2019ರ ಎರಡನೇ ತ್ರೈಮಾಸಿಕದಲ್ಲಿ ದಾಖಲೆ ಪ್ರಮಾಣದಲ್ಲಿ ಸ್ಮಾರ್ಟ್ಫೋನ್ಗಳು ಮಾರಾಟವಾಗಿ ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆಯು ದಾಖಲೆ ನಿರ್ಮಿಸಿದೆ ಎಂದು ಇಂಟರ್ನ್ಯಾಷನಲ್ ಡಾಟಾ ಕಾರ್ಪೊರೇಶನ್ನ (ಐಡಿಸಿ) ವರದಿಯು ತಿಳಿಸಿದೆ. 2019ರ ಎರಡನೇ ತ್ರೈಮಾಸಿಕದಲ್ಲಿ ದೇಶದಲ್ಲಿ 36.9 ಮಿಲಿಯನ್ ಸ್ಮಾರ್ಟ್ಫೋನ್ಗಳು ಮಾರಾಟವಾಗಿದ್ದು, ಇದು ತ್ರೈಮಾಸಿಕ ಒಂದರಲ್ಲಿ ಅತಿ ಹೆಚ್ಚು ಸ್ಮಾರ್ಟ್ಫೋನ್ ಮಾರಾಟವಾದ ದಾಖಲೆ ಎಂದು ಇಂಟರ್ನ್ಯಾಷನಲ್ ಡಾಟಾ ಕಾರ್ಪೊರೇಶನ್ ತನ್ನ ವರದಿಯಲ್ಲಿ ಹೇಳಿದೆ.
ಹೌದು, ಏಷ್ಯಾ / ಪೆಸಿಫಿಕ್ ತ್ರೈಮಾಸಿಕ ಮೊಬೈಲ್ ಫೋನ್ ಟ್ರ್ಯಾಕರ್" ವರದಿಯ ಪ್ರಕಾರ, ದೇಶದ ಎರಡನೇ ತ್ರೈಮಾಸಿಕದಲ್ಲಿ ಚೀನಾದ ಹ್ಯಾಂಡ್ಸೆಟ್ ತಯಾರಕ ಶಿಯೋಮಿಯ ಸಾಗಣೆಯ ಪ್ರಮಾಣವು ಶೇ 4.8 ರಷ್ಟು ಏರಿಕೆಯಾಗಿದೆ ಮತ್ತು ಸ್ಯಾಮ್ಸಂಗ್ ಶೇಕಡ 16.6 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಇನ್ನು ಕಡಿಮೆ ಮತ್ತು ಮಧ್ಯ-ಬೆಲೆ ವಿಭಾಗಗಳ ಸ್ಮಾರ್ಟ್ಫೋನ್ಗಳಿಗೆ ಬೇಡಿಕೆ ಹೆಚ್ಚಿದ್ದರಿಂದ ದೇಶದಲ್ಲಿ ದಾಖಲೆ ಪ್ರಮಾಣದಲ್ಲಿ ಸ್ಮಾರ್ಟ್ಫೋನ್ಗಳು ಮಾರಾಟವಾಗಿದೆ ಎಂದು ವರದಿಯು ಹೇಳಿದೆ.
2019ರ ಎರಡನೇ ತ್ರೈಮಾಸಿಕದಲ್ಲಿ ಸ್ಮಾರ್ಟ್ಫೋನ್ ಮಾರಾಟದ ಬೆಳವಣಿಗೆ ಶೇ. 14.8 ರಷ್ಟಾಗಿದ್ದರೆ, ಇದು ವರ್ಷಕ್ಕೆ 9.9 ಶೇಕಡಾ ರಷ್ಟು ಬೆಳವಣಿಗೆಯನ್ನು ಕಾಣುತ್ತಿದೆ. ಈ ಬಾರಿಯೂ ಶಿಯೋಮಿ ಅಗ್ರ ಸ್ಥಾನದಲ್ಲಿದ್ದು, ಸ್ಯಾಮ್ಸಂಗ್ ಮತ್ತು ಶಿಯೋಮಿ ನಡುವಿನ ಅಂತರ ಕಡಿಮೆಯಾಗಿದೆ. ಹಾಗಾದರೆ, 2019ರ ಎರಡನೇ ತ್ರೈಮಾಸಿಕದಲ್ಲಿ ದಾಖಲೆ ಪ್ರಮಾಣದಲ್ಲಿ ದೇಶದ ಮೊಬೈಲ್ ಮಾರುಕಟ್ಟೆ ಹೇಗಿದೆ?, ಯಾವ ಬ್ರ್ಯಾಂಡ್ಗಳು ಎಷ್ಟೆಷ್ಟು ಪಾಲು ಪಡೆದಿವೆ ಎಂಬುದನ್ನು ಮುಂದಿನ ಸ್ಲೈಡರ್ಗಳಲ್ಲಿ ಓದಿ ತಿಳಿಯಿರಿ.