Back
Home » Bike News
ವೆಬ್‍‍ಸೈಟ್‍ನಲ್ಲಿ ಜಾವಾ ಬೈಕ್‍ಗಳ ಡೆಲಿವರಿ ಅವಧಿ ತಿಳಿಯುವುದು ಇವರಿಗೆ ಮಾತ್ರವಂತೆ
DriveSpark | 14th Aug, 2019 11:31 AM
 • ವೆಬ್‍‍ಸೈಟ್‍ನಲ್ಲಿ ಜಾವಾ ಬೈಕ್‍ಗಳ ಡೆಲಿವರಿ ಅವಧಿ ತಿಳಿಯುವುದು ಇವರಿಗೆ ಮಾತ್ರವಂತೆ

  ಅದಾಗ್ಯೂ ಸಂಸ್ಥೆಯು ಜಾವಾ ಮತು ಜಾವಾ 42 ಬೈಕ್‍ಗಳ ಖರೀದಿಗಾಗಿ ಸುಮಾರು 8 ತಿಂಗಳುಗಳ ಹಿಂದೆಯೆ ಬುಕ್ಕಿಂಗ್ ಅನ್ನು ಪ್ರಾರಂಭಿಸಲಾಗಿದ್ದು, ಬೈಕ್ ಬಿಡುಗಡೆಗೊಂಡ ಮೊದಲ ವಾರದಲ್ಲಿ ಬುಕ್ಕಿಂಗ್ ಮಾಡಿಕೊಂಡ ಗ್ರಾಹಕರು ಇನ್ನು ಬೈಕ್ ತಮ್ಮ ಕೈ ಸೇರಲು ಕಾಯ್ದು ಕುಳಿತ್ತಿದ್ದಾರೆ. ಈ ಕಾಯುವ ಅವಧಿಯ ಕೆಟ್ಟ ಭಾಗವೆಂದರೆ, ಜಾವಾ ವ್ಯಾಪಾರಿಗಳಾಗಲಿ ಅಥವಾ ಕಂಪನಿಯ ಅಧಿಕಾರಿಗಳಾಗಲಿ ತಮ್ಮ ಗ್ರಾಹಕರಿಗೆ ವಿತರಣಾ ಸ್ಥಿತಿಯ ಬಗ್ಗೆ ಸರಿಯಾದ ಅಪ್ಡೇಟ್‍ ನೀಡುತ್ತಿರಲಿಲ್ಲ.

 • ವೆಬ್‍‍ಸೈಟ್‍ನಲ್ಲಿ ಜಾವಾ ಬೈಕ್‍ಗಳ ಡೆಲಿವರಿ ಅವಧಿ ತಿಳಿಯುವುದು ಇವರಿಗೆ ಮಾತ್ರವಂತೆ

  ಆದರೆ ಇದೀಗ ಜಾವಾ ಮೋಟಾರ್‍‍ಸೈಕಲ್ಸ್ ಸಂಸ್ಥೆಯು ತಮ್ಮ ವೆಬ್‍ಸೈಟ್‍ನಲ್ಲಿ ಡಿಸೆಂಬರ್ 25, 2018ರ ವರೆಗು ಆನ್‍‍ಲೈನ್‍ನಲ್ಲಿ ಜಾವಾ ಬೈಕ್‍ಗಳನ್ನು ಬುಕ್ಕಿಂಗ್ ಮಾಡಿಕೊಂಡವರು ಯಾವಾಗ ಡೆಲಿವರಿ ಪಡೆಯುತ್ತಾರೆ ಎಂದು ತಿಳಿಯಲು ಡೆಲಿವರಿ ಎಸ್ಟಿಮೇಟರ್ ಎಂಬ ಹೊಸ ಸೇವೆಯನ್ನು ಪ್ರಾರಂಭಿಸಲಾಗಿದೆ.

 • ವೆಬ್‍‍ಸೈಟ್‍ನಲ್ಲಿ ಜಾವಾ ಬೈಕ್‍ಗಳ ಡೆಲಿವರಿ ಅವಧಿ ತಿಳಿಯುವುದು ಇವರಿಗೆ ಮಾತ್ರವಂತೆ

  ಈ ಕುರಿತಾಗಿ ಸಂಸ್ಥೆಯು ತಾವು ಈ ಮೊದಲೇ ಆನ್‍‍ಲೈನ್ ಮೂಲಕ ಬುಕ್ಕಿಂಗ್ ಮಾಡಿಕೊಳ್ಳಲಾದ ಹೊಸ ಬೈಕ್‍ಗಳು ಸೆಪ್ಟೆಂಬರ್ 2019ರಲ್ಲಿ ವಿತರಣೆ ಮಡುವುದಾಗಿ ಮತ್ತು ಆ ಕಾರ್ಯದಲ್ಲಿರುವುದಾಗಿ ಹೇಳಿಕೊಂಡಿದೆ. ಇದರ ಜೊತೆಗೆ ಡಿಸೆಂಬರ್ 25, 2018ರೊಳಗೆ ಆನ್‍‍ಲೈನ್‍ನಲ್ಲಿ ಬುಕ್ಕಿಂಗ್ ಮಾಡಿಕೊಳ್ಳಲಾದ ಗ್ರಾಹಕರು https://www.jawamotorcycles.com/delivery-estimatorಗೆ ಹೋಗಿ ತಮ್ಮ ಡೆಲಿವರಿ ಸ್ಟೇಟಸ್ ಅನ್ನು ತಿಳಿಯಬಹಿದಾಗಿದೆ ಎಂದು ಹೇಳಿಹೊಂಡಿದೆ.

 • ವೆಬ್‍‍ಸೈಟ್‍ನಲ್ಲಿ ಜಾವಾ ಬೈಕ್‍ಗಳ ಡೆಲಿವರಿ ಅವಧಿ ತಿಳಿಯುವುದು ಇವರಿಗೆ ಮಾತ್ರವಂತೆ

  ಇನ್ನು ಜಾವಾ ಬೈಕ್‌ಗಳು ದಶಕಗಳ ಹಿಂದೆ ಭಾರತದಲ್ಲಿ ಅಬ್ಬರಿಸಿ ಮರೆಯಾಗಿದ್ದಲ್ಲದೆ ಇದೀಗ ನವ ವಿನ್ಯಾಸ ಹಾಗೂ ನೂತನ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಜಾವಾ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ಬೈಕ್ ನಿರ್ಮಿಸುವಲ್ಲಿ ಮಹೀಂದ್ರಾ ಅಂಗಸಂಸ್ಥೆಯಾದ ಕ್ಲಾಸಿಕ್ ಲೆಜೆಂಡ್ ಯಶಸ್ವಿಯಾಗಿದೆ.

 • ವೆಬ್‍‍ಸೈಟ್‍ನಲ್ಲಿ ಜಾವಾ ಬೈಕ್‍ಗಳ ಡೆಲಿವರಿ ಅವಧಿ ತಿಳಿಯುವುದು ಇವರಿಗೆ ಮಾತ್ರವಂತೆ

  ಕ್ಲಾಸಿಕ್ ಲೆಜೆಂಡ್ ಸಂಸ್ಥೆಯು ಒಟ್ಟು ಮೂರು ಹೊಸ ಬೈಕ್‌ಗಳನ್ನು ಹೊರತಂದಿದ್ದು, ಇದರಲ್ಲಿ ಜಾವಾ, ಜಾವಾ 42 ಬೈಕ್‌ಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಪೆರಾಕ್ ಎನ್ನುವ ಕಸ್ಟಮ್ ಮಾದರಿಯನ್ನು ಕೇವಲ ಅನಾವರಣಗೊಳಿಸಿ ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದೆ.

 • ವೆಬ್‍‍ಸೈಟ್‍ನಲ್ಲಿ ಜಾವಾ ಬೈಕ್‍ಗಳ ಡೆಲಿವರಿ ಅವಧಿ ತಿಳಿಯುವುದು ಇವರಿಗೆ ಮಾತ್ರವಂತೆ

  ಇನ್ನು ಹೊಸ ಬೈಕ್‌ಗಳ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೆಟ್ರೋ ಜಾವಾ ಮಾದರಿಗೆ ರೂ. 1.64 ಲಕ್ಷ, ಜಾವಾ 42 ಮಾದರಿಗೆ ರೂ. 1.55 ಲಕ್ಷ ಮತ್ತು ಅನಾವರಣ ಮಾಡಲಾದ ಜಾವಾ ಪೆರಾಕ್ ಬೈಕಿಗೆ ರೂ. 1.89 ಲಕ್ಷ ಬೆಲೆ ನಿಗದಿಪಡಿಸಲಾಗಿದೆ.

  MOST READ: ವಾಹನ ಚಾಲಕರೇ ಇತ್ತ ಗಮನಿಸಿ - ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

 • ವೆಬ್‍‍ಸೈಟ್‍ನಲ್ಲಿ ಜಾವಾ ಬೈಕ್‍ಗಳ ಡೆಲಿವರಿ ಅವಧಿ ತಿಳಿಯುವುದು ಇವರಿಗೆ ಮಾತ್ರವಂತೆ

  ಎಂಜಿನ್ ಸಾಮರ್ಥ್ಯ
  ಜಾವಾ ಮತ್ತು ಜಾವಾ 42 ಬೈಕ್‌ಗಳು 293ಸಿಸಿ ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದಿಂದ 27ಬಿಹೆಚ್‍ಪಿ ಮತ್ತು 28ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

  MOST READ: ದಂಡ ವಿಧಿಸಿದ ಪೊಲೀಸರಿಗೆ ಸರಿಯಾಗಿ ಚಮಕ್ ಕೊಟ್ಟ ಎಲೆಕ್ಟ್ರಿಷಿಯನ್

 • ವೆಬ್‍‍ಸೈಟ್‍ನಲ್ಲಿ ಜಾವಾ ಬೈಕ್‍ಗಳ ಡೆಲಿವರಿ ಅವಧಿ ತಿಳಿಯುವುದು ಇವರಿಗೆ ಮಾತ್ರವಂತೆ

  ಇದರಲ್ಲಿ ಬಾಬರ್ ವಿನ್ಯಾಸದ ಜಾವಾ ಪೆರಾಕ್ ಬೈಕ್ ಮಾದರಿಯು 334ಸಿಸಿ ಎಂಜಿನ್ ಪಡೆದುಕೊಂಡಿದ್ದು, ಬಿಎಸ್ 6 ಎಂಜಿನ್ ಪ್ರೇರಣೆಯೊಂದಿಗೆ 30 ಬಿಎಚ್‌ಪಿ ಮತ್ತು 31 ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿರಲಿದೆ. ಇದು ಜಾವಾ ಸಂಸ್ಥೆಯಿಂದಲೇ ಮಾಡಿಫೈಗೊಂಡ ಮೊದಲ ಬೈಕ್ ಮಾದರಿಯಾಗಿದ್ದು, ಇದೇ ವರ್ಷ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

  MOST READ: ರೈಲ್ವೆ ಹಳಿಯ ಮೇಲೆ ವೈರಲ್ ವಿಡಿಯೋ ಮಾಡಲು ಹೋಗಿ ಪೊಲೀಸರ ಅತಿಥಿಯಾದ ವಿದ್ಯಾರ್ಥಿ

 • ವೆಬ್‍‍ಸೈಟ್‍ನಲ್ಲಿ ಜಾವಾ ಬೈಕ್‍ಗಳ ಡೆಲಿವರಿ ಅವಧಿ ತಿಳಿಯುವುದು ಇವರಿಗೆ ಮಾತ್ರವಂತೆ

  ಈ ಮೂಲಕ ರಾಯಲ್ ಎನ್‌ಫೀಲ್ಡ್ ಸಂಸ್ಥೆಗೆ ಭರ್ಜರಿ ಪೈಪೋಟಿ ನೀಡಲು ಸಜ್ಜಾಗಿರುವ ಜಾವಾ ಸಂಸ್ಥೆಯು ಬೈಕ್ ವಿತರಣೆಯೊಂದಿಗೆ ಮತ್ತಷ್ಟು ಬೈಕ್ ಮಾರಾಟ ಮಳಿಗೆಗಳನ್ನು ತೆರೆಯುವ ಇರಾದೆಯಲ್ಲಿದ್ದು, ಆರ್‌ಇ ಬೈಕ್ ಪ್ರಿಯರನ್ನು ತನ್ನತ್ತ ಸೆಳೆಯಲು ಹಲವು ಯೋಜನೆಗಳನ್ನು ರೂಪಿಸಿದೆ.

 • ವೆಬ್‍‍ಸೈಟ್‍ನಲ್ಲಿ ಜಾವಾ ಬೈಕ್‍ಗಳ ಡೆಲಿವರಿ ಅವಧಿ ತಿಳಿಯುವುದು ಇವರಿಗೆ ಮಾತ್ರವಂತೆ

  ಲಭ್ಯವಿರುವ ಬಣ್ಣಗಳು
  ಜಾವಾ ಬಿಡುಗಡೆಗೊಳಿಸಿದ ಈ ಎರಡೂ ಬೈಕ್‍ಗಳು ಆಕರ್ಷಕ ಬಣ್ಣದಲ್ಲಿ ಖರೀದಿಗೆ ಲಭ್ಯವಿದೆ. ಜಾವಾ ಬೈಕ್ - ಜಾವಾ ಬ್ಲಾಕ್, ಜಾವಾ ಮರೂನ್ ಮತ್ತು ಜಾವಾ ಗ್ರೇ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿದೆ. ಇನ್ನು ಜಾವಾ 42 ಬೈಕ್ ಹಾಲಿಸ್ ಟೀಲ್, ಗ್ಲಾಕ್ಟಿಕ್ ಗ್ರೀನ್, ಸ್ಟಾರ್‍‍ಲೈಟ್ ಬ್ಲೂ, ಲುಮೊಸ್ ಲೈಮ್, ನೆಬ್ಯುಲಾ ಬ್ಲೂ ಮತ್ತು ಕೊಮೆಟ್ ರೆಡ್ ಎಂಬ ಆರು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.
ಜಾವಾ ಮೋಟಾರ್‍‍ಸೈಕಲ್ಸ್ ಸಂಸ್ಥೆಯು ತಮ್ಮ ಜಾವಾ ಮತ್ತು ಜಾವಾ 42 ಎಂಬ ಎರಡು ಮೋಟಾರ್‍‍ಸೈಕಲ್‍‍ಗಳನ್ನು ನವೆಂಬರ್ 15, 2018ರಂದು ಬಿಡುಗಡೆ ಮಾಡಿತ್ತು. ಬಿಡುಗಡೆಯ ಮುಂಚೆ ಈ ಬೈಕ್‍ಗಳು ಕ್ರಿಯೇಟ್ ಮಾಡಿದ ಹೈಪ್‍ಗೆ ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ 2019ರ ಸೆಪ್ಟೆಂಬರ್‍‍ವರಗು ಲಭ್ಯವಿರಲಿದ್ದ ಸ್ಟಾಕ್‍‍ಗಳು ಖಾಲಿಯಾಗಿವೆ.

ಹೆಲ್ತ್