Back
Home » ಗಾಸಿಪ್
ಪ್ರಭಾಸ್-ಅನುಷ್ಕಾ ಡೇಟಿಂಗ್ ಬಗ್ಗೆ ಬಾಲಿವುಡ್ ಮಾಧ್ಯಮಗಳು ಅಚ್ಚರಿ ವರದಿ.!
Oneindia | 13th Aug, 2019 07:00 PM
 • ಪ್ರಭಾಸ್ ಮದುವೆಗೆ ಓಕೆನಾ ಅಥವಾ ಇಲ್ವಾ?

  ಅಕ್ಟೋಬರ್ ತಿಂಗಳು ಬಂದ್ರೆ ಪ್ರಭಾಸ್ 40ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಪ್ರಭಾಸ್ ಮನೆಯಲ್ಲಿ ಮದುವೆಗೆ ಭಾರಿ ಒತ್ತಡ ಇದೆ. ಈಗಾಗಲೇ ಎನ್.ಆರ್.ಐ ಹುಡುಗಿಯೊಬ್ಬಳನ್ನ ಪ್ರಭಾಸ್ ಮನೆಯವರು ನೋಡಿ ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆದ್ರೆ, ಪ್ರಭಾಸ್ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಾ ಅಥವಾ ಇಲ್ವಾ ಎಂಬುದರ ಬಗ್ಗೆ ಅನುಮಾನ ಇದೆ.


 • ಅನುಷ್ಕಾ-ಪ್ರಭಾಸ್ ಲವ್ವು ಪಕ್ಕಾ, ಮದ್ವೆಗೆ ರೆಡಿ

  ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ನಡುವೆ ಏನೂ ಇಲ್ಲ. ಅವರಿಬ್ಬರು ಸ್ನೇಹಿತರು ಅಷ್ಟೆ ಎನ್ನಲಾಗುತ್ತಿದೆ. ಆದ್ರೆ, ಈ ಬಗ್ಗೆ ಬಾಲಿವುಡ್ ಮಾಧ್ಯಮಗಳು ಮಾತ್ರ ಬೇರೆಯದ್ದು ಕಥೆ ಹೇಳುತ್ತಿದೆ. ಇಬ್ಬರು ಡೇಟ್ ಮಾಡ್ತಿದ್ದಾರೆ. ಹೈದ್ರಾಬಾದ್ ನಲ್ಲಿ ಸೀಕ್ರೆಟ್ ಆಗಿ ಭೇಟಿಯಾಗ್ತಿದ್ದಾರೆ. ಮತ್ತು ಸಾಹೋ ವಿಶೇಷ ಪ್ರದರ್ಶನಕ್ಕೆ ಕೂಡ ಅನುಷ್ಕಾ ಆವರನ್ನ ಕರೆದುಕೊಂಡಿದ್ದರು ಎಂಬ ಸುದ್ದಿ ಇದೆ.

  ಪ್ರಭಾಸ್ ಜೊತೆ ಮದುವೆ ಬಗ್ಗೆ ಅನುಷ್ಕಾ ತಾಯಿ ಹೇಳಿದ ಮಾತಿನ ಅರ್ಥವೇನು.?


 • ಅಮೆರಿಕಾದಲ್ಲಿ ಮನೆ ಖರೀದಿಗೆ ಪ್ಲಾನ್

  ಈ ಹಿಂದೆ ಅನುಷ್ಕಾ ಮತ್ತು ಪ್ರಭಾಸ್ ಇಬ್ಬರು ತಮ್ಮ ಅಫೇರ್ ಬಗ್ಗೆ ಹರಿದಾಡಿದ್ದ ಸುದ್ದಿಯನ್ನ ತಳ್ಳಿ ಹಾಕಿದ್ದರು. ಆದ್ರೀಗ, ಬಾಲಿವುಡ್ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ, ಅಮೆರಿಕಾದ ಲಾಸ್ ಏಂಜಲೀಸ್ ನಲ್ಲಿ ಇಬ್ಬರು ಸೇರಿ ಮನೆಯೊಂದನ್ನ ಖರೀದಿ ಮಾಡಲು ಮುಂದಾಗಿದ್ದಾರಂತೆ. ಇದಕ್ಕಾಗಿ ಹುಡುಕಾಟ ಕೂಡ ಮಾಡಿದ್ದಾರೆ ಎನ್ನಲಾಗಿದೆ. ಈ ಸುದ್ದಿ ಈಗ ಸಿನಿಜಗತ್ತಿನಲ್ಲಿ ಭಾರಿ ಕುತೂಹಲ ಹುಟ್ಟುಹಾಕಿದೆ.

  ಅನುಷ್ಕಾ-ಪ್ರಭಾಸ್ ಇಬ್ಬರ ಪ್ರೀತಿ ನಿಜ.! ಮದುವೆಗೆ ವಿಲನ್ ಯಾರು.?


 • ಇಬ್ಬರು ಫ್ರೆಂಡ್ ಅಷ್ಟೇ

  ಅನುಷ್ಕಾ ಮತ್ತು ಪ್ರಭಾಸ್ ಸಂಬಂಧದ ಬಗ್ಗೆ ಕಳೆದ ನಾಲ್ಕೈದು ವರ್ಷದಿಂದ ಕುತೂಹಲ ಮೂಡಿಸಿದೆ. ಇಬ್ಬರು ಕೂಡ ನಾವು ಬರಿ ಫ್ರೆಂಡ್ಸ್ ಅಷ್ಟೆ. ಇಬ್ಬರು ಒಟ್ಟಿಗೆ ಸಿನಿಮಾ ಮಾಡಿದ್ರೆ, ಒಟ್ಟಿಗೆ ಕಾಣಿಸಿಕೊಂಡ್ರೆ ಲವ್, ಮದುವೆ ಆಗ್ತಾರೆ ಎನ್ನುವುದರಲ್ಲಿ ಅರ್ಥವಿಲ್ಲ ಎಂದು ಪ್ರಭಾಸ್ ಮತ್ತು ಅನುಷ್ಕಾ ಪದೇ ಪದೇ ಹೇಳುತ್ತಿದ್ದಾರೆ. ಹೀಗಿದ್ದರೂ ಇಂತಹ ಸುದ್ದಿಗಳು ಯಾಕೆ ಮತ್ತೆ ಮತ್ತೆ ಸದ್ದು ಮಾಡ್ತಿದೆ ಎಂಬುದು ಗೊತ್ತಾಗುತ್ತಿಲ್ಲ.
ಟಾಲಿವುಡ್ ಡಾರ್ಲಿಂಗ್ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ನಡುವಿನ ಪ್ರೀತಿ, ಪ್ರೇಮ, ಮದುವೆ ಎಲ್ಲವೂ ಮುಗಿದು ಹೋದ ಕಥೆ. ಇವರಿಬ್ಬರ ನಡುವೆ ಏನೂ ಇಲ್ಲ. ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿರುವ ಕಲಾವಿದರಷ್ಟೇ ಎನ್ನುವ ಮಟ್ಟಕ್ಕೆ ಈ ಸುದ್ದಿಯನ್ನ ಪಕ್ಕಕ್ಕೆ ಇಡಲಾಗಿತ್ತು.

ಆದ್ರೀಗ, ಬಾಲಿವುಡ್ ಮಾಧ್ಯಮಗಳು ಅಚ್ಚರಿಯ ವಿಷ್ಯಗಳನ್ನ ಹೊರಹಾಕಿದೆ. ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ನಡುವೆ ಪ್ರೀತಿ ಇದೆ, ಇಬ್ಬರು ಮದುವೆನೂ ಆಗ್ತಾರೆ, ಇಬ್ಬರು ವಿದೇಶದಲ್ಲಿ ಜೀವನ ಮಾಡ್ತಾರೆ ಎಂಬ ಸರ್ಪ್ರೈಸ್ ಅಂಶಗಳನ್ನ ಬಹಿರಂಗಪಡಿಸಿದೆ.

ಲಂಡನ್ ಗೆ ಪ್ರಭಾಸ್-ಅನುಷ್ಕಾ: ಟ್ರಿಪ್ ಪ್ಲಾನ್ ಮಾಡಿದ ರಾಜಮೌಳಿ.!

ಈ ಸುದ್ದಿಗಳನ್ನ ಕೇಳಿದ ಅಭಿಮಾನಿಗಳು ಹೌದಾ....ಇದು ನಿಜನಾ ಎಂದು ಬೆರಗಾಗಿದ್ದಾರೆ. ಅಷ್ಟಕ್ಕೂ, ಪ್ರಭಾಸ್ ಮತ್ತು ಅನುಷ್ಕಾ ಮತ್ತು ವಿದೇಶದ ಸೀಕ್ರೆಟ್ ಏನು? ಮುಂದೆ ಓದಿ.....

   
 
ಹೆಲ್ತ್