Back
Home » Bike News
ಬಿಡುಗಡೆಯಾಯ್ತು ಬಜಾಜ್ ಪಲ್ಸರ್ 125 ನಿಯೊನ್
DriveSpark | 14th Aug, 2019 10:37 AM
 • ಬಿಡುಗಡೆಯಾಯ್ತು ಬಜಾಜ್ ಪಲ್ಸರ್ 125 ನಿಯೊನ್

  ಸ್ಟಾಂಡರ್ಡ್ ಡ್ರಮ್ ಬ್ರೇಕ್ ಮಾದರಿಯ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.64,000ಗಳಾದರೆ, ಫ್ರಂಟ್ ಡಿಸ್ಕ್ ಬ್ರೇಕ್ ಮಾದರಿಯ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.66,618ಗಳಾಗಿದೆ. ಪಲ್ಸರ್ 125 ನಿಯೊನ್ ಬೈಕ್ ಪಲ್ಸರ್ ಸರಣಿಯ ಬೈಕುಗಳಲ್ಲಿ ಬಜಾಜ್ ಪಲ್ಸರ್ 150 ಬೈಕಿನ ಕೆಳಗಿರಲಿದೆ.


 • ಬಿಡುಗಡೆಯಾಯ್ತು ಬಜಾಜ್ ಪಲ್ಸರ್ 125 ನಿಯೊನ್

  ಹೊಸ ಪಲ್ಸರ್ 125 ನಿಯೊನ್ ಬೈಕ್ ಅನ್ನು ನಿಯೊನ್ ಬ್ಲೂ, ಸೋಲಾರ್ ರೆಡ್ ಹಾಗೂ ಪ್ಲಾಟಿನಂ ಸಿಲ್ವರ್ ಎಂಬ ಮೂರು ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು. ಬಜಾಜ್ ಆಟೋದ ಅಧ್ಯಕ್ಷರಾದ ಸಾರಂಗ್ ಕಾನಡೆರವರು ಮಾತನಾಡಿ, ಪಲ್ಸರ್ ಬೈಕ್ ಅನ್ನು 125 ಸಿಸಿ ಮಾದರಿಯಲ್ಲಿ ಬಿಡುಗಡೆಗೊಳಿಸಲು, ನಾವು ಬಹಳ ಉತ್ಸುಕರಾಗಿದ್ದೇವೆ.


 • ಬಿಡುಗಡೆಯಾಯ್ತು ಬಜಾಜ್ ಪಲ್ಸರ್ 125 ನಿಯೊನ್

  ಹೊಸ ಪಲ್ಸರ್ 125 ನಿಯೊನ್ ಬಿಡುಗಡೆಯು ಸ್ಪೋರ್ಟಿ ಬೈಕ್‍‍ಗಳನ್ನು ಖರೀದಿಸಲು ಬಯಸುವ ಪ್ರಿಮೀಯಂ ಪ್ರಯಾಣಿಕರಿಗಾಗಿ ಸೆಗ್‍‍ಮೆಂಟ್ ಅನ್ನು ತೆರೆಯಲಿದೆ. ಈ ಸೆಗ್‍‍ಮೆಂಟ್ ಯಾವಾಗಲೂ ಅತ್ಯುತ್ತಮವಾದ ಪರ್ಫಾಮೆನ್ಸ್, ಸ್ಟೈಲ್ ಹಾಗೂ ರೋಮಾಂಚನದಿಂದ ಕೂಡಿರಲಿದೆ ಎಂದು ಹೇಳಿದರು.


 • ಬಿಡುಗಡೆಯಾಯ್ತು ಬಜಾಜ್ ಪಲ್ಸರ್ 125 ನಿಯೊನ್

  ಪಲ್ಸರ್ 125 ನಿಯೊನ್ ಬೈಕ್ 125 ಸಿಸಿ, ಡಿಟಿಎಸ್ ಐ ಎಂಜಿನ್ ಹೊಂದಿದೆ. ಈ ಎಂಜಿನ್ 8,500 ಆರ್‍‍ಪಿಎಂನಲ್ಲಿ 11.8 ಬಿಹೆಚ್‍‍ಪಿ ಪವರ್ ಹಾಗೂ 6,500 ಆರ್‍‍ಪಿಎಂನಲ್ಲಿ 11 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.


 • ಬಿಡುಗಡೆಯಾಯ್ತು ಬಜಾಜ್ ಪಲ್ಸರ್ 125 ನಿಯೊನ್

  ಕೌಂಟರ್ ಬ್ಯಾಲೆನ್ಸ್ಡ್ ಎಂಜಿನ್ ಹೆಚ್ಚಿನ ವೇಗದಲ್ಲಿಯೂ ಸಹ ಸ್ಮೂತ್ ಆಗಿ ಕಾರ್ಯಚರಿಸುತ್ತದೆ ಎಂದು ಹೇಳಲಾಗಿದೆ. ಪಲ್ಸರ್ 125 ನಿಯೊನ್ 5 ಸ್ಪೀಡ್ ಗೇರ್ ಬಾಕ್ಸ್ ಹೊಂದಿದ್ದು, ಸವಾರನು ಕ್ಲಚ್ ಅನ್ನು ಡಿಪ್ರೆಸ್ ಮಾಡುವ ಮೂಲಕ ಯಾವುದೇ ಗೇರ್‍‍ನಲ್ಲಿ ಬೈಕ್ ಅನ್ನು ಸ್ಟಾರ್ಟ್ ಮಾಡಬಹುದಾಗಿದೆ.

  MOST READ: ರಾಯಲ್ ಎನ್‍‍ಫೀಲ್ಡ್ ಸೈಲೆನ್ಸರ್‍‍ಗಳನ್ನು ಕಿತ್ತುಹಾಕಿದ ಪೊಲೀಸರು


 • ಬಿಡುಗಡೆಯಾಯ್ತು ಬಜಾಜ್ ಪಲ್ಸರ್ 125 ನಿಯೊನ್

  ಪಲ್ಸರ್ 125 ನಿಯೊನ್ ಬೈಕ್, 140 ಕೆಜಿ ತೂಕವನ್ನು ಹೊಂದಿದೆ. ಪಲ್ಸರ್ 125 ಬೈಕಿನ ಬಿಡುಗಡೆಯು ಏರುತ್ತಿರುವ ಬೈಕಿನ ಬೆಲೆಗಳನ್ನು ಸರಿದೂಗಿಸುವ ತಂತ್ರವಾಗಿದೆ. ಹೊಸ ಸುರಕ್ಷಾ ನಿಯಮಗಳ ಪ್ರಕಾರ 125 ಸಿಸಿ ಹಾಗೂ ಅದಕ್ಕಿಂತ ಹೆಚ್ಚಿನ ಸಿಸಿಯ ಬೈಕುಗಳಲ್ಲಿ ಕಂಬೈನ್ಡ್ ಬ್ರೇಕಿಂಗ್ ಸಿಸ್ಟಂ (ಸಿಬಿಎಸ್) ಅಳವಡಿಸುವುದು ಕಡ್ಡಾಯವಾಗಿದೆ.

  MOST READ: ಸ್ಕೂಟರ್ ಬಿಡಿಭಾಗಗಳಿಂದಲೇ ಅಗ್ಗದ ಬೆಲೆಯ ಟ್ರಾಕ್ಟರ್ ನಿರ್ಮಾಣ ಮಾಡಿದ ರೈತ


 • ಬಿಡುಗಡೆಯಾಯ್ತು ಬಜಾಜ್ ಪಲ್ಸರ್ 125 ನಿಯೊನ್

  150 ಸಿಸಿ ಹಾಗೂ ಅದಕ್ಕಿಂತ ಹೆಚ್ಚಿನ ಸಿಸಿಯ ಎಂಜಿನ್‍ ಹೊಂದಿರುವ ಬೈಕುಗಳಲ್ಲಿ ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್) ಅಳವಡಿಸುವುದು ಕಡ್ಡಾಯವಾಗಿದೆ. ಬಿಎಸ್ 6 ಮಾಲಿನ್ಯ ನಿಯಮಗಳು 2020ರ ಏಪ್ರಿಲ್ 1 ರಿಂದ ಜಾರಿಗೆ ಬರಲಿದ್ದು, ಇದರಿಂದಾಗಿ ಎಲ್ಲಾ ದ್ವಿಚಕ್ರ ವಾಹನಗಳು ಫ್ಯೂಯಲ್ ಇಂಜೆಕ್ಷನ್‌ಗೆ ಬದಲಾಗಬೇಕಾಗಿದೆ.

  MOST READ: ಮೋಟಾರ್‍‍ಸ್ಪೋರ್ಟ್ಸ್ ಪ್ರಶಸ್ತಿ ಗೆದ್ದ ಬೆಂಗಳೂರು ಹುಡುಗಿ


 • ಬಿಡುಗಡೆಯಾಯ್ತು ಬಜಾಜ್ ಪಲ್ಸರ್ 125 ನಿಯೊನ್

  ಇದರಿಂದಾಗಿ ಬೆಲೆಗಳು ಇನ್ನೂ ಹೆಚ್ಚಾಗಲಿವೆ. ಈ ಎಲ್ಲಾ ಅಪ್‍‍ಡೇಟ್‍‍ಗಳಿಂದಾಗಿ ಪಲ್ಸರ್ 150 ಬೈಕಿನ ಬೆಲೆಗಳು ಹೆಚ್ಚಾಗಿ, ಗ್ರಾಹಕರು ಪಲ್ಸರ್ 150 ಬೈಕ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಿಲ್ಲ. ಪಲ್ಸರ್ 125 ಸಿಸಿಯ ಬೈಕುಗಳು ಹೆಚ್ಚಿನ ಪ್ರಮಾಣದಲ್ಲಿ ಗ್ರಾಹಕರನ್ನು ತಲುಪುವ ನಿರೀಕ್ಷೆಗಳಿವೆ. ಇದರಿಂದಾಗಿ ಪಲ್ಸರ್ ಸರಣಿಯ ಬೈಕುಗಳನ್ನು ಮಾರುಕಟ್ಟೆಯಲ್ಲಿ ಉಳಿಸಿಕೊಳ್ಳಬಹುದು.
ಬಜಾಜ್ ಆಟೋ ಲಿಮಿಟೆಡ್, ದೇಶಿಯ ಮಾರುಕಟ್ಟೆಯಲ್ಲಿ ಎಂಟ್ರಿ ಲೆವೆಲ್‍‍ನ 125 ಸಿಸಿ ಸರಣಿಯ ಬಜಾಜ್ ಪಲ್ಸರ್ 125 ನಿಯೊನ್ ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಪಲ್ಸರ್ 125 ನಿಯೊನ್ ಬೈಕ್ ಅನ್ನು ಸ್ಟಾಂಡರ್ಡ್ ಡ್ರಮ್ ಬ್ರೇಕ್ ಹಾಗೂ ಫ್ರಂಟ್ ಡಿಸ್ಕ್ ಬ್ರೇಕ್ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು.

   
 
ಹೆಲ್ತ್