Back
Home » ಸಿನಿ ಸಮಾಚಾರ
ಕೋಮಲ್ ಮೇಲೆ ಹಲ್ಲೆ; ಜಗ್ಗೇಶ್ ಕುಟುಂಬ ಟಾರ್ಗೆಟ್?
Oneindia | 14th Aug, 2019 11:47 AM
 • ಚಿತ್ರರಂಗದವರು ಮಾಡಿದ್ರೆ ಸುಮ್ಮನೆ ಬಿಡಲ್ಲ

  ಜಗ್ಗೇಶ್ ಘಟನೆ ಹಿನ್ನೆಲೆಯಲ್ಲಿ, " ಕೋಮಲ್ ಮಗಳನ್ನ ಟೂಷನ್ ಗೆ ಬಿಡಲು ಹೋಗಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಕುಡಿದಿದ್ದ, ಗಾಂಜಾ ಸೇವನೆ ಮಾಡಿದ್ದ, ಜೊತೆಯಲ್ಲಿ ಯಾರೂ ಹುಡುಗಿ ಬೇರೆ ಇದ್ದಳು. ಇವರದ್ದೆಲ್ಲ ಒಂದು ಗ್ಯಾಂಗ್ ಇರುತ್ತೆ. ಬೆಂಗಳೂರಿನಲ್ಲಿ ಇಂತಹ ಜನರ ಅಟ್ಟಹಾಸ ಹೆಚ್ಚಾಗಿದೆ. ಈ ಹಲ್ಲೆಯಿಂದ ಚಿತ್ರರಂಗದವರ ಕೈವಾಡ ಇದ್ಯಾ ಅಥವಾ ಬೇರೆ ಯಾರಾದರೂ ಇದ್ದಾರಾ ಹಲವು ಅನುಮಾನ ಬರುತ್ತೆ. ಸದ್ಯಕ್ಕೆ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದೇನೆ. ಇಂತಹವರಿಗೆ ಬುದ್ದಿ ಕಲಿಸಬೇಕಿದೆ" ಎಂದು ಹೇಳಿದ್ದಾರೆ.


 • ಜಗ್ಗೇಶ್ ಎಚ್ಚರಿಕೆ ಯಾರಿಗೆ?

  ಅವರ ಈ ಮಾತುಗಳನ್ನು ಕೇಳಿದ್ರೆ ಚಿತ್ರರಂಗದ ಕಡೆಯಿಂದಲೇ ಕೋಮಲ್ ಮೇಲೆ ಹಲ್ಲೆ ನಡೆದಿರಬಹುದಾ? ಎಂಬ ಅನುಮಾನ ಕಾಡುತ್ತದೆ. "ನಾನು ಇಂಡಸ್ಟ್ರಿಯಲ್ಲಿ 38 ವರ್ಷದಿಂದ ಇದ್ದೀನಿ. ನನಗೆ ಬೇರೆ ರೀತಿ ಮಾತನಾಡಲೂ ಬರುತ್ತೆ" ಅಂತ ಜಗ್ಗೇಶ್ ಎಚ್ಚರಿಕೆ ನೀಡಿದ್ದು ತಮ್ಮದೇ ಕ್ಷೇತ್ರದಲ್ಲಿರುವವರಿಗಾ? ತನಿಖೆ ನಡೆಯಬೇಕಿದೆ.


 • ಕೆಂಪೇಗೌಡ-2 ನಂತರ ತಲೆನೋವು ಹೆಚ್ಚಾಗಿದೆ

  ನಟ ಕೋಮಲ್ ಅಭಿನಯದ ಕೆಂಪೇಗೌಡ-2 ಸಿನಿಮಾ ಇತ್ತೀಚಿಗಷ್ಟೆ ತೆರೆಗೆ ಬಂದಿದೆ. ಹಲ್ಲೆ ನಂತರ ಮಾತನಾಡಿದ ಕೋಮಲ್ ಸಿನಿಮಾ ರಿಲೀಸ್ ಆದ್ಮೇಲೆ ನಾನಾತರಹದ ತಲೆನೋವು ಜಾಸ್ತಿ ಆಗಿದೆ. ಅಲ್ಲದೆ ಸಿನಿಮಾ ಮಾಡುವುದೆ ಬೇಡ ಅಂತ ಎನಿಸುತ್ತಿದೆ ಎಂದು ಹೇಳಿದ್ದಾರೆ. ಹಾಗಾಗಿ ಸಿನಿಮಾ ರಿಲೀಸ್ ಆದ್ಮೇಲೆ ಕೋಮಲ್ ಗೆ ಯಾರಾದರು ಬೆದರಿಕೆ ಹಾಕುತ್ತಿದ್ದೀರಾ? ಯಾವ ರೀತಿಯ ತಲೆನೋವು ಅವರಿಗೆ ಕಾಡುತ್ತದೆ ಎನ್ನುವುದು ಕೋಮಲ್ ಅವರೆ ಸ್ಪಷ್ಟಪಡಿಸಬೇಕು.


 • ಸುದೀಪ್ ಬಗ್ಗೆ ಜಗ್ಗೇಶ್ ಹೇಳಿದ್ದೇನು?

  ಕೆಂಪೇಗೌಡ ಹೆಸರಿನ ಸಿನಿಮಾ ಮಾಡಿದ್ದೆ ಇದಕ್ಕೆಲ್ಲ ಕಾರಣ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಹರಿದಾಡುತ್ತಿದ್ದಂತೆ ನಟ ಜಗ್ಗೇಶ್ "ನನ್ನ ಕಲಾಬಂಧು, ಸುದೀಪ್ ಹೆಸರು ಯಾರಾದರು ಈ ವಿಷಯದಲ್ಲಿ ತಂದರೆ ಕ್ಷಮೆಯಿಲ್ಲಾ. ಸುದೀಪ್ ನನ್ನ ಒಡಹುಟ್ಟದಿದ್ದರು ನನ್ನ ಹೆಮ್ಮೆಯ ತಮ್ಮನಂತೆ. ಅವನು ನನ್ನ ಮೇಲೆ ಇಟ್ಟಿರುವ ಪ್ರೀತಿ ಬೆಲೆಕಟ್ಟಲಾಗದ್ದು. ಬರೆಯುವ ಆಸೆ ಇದ್ದರೆ ಉತ್ತಮ ಸಾಮಾಜಿಕ ವಿಷಯ ಬರೆಯಿರಿ. ಕೆಡಿಸದಿರಿ ಮನಗಳು" ಎಂದು ಹೇಳಿದ್ದಾರೆ.


 • ಪೊಲೀಸರು ಹೇಳಿದ್ದೇನು?

  ಈ ಘಟನೆಯ ಬಗ್ಗೆ ಮಾತನಾಡಿರುವ ಡಿಸಿಪಿ ಶಶಿಕುಮಾರ್, ಹಲ್ಲೆ ಮಾಡಿರುವ ವ್ಯಕ್ತಿ ವಿಜಿ ಎಂದು ತಿಳಿಸಿದ್ದಾರೆ. ''ಈತ ಶ್ರೀರಾಮ್ ಪುರದ ನಿವಾಸಿಯಾಗಿದ್ದು, ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಆತನ ಮೇಲೆ ಸದ್ಯ 307 ಕೇಸ್ ಅನ್ನು ದಾಖಲು ಮಾಡಲಾಗಿದೆ.'' ಎಂದು ಹೇಳಿದ್ದಾರೆ.ಈತ ಯಾರು? ಈತನಿಗೂ ಸಿನೆಮಾ ಜಗತ್ತಿಗೂ ಏನಾದರೂ ಸಂಬಂಧ ಇದೆಯಾ? ಇವೆಲ್ಲಕ್ಕೂ ಪೊಲೀಸರ ತನಿಖೆಯೇ ಉತ್ತರಿಸಬೇಕಿದೆ.


 • ಈ ಹಿಂದೆ ಜಗ್ಗೇಶ್ ಪುತ್ರನ ಮೇಲು ಹಲ್ಲೆ

  ನಟ ಜಗ್ಗೇಶ್ ಕುಟುಂಬವನ್ನು ಟಾರ್ಗೆಟ್ ಮಾಡಿದವರು ಯಾರು? ಯಾಕಂದ್ರೆ ಈ ಹಿಂದೆ ಕೂಡ ಜಗ್ಗೇಶ್ ಕುಟುಂಬದ ಮೇಲೆ ಹಲ್ಲೆ ಮಾಡಲಾಗಿತ್ತು. ಜಗ್ಗೇಶ್ ಪುತ್ರ ಗುರುರಾಜ್ ಮಗನನ್ನು ಶಾಲೆಗೆ ಬಿಡಲು ಹೋದ ಸಂದರ್ಭದಲ್ಲಿ ವೇಗದ ಚಾಲನೆ ವಿಚಾರವಾಗಿ ಮಾತಿಗೆ ಮಾತು ಬೆಳೆದು ಗುರುರಾಜ್‌ಗೆ ಚಾಕುವಿನಿಂದ ಇರಿದಿದ್ದರು.


 • ಹಿಂದೆ ನಡೆದ ಘಟನೆಗೆ ಸಂಬಂಧ ಇದೆಯಾ?

  ಇದೀಗ ಕೋಮಲ್ ಮೇಲೆ ಇಂತಹದೊಂದು ಹಲ್ಲೆ ನಡೆದ ಕಾರಣಕ್ಕೆ ಹಿನ್ನೆಲೆಯಲ್ಲಿ ನಡೆದ ಘಟನಾವಳಿಗಳಿಗೂ ತಾರ್ಕಿಕ ಸಂಬಂಧ ಇಹಬಹುದಾ ಎಂಬುದು ಅನುಮಾನ. ಏನೇ ಇರಲಿ, ಇದೊಂದು ಅಪರಾಧ ಪ್ರಕರಣ. ಪೊಲೀಸರ ತನಿಖೆಯಷ್ಟೆ ಎಲ್ಲದಕ್ಕೂ ಭವಿಷ್ಯದಲ್ಲಿ ಉತ್ತರ ನೀಡಬೇಕಿದೆ.
ಸ್ಯಾಂಡಲ್ ವುಡ್ ನಟ ಜಗ್ಗೇಶ್ ಸಹೋದರ ಕೋಮಲ್ ಮೇಲೆ ಹಾಡುಹಗಲೆ ನಡೆದ ಹಲ್ಲೆ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ಮಗಳನ್ನು ಕರೆದುಕೊಂಡು ಹೋಗುತ್ತಿದ್ದ ಕೋಮಲ್ ಮೇಲೆ ಏಕಾಏಕಿ ದಾಳಿ ನಡೆದಿದರ ಹಿಂದೆ ವ್ಯವಸ್ಥಿತ ಸಂಚೊಂದು ಕೆಲಸ ಮಾಡಿದೆಯಾ? ಕೋಮಲ್‌ಗೆ ನಡು ಬೀದಿಯಲ್ಲಿ ಗೂಸ ಕೊಡುವಂತದ್ದು ಏನು ನಡೆದಿತ್ತು? ಕೆಂಪೇಗೌಡ-2 ಸಿನಿಮಾ ರಿಲೀಸ್ ಗೂ ಈ ಘಟನೆಗೂ ಏನಾದರೂ ಸಂಬಂಧ ಇದೆಯಾ? ಇಂತಹ ಸಾಕಷ್ಟು ಪ್ರಶ್ನೆಗಳೀ ಗಾಂಧಿ ನಗರದ ಒಡಲಿನಲ್ಲಿ ಕೇಳಿ ಬರುತ್ತಿವೆ.

ಪ್ರಶ್ನೆಗಳು ಹುಟ್ಟಲು ಅದರದ್ದೇ ಆದ ಕಾರಣಗಳೂ ಇವೆ. ಘಟನೆ ಬಳಿಕ ಮಾಧ್ಯಮಗಳಿಗೆ ನಟ ಕೋಮಲ್ ನೀಡಿದ ಹೇಳಿಕೆ ಮೂಲ ಕಾರಣಗಳಲ್ಲೊಂದು. "ಕೆಂಪೇಗೌಡ-2 ಸಿನಿಮಾ ಮಾಡಿದ ನಂತರ ತಲೆನೋವು ಜಾಸ್ತಿ ಆಗಿದೆ. "ಕಾರಿನಲ್ಲಿ ಹೋಗುತ್ತಿರುವಾಗ ಹಿಂದೆಯಿಂದ ಬೈಕ್ ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಕಾರು ಟಚ್ ಮಾಡುತ್ತಲೆ, ಕೆಟ್ಟಪದಗಳಿಂದ ಬೈಯುತ್ತ ಬಂದಿದ್ದಾರೆ. ನಂತರ ಕಾರಿನಿಂದ ಇಳಿಯುತ್ತಿದ್ದಂತೆ ತಕ್ಷಣ ಹಲ್ಲೆ ಮಾಡಿದ್ದಾರೆ. ಯಾರು ಅಂತ ಗೊತ್ತಿಲ್ಲ. ಇತ್ತೀಚಿಗೆ ಸಿನಿಮಾ ರಿಲೀಸ್ ಆದ ಮೇಲೆ ನಾನಾತರಹದ ಟೆನ್ಷನ್ ಇದೆ. ಸಿನಿಮಾ ಯಾಕೆ ಮಾಡಿದೆ ಅಂತ ಅನಿಸುತ್ತಿದೆ. ಏನು ಮಾಡಬೇಕು ಅಂತ ಗೊತ್ತಿಲ್ಲ. ಇಂಡಸ್ಟ್ರಿಯವರೇ ಅಥವಾ ಬೇರೆ ಯಾರೋ ಎಂದು ಗೊತ್ತಿಲ್ಲ. ಯಾರ ಮೇಲೂ ಅನುಮಾನ ಪಡಲ್ಲ. ದೇವರು ಅಂತ ಇದ್ದಾನೆ ನೋಡಿಕೊಳ್ಳುತ್ತಾನೆ. ಪೊಲೀಸರು ತನಿಖೆ ಮಾಡುತ್ತಿದ್ದಾರೆ" ಎಂದು ಕೋಮಲ್ ಹೇಳಿದ್ದಾರೆ.

ಒಂದು ಕಡೆ ಕೋಮಲ್ ತಮ್ಮದೇ ಕ್ಷೇತ್ರದ ಜನರ ಮೇಲೆ ಅನುಮಾನ ಹೊರಹಾಕಿದ್ದಾರೆ. ಮತ್ತೊಂದೆಡೆ ಕೋಮಲ್ ಅಣ್ಣ, ರಾಜಕಾರಣಿಯೂ ಆಗಿರುವ ಜಗ್ಗೇಶ್ ಹೇಳಿಕೆ ಕೂಡ ಇದೇ ಹಾದಿಯಲ್ಲಿದೆ.

   
 
ಹೆಲ್ತ್