Back
Home » ಸುದ್ದಿ
ನಮ್ಮ ಮೆಟ್ರೋ ಸ್ಮಾರ್ಟ್ ಕಾರ್ಡ್ ಆನ್‌ಲೈನ್ ರೀಚಾರ್ಜ್ ಮತ್ತೆ ಆರಂಭ
Oneindia | 14th Aug, 2019 02:10 PM

ಬೆಂಗಳೂರು, ಆಗಸ್ಟ್ 14: ಕಳೆದ ಒಂದು ವಾರದ ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದ ನಮ್ಮ ಮೆಟ್ರೋ ಸ್ಮಾರ್ಟ್‌ಕಾರ್ಡ್ ಆನ್‌ಲೈನ್ ರೀಚಾರ್ಜ್ ಸೇವೆಯನ್ನು ಮತ್ತೆ ಆರಂಭಿಸಲಾಗಿದೆ.

ಆನ್‌ಲೈನ್ ಮೂಲಕ ಮೆಟ್ರೋ ಕಾರ್ಡ್ ರೀಚಾರ್ಜ್ ಮಾಡುವ ಸೇವೆಯಲ್ಲಿ ಉಂಟಾಗಿದ್ದ ತಾಂತ್ರಿಕ ದೋಷವನ್ನು ಸರಿಪಡಿಸಲಾಗಿದ್ದು, ಎಂದಿನಂತೆ ಆನ್‌ಲೈನ್ ರೀಚಾರ್ಜ್ ಸೇವೆ ಆರಂಭಿಸಲಾಗಿದೆ ಎಂದು ಮೆಟ್ರೋ ರೈಲು ನಿಗಮ ತಿಳಿಸಿದೆ.

3 ದಿನ ನಮ್ಮ ಮೆಟ್ರೋ ಸಂಚಾರ ಭಾಗಶಃ ರದ್ದು

ತಾಂತ್ರಿಕ ದೋಷದ ಸಂದರ್ಭದಲ್ಲಿ ಟಾಪ್‌ಅಪ್ ಮಾಡಲು ಯತ್ನಿಸಿದ 3092 ಪ್ರಯಾಣಿಕರಿಗೆ ಅನನುಕೂಲ ಉಂಟಾಗಿತ್ತು. ಸದರಿ ಪ್ರಯಾಣಿಕರು ಸ್ಮಾರ್ಟ್ ಕಾರ್ಡನ್ನು ಮರು ತುಂಬಿಸಲು ಯಾವುದಾದರೂ ಮೆಟ್ರೋ ನಿಲ್ದಾಣಕ್ಕೆ ಹೋಗಿ ಮೆಟ್ರೋ ಸ್ಮಾರ್ಟ್ ಕಾರ್ಡ್ ಅನ್ನು ಪ್ರವೇಶ ದ್ವಾರದ ಕೌಂಟರ್ ನಲ್ಲಿರಿಸಿದರೆ, ಅದನ್ನು ಸಿಬ್ಬಂದಿ ರೀಚಾರ್ಜ್ ಮಾಡಿಕೊಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಎಂಆರ್‌ಸಿಎಲ್ ನ ಅರ್ಜಿ ಸಲ್ಲಿಸುವ ಕಾರ್ಯವಿಧಾನದಲ್ಲಿ ಜು.29ರಂದು ತಾಂತ್ರಿಕ ದೋಷ ಕಂಡುಬಂದಿತ್ತು. ಆದ್ದರಿಂದ ಜು.29, ಆ.3 ಮತ್ತು 5 ರಂದು ರೀಚಾರ್ಜ್ ಮಾಡಿದ್ದ ಒಂಬತ್ತು ಸಾವಿರಕ್ಕೂ ಹೆಚ್ಚು ಕಾರ್ಡ್‌ಗಳು ರೀಚಾರ್ಜ್ ಆಗಿರಲಿಲ್ಲ.

ಆರ್‌ವಿ ರಸ್ತೆ ಮೆಟ್ರೋ ನಿಲ್ದಾಣ, 1 ವರ್ಷ ಬಂದ್, ಇಲ್ಲಿದೆ ಕಾರಣ

ಬಳಿಕ ಅಂತಹ ಕಾರ್ಡ್ ಹೊಂದಿರುವ ಪ್ರಯಾಣಿಕರಿಗೆ ಎಲ್ಲಾ ನಿಲ್ದಾಣಗಳಲ್ಲೂ ರೀಚಾರ್ಜ್ ವ್ಯವಸ್ಥೆ ಮಾಡಲಾಗಿತ್ತು. ಅದರೊಂದಿಗೆ ಆನ್‌ಲೈನ್ ಮೂಲಕ ಸ್ಮಾರ್ಟ್ ಕಾರ್ಡ್ ಟಾಪ್‌ಅಪ್ ವ್ಯವಸ್ಥೆ ಅರಿಪಡಿಸುವ ಉದ್ದೇಶದಿಂದ ಬಿಎಂಆರ್‌ಸಿಎಲ್ ವೆಬ್‌ಸೈಟ್ ಮೂಲಕ ರೀಚಾರ್ಜ್ ಮಾಡುವ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ತಾಂತ್ರಿಕ ದೋಷವನ್ನು ಸರಿಪಡಿಸಲಾಗಿದೆ.

   
 
ಹೆಲ್ತ್