Back
Home » ಸುದ್ದಿ
ವಿಶ್ವದ 25 ಕುಟುಂಬದ ಬಳಿ ಬರೋಬ್ಬರಿ 100 ಲಕ್ಷ ಕೋಟಿ ರೂ ಆಸ್ತಿ
Oneindia | 14th Aug, 2019 09:26 AM

ವಾಷಿಂಗ್ಟನ್, ಆಗಸ್ಟ್ 14:ವಿಶ್ವದ 25 ಶ್ರೀಮಂತ ಕುಟುಂಬಗಳ ಬಳಿ ಬರೋಬ್ಬರಿ 100 ಲಕ್ಷ ಕೋಟಿ ರೂ ಮೌಲ್ಯದ ಆಸ್ತಿ ಹೊಂದಿದೆ.

ಇವರ ಗಳಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.ಕಳೆದೊಂದು ವರ್ಷದಲ್ಲಿ 17.78 ಲಕ್ಷ ಕೋಟಿ ರೂ ಆಸ್ತಿ ಮೌಲ್ಯ ಏರಿಕೆಯಾಗಿದೆ. ಇವರಲ್ಲಿ ಭಾರತದ ರಿಲಾಯನ್ಸ್ ಇಂಡಸ್ಟ್ರಿಯ ಮುಕೇಶ್ ಅಂಬಾನಿ ಕೂಡ ಸೇರಿದ್ದಾರೆ.

ಸೆ.5; ಮುಖೇಶ್ ಅಂಬಾನಿ 'ಗಿಗಾ ಸುನಾಮಿ'ಗೆ ಮುಹೂರ್ತ ಫಿಕ್ಸ್!

ಅಂಬಾನಿ ಕುಟುಂಬವು ವಿಶ್ವದ 9ನೇ ಶ್ರೀಮಂತ ಕುಟುಂಬದ ಪಟ್ಟಿಯಲ್ಲಿದೆ. ರಿಟೇಲ್ ಉದ್ಯಮದ ದಿಗ್ಗಜ ವಾಲ್‌ಮಾರ್ಟ್ ಕಂಪನಿಯ ಮಾಲಿಕತ್ವ ಹೊಂದಿರುವ ವಾಲ್ಟನ್ಸ್ ಕುಟುಂಬ ಪ್ರತಿ ನಿಮಿಷಕ್ಕೆ ಸುಮಾರು 50 ಲಕ್ಷ ರೂ ದುಡಿಯುತ್ತಿದೆ.

ಗಂಟೆಗೆ 28 ಕೋಟಿ ರೂ ಹಾಗೂ ದಿನಕ್ಕೆ 672 ಕೋಟಿ ರೂ ಗಳಿಸುತ್ತಿದೆ. ಅವರ ಆಸ್ತಿ ಮೌಲ್ಯ ಈಗ 13.58 ಲಕ್ಷ ಕೋಟಿ ರೂಗೆ ಏರಿದೆ.

ಅಮೆರಿಕದಲ್ಲಿ ವಾಲ್ಟನ್ಸ್ ಕುಟುಂಬದ ರೀತಿಯ ಉಳಿದ ಶ್ರೀಮಂತ ಶೇ.0.1 ಕುಟುಂಬಗಳು ಆದುನಿಕ ವಿಶ್ವದಲ್ಲಿ ಮೊದಲ ಬಾರಿಗೆ ಅತಿ ಹೆಚ್ಚು ಪ್ರಮಾಣದ ಆಸ್ತಿಯನ್ನು ಹೊಂದಿದೆ. ಇದು ವಿಶ್ವದ ಬೇರೆ ಬೇರೆ ಕಡೆಗೂ ವಿಸ್ತರಿಸುತ್ತಿದೆ.

ಕಳೆದೊಂದು ವರ್ಷದಲ್ಲೇ ವಿಶ್ವದ 25 ಶ್ರೀಮಂತ ಕುಟುಂಬಗಳ ಆಸ್ತಿಯು ಶೇ. 25ಕ್ಕೂ ಅಧಿಕ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರಿಂದ ಬಡತನ ಹಾಗೂ ಶ್ರೀಮಂತಿಕೆಯ ಅಸಮಾನತೆ ಪ್ರಮಾಣ ಏರುತ್ತಲೇ ಹೋಗುತ್ತಿದೆ.

   
 
ಹೆಲ್ತ್