Back
Home » ಸಿನಿ ಸಮಾಚಾರ
ಡೈರೆಕ್ಟರ್ ಆದ 'ಕೆಜಿಎಫ್' ಡೈಲಾಗ್ ರೈಟರ್ ಚಂದ್ರಮೌಳಿ
Oneindia | 14th Aug, 2019 08:45 AM

'ಕೆಜಿಎಫ್' ಸಿನಿಮಾಗೆ ಪವರ್ ಫುಲ್ ಪದಗಳನ್ನು ತುಂಬಿಸಿದವರು ಸಂಭಾಷಣೆಕಾರ ಚಂದ್ರಮೌಳಿ. ಇಷ್ಟು ದಿನ ಡೈಲಾಗ್ ರೈಟರ್ ಆಗಿ ಹಾಗೂ ನಿರ್ದೇಶಕರ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಇವರು ಈಗ ತಾವೇ ಒಂದು ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ.

ಈ ಬಗ್ಗೆ 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ಮಾತನಾಡಿರುವ ಚಂದ್ರಮೌಳಿ ಸಿನಿಮಾದ ವಿವರ ಹಂಚಿಕೊಂಡಿದ್ದಾರೆ. ಇದೇ ತಿಂಗಳ 18 ರಂದು ನಂದಿನಿ ಲೇ ಔಟ್ ನಲ್ಲಿರುವ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಅವರ ಮೊದಲ ಸಿನಿಮಾದ ಮುಹೂರ್ತ ನಡೆಯಲಿದೆ.

ಹೊಸ ಹುಡುಗ ರಾಮ್ ಚಿತ್ರದ ನಾಯಕನಾಗಿದ್ದಾರೆ. ಹೈದರಾಬಾದ್ ಹುಡುಗಿ ಡಿಂಪಲ್ ಹಯಾತಿ ಚಿತ್ರದ ನಾಯಕಿ. ಇದು ಅವರ ಮೂರನೇ ಸಿನಿಮಾವಾಗಿದ್ದು, ಕನ್ನಡದಲ್ಲಿ ಮೊದಲ ಚಿತ್ರ. ಉಳಿದಂತೆ, ನಟ ಸಾಯಿ ಕುಮಾರ್, ಕಾಮಿಡಿ ಕಿಲಾಡಿ ಜಿಜಿ, ರಘು, ಅಶೋಕ್ ನಟಿಸುತ್ತಿದ್ದಾರೆ.

ವಿಶೇಷ ಅಂದರೆ, ಈ ಸಿನಿಮಾದ ಮೂಲಕ ತೆಲುಗಿನ 'ಅರ್ಜುನ್ ರೆಡ್ಡಿ' ಮ್ಯೂಸಿಕ್ ಡೈರೆಕ್ಟರ್ ರಾಧನ್ ಕನ್ನಡಕ್ಕೆ ಬರುತ್ತಿದ್ದಾರೆ. ಶ್ರೀಕಾಂತ್ (ಕೆಜಿಎಫ್) ಸಂಕಲನ, ವಿಕ್ರಮ್ ಮೊರ್ (ಕೆಜಿಎಫ್) ಸಾಹಸ ನಿರ್ದೇಶನ, ನೃತ್ಯ ನಿರ್ದೇಶನ ಮೋಹನ್ (ಕೆಜಿಎಫ್) ಮಾಡುತ್ತಿದ್ದಾರೆ. 'ದಿ ವಿಲನ್' ಹಾಗೂ 'ಭರಾಟೆ' ಸಿನಿಮಾಗಳ ಛಾಯಾಗ್ರಾಹಕ ಗಿರೀಶ್ ಈ ಸಿನಿಮಾಗೆ ಕೆಲಸ ಮಾಡುತ್ತಿದ್ದಾರೆ.

ಈ ಹಿಂದೆ 'ಮಾಸ್ಟರ್ ಪೀಸ್', 'ರಥಾವರ', 'ಕೆಜಿಎಫ್' ಸೇರಿದಂತೆ ಇತರ ಸಿನಿಮಾಗಳ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿರುವ ಚಂದ್ರಮೌಳಿ ಈಗ ಸ್ವಾತಂತ್ರ್ಯ ನಿರ್ದೇಶಕರಾಗಿದ್ದಾರೆ. ಸಿನಿಮಾದ ಟೈಟಲ್ ಸದ್ಯದಲ್ಲಿಯೇ ರಿವೀಲ್ ಆಗಲಿದೆ.

   
 
ಹೆಲ್ತ್