Back
Home » ಗಾಸಿಪ್
'ರಾಕಿಂಗ್ ಸ್ಟಾರ್'ಗೆ ಸಿದ್ಧವಾಗಿದ್ದ ಚಿತ್ರಕ್ಕೆ ವಿಜಯ್ ದೇವರಕೊಂಡ ಹೀರೋ.!
Oneindia | 16th Aug, 2019 05:37 PM
 • ದೇವರಕೊಂಡ ಜೊತೆ ಜನಗಣಮನ

  ಸೌತ್ ಇಂಡಿಯಾದ ಫೇಮಸ್ ನಟ ವಿಜಯ್ ದೇವರಕೊಂಡ ಜೊತೆ ಪೂರಿ ಜಗನ್ನಾಥ್ 'ಜನಗಣಮನ' ಎಂಬ ಸಿನಿಮಾ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಚಾರ್ಮಿ ಕೌರ್ ಮತ್ತು ಪೂರಿ ಸ್ವತಃ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ.


 • ಯಶ್ ಬದಲು ವಿಜಯ್ ದೇವರಕೊಂಡ.!

  ಈ ಮೊದಲು ಜನಗಣಮನ ಸ್ಕ್ರಿಪ್ಟ್ ಮಾಡಿದ ಮೇಲೆ ಈ ಚಿತ್ರಕ್ಕೆ ಯಶ್ ನಾಯಕನಾದರೆ ಸೂಕ್ತ ಎಂದು ಭಾವಿಸಿ, ಅಪ್ರೋಚ್ ಮಾಡಿದ್ದರಂತೆ. ಎರಡು ಸುತ್ತಿನ ಮಾತುಕತೆ ಕೂಡ ಆಗಿತ್ತಂತೆ. ಆಮೇಲೆ ಏನಾಯ್ತೋ ಈ ಚಿತ್ರಕ್ಕೆ ದೇವರಕೊಂಡ ನಾಯಕ ಎಂದು ಘೋಷಿಸಲಾಗಿದೆ.

  ಯಶ್ ಸ್ಟಾರ್ ಪಟ್ಟ ಉಳಿಸುತ್ತಾರಾ ಪೂರಿ ಜಗನ್ನಾಥ್?


 • ಸ್ಕ್ರಿಪ್ಟ್ ಅದೇನಾ ಅಥವಾ ಬೇರೆ ಇದೆಯಾ?

  ರಾಕಿ ಭಾಯ್ ಜೊತೆ ಪೂರಿ ಜಗನ್ನಾಥ್ ಸಿನಿಮಾ ಮಾಡಬೇಕೆಂದುಕೊಂಡಿದ್ದು ಇದೇ ಚಿತ್ರನಾ ಅಥವಾ ಅದು ಬೇರೆ ಇದ್ಯಾ ಎಂಬುದರ ಬಗ್ಗೆ ಕುತೂಹಲವಿದೆ. ಸದ್ಯ ಬೆಳವಣಿಗೆ ನೋಡಿದ್ರೆ ಜನಗಣಮನ ಚಿತ್ರಕ್ಕೆ ಯಶ್ ಅವರನ್ನ ನಾಯಕನನ್ನಾಗಿಸುವ ಪ್ರಯತ್ನ ಮಾಡಲಾಗಿತ್ತು. ಆದ್ರೆ, ಕಾರಣಾಂತರಗಳಿಂದ ಈ ಜೋಡಿ ಒಂದಾಗಲಿಲ್ಲ ಎನ್ನಲಾಗಿದೆ.


 • ಪ್ಯಾನ್ ಇಂಡಿಯಾ ಸಿನಿಮಾ

  ಅಂದ್ಹಾಗೆ, 'ಜನಗಣಮನ' ಪ್ಯಾನ್ ಇಂಡಿಯಾ ಸಿನಿಮಾ. ಕನ್ನಡ ಮತ್ತು ತೆಲುಗಿನಲ್ಲಿ ತಯಾರಾಗಲಿದ್ದು, ಹಿಂದಿ ಮತ್ತು ತಮಿಳಿನಲ್ಲಿ ಡಬ್ ಆಗಲಿದೆ ಎನ್ನಲಾಗಿತ್ತು. ಇದೀಗ, ದೇವರಕೊಂಡ ನಾಯಕನಾಗಿರುವುದರಿಂದ ತೆಲುಗಿನಲ್ಲಿ ಸಿದ್ಧವಾಗಿ ಉಳಿದ ಭಾಷೆಯಲ್ಲಿ ಡಬ್ ಆಗಬಹುದು.
'ಕೆಜಿಎಫ್ ಚಾಪ್ಟರ್-1' ಸೂಪರ್ ಹಿಟ್ ಆದ್ಮೇಲೆ ಕೆಜಿಎಫ್ ಚಾಪ್ಟರ್-2 ಮಾಡ್ತಿದ್ದಾರೆ. ಮೊದಲ ಭಾಗ ಮುಗಿದ ಮೇಲೆ 'ಕಿರಾತಕ-2' ಆರಂಭಿಸಿದ್ದ ಯಶ್ ಆಮೇಲೆ ಆ ಚಿತ್ರವನ್ನ ಅರ್ಧಕ್ಕೆ ಕೈಬಿಟ್ಟರು. ಸದ್ಯಕ್ಕೆ ಕೆಜಿಎಫ್ ಚಾಪ್ಟರ್-2 ಮಾತ್ರ ಎಂದು ಟಾರ್ಗೆಟ್ ಮಾಡಿದ್ದಾರೆ ಯಶ್.

ಈ ಮಧ್ಯೆ ಯಶ್ ಅವರಿಗಾಗಿ ತೆಲುಗು ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಕಥೆ ಮಾಡಿದ್ದು, ಕೆಜಿಎಫ್ ಮುಗಿಯುತ್ತಿದ್ದಂತೆ ಆರಂಭವಾಗಲಿದೆ ಎಂಬ ಗುಸುಗುಸು ಹರಿದಾಡಿತ್ತು.

ಕನ್ನಡದ 'ರಾಜಾಹುಲಿ'ಗಾಗಿ ಕಥೆ ಸಿದ್ಧಮಾಡಿದ್ದಾರಂತೆ ತೆಲುಗು ನಿರ್ದೇಶಕ.!

ಆದ್ರೀಗ, ಯಶ್ ಅವರಿಗಾಗಿ ಮಾಡಿದ್ದ ಕಥೆಗೆ ವಿಜಯ್ ದೇವರಕೊಂಡ ನಾಯಕರಾದ್ರು ಎಂಬ ಟಾಕ್ ಮಾಯಾನಗರಿಯಲ್ಲಿ ಸದ್ದು ಮಾಡ್ತಿದೆ. ಅಷ್ಟಕ್ಕೂ, ಆ ಚಿತ್ರ ಯಾವುದು? ಯಶ್ ಗೆ ಮಾಡಿದ್ದ ಸಿನಿಮಾ ಇದೇನಾ? ಮುಂದೆ ಓದಿ....

   
 
ಹೆಲ್ತ್