Back
Home » ಸಿನಿ ಸಮಾಚಾರ
'ಕರ್ನಾಟಕದ ಉದ್ಯೋಗ ಕನ್ನಡಿಗರಿಗೆ' : ಹೋರಾಟಕ್ಕೆ ಬಲ ತುಂಬಿದ ಸ್ಟಾರ್ ಗಳು
Oneindia | 14th Aug, 2019 11:38 AM

'ಕರ್ನಾಟಕದ ಉದ್ಯೋಗ ಕನ್ನಡಿಗರಿಗೆ ಸಿಗಲಿ' ಹೋರಾಟಕ್ಕೆ ಸ್ಯಾಂಡಲ್ ವುಡ್ ನಟ ಅನೇಕ ನಟರು, ನಿರ್ದೇಶಕರು ಬೆಂಬಲ ನೀಡಿದ್ದಾರೆ. ಇಂದು ನಡೆಯುತ್ತಿರುವ ಈ ಹೋರಾಟಕ್ಕೆ ಸ್ಟಾರ್ ಗಳ ಬಲ ಸಿಕ್ಕಿದೆ.

ನಟ ಉಪೇಂದ್ರ ಈಗಾಗಲೇ ಈ ಹೋರಾಟದಲ್ಲಿ ಒಂದು ದಿನ ಭಾಗಿಯಾಗುತ್ತೇನೆ ಎಂದು ಹೇಳಿದ್ದರು. ಈಗ ಶಿವರಾಜ್ ಕುಮಾರ್ ಕೂಡ ಹೋರಾಟಕ್ಕೆ ಸಾಥ್ ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು ಕರ್ನಾಟಕದಲ್ಲಿ ನೆಲ ಜಲ, ಉದ್ಯೋಗ ಯಾವುದೇ ಆದರೂ ಮೊದಲ ಆದ್ಯತೆ ಕನ್ನಡಿಗರಿಗೆ ಇರಬೇಕು. ಒಳ್ಳೆಯ ಉದ್ದೇಶದಿಂದ ಆಗುತ್ತಿರುವ ಈ ಹೋರಾಟ ಯಶಸ್ವಿಯಾಗಲಿ. ಸರ್ಕಾರಕ್ಕೆ ಈ ಬಗ್ಗೆ ಮನವಿ ಮಾಡುತ್ತೇನೆ'' ಎಂದು ಹೇಳಿದ್ದಾರೆ.

''ಕರ್ನಾಟಕದ ಉದ್ಯೋಗ ಕನ್ನಡಿಗರಿಗೆ ಸಿಗಲಿ'' ಎಂದ ಉಪೇಂದ್ರ

ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ನಟ ವಸಿಷ್ಟ, ಚೇತನ್, ನೆನಪಿರಲಿ ಪ್ರೇಮ್, ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್, ಚಿಕ್ಕಣ್ಣ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಹೀಗೆ ಸಾಕಷ್ಟು ಗಣ್ಯರು ಈ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ.

ಇಂದು (ಆಗಸ್ಟ್ 14) ಮತ್ತು ನಾಳೆ (ಆಗಸ್ಟ್ 15) ರಂದು ಬೆಂಗಳೂರಿನ ಆನಂದ್ ರಾವ್ ಸರ್ಕಲ್ ಗಾಂಧಿ ಪ್ರತಿಮೆ ಮುಂಭಾಗ ಉಪವಾಸ ಮಾಡಲಾಗುತ್ತಿದೆ. ಈ ಹೋರಾಟದಲ್ಲಿ ಕನ್ನಡದ ಯುವಕ ಯುವತಿಯರು ಭಾಗಿಯಾಗಿ ಎಂದು ಸ್ಟಾರ್ ಗಳು ಮನವಿ ಮಾಡಿದ್ದಾರೆ.

ಖಾಸಗಿ ಸಂಸ್ಥೆಯಲ್ಲೂ ಸ್ಥಳೀಯರಿಗೆ ಮೀಸಲಾತಿ: ಜಗನ್ ಮಹತ್ವದ ನಿರ್ಣಯ

ಸ್ಥಳಿಯರಿಗೆ ಉದ್ಯೋಗವಕಾಶಗಳು ನೀಡಬೇಕು ಎನ್ನುವ ಉದ್ದೇಶದಿಂದ ಈ ಹೋರಾಟ ಮಾಡಲಾಗುತ್ತದೆ.

   
 
ಹೆಲ್ತ್