Back
Home » ಸುದ್ದಿ
ಸರ್ವೀಸ್ ರಿವಾಲ್ವರ್ ಬಳಸಿ ಆತ್ಮಹತ್ಯೆ ಮಾಡಿಕೊಂಡ ಡಿಸಿಪಿ
Oneindia | 14th Aug, 2019 10:59 AM

ಫರಿದಾಬಾದ್(ಹರ್ಯಾಣ), ಆಗಸ್ಟ್ 14: ಫರಿದಾಬಾದಿನ ಡಿಸಿಪಿ ವಿಕ್ರಮ್ ಕಪೂರ್ ಅವರು ತಮ್ಮ ಮನೆಯಲ್ಲಿ ಮಂಗಳವಾರ ರಾತ್ರಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಸರ್ವೀಸ್ ರಿವಾಲ್ವರ್ ನಿಂಡ ಗುಂಡು ಹಾರಿಸಿಕೊಂಡಿದ್ದಾರೆ, ಆದರೆ, ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ.

ವಿಕ್ರಮ್ ಕಪೂರ್ ಅವರು ಕೆಲ ದಿನಗಳಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎಂದು ತಿಳಿದು ಬಂದಿದೆ. ಘಟನಾ ಸ್ಥಳದಲ್ಲಿರುವ ಹಿರಿಯ ಅಧಿಕಾರಿಗಳು ಮಾತನಾಡಿ, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದಿದ್ದಾರೆ.

58 ವರ್ಷ ವಯಸ್ಸಿನ ವಿಕ್ರಮ್ ಅವರು ಕುರುಕ್ಷೇತ್ರ ಜಿಲ್ಲೆ ಮೂಲದವರಾಗಿದ್ದು, ಡಿಸಿಪಿಯಾಗಿ ಕಳೆದ ವರ್ಷ ಬಡ್ತಿ ಹೊಂದಿದ್ದರು. 2020‌ ರ ಅಕ್ಟೋಬರ್ 31ರಂದು ಸೇವಾ ನಿವೃತ್ತಿ ಅವಧಿ ಮುಕ್ತಾಯವಾಗುತ್ತಿತ್ತು.

   
 
ಹೆಲ್ತ್