Back
Home » ಸಿನಿ ಸಮಾಚಾರ
ಚೆನ್ನೈ ಜೊತೆಗಿನ ನಂಟು ಬಿಚ್ಚಿಟ್ಟ 'ಸುಯೋಧನ' ದರ್ಶನ್
Oneindia | 14th Aug, 2019 01:12 PM
 • 'ಅಡ್ಯಾರ್' ಜೊತೆ ದರ್ಶನ್ ನಂಟು

  ದರ್ಶನ್ ನೀನಾಸಂ ಸ್ಟೂಡೆಂಟ್ ಎನ್ನುವುದು ಎಲ್ಲರಿಗೂ ಗೊತ್ತಿದೆ. ಈಗ ಸ್ವತಃ ದರ್ಶನ್ ಅವರೇ ಹೇಳಿಕೊಂಡ ಹೊಸ ವಿಷ್ಯ ಏನಪ್ಪಾ ಅಂದ್ರೆ ಚೆನ್ನೈನಲ್ಲಿರುವ ಅಡ್ಯಾರ್ ಫಿಲಂ ಇನ್ಸ್ಟಿಟ್ಯೂಟ್ ನಲ್ಲೂ ಡಿ ಬಾಸ್ ವಿದ್ಯಾರ್ಥಿ ಆಗಿದ್ದರಂತೆ. ಕುರುಕ್ಷೇತ್ರದ ಪ್ರೀ-ರಿಲೀಸ್ ಪ್ರೆಸ್ ಮೀಟ್ ನಲ್ಲಿ ಈ ವಿಚಾರವನ್ನ ಹೊರಹಾಕಿದ್ದಾರೆ.

  Kurukshetra Movie Review : ಮಹಾ ಕಾವ್ಯದ ಮಹಾ 'ದರ್ಶನ'


 • ಸೌತ್ ಇಂಡಿಯಾದ ಫೇಮಸ್ ಸಿನಿ ಸಂಸ್ಥೆ

  ಭಾರತೀಯ ಚಿತ್ರರಂಗದಲ್ಲಿ ಅಡ್ಯಾರ್ ಫಿಲಂ ಇನ್ಸ್ಟಿಟ್ಯೂಟ್ ಎನ್ನುವುದು ಬಹಳ ಹಳೆಯದು ಮತ್ತು ವಿಶೇಷವಾದದು. ಸೌತ್ ಸಿನಿಮಾ ರಂಗಕ್ಕೆ ಸೇರಿದ ಬಹುತೇಕ ಕಲಾವಿದ, ತಂತ್ರಜ್ಙರು ಈ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಾಗಿದ್ದರು. 1945ರಲ್ಲಿ ಸ್ಥಾಪಿತವಾಗಿದ್ದ ಈ ಸಂಸ್ಥೆಯ ಮೊದಲ ಹೆಸರು ಅಡ್ಯಾರ್ ಫಿಲಂ ಇನ್ಸ್ಟಿಟ್ಯೂಟ್. 2006ರಲ್ಲಿ ಎಂ.ಜಿ.ಆರ್ ಫಿಲಂ ಮತ್ತು ಟೆಲಿವಿಷನ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಎಂದು ಮರುನಾಮಕರಣ ಮಾಡಲಾಯಿತು.

  ರಾಜಮೌಳಿ 'ಮಹಾಭಾರತ'ದಲ್ಲಿ ದರ್ಶನ್ 'ದುರ್ಯೋಧನ'.?


 • ವಿಜಯಕಾಂತ್ ಚಿತ್ರದಲ್ಲಿ ನಟನೆ

  ಅಂದಹಾಗೆ, ದರ್ಶನ್ ಈಗಾಗಲೇ ಒಂದು ಸಿನಿಮಾ ಸಿನಿಮಾದಲ್ಲಿ ಪೋಷಕ ನಟನಾಗಿ ನಟಿಸಿದ್ದಾರೆ. ತಮಿಳಿನ ಖ್ಯಾತ ನಟ ವಿಜಯ್ ಅಭಿನಯಿಸಿದ್ದ ವಲ್ಲರಸು ಸಿನಿಮಾದಲ್ಲಿ ದರ್ಶನ್ ಸಣ್ಣದೊಂದು ಪಾತ್ರ ನಿಭಾಯಿಸಿದ್ದಾರೆ. ನಾಲ್ಕೈ ಜನ ಮಫ್ತಿ ಪೊಲೀಸರ ಪೈಕಿ ದರ್ಶನ್ ಕೂಡ ಒಬ್ಬರು. ಈ ಸಿನಿಮಾ ಬಿಟ್ಟರೇ ಬೇರೆ ತಮಿಳು ಚಿತ್ರಗಳಲ್ಲಿ ನಟಿಸಿರುವ ಬಗ್ಗೆ ಮಾಹಿತಿ ಇಲ್ಲ.


 • ಸ್ಪಷ್ಟವಾಗಿ ತಮಿಳು ಮಾತನಾಡಬಲ್ಲರು

  ಇಷ್ಟು ದಿನ ಬೇರೆ ಭಾಷೆಗಳಲ್ಲಿ ಮತ್ತು ಬೇರೆ ಭಾಷೆಯ ಕಾರ್ಯಕ್ರಮಗಳಲ್ಲಿ ದರ್ಶನ್ ಅವರನ್ನ ನೋಡಿದ್ದು ಕಮ್ಮಿ ಮತ್ತು ತೆಲುಗು, ತಮಿಳಿನಲ್ಲಿ ಮಾತನಾಡಿದ್ದನ್ನ ನೋಡಿದ್ದು ಕೂಡ ಅಪರೂಪ. ಕುರುಕ್ಷೇತ್ರ ರಿಲೀಸ್ ವಿಶೇಷವಾಗಿ ದರ್ಶನ್ ಅವರು ಖುದ್ದು ಚೆನ್ನೈ, ಹೈದ್ರಾಬಾದ್ ಗೆ ಹೋಗಿ ಸಿನಿಮಾ ಪ್ರಚಾರ ಮಾಡ್ತಿದ್ದಾರೆ. ಈ ವೇಳೆ ಸ್ಪಷ್ಟವಾಗಿ ತೆಲುಗು ಮತ್ತು ತಮಿಳು ಮಾತನಾಡುತ್ತಿದ್ದಾರೆ.

  ದಿನ ಪತ್ರಿಕೆಗಳಲ್ಲಿ 'ಕುರುಕ್ಷೇತ್ರ' ಗುಣಗಾನ: ಯಾರು ಎಷ್ಟು ಸ್ಟಾರ್ ಕೊಟ್ಟಿದ್ದಾರೆ?


 • ದರ್ಶನ್ ತಮಿಳಿನಲ್ಲಿ ಏನು ಹೇಳಿದ್ರು

  ನಾನು ಚೆನ್ನೈನ ಅಡ್ಯಾರ್ ನಲ್ಲಿ ವಿದ್ಯಾರ್ಥಿಯಾಗಿದ್ದೆ. ಲೈಟ್ ಬಾಯ್ ನನ್ನ ವೃತ್ತಿ ಆರಂಭಿಸಿದ್ದೆ. ಆಗ ನಾನು 150 ಸಂಭಾವನೆ ಪಡೆದುಕೊಳ್ಳುತ್ತಿದ್ದೆ. ಅಲ್ಲಿಂದ ಇಲ್ಲಿಯವರೆಗೂ ಬರಲು 26 ವರ್ಷ ಆಯಿತು. 50ನೇ ಸಿನಿಮಾ ಪ್ರತಿಯೊಬ್ಬ ನಟನಿಗೂ ವಿಶೇಷ. ಸಾಮಾನ್ಯವಾಗಿ ನಾನು ಕ್ಯೂ ಇಟ್ಟಿರುತ್ತೇನೆ. ಆದರೆ, ಐತಿಹಾಸಿಕ, ಪೌರಾಣಿಕ ಸ್ಕ್ರಿಪ್ಟ್ ಬಂದ್ರೆ ರೂಲ್ಸ್ ಬ್ರೇಕ್ ಮಾಡ್ತೀನಿ. ಈಗ ಅಂತಹ ಸಿನಿಮಾ ಮಾಡೋದು ತುಂಬಾ ಕಷ್ಟ. ನಿರ್ಮಾಪಕರು ಮುಂದೆ ಬಂದಾಗ ಅವರಿಗೆ ಸಾಥ್ ಕೊಡಬೇಕು. ಕುರುಕ್ಷೇತ್ರ ಚಿತ್ರಕ್ಕೆ ಮುನಿರತ್ನ ರಿಯಲ್ ಹೀರೋ. ಈ ಸಿನಿಮಾದಲ್ಲಿ ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ'' ಎಂದು ಎಲ್ಲ ನಟರ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡದ ಖ್ಯಾತ ಖಳನಟ ತೂಗುದೀಪ ಶ್ರೀನಿವಾಸ ಅವರ ಪುತ್ರ ದರ್ಶನ್. ಮೂಲತಃ ಮೈಸೂರಿನವರಾದ ದರ್ಶನ್ ನೀನಾಸಂನಲ್ಲಿ ನಟನೆ ತರಬೇತಿ ಪಡೆದುಕೊಂಡಿದ್ದರು. ಖಳನಟನಾಗಿ, ಪೋಷಕನಟನಾಗಿ ವೃತ್ತಿ ಆರಂಭಿಸಿ, ಇಂದು ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಆಗಿ ಬೆಳೆದು ನಿಂತಿದ್ದಾರೆ.

ಎರಡು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿರುವ ದರ್ಶನ್ ಬೇರೆ ಯಾವ ಭಾಷೆಯಲ್ಲೂ ಸಿನಿಮಾ ಮಾಡಿಲ್ಲ ಎನ್ನಲಾಗಿತ್ತು. (ದರ್ಶನ್ ಸಿನಿಮಾಗಳು ಬೇರೆ ಭಾಷೆಗೆ ಡಬ್ ಆಗಿದೆ) ಇದೀಗ, ದರ್ಶನ್ ಅವರ 50ನೇ ಸಿನಿಮಾ ಕುರುಕ್ಷೇತ್ರ ಕನ್ನಡ ಸೇರಿ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ಬಿಡುಗಡೆಯಾಗುತ್ತಿದೆ.

'ಕುರುಕ್ಷೇತ್ರ' ಸಿನಿಮಾಗೆ ಪ್ಲಸ್ ಆಗಿದ್ದೇನು? ಮೈನಸ್ ಆಗಿದ್ದೇನು..?

ಈಗಾಗಲೇ ಕನ್ನಡ, ತೆಲುಗಿನಲ್ಲಿ ಸಿನಿಮಾ ತೆರೆಕಂಡಿದೆ. ಆಗಸ್ಟ್ 15 ರಂದು ತಮಿಳಿನಲ್ಲಿ ಬಿಡುಗಡೆಯಾಗುತ್ತಿದೆ. ಹೀಗಾಗಿ, ಚಿತ್ರದ ಪ್ರಚಾರಕ್ಕಾಗಿ ಚೆನ್ನೈಗೆ ಹೋಗಿದ್ದ ಡಿ ಬಾಸ್, ತಮಿಳಿನಲ್ಲಿ ಸ್ಪಷ್ಟವಾಗಿ ಮಾತನಾಡಿದ್ದಾರೆ. ಜೊತೆಗೆ ಚೆನ್ನೈ ಜೊತೆ ದಾಸನಿಗಿರುವ ನಂಟು ಬಿಚ್ಚಿಟ್ಟಿದ್ದಾರೆ. ಅಷ್ಟಕ್ಕೂ, ಚೆನ್ನೈಗೂ ಮತ್ತು ದರ್ಶನ್ ಗೂ ಏನ್ ಸಂಬಂಧ? ಮುಂದೆ ಓದಿ....

   
 
ಹೆಲ್ತ್