Back
Home » Car News
ಸೆಕೆಂಡ್ ಹ್ಯಾಂಡ್ ಕಾರಿಗೆ ಭಾರೀ ಬೇಡಿಕೆ- 250ಕ್ಕೆ ಹೆಚ್ಚಳವಾದ ಮಾರುತಿ ಟ್ರೂ ವ್ಯಾಲ್ಯೂ..!
DriveSpark | 13th Aug, 2019 05:59 PM
 • ಸೆಕೆಂಡ್ ಹ್ಯಾಂಡ್ ಕಾರಿಗೆ ಭಾರೀ ಬೇಡಿಕೆ- 250ಕ್ಕೆ ಹೆಚ್ಚಳವಾದ ಮಾರುತಿ ಟ್ರೂ ವ್ಯಾಲ್ಯೂ..!

  ಸದ್ಯ ಕಾರು ಮಾರಾಟದಲ್ಲಿ ನಂ.1 ಸ್ಥಾನದಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲೂ ಅಧಿಪತ್ಯ ಸಾಧಿಸಿದ್ದು, ಟ್ರೂ ವ್ಯಾಲ್ಯೂ ಮಾರಾಟ ಮಳಿಗೆಗಳ ಮೂಲಕ ಬಳಸಿದ ಮಾರಾಟದಲ್ಲೂ ತನ್ನದೇ ಆದ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಕಳೆದ 2 ವರ್ಷಗಳಲ್ಲಿ ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮತ್ತು ಮಾರಾಟದಲ್ಲಿ ಭಾರೀ ಪ್ರಮಾಣದ ಆದಾಯ ಗಳಿಸಿರುವ ಮಾರುತಿ ಸುಜುಕಿ ಇದೀಗ ಗ್ರಾಹಕರ ಬೇಡಿಕೆಯೆಂತೆ ಮಾರುಕಟ್ಟೆ ವಿಸ್ತರಣೆಗೆ ಮುಂದಾಗಿದೆ.

 • ಸೆಕೆಂಡ್ ಹ್ಯಾಂಡ್ ಕಾರಿಗೆ ಭಾರೀ ಬೇಡಿಕೆ- 250ಕ್ಕೆ ಹೆಚ್ಚಳವಾದ ಮಾರುತಿ ಟ್ರೂ ವ್ಯಾಲ್ಯೂ..!

  ಪ್ರಸ್ತುತ 50ಕ್ಕೂ ಹೆಚ್ಚು ಮಾರುತಿ ಸುಜುಕಿ ಟ್ರೂ ವ್ಯಾಲ್ಯೂ ಕಾರು ಮಾರಾಟ ಮಳಿಗೆಗಳು ದೇಶದ ವಿವಿಧ ಪ್ರಮುಖ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಆಕರ್ಷಕ ಬೆಲೆಯಿಂದಾಗಿ ಅತಿ ಕಡಿಮೆ ಅವಧಿಯಲ್ಲಿ ಭಾರೀ ಜನಪ್ರಿಯತೆ ಗಳಿಸುತ್ತಿದೆ.

 • ಸೆಕೆಂಡ್ ಹ್ಯಾಂಡ್ ಕಾರಿಗೆ ಭಾರೀ ಬೇಡಿಕೆ- 250ಕ್ಕೆ ಹೆಚ್ಚಳವಾದ ಮಾರುತಿ ಟ್ರೂ ವ್ಯಾಲ್ಯೂ..!

  ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮತ್ತು ಮಾರಾಟದಲ್ಲಿ ಪಾರದರ್ಶಕ ಕಾಯ್ದುಕೊಳ್ಳುವ ಮಾರುತಿ ಸುಜುಕಿ ನ್ಯಾಯಯುತವಾದ ಬೆಲೆಗಳ ಮೂಲಕ ಗ್ರಾಹಕರ ವಿಶ್ವಾಸಗಳಿಸುವಲ್ಲಿ ಯಶಸ್ವಿಯಾಗಿದ್ದು, ವರ್ಷಾಂತ್ಯಕ್ಕೆ ಟ್ರೂ ವ್ಯಾಲ್ಯೂ ಮಾರಾಟ ಮಳಿಗೆಗಳನ್ನು 50ರಿಂದ 250ಕ್ಕೆ ಹೆಚ್ಚಿಸುವ ಯೋಜನೆಗೆ ಚಾಲನೆ ನೀಡಿದೆ.

 • ಸೆಕೆಂಡ್ ಹ್ಯಾಂಡ್ ಕಾರಿಗೆ ಭಾರೀ ಬೇಡಿಕೆ- 250ಕ್ಕೆ ಹೆಚ್ಚಳವಾದ ಮಾರುತಿ ಟ್ರೂ ವ್ಯಾಲ್ಯೂ..!

  ಹೀಗಾಗಿ ಒಂದನೇ ದರ್ಜೆಯ ನಗರಗಳಲ್ಲಿ ಮಾತ್ರವಲ್ಲದೇ ಎರಡನೇ ದರ್ಜೆಯ ನಗರಗಳಲ್ಲೂ ಟ್ರೂ ವ್ಯಾಲ್ಯೂ ಮಾರಾಟ ಮಳಿಗೆಗಳ ಜಾಲ ವಿಸ್ತರಿಸಲಿದ್ದು, ಹೊಸ ಕಾರು ಖರೀದಿ ಸಾಧ್ಯವಿಲ್ಲದ ಗ್ರಾಹಕರು ಉತ್ತಮ ಬೆಲೆಗಳಲ್ಲಿ ಖಾತ್ರಿ ಇರುವ ವಾಹನ ಖರೀದಿಗೆ ಇದು ಸಾಕಷ್ಟು ಅನುಕೂಲಕರವಾಗಲಿದೆ. ಹಾಗೆಯೇ ಬಳಸಿದ ಕಾರುನ್ನು ಅತಿ ಕಡಿಮೆ ಅವಧಿಯಲ್ಲಿ ಉತ್ತಮ ಬೆಲೆಗಳಿಗೆ ಮಾರಾಟ ಮಾಡುವುದಕ್ಕೂ ಟ್ರೂ ವ್ಯಾಲ್ಯೂ ಸಹಕಾರಿಯಾಗಿದೆ.

 • ಸೆಕೆಂಡ್ ಹ್ಯಾಂಡ್ ಕಾರಿಗೆ ಭಾರೀ ಬೇಡಿಕೆ- 250ಕ್ಕೆ ಹೆಚ್ಚಳವಾದ ಮಾರುತಿ ಟ್ರೂ ವ್ಯಾಲ್ಯೂ..!

  ಇನ್ನು ಹೊಸ ವಾಹನಗಳ ಖರೀದಿಯು ಇತ್ತೀಚೆಗೆ ಸಾಕಷ್ಟು ದುಬಾರಿಯಾಗುತ್ತಿದ್ದು, ಆಟೋ ಉದ್ಯಮದಲ್ಲಿನ ನೀತಿ ನಿಯಮಗಳನ್ನು ನಿರಂತರವಾಗಿ ಬದಲಾವಣೆ ಮಾಡುತ್ತಿರುವುದು ಆಟೋ ಉತ್ಪಾದನಾ ವೆಚ್ಚಗಳು ಹೆಚ್ಚಳವಾಗಲು ಪ್ರಮುಖ ಕಾರಣವಾಗುತ್ತಿದೆ.

  MOST READ: ಪ್ಲಾಸ್ಟಿಕ್‌ನಿಂದ ಉತ್ಪಾದನೆ ಮಾಡಲಾದ ಈ ಪೆಟ್ರೋಲ್ ದರ ಎಷ್ಟು ಗೊತ್ತಾ?

 • ಸೆಕೆಂಡ್ ಹ್ಯಾಂಡ್ ಕಾರಿಗೆ ಭಾರೀ ಬೇಡಿಕೆ- 250ಕ್ಕೆ ಹೆಚ್ಚಳವಾದ ಮಾರುತಿ ಟ್ರೂ ವ್ಯಾಲ್ಯೂ..!

  ಇದರಿಂದಾಗಿ ಸದ್ಯ ಮಾರುಕಟ್ಟೆಯಲ್ಲಿ ಹೊಸ ವಾಹನಗಳ ಮಾರಾಟ ಪ್ರಮಾಣವು ಮಂದಗತಿಯಲ್ಲಿ ಸಾಗಿದ್ದು, ಕಾರು ಖರೀದಿಯ ಯೋಜನೆಯಲ್ಲಿದ್ದ ಮಧ್ಯಮ ವರ್ಗದ ಬಹುತೇಕ ಕಾರು ಖರೀದಿದಾರರು ಉತ್ತಮ ಬೆಲೆಗಳಲ್ಲಿ ದೊರೆಯಬಹುದಾದ ಸೆಕೆಂಡ್ ಹ್ಯಾಂಡ್ ಕಾರುಗಳ ಖರೀದಿಗೆ ಎದುರು ನೋಡುತ್ತಿದ್ದಾರೆ.

  MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

 • ಸೆಕೆಂಡ್ ಹ್ಯಾಂಡ್ ಕಾರಿಗೆ ಭಾರೀ ಬೇಡಿಕೆ- 250ಕ್ಕೆ ಹೆಚ್ಚಳವಾದ ಮಾರುತಿ ಟ್ರೂ ವ್ಯಾಲ್ಯೂ..!

  ಹೀಗಾಗಿ ಮಾರುತಿ ಸುಜುಕಿ ಟ್ರೂ ವ್ಯಾಲ್ಯೂ ಸೇರಿದಂತೆ ಹಲವಾರು ಆಟೋ ಉತ್ಪಾದನಾ ಸಂಸ್ಥೆಗಳು ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟಕ್ಕಾಗಿ ಪ್ರತ್ಯೇಕ ಪ್ಯಾಟ್‌ಫಾರ್ಮ್‌ಗಳನ್ನು ತೆರೆಯುತ್ತಿದ್ದು, ಹೊಸ ಕಾರು ಮಾರಾಟಕ್ಕಿಂತಲೂ ಸೆಕೆಂಡ್ ಹ್ಯಾಂಡ್ ಕಾರು ಮಾರಾಟದ ಮೂಲಕ ಅಧಿಕ ಪ್ರಮಾಣದ ಲಾಭಾಂಶ ಗಳಿಕೆ ಮಾಡುವ ಯೋಜನೆಯಲ್ಲಿವೆ.

  MOST READ: ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲುಗಡೆ ಮಾಡಿದವರಿಗೆ ಶಾಕ್ ಕೊಟ್ಟ ಹೊಸ ರೂಲ್ಸ್

 • ಸೆಕೆಂಡ್ ಹ್ಯಾಂಡ್ ಕಾರಿಗೆ ಭಾರೀ ಬೇಡಿಕೆ- 250ಕ್ಕೆ ಹೆಚ್ಚಳವಾದ ಮಾರುತಿ ಟ್ರೂ ವ್ಯಾಲ್ಯೂ..!

  ಜೊತೆಗೆ 2020ರ ಏಪ್ರಿಲ್ 1ರಿಂದ ಬಿಎಸ್-6 ವಾಹನಗಳ ಉತ್ಪಾದನೆ ಮತ್ತು ಮಾರಾಟವು ಕಡ್ಡಾಯವಾಗಿ ಜಾರಿಗೆ ಬರಲಿದ್ದು, ಈ ಕಾರಣದಿಂದಲೂ ಕೂಡಾ ಹಳೆಯ ವಾಹನಗಳ ಮರುಮಾರಾಟ ಪ್ರಕ್ರಿಯೆ ಹೆಚ್ಚುತ್ತಿರುವುದು ಟ್ರೂ ವ್ಯಾಲ್ಯೂ ವಿಸ್ತರಣೆಗೆ ಪ್ರಮುಖವಾಗಿದೆ.
ಹೊಸ ವಾಹನಗಳ ಮಾರಾಟ ಪ್ರಮಾಣವು ಕುಸಿತಕಂಡರೂ ಸಹ ಬಳಕೆ ಮಾಡಿದ(ಸೆಕೆಂಡ್ ಹ್ಯಾಂಡ್) ವಾಹನಗಳಿಗೆ ಉತ್ತಮ ಬೇಡಿಕೆ ಕಂಡುಬರುತ್ತಿದ್ದು, ಮಾರುತಿ ಸುಜುಕಿ ಸಂಸ್ಥೆಯು ತನ್ನ ಟ್ರೂ ವ್ಯಾಲ್ಯೂ ಮಾರಾಟ ಮಳಿಗೆಗಳನ್ನು ಸಂಖ್ಯೆಯನ್ನು 250ಕ್ಕೆ ಹೆಚ್ಚಿಸಲು ನಿರ್ಧರಿಸಿದೆ.

ಹೆಲ್ತ್