Back
Home » ಸುದ್ದಿ
ಕೊಡಗಿನಲ್ಲಿ ಮಳೆ ಕಡಿಮೆಯಾಗಿದ್ದರೂ ಸದ್ದಿಲ್ಲದೆ ಹೋಗುತ್ತಿದೆ ಪ್ರಾಣ
Oneindia | 14th Aug, 2019 01:51 PM
 • ತಮ್ಮವರ ಕಳೆದುಕೊಂಡ ದುಃಖದಲ್ಲಿ ಊರ ಜನರು

  ಪರಮೇಶ್ ಹಾಗೂ ಅವರ ಪತ್ನಿ ಮಮತಾ, ಹಾಗೂ ಅವರ ಇಬ್ಬರು ಮಕ್ಕಳು ಕಾಣೆಯಾಗಿದ್ದಾರೆ. ಪರಮೇಶ್ ಹಾಗೂ ಅವರ ಮಗ ಹರ್ಷಿತ್ ಭೂಕುಸಿತವಾಗುವ ಸಮಯದಲ್ಲಿ ಮನೆಯ ಹೊರಗಿದ್ದರು. ಸ್ಥಳೀಯರು ಹಾಗೂ ಆತನ ಸ್ನೇಹತ ದರ್ಶನನ್ನು ಕಾಪಾಡಲು ಹರ್ಷಿತ್ ಸಹಾಯ ಮಾಡಿದ್ದ. ಭಾನುವಾರ ಮಮತಾ ಹಾಗೂ ಲಿಖಿತಾ ಅವರ ಶವ ಪತ್ತೆಯಾಗಿದೆ. ಸೋಮವಾರ ಅನುಸೂಯ, ಪ್ರಭು ಅವರ ಪತ್ನಿ, ಅವರ ಶವ ಪತ್ತೆಯಾಗಿತ್ತು.


 • ಈ ಭೂಕುಸಿತ 2018ರ ಕೊಡಗಿನ ವಿಪತ್ತನ್ನು ನೆನಪಿಸುವಂತಿದೆ

  ಈ ವರ್ಷದ ಮಳೆಯು 2018ರಲ್ಲಿ ಕೊಡಗಿನಲ್ಲಾದ ಜಲ ಪ್ರವಾಹವನ್ನು ಮತ್ತೊಮ್ಮೆ ನೆನಪಿಸುತ್ತಿದೆ. ಅಂದು 18ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. 7 ಸಾವಿರಕ್ಕೂ ಹೆಚ್ಚುಮಂದಿಯನ್ನು ಸ್ಥಳಾಂತರಿಸಲಾಗಿತ್ತು.

  2018ರಲ್ಲಿ ಸೋಮವಾರ ಪೇಟೆ, ಮಡಿಕೇರಿ, ವಿರಾಜಪೇಟೆಯಲ್ಲಿ ಭೂಕುಸಿತವಾಗಿತ್ತು. ಕಳೆದ ಒಂದು ವಾರದಲ್ಲಿ ವಿರಾಜಪೇಟೆಯಲ್ಲಿ 905 ಮಿ.ಮೀ ಮಳೆ ದಾಖಲಾಗಿದೆ. ವಿರಾಜಪೇಟೆಯ 32 ಪ್ರದೇಶಗಳು , ಮಡಿಕೇರಿಯ ಹಲವು ತಾಲೂಕುಗಳು ಪ್ರವಾಹಕ್ಕೆ ತುತ್ತಾಗಿದೆ.


 • ತೋರಾ ಪ್ರದೇಶದಲ್ಲಿ 382 ಜನರ ಸ್ಥಳಾಂತರ

  ತೋರಾದಲ್ಲಿ ಒಟ್ಟು 382 ಮಂದಿಯನ್ನು ಸ್ಥಳಾಂತರಿಸಲಾಗಿದೆ.ತೋರಾದಲ್ಲಿ ಭೂಕುಸಿತ ಉಂಟಾದ ಹಿನ್ನೆಲೆಯಲ್ಲಿ ಹೆಗ್ಗಾಲಕ್ಕೆ ಜನರನ್ನು ಸ್ಥಳಾಂತರಿಸಲಾಗಿದೆ. ಅಲ್ಲಿ ಆಹಾರ ಸಾಮಗ್ರಿಗಳಾದ ಅಕ್ಕಿ, ಎಣ್ಣೆ, ಬೇಳೆ ಕಾಳುಗಳು ಜೊತೆಗೆ ಬಟ್ಟೆಯನ್ನು ಕೂಡ ಒದಗಿಸಿಕೊಡಲಾಗಿದೆ.


 • ಕೊಡಗಿಲ್ಲಿ ಇನ್ನೂ ಮೂರು ದಿನ ಭಾರಿ ಮಳೆ ಮುನ್ಸೂಚನೆ

  ಕೊಡಗಿನಲ್ಲಿ ಇನ್ನೂ ಮೂರು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಎನ್‌ಡಿಆರ್‌ಎಫ್ ಸಿಬ್ಬಂದಿಗಳು ಈಗಾಗಲೇ ಸಿದ್ಧತೆ ನಡೆಸಿದ್ದಾರೆ. ಜನರಿಗೆ ಯಾವುದೇ ಆಪತ್ತು ಬರದಂತೆ ಭದ್ರತೆ ಕೈಗೊಳ್ಳಲು ಮುಂದಾಗಿದ್ದಾರೆ.
ಕಾಫಿ ಘಮ ಸೂಸುವ ಕೊಡಗಿನಲ್ಲಿ ಮತ್ತೆ ಸಾವಿನ ವಾಸನೆ ಮುಂದುವರೆದಿದೆ. ಕಾಫಿ ಗಿಡಗಳಿರುವ ಸಾಲಿನಲ್ಲಿ ಹೆಣಗಳ ರಾಶಿ ಬೀಳುತ್ತಿದೆ.

ಅಂತೂ ಮಳೆ ಕಡಿಮೆಯಾಯ್ತಪ್ಪ ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ ಭೂಮಿ ಮತ್ತೆ ಅಲುಗಾಡಲು ಆರಂಭಿಸಿದೆ. ಭೂ ಕುಸಿತ ಮಾತ್ರ ನಿಂತಿಲ್ಲ. ಏಳು ಮಂದಿ ನಾಪತ್ತೆಯಾಗಿದ್ದು ಕಾರ್ಯಾಚರಣೆ ಮುಂದುವರೆದಿದೆ.

ಕೊಡಗಿನಲ್ಲಿ ಸಹಜ ಸ್ಥಿತಿಯತ್ತ ಜನಜೀವನ; ಆದರೆ ನಿಲ್ಲುವುದೇ ಬವಣೆ?

ಇಂದು 'ತೋರಾ'ದಲ್ಲಿ ಕಾರ್ಯಾಚರಣೆಗೆ ನಾಲ್ಕನೇ ದಿನ, ಕೊಡಗಿನ ವಿರಾಜಪೇಟೆಯಲ್ಲಿ ಗುಡ್ಡವೇ ಕುಸಿಯುತ್ತಿದೆ. ಈಗಾಗಲೇ ಭೂ ಕುಸಿತದಿಂದ ನೂರಾರು ಮನೆಗಳು, ಮರಗಳು, ವಿದ್ಯುತ್ ಕಂಬಗಳು, ಕಾಫಿ ಪ್ಲಾಂಟೇಶನ್‌ಗಳು ಕೊಚ್ಚಿ ಹೋಗಿವೆ.

ಪ್ರತ್ಯಕ್ಷದರ್ಶಿಯೊಬ್ಬರು ಅವರ ಅನುಭವ ಹಂಚಿಕೊಂಡಿದ್ದು ಹೀಗೆ: ಅಂಗಡಿಯಿಂದ ನಾನು ಮನೆಗೆ ಬರುತ್ತಿದ್ದಾಗ ದೊಡ್ಡ ಸದ್ದು ಕೇಳಿಸಿತು. ಭೂಮಿ ಅಲುಗಾಡಲು ಆರಂಭಿಸಿತು.

In Pics: ಕರ್ನಾಟಕದಲ್ಲಿ ಮಹಾ ಮಳೆ

ಆ ಸಂದರ್ಭದಲ್ಲಿ ಮಳೆ, ಗಾಳಿಯಾಗಲಿ ಇರಲಿಲ್ಲ. ಏನೆಂದು ಯೋಚಿಸುವಷ್ಟರಲ್ಲಿ ದುರ್ಘಟನೆ ನಡೆದೇ ಹೋಯಿತು. ಕಣ್ಣೆದುರೇ ಮನೆಯ ಮೇಲೆ ಗುಡ್ಡ ಕುಸಿದು ಹೆಂಡತಿ ಮಕ್ಕಳು ಮಣ್ಣಿನಡಿಯಾದರು.

ಹೇಗಿತ್ತು ನಮ್ಮ ಉತ್ತರ ಕನ್ನಡ..! ಈಗ ಹೇಗಾಗಿದೆ ನೋಡಿ...

ತಕ್ಷಣವೇ ಅಲ್ಲಿಂದ ಮನೆಯ ಕಡೆ ಓಡಿದೆ ರಸ್ತೆಗೆ ಬರುತ್ತಿದ್ದಂತೆ ಗುಡ್ಡ ಕುಸಿದು ಮಣ್ಣು ನನ್ನ ಕಾಲಬಳಿ ಬಂದು ಬಿದ್ದಿತ್ತು. ಇಬ್ಬರು ಹೆಣ್ಣುಮಕ್ಕಳು, ಪತ್ನಿ , ತಾಯಿ ಮನೆಯೊಳಗಿದ್ದರು. ಗುಡ್ಡ ಕುಸಿತದ ಬಳಿಕ ಎಲ್ಲರೂ ಕಾಣೆಯಾಗಿದ್ದರು ಎಂದು ಅಳಲು ತೋಡಿಕೊಂಡಿದ್ದಾರೆ.

ಗುಡ್ಡ ಕುಸಿಯುವ ಸದ್ದು ಕೇಳುತ್ತಿದ್ದಂತೆ ಹಲವರು ಮನೆ ಬಿಟ್ಟು ದೂರ ಓಡಿ ಹೋಗಿ ತಮ್ಮ ಪ್ರಾಣ ಉಳಿಸಿಕೊಂಡಿದ್ದರು. ಥೋರಾದಲ್ಲಿದ್ದ ನೂರಕ್ಕೂ ಹೆಚ್ಚು ಮಂದಿ ಊರು ಬಿಟ್ಟು ಹೋಗಿದ್ದಾರೆ.

ವಿಶೇಷ: ಜಲತಜ್ಞ ಡಾ. ದೇವರಾಜ್ ರೆಡ್ಡಿರಿಂದ ಪ್ರವಾಹದ ನೈಜ ಕಾರಣ ಬಹಿರಂಗ

ಅವರೆಲ್ಲರೂ ಟಾರ್ಪಲ್ ಹೊದ್ದುಕೊಂಡು ಮಳೆಯಿಂದ ರಕ್ಷಣೆ ಪಡೆಯುತ್ತಿದ್ದಾರೆ. ತಕ್ಷಣ ಎನ್‌ಡಿಆರ್‌ಎಫ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ಆರಂಭಿಸಿದ್ದಾಗಿ ತಿಳಿಸಿದ್ದಾರೆ. ಐದು ಗಂಟೆಗಳ ಬಳಿಕ ಗಂಜಿ ಕೇಂದ್ರಕ್ಕೆ ಕಳುಹಿಸಿಕೊಡಲಾಯಿತು.

   
 
ಹೆಲ್ತ್