿಷಾದಿಸಿದ್ದೀರಾ? ಮತ್ತು ಅದನ್ನು ಮರಳಿ ಪಡೆಯಲು ಯಾವುದಾದರೂ ಮಾರ್ಗವಿದೆಯೇ ಎಂದು ಯೋಚಿಸುತ್ತಿದ್ದೀರಾ? ಚಿಂತಿಸಬೇಡಿ, ಸಹಾಯ ಮಾಡಲು ನಾವು ಇಲ್ಲಿದ್ದೇವೆ.! ಡಿಲೀಟ್ ಮಾಡಿದ ವಾಟ್ಸ್ಆಪ್ ಮೆಸೇಜ್ಗಳನ್ನು ತಕ್ಷಣವೇ ಪುನ ಪಡೆದುಕೊಳ್ಳಲು ನಾವು ಸುಲಭ ಮಾರ್ಗವನ್ನು ಹಂಚಿಕೊಳ್ಳುತ್ತೇವೆ. ವಾಟ್ಸ್ಆಪ್ ಚಾಟ್ಗಳನ್ನು ಮರಳಿ ತರಲು ಎರಡು ವಿಧಾನವನ್ನು ನಾವು ತಿಳಿಸಿಕೊಡುತ್ತಿದ್ದೇವೆ.
ಮೊದಲನೆಯದಾಗಿ, ಡಿಲೀಟ್ ಮಾಡಿದ ವಾಟ್ಸ್ಆಪ್ ಮೆಸೇಜ್ಗಳನ್ನು ತಕ್ಷಣವೇ ಪುನ ಪಡೆ ವಾಟ್ಸ್ಆಪ್ ಚಾಟ್ ಬ್ಯಾಕಪ್ ತೆಗೆದುಕೊಳ್ಳಿ. ವಾಟ್ಸ್ಆಪ್ ಅನ್ನು ತೆರೆದು ಸೆಟ್ಟಿಂಗ್ಗೆ ಹೋಗಿ> ಅಲ್ಲಿ ಚಾಟ್ಗಳಿಗೆ ಹೋಗಿ> ಚಾಟ್ ಬ್ಯಾಕಪ್ ಟ್ಯಾಪ್ ಮಾಡಿ. ಇಲ್ಲಿ, ನಿಮ್ಮ ಮೆಸೇಜ್ಗಳ ಬ್ಯಾಕಪ್ನ ಆವರ್ತನವನ್ನು ನೀವಲ್ಲಿ ನೋಡುತ್ತೀರಾ. ಅಲ್ಲಿ ದೈನಂದಿನ, ಸಾಪ್ತಾಹಿಕ ಅಥವಾ ಮಾಸಿಕಗಳ ನಡುವೆ ನೀವು ಬ್ಯಾಕಪ್ ಅನ್ನು ತೆಗೆದುಕೊಳ್ಳಲು ಆಯ್ಕೆಗಳಿರುತ್ತದೆ. ಅಲ್ಲಿ ನೀವು ಕ್ಲಿಕ್ ಮಾಡಿ ಸಂದೇಶಗಳನ್ನು ವಾಪಸ್ ಪಡೆಯಬಹುದು.
ಎರಡನೆಯದಾಗಿ, ನಿಮ್ಮ ಫೋನ್ನ ಫೈಲ್ ಮ್ಯಾನೇಜರ್ಗೆ ಹೋಗಿ ವಾಟ್ಸಾಪ್ ಫೋಲ್ಡರ್> ಡೇಟಾಬೇಸ್ಗೆ ಹೋಗಿ. ಡೇಟಾಬೇಸ್ ಫೋಲ್ಡರ್ ಎಲ್ಲಾ ವಾಟ್ಸಾಪ್ ಬ್ಯಾಕಪ್ ಫೈಲ್ಗಳನ್ನು ಒಳಗೊಂಡಿದೆ. Msgstore.db.crypt12 ಫೈಲ್ ಅನ್ನು ಆಯ್ಕೆ ಮಾಡಿ ಮತ್ತು ಅದನ್ನು msgstore_BACKUP.db.crypt12 ಎಂದು ಮರು ಹೆಸರಿಸಿ. ನಂತರ ಗೂಗಲ್ ಡ್ರೈವ್ ಅನ್ನು ತೆರೆದು ಬ್ಯಾಕಪ್ ಅನ್ನು ಟ್ಯಾಪ್ ಮಾಡಿ. ಇದು ನಿಮ್ಮ ಫೋನ್ ಅನ್ನು ಒತ್ತಾಯಿಸಿ ಸ್ಥಳೀಯ ಬ್ಯಾಕಪ್ನಿಂದ ಸಂದೇಶಗಳನ್ನು ಮರು ಮರುಸ್ಥಾಪಿಸುತ್ತಿದೆ.
ಮೊದಲನೆಯ ಮಾರ್ಗದಲ್ಲಿ ನೀವು ಸಂದೆಶಗಳ ಬ್ಯಾಕಪ್ ಪಡೆಯಲು ಸಾಧ್ಯವಾಗದಿದ್ದರೆ ಅದು ನಿಮ್ಮ ತಪ್ಪಾಗಿರುತ್ತದೆ. ವಾಟ್ಸ್ಆಪ್ ಮೆಸೇಜ್ ಮತ್ತು ವಿಡಿಯೋಗಳನ್ನು ವಾಪಸ್ ಪಡೆಯಲು ಸಾಧ್ಯವಾಗುವಂತೆ ವಾಟ್ಸ್ಆಪ್ ಸೆಟ್ಟಿಂಗ್ಸ್ನಲ್ಲಿ ಬದಲಾವಣೆ ಮಾಡದೇ ಇರುವುದು ಅಲ್ಲಿ ಸಮಸ್ಯೆಯಾಗಿರುತ್ತದೆ. ಹಾಗಾಗಿ, ಅಳಿಸಿದ ಸಂದೇಶ ಮತ್ತು ವಿಡಿಯೋಗಳನ್ನು ಮರುಪಡೆಯಲು, ನಿಮ್ಮ ವಾಟ್ಸ್ಆಪ್ ಡೇಟಾವನ್ನು ಗೂಗಲ್ ಡ್ರೈವ್ ಅಥವಾ ಖಾತೆಯಲ್ಲಿ ಬ್ಯಾಕಪ್ ಮಾಡಲು ಚಾಟ್ ಬ್ಯಾಕಪ್ ಟ್ಯಾಪ್ ಮಾಡಿದಾಗಲೇ ಅಲ್ಲಿ ಸೆಟ್ಟಿಂಗ್ಸ್ನಲ್ಲಿ ಅನುಮತಿಸಿ.
ಜಿಯೋ ಫೈಬರ್ ವೆಲ್ಕಮ್ ಆಫರ್!..ಅಂಬಾನಿ ಹೇಳಿದ ಪ್ರಮುಖ 10 ಅಂಶಗಳು!
ಇನ್ನು ಎರಡನೇ ಮಾರ್ಗ ಸ್ವಲ್ಪ ಕ್ಲಿಷ್ಟಕರ ಎನಿಸಬಹುದು. ಏಕೆಂದರೆ, ಇಲ್ಲಿ ಸಂದೇಶಗಳನ್ನು ಬ್ಯಾಕಪ್ ತೆಗೆದುಕೊಳ್ಳುವುದು ಹೆಚ್ಚು ಕಷ್ಟವಾಗುತ್ತದೆ. ಅಲ್ಲದೇ, ಸಂದೇಶಗಳನ್ನು ವಾಪಸ್ ಪಡೆಯುವಾಗ ನಿಮ್ಮ ಇತರೆ ಡೇಟಾ ಅಳಿಸಿಹೋಗಬಹುದು. ಫೈಲ್ ಮ್ಯಾನೇಜರ್ ಫೈಲ್ಗಳನ್ನು ಮರುಹೆಸರಿಸಬೇಕಿರುವುದು. ಡ್ರೈವ್ ನಿಮ್ಮ ಚಾಟ್ ಬ್ಯಾಕಪ್ ಇಲ್ಲ ಎಂದು ಪರಿಗಣಿಸಿ ಸ್ಥಳೀಯ ಬ್ಯಾಕಪ್ನಿಂದ ಚಾಟ್ಗಳನ್ನು ಮರುಸ್ಥಾಪಿಸಲು ಪ್ರಾಂಪ್ಟ್ ನೀಡುತ್ತದೆ. ಹಾಗಾಗಿ, ವಾಟ್ಸ್ಆಪ್ ಸೆಟ್ಟಿಂಗ್ಸ್ನಲ್ಲಿ ಬ್ಯಾಕಪ್ಗೆ ಅನುಮತಿ ನೀಡಿರುವುದು ಒಳಿತು.