Back
Home » ಇತ್ತೀಚಿನ
​ಸ್ಟ್ರೀಟ್​ ಕ್ಯಾಮರಾಗಳಿಂದಾಗಿ 141 ಕೋಟಿ ಚೀನಿಯರು ಸುಸ್ತು!
Gizbot | 22nd Aug, 2019 02:03 PM
 • ಸ್ಟ್ರೀಟ್ ರೆಕಗ್ನಿಷನ್ ತಂತ್ರಜ್ಞಾನ ಏಕೆ?

  ಫೇಸ್ ರಿಕಗ್ನಿಷನ್, ಬೆರಳಚ್ಚು ಪರಿಶೀಲನೆಗೆ ಹಲವು ಮಂದಿ ಅಸಹಕಾರ ವ್ಯಕ್ತಡಿಸುತ್ತಾರೆ. ಆದರೆ ಸ್ಟ್ರೀಟ್ ರಿಕಗ್ನಿಷನ್‌ಗೆ ಜನರ ಅನುಮತಿ ಬೇಕಿಲ್ಲ, ಹೀಗಾಗಿ ಪೊಲೀಸರ ಕೆಲಸ ಸುಲಭವಾಗಲಿದೆ. ಪ್ರತಿ ವ್ಯಕ್ತಿಯ ನಡಿಗೆ, ಚಲನವಲನ ವಿಭಿನ್ನವಾಗಿರುವುದರಿಂದ ಸ್ಟ್ರೀಟ್ ರಿಕಗ್ನಿಷನ್ ತಂತ್ರಜ್ಞಾನ ಪ್ರತ್ಯೇಕವಾಗಿ ಅವರ ದತ್ತಾಂಶವನ್ನು ಸಂಗ್ರಹಿಸುತ್ತದೆ. ಇದರಿಂದ ಪೊಲೀಸರು ಸುಲಭವಾಗಿ ಜನರನ್ನು ಗುರುತಿಸಬಹುದಾಗಿದೆ.


 • ಸ್ಟ್ರೀಟ್ ರೆಕಗ್ನಿಷನ್ ಕೆಲಸ ಹೇಗೆ?

  ಸ್ಟ್ರೀಟ್ ತಂತ್ರಜ್ಞಾನವು ವ್ಯಕ್ತಿಯ ನಡಿಗೆ, ಬಾಡಿ ಲಾಂಗ್ವೇಜ್ ಅನ್ನು 50 ಮೀ. ದೂರದಲ್ಲೇ ಗುರುತಿಸುತ್ತದೆ. ವ್ಯಕ್ತಿಯ ಮುಖ ಮುಚ್ಚಿಕೊಂಡಿದ್ದರೆ, ಬೆನ್ನು ಹಾಕಿ ನಡೆಯುತ್ತಿದ್ದರೂ, ಯಾವುದೇ ಸಮಸ್ಯೆಯಿಲ್ಲದೆ ವ್ಯಕ್ತಿಯನ್ನು ಗುರುತಿಸುತ್ತದೆ. ಜನರ ಚಲನವಲನವನ್ನು ಅದು ದಾಖಲಿಸಿಕೊಳ್ಳುವುದರಿಂದ ನಿರ್ಧಿಷ್ಟ ವ್ಯಕ್ತಿಗಳನ್ನು ಸುಲಭವಾಗಿ ಗುರುತಿಸಲು ಸಹಾಯಕವಾಗಲಿದೆ. ಹಾಗಾಗಿ, ಈಗ ಯಾವುದೇ ಸ್ಕ್ಯಾನಿಂಗ್ ಯಂತ್ರದ ಮೊರೆಹೋಗಬೇಕಿಲ್ಲ.


 • ಫೇಶಿಯಲ್‌ಗಿಂತ ಹೇಗೆ ಭಿನ್ನ?

  ಸಾಮಾನ್ಯವಾಗಿ ಫೇಶಿಯಲ್‌ ರಿಕಾಗ್ನಿಶನ್‌ನಲ್ಲಿ ಅತ್ಯಂತ ಹತ್ತಿರದ ಹಾಗೂ ಅಧಿಕ ರೆಸಲ್ಯೂಶನ್‌ ಚಿತ್ರಗಳು ಅಗತ್ಯವಿರುತ್ತದೆ. ಇಲ್ಲವಾದಲ್ಲಿ ಫೇಶಿಯಲ್ ರೆಕಗ್ನಿಷನ್‌ ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ. ಅಷ್ಟೇ ಅಲ್ಲ, ಕಾಲು ಕುಂಟುತ್ತಾ ನಡೆದರೆ ಅಥವಾ ವಿಚಿತ್ರ ಭಂಗಿಯಲ್ಲಿ ನಡೆದಾಡಿದರೂ ಸ್ಟ್ರೀಟ್ ರೆಕಗ್ನಿಷನ್ ಸಾಫ್ಟ್ವೇರ್‌ ವ್ಯಕ್ತಿಯ ಗುರುತು ಹಿಡಿಯಬಲ್ಲದು ಎಂದು ಈ ತಂತ್ರಜ್ಞಾನ ಅಭಿವೃದ್ಧಿಪಡಿಸಿದ ವ್ಯಾಟ್ರಿಕ್ಸ್ ಕಂಪೆನಿಯ ಸಿಇಒ ಹುವಾಂಗ್ ಯಾಂಗ್‌ಝೆನ್ ಅವರು ಹೇಳಿದ್ದಾರೆ.


 • ಸ್ಕ್ಯಾನಿಂಗ್ ಯಂತ್ರ ಬೇಕಿಲ್ಲ!

  ಮುಖ ಗುರುತಿಸುವ ಫೇಶಿಯಲ್ ರಿಕಗ್ನಿಶನ್‌ಗೆ ಹೋಲಿಸಿದರೆ ಸ್ಟ್ರೀಟ್ ರೆಕಗ್ನಿಷನ್ ಯಾವುದೇ ಹೆಚ್ಚಿನ ಅವಶ್ಯಕತೆಯನ್ನು ಬೇಡುವುದಿಲ್ಲ, ಬದಲಾಗಿ ಓರ್ವ ವ್ಯಕ್ತಿ ಸಹಜವಾಗಿ ನಡೆದು ಹೋಗುತ್ತಿದ್ದರೆ ಆತನ ನಡಿಗೆ ಮತ್ತು ದೇಹದ ಭಾಷೆಯನ್ನು ಗಮನಿಸಿಕೊಂಡು ಅಲ್ಲಿಂದಲೇ ಪತ್ತೆಹಚ್ಚುತ್ತದೆ. ಅದಕ್ಕಾಗಿ ಯಾವುದೇ ಸ್ಕ್ಯಾನಿಂಗ್ ಯಂತ್ರದ ಮೊರೆಹೋಗಬೇಕಿಲ್ಲ. ಜತೆಗೆ ಜನರನ್ನು ಈ ಯಂತ್ರದ ಮೂಲಕ ಪರಿಶೀಲಿಸುವ ಅಗತ್ಯವೂ ಇರುವುದಿಲ್ಲ.


 • ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಜನರು!

  ಖಾಸಗಿತನ ಮತ್ತು ಭದ್ರತೆ ಸವಾಲಾಗಿರುವ ಈ ದಿನಗಳಲ್ಲಿ ಜನರ ನಡಿಗೆ, ದೇಹದ ಭಾಷೆಯನ್ನೇ ಗುರುತಿಸಿ ಅವರನ್ನು ಪತ್ತೆಹಚ್ಚುವ ನೂತನ ಸ್ಟ್ರೀಟ್ ರಿಕಗ್ನಿಷನ್ ತಂತ್ರಜ್ಞಾನ ಒಳ್ಳೆಯದೇ. ಆದರೆ, ಜನರ ಮೇಲೆ ನಿಗಾ ವಹಿಸುವ ನಿಟ್ಟಿನಲ್ಲಿ ಈ ತಂತ್ರಜ್ಞಾನ ಬಳಕೆಯ ಬಗ್ಗೆ ಜನರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇತ್ತೀಚಿಗಷ್ಟೇ ಮುಸ್ಲಿಂ ಬಾಹುಳ್ಯವಿರುವ ಕ್ಸಿನ್‌ಜಿಯಾಂಗ್‌ ಪ್ರಾಂತ್ಯದಲ್ಲಿ ಈ ತಂತ್ರಜ್ಞಾನದ ಅಗತ್ಯ ಹೆಚ್ಚಿದೆ ಎಂದು ಪೊಲೀಸ್‌ ಇಲಾಖೆ ಹೇಳಿದ್ದು ಇತ್ತೀಚಿಗಷ್ಟೇ ವಿವಾದಾತ್ಮಕವಾಗಿತ್ತು.
ಜನರ ಮುಖ ಕಾಣದೇ ಇದ್ದರೂ, ಅವರು ನಡೆಯುವ ಹಾಗೂ ನಿಲ್ಲುವ ಭಂಗಿ ದೇಹದ ಆಕಾರದಿಂದಲೇ ಗುರುತು ಪತ್ತೆ ಮಾಡಬಹುದಾದ ತಂತ್ರಜ್ಞಾನವನ್ನು ಚೀನಾ ಅಳವಡಿಸಿಕೊಳ್ಳುತ್ತಿದೆ. 141 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಚೀನಾ ತನ್ನ ಜನಸಂಖ್ಯೆಯ ಅರ್ಧದಷ್ಟು ಸಿಸಿ ಕ್ಯಾಮರಾಗಳನ್ನು ಇನ್​ಸ್ಟಾಲ್​ ಮಾಡಲು ಮುಂದಾಗಿದ್ದು, ಯಾವುದೇ ವ್ಯಕ್ತಿಯ ಮಾಹಿತಿಯು ಕೇವಲ ಮೂರೇ ಸೆಕೆಂಡ್​ನಲ್ಲಿ ಸಿಗುವಂತಹ ಫೇಸ್​ ಡಿಟೆಕ್ಷನ್ ಹಾಗೂ ಆರ್ಟಿಫಿಷಿಯಲ್​ ಇಂಟೆಲಿಜೆನ್ಸ್​ ವ್ಯವಸ್ಥೆಯನ್ನು ಈ ಕ್ಯಾಮರಾಗಳಲ್ಲಿ ಅಳವಡಿಸಿದೆ ಎಂದು ತಿಳಿದುಬಂದಿದೆ.

ವಿಶ್ವದ ಅತಿ ಹೆಚ್ಚು ಜನಸಂಖ್ಯೆಯನ್ನ ಒಳಗೊಂಡಿರೋ ಚೀನಾ ತನ್ನ ಪ್ರಜೆಗಳನ್ನು ಕೂಡ ಅನುಮಾನದಿಂದಲೇ ನೋಡುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ 2020 ರೊಳಗಾಗಿ ಚೀನಾ ಸರ್ಕಾರವು ತನ್ನ ಪ್ರತಿ ಇಬ್ಬರು ಪ್ರಜೆಗಳಿಗೆ ಒಂದರಂತೆ 626 ಮಿಲಿಯನ್​ ಸ್ಟ್ರೀಟ್​ ಕ್ಯಾಮರಾಗಳನ್ನು ಅಳವಡಿಸಲು ಮುಂದಾಗಿದೆ ಎಂಬ ಸುದ್ದಿ ಇದೀಗ ಹೊರಬಿದ್ದಿದೆ. ಈಗಾಗಲೇ 200 ಮಿಲಿಯನ್​ ಫೇಸ್​ ಡಿಟೆಕ್ಷನ್ ಸ್ಟ್ರೀಟ್​ ಕ್ಯಾಮರಾಗಳ ಮೂಲಕ ಚೀನಾ ತನ್ನ ಜನರ ಚಟುವಟಿಕೆಗಳನ್ನು ಗಮನಿಸುತ್ತಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಖಾಸಗಿತನ ಮತ್ತು ಭದ್ರತೆ ಸವಾಲಾಗಿರುವ ಈ ದಿನಗಳಲ್ಲಿ ಜನರ ನಡಿಗೆ, ದೇಹದ ಭಾಷೆಯನ್ನೇ ಗುರುತಿಸಿ ಅವರನ್ನು ಪತ್ತೆಹಚ್ಚುವ ನೂತನ ಸ್ಟ್ರೀಟ್ರಿಕಗ್ನಿಷನ್ ತಂತ್ರಜ್ಞಾನವು ವ್ಯಕ್ತಿಯ ಮುಖ ಮುಚ್ಚಿಕೊಂಡಿದ್ದರೆ, ಬೆನ್ನು ಹಾಕಿ ನಡೆಯುತ್ತಿದ್ದರೂ ಸಹ ಯಾವುದೇ ಸಮಸ್ಯೆಯಿಲ್ಲದೆ ಆ ವ್ಯಕ್ತಿಯನ್ನು ಗುರುತಿಸುತ್ತದೆ. ಆದರೆ, ಇದು ಪ್ರಜೆಗಳ ಸ್ವಾತಂತ್ರ್ಯ ಹರಣ ಎಂದು ಹೇಳಿ ಅಲ್ಲಿನ ಜನರು ಆರೋಪಿಸುತ್ತಿದ್ದಾರೆ.ಹಾಗಾದರೆ, ಚೀನಾದಲ್ಲಿ ಅಳಡಿಕೆಯಾಗುತ್ತಿರುವ ಸ್ಟ್ರೀಟ್ ರೆಕಗ್ನಿಷನ್ ತಂತ್ರಜ್ಞಾನ ಹೇಗಿರಲಿದೆ?, ಅದು ಹೇಗೆ ಕೆಲಸ ಮಾಡಲಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

 
ಹೆಲ್ತ್