Back
Home » ಇತ್ತೀಚಿನ
ಸ್ಮಾರ್ಟ್ ಫೋನ್ ಚಾರ್ಜಿಂಗ್ ಕೇಬಲ್ ನಿಂದ ಕೂಡ ನಿಮ್ಮ ಡಾಟಾ ಕದಿಯಬಹುದು
Gizbot | 16th Aug, 2019 03:00 PM

ಮುಂದಿನ ಬಾರಿ ಯಾರ ಬಳಿಯಾದರೂ ನಿಮ್ಮ ಸ್ಮಾರ್ಟ್ ಫೋನ್ ಅಥವಾ ಐಪ್ಯಾಡ್ ಚಾರ್ಜ್ ಮಾಡುವುದಕ್ಕೆ ಚಾರ್ಜಿಂಗ್ ಕೇಬಲ್ ನ್ನು ಪಡೆಯುವ ಮುನ್ನ ಎರಡೆರಡು ಬಾರಿ ಯೋಚನೆ ಮಾಡಿ. ಹೌದು ಐಫೋನ್ ಚಾರ್ಜಿಂಗ್ ಕೇಬಲ್ ಬಳಸಿ ನಿಮ್ಮ ಡಾಟಾವನ್ನು ಕದಿಯಲು ಸಾಧ್ಯವಿದೆ ಎಂಬುದನ್ನು ಹ್ಯಾಕರ್ ಗಳು ತೋರಿಸಿಕೊಟ್ಟಿದ್ದಾರೆ.

O.MG ಕೇಬಲ್, ಆಪಲ್ ಯುಎಸ್ ಬಿ ಲೈಟನಿಂಗ್ ಕೇಬಲ್ ಗಳು ಮೇಲ್ನೋಟಕ್ಕೆ ಇತರೆ ಚಾರ್ಜಿಂಗ್ ಕೇಬಲ್ ಗಳಂತೆ ಸಹಜ ಕೇಬಲ್ ಗಳಂತೆ ಕಾಣುತ್ತದೆ. ನಿಮ್ಮ ಡಿವೈಸ್ ಗೆ ಒಮ್ಮೆ ಪ್ಲಗ್ ಇನ್ ಆದ ಕೂಡಲೇ, ಹತ್ತಿರದ ಇನ್ನೊಂದು ಡಿವೈಸ್ ನಿಂದ ಮತ್ತು ನಿಮ್ಮ ವೈಫೈ ರೇಂಜಿನಿಂದ ಹ್ಯಾಕರ್ ಗಳು ವಯರ್ ಲೆಸ್ ಆಗಿ ದುರುದ್ದೇಶಪೂರಿತ ಪ್ಲೇಲೋಡ್ಸ್ ನ್ನು ನಿಮ್ಮ ಕಂಪ್ಯೂಟರ್ ಗೆ ಟ್ರಾನ್ಸ್ ಮಿಟ್ ಮಾಡುತ್ತಾರೆ. ಮದರ್ ಬೋರ್ಡ್ ನಲ್ಲಿ ಅದು ವರದಿಯಾಗುತ್ತದೆ.

ಕೇಬಲ್ ನಲ್ಲಿ ವಿಭಿನ್ನ ರೀತಿಯ ಪ್ಲೇಲೋಡ್ಸ್ ಗಳಿಂದ ತುಂಬಿರುತ್ತದೆ ಅಥವಾ ಸ್ಕ್ರಿಪ್ಟ್ ಗಳು ಮತ್ತು ಕಮಾಂಡ್ ಗಳು ಇದ್ದು ಅದನ್ನು ಅಟ್ಯಾಕ್ ಮಾಡುವವರು ನಿಮ್ಮ ಡಿವೈಸ್ ನಲ್ಲಿ ರನ್ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಯುಎಸ್ ಬಿ ಇಂಪ್ಲ್ಯಾಂಟ್ ನ್ನು ಕೂಡ ಹ್ಯಾಕರ್ ಗಳು ರಿಮೋಟ್ ನಲ್ಲಿ ಸಾಯಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ ಮತ್ತು ಅದರ ಬಳಕೆಯ ಸಾಕ್ಷಿಗಳನ್ನು ಮರೆಮಾಚುವುದಕ್ಕೂ ಸಾಧ್ಯವಿದೆ ಜೊತೆಗೆ ಅದರ ಬಳಕೆ ಮತ್ತು ಅಸ್ತಿತ್ವವನ್ನು ಕಾಣದಂತೆ ಮಾಡಲು ಸಾಧ್ಯವಿದೆ ಎಂದು ವರದಿ ಹೇಳುತ್ತಿದೆ.

ಒಮ್ಮೆ ಪ್ಲಗ್ ಇನ್ ಆದರೆ ಅಟ್ಯಾಕ್ ಮಾಡುವವರು ರಿಮೋಟ್ ನಲ್ಲಿ ನಿಮ್ಮ ಸ್ಕ್ರೀನ್ ನ್ನು ಲಾಕ್ ಮಾಡುವ ಸಾಮರ್ಥ್ಯ ಹೊಂದಿರುತ್ತಾರೆ ಜೊತೆಗೆ ಎಲ್ಲಾ ನಿಮ್ಮ ಪಾಸ್ ವರ್ಡ್ ಗಳನ್ನು ಕಲೆಕ್ಟ್ ಮಾಡಿ ಅದನ್ನು ಪುನಃ ಲಾಗಿನ್ ಆಗುವುದಕ್ಕೆ ಬಳಸುತ್ತಾರೆ.

"ಈ ಲೈಟನಿಂಗ್ ಕೇಬಲ್ ಗಳು ಕ್ರಾಸ್-ಫ್ಲ್ಯಾಟ್ ಫಾರ್ಮ್ ಅಟ್ಯಾಕ್ ಪ್ಲೇಲೋಡ್ಸ್ ನ್ನು ಅನುಮತಿಸುತ್ತವೆ ಮತ್ತು ಇತರೆ ಯುಎಸ್ ಬಿ ಕೇಬಲ್ ಟೈಪ್ ನಲ್ಲಿ ಈ ಇಂಪ್ಲಾಂಟ್ ನ್ನು ಕ್ರಿಯೇಟ್ ಮಾಡಿ ಸುಲಭವಾಗಿ ಅಳವಡಿಸುವುದಕ್ಕೆ ಸಾಧ್ಯವಿದೆ" ಎಂಜಿ ಎಂದು ಕರೆಯಲ್ಪಡುವ ಹ್ಯಾಕರ್ ನಿಂದ ಇದು ತಿಳಿದುಬಂದಿದೆ.

ಹೆಚ್ಚಿನ ಜನರು ರ್ಯಾಂಡಮ ಫ್ಲ್ಯಾಶ್ ಡ್ರೈವ್ ಗಳಿಗೆ ಇತ್ತೀಚೆಗೆ ಪ್ಲಗ್ ಇನ್ ಆಗುವುದಿಲ್ಲ ಆದರೆ ಕೇಬಲ್ ಗಳು ಕೂಡ ಅಪಾಯಕಾರಿ ಎಂದು ಅವರು ಭಾವಿಸಿರುವುದಿಲ್ಲ ಎಂದು ಆತ ಅಭಿಪ್ರಾಯ ಪಟ್ಟಿದ್ದಾನೆ. ಎಂಜಿ ಕೇಬಲ್ ಗಳನ್ನು ಸ್ವತಃ ತಾನೇ ನಿರ್ಮಿಸಿದ್ದಾನೆ.

ನಿಜವಾದ ಆಪಲ್ ಕೇಬಲ್ ಗಳನ್ನು ಬದಲಾವಣೆ ಮಾಡಿ ಇಂಪ್ಲ್ಯಾಂಟ್ ಮಾಡಲು ಅನುಕೂಲಕರವಾಗಿರುವಂತೆ ಮಾಡಿದ್ದಾನೆ. ಇದೀಗ ಕೇಬಲ್ ಗಳನ್ನು ಅವರು ಕಾನೂನುಬದ್ಧ ಸಾಧನವಾಗಿ ಉತ್ಪಾದಿಸಲು ಆತ ಪ್ರಯತ್ನಿಸುತ್ತಿದ್ದಾನೆ. ಒಟ್ಟಿನಲ್ಲಿ ಚಾರ್ಜಿಂಗ್ ಕೇಬಲ್ ಗಳು ಆತಂಕ ಸೃಷ್ಟಿಸುವ ವಸ್ತುಗಳಾಗಿ ನಿರ್ಮಾಣಗೊಳ್ಳುತ್ತಿದೆ. ಇದೇ ರೀತಿ ಆದರೆ ಸಾರ್ವಜನಿಕ ಸ್ಥಳಗಳಲ್ಲಿರುವ ಚಾರ್ಜಿಂಗ್ ಕೇಬಲ್ ಗಳನ್ನು ಬಳಕೆ ಮಾಡುವುದರಿಂದ ತೊಂದರೆಯನ್ನು ನಾವೇ ನಮ್ಮ ಬುಡಕ್ಕೆ ತಂದುಕೊಂಡಂತಾಗುತ್ತದೆ.

 
ಹೆಲ್ತ್