Back
Home » Car News
ಡೀಸೆಲ್ ಕಾರುಗಳನ್ನು ಖರೀದಿಸುವುದಾದರೆ ಈಗಲೇ ಖರೀದಿಸಿ..!
DriveSpark | 14th Aug, 2019 12:50 PM
 • ಡೀಸೆಲ್ ಕಾರುಗಳನ್ನು ಖರೀದಿಸುವುದಾದರೆ ಈಗಲೇ ಖರೀದಿಸಿ..!

  ಈ ಕಾರಣಕ್ಕಾಗಿ, ಅನೇಕ ಸಂಭಾವ್ಯ ಗ್ರಾಹಕರು ಹೊಸ ಕಾರುಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರ ಪರಿಣಾಮವು ಕಾರು ಮಾರುಕಟ್ಟೆಯ ಮೇಲಾಗಿದ್ದು, ಮಾರಾಟ ಪ್ರಮಾಣವು ಗಣನೀಯವಾಗಿ ಕುಸಿದಿದೆ. ಹೊಸ ಮಾಲಿನ್ಯ ನಿಯಮಗಳು ಜಾರಿಯಾದರೂ ಸಹ ಮಾರುಕಟ್ಟೆಯಲ್ಲಿರುವ ಬಿಎಸ್4 ಡೀಸೆಲ್ ಕಾರುಗಳ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಬಿ‍ಎಸ್6 ಎಂಜಿನ್‍‍ಗಳಿಗೆ ಅಪ್‍‍‍ಗ್ರೇಡ್ ಮಾಡಿಕೊಳ್ಳದೇ ಕಾರ್ಯ ನಿರ್ವಹಿಸಬಹುದಾಗಿದೆ.


 • ಡೀಸೆಲ್ ಕಾರುಗಳನ್ನು ಖರೀದಿಸುವುದಾದರೆ ಈಗಲೇ ಖರೀದಿಸಿ..!

  ಬಿ‍ಎಸ್6 ಇಂಧನ ಬಳಸಿದರೂ ಯಾವುದೇ ತೊಂದರೆಯಿಲ್ಲದೆ ಕಾರ್ಯನಿರ್ವಹಿಸುತ್ತವೆ. ಇಂಧನ ಆರ್ಥಿಕತೆಯ ಮೇಲಿನ ಪರಿಣಾಮವು ಸಾಮೂಹಿಕ ಮಾರುಕಟ್ಟೆ ಮಾದರಿಗಳ ಮೇಲೆ ಹೆಚ್ಚಾಗಿ ನಗಣ್ಯವಾಗಿರುತ್ತದೆ.


 • ಡೀಸೆಲ್ ಕಾರುಗಳನ್ನು ಖರೀದಿಸುವುದಾದರೆ ಈಗಲೇ ಖರೀದಿಸಿ..!

  ಕಾರು ತಯಾರಕರು ಎಂಜಿನ್‍‍ಗಳನ್ನು ಬಿ‍ಎಸ್6 ನಿಯಮಗಳಿಗೆ ತಕ್ಕಂತೆ ನವೀಕರಣಗೊಳಿಸ ಬೇಕಿರುವ ಕಾರಣ ಬಿ‍ಎಸ್6 ಎಂಜಿನ್ ಡೀಸೆಲ್ ಕಾರುಗಳ ಬೆಲೆಯು ಹೆಚ್ಚಾಗಲಿದೆ. ಬೆಲೆ ಹೆಚ್ಚಳದ ಜೊತೆಗೆ, ಮರುಮಾರಾಟ ಮೌಲ್ಯ, ವಾರಂಟಿ ಹಾಗೂ ಮೆಂಟೆನೆನ್ಸ್ ವೆಚ್ಚಗಳು ಗ್ರಾಹಕರ ಕಾಳಜಿಗಳಾಗಿವೆ.


 • ಡೀಸೆಲ್ ಕಾರುಗಳನ್ನು ಖರೀದಿಸುವುದಾದರೆ ಈಗಲೇ ಖರೀದಿಸಿ..!

  ಕಾರು ತಯಾರಕರು ಹೆಚ್ಚು ಮಾರಾಟವಾಗುವ ಕಾರುಗಳ ಮೇಲೆ ಭಾರೀ ಪ್ರಮಾಣದ ರಿಯಾಯಿತಿಯನ್ನು ನೀಡುತ್ತಿರುವುದರಿಂದ ಹಾಗೂ ಬಿಎಸ್‌6 ಆವೃತ್ತಿಯ ಡೀಸೆಲ್ ಕಾರುಗಳ ಬೆಲೆಯು ಸುಮಾರು ರೂ.1.5 ಲಕ್ಷಗಳ ವರೆಗೆ ಹೆಚ್ಚಾಗುವ ಸಾಧ್ಯತೆಗಳಿರುವುದರಿಂದ, ನೀವು ಹೊಸ ಡೀಸೆಲ್ ಕಾರು ಖರೀದಿಸಲು ಚಿಂತಿಸುತ್ತಿದ್ದರೆ, ಇದಕ್ಕಿಂತ ಉತ್ತಮ ಸಮಯವಿಲ್ಲ.


 • ಡೀಸೆಲ್ ಕಾರುಗಳನ್ನು ಖರೀದಿಸುವುದಾದರೆ ಈಗಲೇ ಖರೀದಿಸಿ..!

  ಮಾರುತಿ ಸುಜುಕಿಯಂತಹ ಕಂಪನಿಗಳು ಬಿಎಸ್4 ಡೀಸೆಲ್ ಕಾರುಗಳಿಗೆ ಎಕ್ಸ್ ಟೆಂಡೆಡ್ ವಾರಂಟಿಯನ್ನು ನೀಡುತ್ತವೆ. ಇದರ ಜೊತೆಗೆ ಬಿಡಿಭಾಗಗಳ ಮೆಂಟೆನೆನ್ಸ್ ಸಹ ನೀಡುತ್ತವೆ. ಬಿ‍ಎಸ್4 ವಾಹನಗಳ ಬಿಡಿಭಾಗಗಳು ಸಹ ಲಭ್ಯವಿರಲಿವೆ. ಯಾವುದೇ ಸೆಗ್‍‍ಮೆಂಟಿನಲ್ಲಿರುವ ಡೀಸೆಲ್ ಕಾರುಗಳು ಅಷ್ಟು ಬೇಗ ಸ್ಥಗಿತಗೊಳ್ಳುವುದಿಲ್ಲ.


 • ಡೀಸೆಲ್ ಕಾರುಗಳನ್ನು ಖರೀದಿಸುವುದಾದರೆ ಈಗಲೇ ಖರೀದಿಸಿ..!

  ಬಿಎಸ್‌6 ನಿಯಮಗಳು ಜಾರಿಯಾದ ನಂತರ ಡೀಸೆಲ್ ಕಾರುಗಳ ಬೆಲೆಯು ಮತ್ತಷ್ಟು ಹೆಚ್ಚಾಗಲಿದೆ. ಕಾರುಗಳಲ್ಲಿ ಬಳಸುವ ಮೆಕಾನಿಕಲ್ ಅಂಶಗಳ ಜೀವಿತಾವಧಿ ಹೆಚ್ಚಿರುವ ಕಾರಣ, ಬಿಎಸ್6 ಡೀಸೆಲ್ ಕಾರುಗಳಲ್ಲಿ ಬಳಸುವ ಇಂಧನವನ್ನು ಬಿಎಸ್4 ಕಾರುಗಳಲ್ಲಿ ಬಳಸಿದರೆ ಯಾವುದೇ ತೊಂದರೆಯಾಗುವುದಿಲ್ಲ.

  MOST READ: ರಾಯಲ್ ಎನ್‍‍ಫೀಲ್ಡ್ ಸೈಲೆನ್ಸರ್‍‍ಗಳನ್ನು ಕಿತ್ತುಹಾಕಿದ ಪೊಲೀಸರು


 • ಡೀಸೆಲ್ ಕಾರುಗಳನ್ನು ಖರೀದಿಸುವುದಾದರೆ ಈಗಲೇ ಖರೀದಿಸಿ..!

  ಡೀಸೆಲ್ ಕಾರುಗಳನ್ನು ಖರೀದಿಸಲು ಇದು ಸೂಕ್ತ ಸಮಯವಾಗಿದೆ. ಸಂಭಾವ್ಯ ಖರೀದಿದಾರರು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಡೀಸೆಲ್ ಕಾರುಗಳ ಮೇಲೆ ಈ ರೀತಿಯಾಗಿ ರಿಯಾಯಿತಿ ನೀಡಲಾಗುತ್ತಿದೆ.

  MOST READ: ಸ್ಕೂಟರ್ ಬಿಡಿಭಾಗಗಳಿಂದಲೇ ಅಗ್ಗದ ಬೆಲೆಯ ಟ್ರಾಕ್ಟರ್ ನಿರ್ಮಾಣ ಮಾಡಿದ ರೈತ


 • ಡೀಸೆಲ್ ಕಾರುಗಳನ್ನು ಖರೀದಿಸುವುದಾದರೆ ಈಗಲೇ ಖರೀದಿಸಿ..!

  ಮಾರುತಿ ವಿಟಾರಾ ಬ್ರಿಝಾ ಡೀಸೆಲ್ ಕಾರುಗಳ ಮೇಲೆ 5 ವರ್ಷಗಳ ವಾರಂಟಿ ಹಾಗೂ ರೂ.15,000 ನಗದು ರಿಯಾಯಿತಿ ಜೊತೆಗೆ ವಿನಿಮಯಕ್ಕಾಗಿ ರೂ.25,000 ನೀಡಲಾಗುತ್ತದೆ. ಮಾರುತಿ ಡಿಜೈರ್ ಡೀಸೆಲ್ ಕಾರುಗಳ ಮೇಲೆ 5 ವರ್ಷಗಳ ವಾರಂಟಿ, ರೂ.25,000 ನಗದು ರಿಯಾಯಿತಿ ಜೊತೆಗೆ ರೂ.25,000 ವಿನಿಮಯಕ್ಕಾಗಿ ನೀಡಲಾಗುತ್ತದೆ.

  MOST READ: ಮೋಟಾರ್‍‍ಸ್ಪೋರ್ಟ್ಸ್ ಪ್ರಶಸ್ತಿ ಗೆದ್ದ ಬೆಂಗಳೂರು ಹುಡುಗಿ


 • ಡೀಸೆಲ್ ಕಾರುಗಳನ್ನು ಖರೀದಿಸುವುದಾದರೆ ಈಗಲೇ ಖರೀದಿಸಿ..!

  ಮಾರುತಿ ಸ್ವಿಫ್ಟ್ ಡೀಸೆಲ್ ಕಾರುಗಳ ಮೇಲೆ 5 ವರ್ಷಗಳ ವಾರಂಟಿ, ರೂ.20,000 ನಗದು ರಿಯಾಯಿತಿ ನೀಡಲಾಗುತ್ತದೆ. ಟೊಯೊಟಾ ಕರೊಲಾ ಡೀಸೆಲ್ ಕಾರುಗಳ ಮೇಲೆ ರೂ.90,000 ನಗದು ರಿಯಾಯಿತಿ, ರೂ.30,000 ವಿನಿಮಯ ಹಾಗೂ ರೂ.50,000 ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತದೆ.


 • ಡೀಸೆಲ್ ಕಾರುಗಳನ್ನು ಖರೀದಿಸುವುದಾದರೆ ಈಗಲೇ ಖರೀದಿಸಿ..!

  ಟೊಯೋಟಾ ಫಾರ್ಚೂನರ್ ಕಾರುಗಳ ಮೇಲೆ ರೂ.1,20,000ವರೆಗೆ ರಿಯಾಯಿತಿ ನೀಡಲಾಗುತ್ತದೆ. ಟಾಟಾ ನೆಕ್ಸನ್ ಡೀಸೆಲ್ ಕಾರುಗಳ ಮೇಲೆ 3 ವರ್ಷಗಳ ವಾರಂಟಿ, 3 ಗ್ರಾಂ ಚಿನ್ನದ ನಾಣ್ಯ, ರೂ.20,000 ವಿನಿಮಯ ಲಾಭಗಳು ಹಾಗೂ 3 ವರ್ಷಗಳ ವಾರ್ಷಿಕ ಮೆಂಟೆನೆನ್ಸ್ ನೀಡಲಾಗುತ್ತದೆ.


 • ಡೀಸೆಲ್ ಕಾರುಗಳನ್ನು ಖರೀದಿಸುವುದಾದರೆ ಈಗಲೇ ಖರೀದಿಸಿ..!

  ಟಾಟಾ ಟಿಯಾಗೊ ಡೀಸೆಲ್ ಕಾರುಗಳ ಮೇಲೆ 3 ವರ್ಷಗಳ ವಾರಂಟಿ, 3 ಗ್ರಾಂ ಚಿನ್ನದ ನಾಣ್ಯ, ರೂ.15,000 ವಿನಿಮಯ ಲಾಭಗಳು ಹಾಗೂ 3 ವರ್ಷಗಳ ವಾರ್ಷಿಕ ಮೆಂಟೆನೆನ್ಸ್ ನೀಡಲಾಗುತ್ತದೆ. ನಿಸ್ಸಾನ್ ಕಿಕ್ಸ್ ಕಾರಿನ ಮೇಲೆ 3 ವರ್ಷಗಳ ವಾರಂಟಿ, ಆರ್‍ಎಸ್‍‍ಎ, ಸರ್ವಿಸ್ ಪ್ಯಾಕ್ ಹಾಗೂ ರೂ.55,000 ವಿನಿಮಯ ಬೋನಸ್ ನೀಡಲಾಗುತ್ತದೆ. ಮಹೀಂದ್ರಾ ಎಕ್ಸ್‌ಯುವಿ 500 ಮೇಲೆ ರೂ.26,000 ರಿಯಾಯಿತಿ, ರೂ.10,000 ಮೌಲ್ಯದ ಬಿಡಿಭಾಗ ಹಾಗೂ ವಿನಿಮಯಕ್ಕಾಗಿ ರೂ.25,000 ನೀಡಲಾಗುತ್ತದೆ.
ಕಾರು ಖರೀದಿದಾರರಲ್ಲಿರುವ ಅನಿಶ್ಚಿತತೆಯ ಕಾರಣದಿಂದಾಗಿ ಕಳೆದ ಆರು ತಿಂಗಳಿಂದ ಕಾರು ಮಾರಾಟವು ಭಾರೀ ಪ್ರಮಾಣದಲ್ಲಿ ಕುಸಿದಿದೆ. ಈಗ ಚಾಲ್ತಿಯಲ್ಲಿರುವ ಬಿ‍ಎಸ್4 ಮಾಲಿನ್ಯ ನಿಯಮಗಳಿಗೆ ಬದಲಾಗಿ 2020ರ ಏಪ್ರಿಲ್‍‍ನಿಂದ ಬಿಎಸ್6 ಮಾಲಿನ್ಯ ನಿಯಮಗಳು ಜಾರಿಗೆ ಬರಲಿವೆ.

   
 
ಹೆಲ್ತ್